ಎರಡೇ ಗಂಟೆಯಲ್ಲಿ ‘ಉತ್ತರಕಾಂಡ’ ಬಿಸಿಬಿಸಿ ದೋಸೆಯಂತೆ ಮಾರಾಟ

0
1336

ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರ ನೂತನ ಕಾದಂಬರಿ ‘ಉತ್ತರಕಾಂಡ’ ಸೋಮವಾರ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಅಭೂತಪೂರ್ವ ಯಶಸ್ಸು ಕಂಡಿದೆ.

ಮೊದಲ ದಿನವೇ ‘ಉತ್ತರಕಾಂಡ’ ಪುಸ್ತಕದ ಮೊದಲ ಆವೃತ್ತಿ ಬಿಕರಿಯಾಗಿವೆ ಎಂದು ತಿಳಿಸುತ್ತಾರೆ ಪುಸ್ತಕದ ಪ್ರಕಾಶಕರಾದ ಸಾಹಿತ್ಯ ಭಂಡಾರದ ರಾಜು. ಮಾರುಕಟ್ಟೆಯಲ್ಲಿ ವಿತರಕರು, ಮಾರಾಟಗಾರರಿಂದ ಭಾರಿ ಬೇಡಿಕೆ ಬಂದಿದ್ದು, ಪುಸ್ತಕಗಳ ಪೂರೈಕೆ ವ್ಯತಯ ಕೂಡ ಆಗುತ್ತಿದೆ. 2 ಗಂಟೆಯಲ್ಲಿ ಫುಲ್ ಕಾಲಿ. ಇಂದು 2 ನೇ ಮುದ್ರಣ ಮಾರುಕಟ್ಟೆಗೆ , ನಾಳೆ 3 ನೇ ಮುದ್ರಣ ಮಾರುಕಟ್ಟೆಗೆ ಬರುತ್ತೆ .

uttarakanda-16-1484575455

ಸಾಹಿತ್ಯ ಭಂಡಾರ ಪ್ರಕಾಶನ ಹೊರತಂದಿರುವ 329 ಪುಟಗಳ ಈ ಪುಸ್ತಕದ ಬೆಲೆ 375 ರುಪಾಯಿ. ಕಾದಂಬರಿಯ ಮುನ್ನುಡಿಯಲ್ಲಿ ಎಸ್.ಎಲ್.ಭೈರಪ್ಪ ಬರೆದ ಹಾಗೆ, ಅವರದೇ ಮಾಸ್ಟರ್ ಪೀಸ್ ಕಾದಂಬರಿ ‘ಪರ್ವ’ (ಮಹಾಭಾರತ) ಬರೆದ ನಲವತ್ತು ವರ್ಷಗಳ ನಂತರ ‘ಉತ್ತರಕಾಂಡ’ (ರಾಮಾಯಣ) ಬಂದಿದೆ. ಉತ್ತರಕಾಂಡ ಕಾದಂಬರಿಯನ್ನು ನವೆಂಬರ್ 9, 2015ರಿಂದ ಜನವರಿ 13, 2016ರವರೆಗೆ ಬರೆಯಲಾಗಿದೆ. 2014ರಲ್ಲಿ ಎಸ್.ಎಲ್.ಭೈರಪ್ಪನವರ ಕಾದಂಬರಿ ಯಾನ ಪ್ರಕಟವಾಗಿತ್ತು.

ಆ ನಂತರ ಪರಿಷ್ಕರಣೆ ಮತ್ತಿತರ ಕಾರ್ಯಕ್ಕೆ ಸಮಯ ಹಿಡಿದಿದೆ. ಸಲಹೆ-ಸೂಚನೆ ನೀಡಿದ ಶತಾವಧಾನಿ ಆರ್.ಗಣೇಶ್, ಎಲ್.ವಿ,ಶಾಂತಕುಮಾರಿ ಹಾಗೂ ಡಾ.ಪ್ರಧಾನ ಗುರುದತ್ತ ಅವರಿಗೆ ಭೈರಪ್ಪನವರು ಕೃತಜ್ಞತೆ ಅರ್ಪಿಸಿದ್ದಾರೆ. ಇನ್ನು ಪುಸ್ತಕ ಮಾರಾಟದ ಬಗ್ಗೆ ಕನ್ನಡ ಸಾಹಿತ್ಯ ಭಂಡಾರವನ್ನು ಫೋನ್ ಮೂಲಕ ಸಂಪರ್ಕಿಸಿದಾಗ ರಾಜ ಎಂಬುವವರು ಒಂದಷ್ಟು ಮಾಹಿತಿ ನೀಡಿದರು.

ಹಾಗಿದ್ದರೆ ಉತ್ತರಕಾಂಡದಲ್ಲಿ ರಾಮಾಯಣವನ್ನು ಅಥವಾ ಸೀತೆಯ ದೃಷ್ಟಿಯಲ್ಲಿಟ್ಟುಕೊಂಡು ರಾಮಾಯಣವನ್ನು ಭೈರಪ್ಪನವರು ಹೇಗೆ ಕಟ್ಟಿಕೊಟ್ಟಿರಬಹುದು? ಎಂಬ ಕುತೂಹಲ ಇದೆ.