ಮೃತಪಟ್ಟ ಗಂಡನ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ; ಯಾರಿಗೂ ತಿಳಿಯದಂತೆ 7 ಜನರನ್ನು ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡ.!

0
321

ಕೆಲವು ಪುರುಷರು ಮಾಡುವ ಕೆಲಸದಿಂದ ಎಷ್ಟೊಂದು ಅವಗಡ ಸಂಭವಿಸುತ್ತೇ ಎನ್ನುವುದಕ್ಕೆ ಒಂದು ಪ್ರತ್ಯಕ್ಷ ಘಟನೆ ನಡೆದಿದ್ದು, ಇವನ ಏಳು ಮಂದಿ ಹೆಂಡತಿಯರು ಹೊಡೆದಾಡಿಕೊಂಡಿದ್ದು, ಅವನ ಆಸ್ತಿಗಾಗಿ ಅಲ್ಲ, ವ್ಯಕ್ತಿ ಶವಾಕ್ಕಾಗಿ ಎನ್ನುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮೃತ ವ್ಯಕ್ತಿ ಬರೋಬ್ಬರಿ 7 ಪತ್ನಿಯರ ಮುದ್ದಿನ ಗಂಡನಾಗಿದ್ದು, 40ನೇ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿದ್ದು ಆತನ ಮೃತದೇಹಕ್ಕಾಗಿ ಪತ್ನಿಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ನೋಡಿದ ಹಲವು ಹೆಂಡತಿಯರ ಮುದ್ದಿನ ಗಂಡದರಿಗೆ ಎಚ್ಚರಿಕೆ ಸಂದೇಶ ಕೂಡ ಆಗಿದೆ.

Also read: ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಅತಿಯಾಗಿ ಪ್ರೀತಿಸುವ ಗಂಡನಿಂದ ಡೈವರ್ಸ್ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ..

ಗಂಡನ ಶವಕ್ಕಾಗಿ 7 ಹೆಂಡತಿಯರ ಹೊಡೆದಾಟ?

ಹೌದು ಹರಿದ್ವಾರದ ರವಿದಾಸ್ ಬಸ್ತಿಯ ನಿವಾಸಿ ಪವನ್ ಕುಮಾರ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪವನ್ ಕುಮಾರ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೇ ದಿನ ರಾತ್ರಿ ಐವರು ಮಹಿಳೆಯರು ಹಾಗೂ ಮಾರನೇ ದಿನ ಇಬ್ಬರು ಪವನ್ ಕುಮಾರ್ ನನ್ನ ಪತಿ ಎಂದು ಪರಸ್ಪರ ಕಿತ್ತಾಡಿಕೊಂಡು ಹೈಡ್ರಾಮಾ ಮಾಡಿದ್ದಾರೆ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಭಾನುವಾರ ರಾತ್ರಿ ವಿಷ ಕುಡಿದು ಒದ್ದಾಡುತ್ತಿದ್ದ. ಇದನ್ನು ನೋಡಿದ ಪತ್ನಿ ಪವನ್ ಕುಮಾರ್-ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ.

Also read: ಸ್ಪರ್ಧಾತ್ಮಕ ಪರೀಕ್ಷೆಯ ಆಸಕ್ತಿಯಿಂದ ಪತ್ನಿಯನ್ನೇ ಕಳೆದುಕೊಂಡ ಪತಿರಾಯ.!

ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ನಾಲ್ವರು ಮಹಿಳೆಯರು ಪವನ್ ಕುಮಾರ್ ತಮ್ಮ ಪತಿ ಎಂದು ವಾದಿಸಲು ಆರಂಭಿಸಿದರು. ಅವರ ವಾದವನ್ನು ತಳ್ಳಿ ಹಾಕಿದ ಪವನ್ ಕುಮಾರ್ ಪತ್ನಿ, ನನ್ನ ಪತಿ ನನ್ನನ್ನು ಬಿಟ್ಟರೆ ಬೇರೆ ಯಾವ ಮಹಿಳೆಯ ಜೊತೆಗೂ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಐವರು ಪತ್ನಿಯರು ಆಸ್ಪತ್ರೆ ಹೊರಗೆ ಜಗಳವಾಡುತ್ತಿದ್ದರು. ಇದನ್ನು ನೋಡಿದ ಪೊಲೀಸರಿಗೆ ಏನು ಮಾಡಬೇಕು ಎನ್ನುವುದೇ ಅರ್ಥವಾಗಲಿಲ್ಲ. ಪವನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎನ್ನುವುದಕ್ಕಿಂತ ಆತ ಯಾರ ಪತಿ ಎಂಬ ಕುರಿತೇ ಕುತೂಹಲ ಹೆಚ್ಚಾಗಿತ್ತು. ಕೊನೆಗೂ ಆ ಐವರು ಪತ್ನಿಯರ ಒಪ್ಪಿಗೆ ಬಳಿಕ ಪತಿಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Also read: 45 ವರ್ಷಗಳಿಂದ ಪ್ರತಿನಿತ್ಯ 1 KG ಗಾಜು ತಿನ್ನುತ್ತಾ ಆರೋಗ್ಯವಾಗಿರುವ ಈ ವ್ಯಕ್ತಿಯನ್ನು ನೋಡಿದ್ರೆ ನಿಮಗೆ ಆಶ್ಚರ್ಯವಾಗುತ್ತೆ!!

ಹೇಗೋ ಅಂತ್ಯ ಸಂಸ್ಕಾರ ಮುಗಿತಲ್ಲ ಎನ್ನುವುದರಲ್ಲಿ ಆತನ ಅಂತ್ಯಸಂಸ್ಕಾರ ನೆರವೇರಿಸಿದ ಮಾರನೇ ದಿನ ಮತ್ತೆ ಇಬ್ಬರು ಮಹಿಳೆಯರು ಪೊಲೀಸ್ ಠಾಣೆಗೆ ಬಂದು ತಮಗೆ ತಿಳಿಸದೆ ಪತಿಯ ಅಂತ್ಯಸಂಸ್ಕಾರ ಮಾಡಿರುವುದು ಸರಿಯಲ್ಲ ಎಂದು ಗಲಾಟೆ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಶಾಕ್‍ಗೆ ಒಳಗಾದ ಪೊಲೀಸರು, ಮತ್ತೆ ಯಾರಾದರು ಪವನ್ ಕುಮಾರ್ ತಮ್ಮ ಪತಿ ಅಂತ ಪೊಲೀಸ್ ಠಾಣೆಗೆ ಬರುತ್ತಾರಾ ಎಂದು ಕಾದು ನೋಡುತ್ತಿದ್ದಾರೆ. ಹೀಗಾಗಿ ನಾಲ್ಕೈದು ದಿನ ಕಾದು ನೋಡಿ ಪ್ರಕರಣದ ಕುರಿತು ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮಹಿಳೆಯರು ಹಣಕ್ಕಾಗಿ ಪವನ್ ಕುಮಾರ್ ತಮ್ಮ ಪತಿ ಎಂದು ಹೇಳುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿತ್ತು. ಈ ಸಂಬಂಧ ವಿವಾರಣೆ ಮಾಡಿದಾಗ, ಪವನ್ ಕುಮಾರ್ ಖಾತೆಯಲ್ಲಿ ಹಣವೇ ಇಲ್ಲ. ಅಷ್ಟೇ ಅಲ್ಲದೆ ಆತ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.