ಮನೆಯಲ್ಲಿ ಬಜೆ ಬೇರು ತಂದು ಇಟ್ಕೊಂಡ್ರೆ ಮಕ್ಕಳ ಡಾಕ್ಟ್ರೇ ಮನೆಗೆ ಬಂದಂತೆ.. ಮಕ್ಕಳ ಆರೋಗ್ಯ ಸಂಜೀವಿನಿ ಬಜೆ ಬೇರಿನ ಆರೋಗ್ಯಕಾರಿ ಗುಣಗಳು..

0
4163

Kannada News | Health tips in kannada

ಬಜೆ ಬಹುಮಟ್ಟಿಗೆ ಎಲ್ಲ ತಾಯಂದಿರಿಗೂ ಪರಿಚಯವಿರುವ ಮೂಲಿಕೆ. ವಾಚಾ,ಉಗ್ರಗಂಧಾ ಮುಂತಾದವುಗಳು ಬಜೆಗಿರುವ ಇನ್ನಿತರ ಹೆಸರುಗಳು. ಈ ಗಿಡವನ್ನು ಅರಿಶಿನ, ಶುಂಠಿಗಳಂತೆ ಬೇರಿನ ತುಂಡಿನಿಂದ ಬೆಳಸಬಹುದು. ನಾಲ್ಕರಿಂದ ಆರು ತಿಂಗಳಲ್ಲಿ ಬಳಕೆಗೆ ಸಿದ್ಧವಾಗುವ ಈ ಮೂಲಿಕೆಯು ಸ್ವಲ್ಪ ಮರಳು ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.


ಬಜೆಯಲ್ಲಿ ಬಳಕೆಯಾಗುವ ಭಾಗ ಬೇರು. ರುಚಿಯಲ್ಲಿ ಇದು ಖಾರ ಮತ್ತು ಕಹಿ. ಉಷ್ಣವನ್ನು ಹೆಚ್ಚಿಸುವ ಸ್ವಭಾವ. ಮಕ್ಕಳಿಗೆ ತಾಯಿಯ ಹಾಗೆ ಮನೆಯಲ್ಲಿ ವೈದ್ಯರಿದ್ದಂತೆ ಈ ಬಜೆ. ಬಜೆ ಬೇರು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ, ತೊದಲನ್ನು ನಿವಾರಿಸುತ್ತದೆ, ತಲೆನೋವು, ಕೀಳು ನೋವು, ಹೊಟ್ಟೆ ನೋವು , ಶೀತ ನೆಗಡಿಗಳನ್ನು ಶಮನಗೊಳಿಸುತ್ತದೆ.

ಬಜೆಯಿಂದ ಔಷಧಿ ತಯಾರಿಕೆ ಹೇಗೆ?


– ಸಾಣೆಕಲ್ಲಿನ ಮೇಲೆ ಮೂರು ನಾಲ್ಕು ಹನಿ ಜೇನುತುಪ್ಪ ಹಾಕಬೇಕು. ಬಜೆಯ ತುಂಡೊಂದನ್ನು ಇದರ ಮೇಲೆ ಐದು -ಹತ್ತು ಸುತ್ತು ತೇಯಬೇಕು. ಬರುವ ಗಂಧವನ್ನು ಚಿಕ್ಕ ಮಕ್ಕಳಿಗೆ ತಿನ್ನಿಸಬೇಕು. ಉಪಯೋಗಗಳು:
ಇದರ ಸೇವನೆಯಿಂದ ಸ್ಮರಣಶಕ್ತಿ, ಬುದ್ಧಿಶಕ್ತಿ ಹೆಚ್ಚಾಗುತ್ತದೆ.ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ತೊದಲು ನಿವಾರಣೆಯಾಗಿ ಮಾತು ಸ್ಪಷ್ಟವಾಗುತ್ತದೆ. ಇದನ್ನು ವಯೋನುಸಾರ, ಒಂದರಿಂದ ಎರಡು ತಿಂಗಳ ಮಕ್ಕಳಿನಿಂದ ಹಿಡಿದು ಐದು ವರ್ಷದ ಮಕ್ಕಳವರೆಗೆ ಕೊಡಬಹುದು. ಮಕ್ಕಳಲ್ಲಿ ಹೆಚ್ಚೆಂದರೆ ಒಂದು ಉದ್ದು ಕಾಳಿನ ಪ್ರಮಾಣ.ದೊಡ್ಡವರಲ್ಲಿ ಒಂದು ತೊಗರಿಕಾಳು ಅಥವಾ ಗುಲಗಂಜಿ ಪ್ರಮಾಣ ಕೊಡಬಹುದು.


ಮಕ್ಕಳಲ್ಲಿ ತಲೆನೋವು, ಶೀತ ನೆಗಡಿಗಳು ಕಂಡು ಬಂದಾಗ, ಜ್ವರದ ತಾಪ ಹೆಚ್ಚಾದಾಗ ಈ ಬೇರನ್ನು ಬಿಸಿ ನೀರು ಅಥವಾ ಹಾಲಿನಲ್ಲಿ ಅರೆದು ಹಣೆಯ ಮೇಲೆ ಹಚ್ಚುವುದರಿಂದ ತೊಂದರೆ ಕಡಿಮೆಯಾಗುತ್ತದೆ. ಕೀಲುನೋವು, ಹೊಟ್ಟೆನೋವುಗಳಲ್ಲಿ ನೋವಿರುವ ಭಾಗಕ್ಕೆ ಲೇಪಿಸುವುದರಿಂದ ನೋವು ಶಮನವಾಗತ್ತದೆ.

Also read: ಬಸಳೆ ಸೊಪ್ಪಿನ ಆರೋಗ್ಯಕಾರಿ ಗುಣಗಳು ನಿಮಗೆ ಗೊತ್ತಾದ್ರೆ ಮನೆ ಹಿತ್ತಲಲ್ಲಿ ಬೆಳೆಸೋದು ಗ್ಯಾರಂಟೀ..