ಪಾಕಿ ಉಗ್ರ ಅಜ್ಮಲ್ ಕಸಬ್-ನ ತಿಥಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕು, ಅವರೂ ದೇಶದ್ರೋಹಿಗಳು: ರಾಜ್ಯಪಾಲರು

0
364

ಅಮಾಯಕರನ್ನು ಹತ್ಯೆಗೈದ ಕಸಬ್ನ್ನು ಗಲ್ಲಿಗೇರಿಸಲು ಹಲವಾರು ವರ್ಷಗಳೇ ಬೇಕಾಯಿತು. ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿರುವವನ್ನು ತಕ್ಷಣವೇ ಶಿಕ್ಷಿಸಬೇಕು. ಇಂಥಾ ವಿಶ್ವಾಸಘಾತುಕರನ್ನು ಗಲ್ಲಿಗೇರಿಸಿದ ಸುದ್ದಿಯನ್ನು ಯಾವುದೇ ಮಾಧ್ಯಮಗಳು ಪ್ರಕಟಿಸಬಾರದು ಎಂದು ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಗುಡುಗಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ದಕ್ಷಿಣ ವಲಯ ವಕೀಲರ 2ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭಯೋತ್ಪಾದಕರು ಮತ್ತು ದೇಶದ್ರೋಹಿಗಳನ್ನು ಶಿಕ್ಷಿಸಲು ಕಠಿಣ ಕಾನೂನು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈವೇಳೆ ಮಾತನಾಡಿದ ಅವರು, 26/11 ಮುಂಬೈ ದಾಳಿ ಪ್ರಕರಣದ ಅಪರಾಧಿ,ಪಾಕಿಸ್ತಾನದ ಉಗ್ರ ಅಜ್ಮಲ್‌ ಕಸಬ್‌ ಗಲ್ಲು ಶಿಕ್ಷೆಗೊಳಗಾದ ದಿನದಂದು ಕಸಬ್ ತಿಥಿ ಆಚರಿಸುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಖಾರವಾಗಿ ನುಡಿದರು.

ಅಲ್ಲದೇ ದೇಶದ್ರೋಹ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಆರಂಭಿಸಬೇಕು. ಉಗ್ರರ ಬಗ್ಗೆ ನಾವೆಂದೂ ಅನುಕಂಪ ಇಟ್ಟುಕೊಳ್ಳಬಾರದು ಎಂದಿದ್ದಾರೆ.