ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ ಮಾಡುವ ವಿಧಿ ವಿಧಾನಗಳು.

0
1349

1. ವ್ರತಾಚರಣೆ ಮಾಡುವ ಮಹಿಳೆಯರು ನಿರಾಹಾರದಿಂದ ಲಕ್ಷ್ಮೀ ಅಷ್ಟೋತ್ತರದಿಂದ ಅರ್ಚನೆ ಮಾಡಬೇಕು ಮತ್ತು ಶ್ರೀಸೂಕ್ತ, ಭೂಸೂಕ್ತಗಳು ವೈದಿಕ ಸಂಪ್ರದಾಯದ ಪೂಜೆಯಾದರೆ ಲಕ್ಷ್ಮೀಕವಚ, ಲಕ್ಷ್ಮೀ ಹೃದಯಗಳಿಂದ ಪೂಜಿಸಬೇಕು.

2. ದೇವಿಯ ರೂಪ ಸ್ಮರಣೆ, ದೇವಿಯೇ ತಮ್ಮ ಮುಂದೆ ಇರುವಳೆಂಬ ಶುದ್ದ ಭಾವನೆಗಳಿಂದ ನಾಮಸ್ಮರಣೆ ಮಾಡಿದರೆ ಸಕಲಾಭಿಷ್ಟ ಸಿದ್ದಿ, ಸರ್ವಸಂಪತ್ಸೌಭಾಗ್ಯ ಪ್ರಾಪ್ತಿಯಾಗುವುದು.

3. ಪ್ರಾಣಪ್ರತಿಷ್ಠೆಯನಂತರ ಮಹಾಲಕ್ಷ್ಮೀ ಕಲಶ ಇಲ್ಲವೆ ವಿಗ್ರಹದಲ್ಲಿ ಆವಾಹಿಸಿದ್ದಾಳೆಂದು ಭಾವಿಸಬೇಕು. ಪೂಜಿಸುವಾಗ ವಿಗ್ರಹ ಅಥವಾ ಕಲಶವನ್ನು ಕದಲಬಾರದು.

4. ಲಕ್ಷ್ಮೀಕಲಶ, ವಿಗ್ರಹದ ಮುಂದೆ ಮಹಾಗಣಪತಿ ಮೂರ್ತಿಯನ್ನು ಅಥವಾ ಪೋಟೋ, ಇಲ್ಲವಾದರೆ ಗೋಮಯದಿಂದಾಗಲಿ ಮಂತ್ರಾಕ್ಷತೆಯಲ್ಲಿ ಈ ಪ್ರಕಾರ ರಚಿಸಿಯಾಗಲಿ ಇಟ್ಟಿರಬೇಕು.

5. ಅರಿಶಿನದಲ್ಲಿ ಅಚ್ಚಿದ 12 ಗಂಟಿನ ದಾರಗಳನ್ನು ದೇವಿಗೆ ಬಲಗಡೆಯಲ್ಲಿ ಪೂಜಿಸಿ ನಂತರ ಸೂಕ್ತ ಮಂತ್ರದಿಂದ ಕಟ್ಟಿಕೊಳ್ಳಬೇಕು.

6. ಅವಿವಾಹಿತ ಹೆಣ್ಣುಮಕ್ಕಳೂ ಈ ವ್ರತ, ಪೂಜೆಯನ್ನು ವಿವಾಹಿತ ಮಹಿಳೆಯರೊಂದಿಗೆ ಪೂಜಿಸಬಹುದು, ಅವರು ಪೂಜಿಸಿದ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ.

source: travelwhistle.com

7. ವೇದ ಮಂತ್ರಗಳಿಂದ ಪುರುಷರಾಗಲಿ, ಪುರೋಹಿತರಾಗಲಿ ವ್ರತಮಾಡಿಸುವುದು ಮತ್ತು ಅವರ ಆಶಿರ್ವಾದ ತೆಗೆದುಕೊಂಡರೆ ಅತ್ಯಂತ ಶುಭಕರ.

8. ಮಹಾಲಕ್ಷ್ಮೀಗೆ ಸಾಮಾನ್ಯವಾದ ಪ್ರಿಯವಾದ ನೈವೇದ್ಯ ರವೆ ಪಾಯಸ, ಗೋಧಿ ಪಾಯಸಮಾಡಬೇಕು.

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ
ಸುಣ್ಣದಕೇರಿ  ಮೈಸೂರು
9845371416