ವರಮಹಾಲಕ್ಷ್ಮಿ ವ್ರತದಂದು ಈ ನಿಯಮಗಳನ್ನು ಪಾಲಿಸಿದರೆ, ಸಂಪೂರ್ಣವಾಗಿ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ.

0
1698

1. ವರಮಹಾಲಕ್ಷ್ಮೀ ದೇವತೆಯ ಕಲಶ, ಪೋಟೋ, ವಿಗ್ರಹವನ್ನು ಪೂಜಿಸುವ ಸ್ಥಳವನ್ನು ಸಾರಿಸಿ, ಸ್ವಸ್ತಿಕ್, ಪದ್ಮ, ಶಂಖ, ಇತ್ಯಾದಿ ಶುಭ ಚಿನ್ನೆಗಳ ರಂಗೋಲಿಯನ್ನು ಹಾಕಿ ನಂತರ ಪೀಠ ಅಥವಾ ಮಂಟಪವನ್ನು ಸ್ಥಾಪಿಸಬೇಕು. ಮಂಟಪಕ್ಕೆ ಬಾಳೆ ಕಂದು, ಮಾವಿನ ತೋರಣ ಕಟ್ಟುವುದು ಶುಭಕರ.

2. ಮಂಗಳ ಸ್ನಾನ ತೈಲಾಭ್ಯಂಜನ ಸುಗಂಧ ದ್ರವ್ಯಲೇಪನ, ಹರಿದ್ರಾಕುಂಕುಮ ವಿಟ್ಟು ಶುಚಿಯಾದ ಭಾರತೀಯ ಸಂಪ್ರದಾಯದಂತೆ ವಸ್ತ್ರಗಳನ್ನು ತೊಟ್ಟು ಹೂವನ್ನು ಮುಡಿದು ಕುಲದೇವರನ್ನು ಪ್ರಾರ್ಥಿಸಿ ನಂತರ ವ್ರತಕ್ಕೆ ಕುಳಿತುಕೊಳ್ಳಬೇಕು.

source: qph.ec.quoracdn.net

3. ಲಕ್ಷ್ಮೀವಿಗ್ರಹವು ಉತ್ತರ ಅಥವಾ ಪೂರ್ವ ಮುಖಮಾಡಿ ಹಿಡಬೇಕು, ದಕ್ಷಿಣ ಮತ್ತು ಪಶ್ಚಿಮವಾಗಿ ವಿಗ್ರಹವನ್ನು ಹಿಡಬಾರದು. ವಿಗ್ರಹವು ಬೆಳ್ಳಿ, ತಾಮ್ರ, ಪಂಚಲೋಹವನ್ನು ಉಪಯೋಗಿಸಬಹುದು, ಯಾವುದೇ ವಿಗ್ರಹವು ಕೈಯ ಹೆಬ್ಬೆಟ್ಟಿಗಿಂತಲೂ ಎತ್ತರದ ಮೂರ್ತಿಯನ್ನು ಪೂಜಿಸುವುದು ಉತ್ತಮವಲ್ಲ.

4. ಪೂಜೆಯ ಸಮಯದಲ್ಲಿ ಕೋಪ, ಕದನ, ಕಾಲಹರಟೆ, ಅನವಶ್ಯಕ ಮಾತುಗಳನ್ನು ಪೂಜೆ ಸಮಯದಲ್ಲಿ ಆಡಬಾರದು.

5. ಪೂಜೆಯನ್ನು ಮಧ್ಯಾಹ್ನಕ್ಕಿಂತ ಮುಂಚಿತವಾಗಿಯೇ ಮಾಡಬೇಕು. ರಾಹುಕಾಲ, ಯಮಗಂಡಕಾಲದಲ್ಲಿ ಪೂಜೆ ಪ್ರರಂಭಿಸಬಾರದು, ಪೂಜೆ ಮುಂಚಿತವಾಗಿ ಎರಡು ದೀಪಗಳನ್ನು ಹಚ್ಚಬೇಕು ಅದು ನಂದದಂತೆ ಸಾಕಷ್ಟು ಎಣ್ಣೇ ಅಥವಾ ತುಪ್ಪಹಾಕಬೇಕು.

6. ಪೂಜೆಗೆ ಅಗತ್ಯವಾದ ಪಂಚಪಾತ್ರೆಗಳು, ಉದ್ದರಣೆ, ಅರ್ಘ್ಯಪಾತ್ರೆ, ತಟ್ಟೆಗಳು, ಅರಿಶಿನ, ಕುಂಕುಮ, ಮಂತ್ರಾಕ್ಷತೆ ಬಟ್ಟಲುಗಳು, ಹೂವಿನ ತಟ್ಟೆ, ಅಗರಬತ್ತಿ, ಗೆಜ್ಚೆವಸ್ತ್ರ, ಮಂಗಳಾರತಿಗೆ ಅಗತ್ಯವಾದ 3,5 ಸಂಖ್ಯೆಯ ತುಪ್ಪದ ಬತ್ತಿಗಳು ಮತ್ತು ಕರ್ಪೂರ, ನೈವೇದ್ಯಕ್ಕೆ ಅಗತ್ಯವಾದ ತೆಂಗಿನಕಾಯಿ, ಬಾಳೆಹಣ್ಣು, ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ, ಮಿಶ್ರಣಮಾಡಿದ ಪಂಚಾಮೃತ, ಏಕ ಅಥವಾ ಪಂಚಾರತಿ ಇವುಗಳು ಇರಬೇಕು.

7. ಕಮಲದ ಹೂಗಳಿಂದ ಪೂಜಿಸಿದರೆ ಶ್ರೇಯಸ್ಸು, ಬೇರೆಯವರ ಮನೆಯಲ್ಲಿ ಕಿತ್ತದ್ದು , ಮತ್ತು ಕದ್ದುತಂದದ್ದು ದೇವರಿಗೆ ಮುಡಿಸಿದರೆ ಒಳ್ಳೆಯದಲ್ಲ.

8. ಪೂಜಾಕಾಲದಲ್ಲಿ ಎಲ್ಲಕ್ಕಿಂತಲೂ ಪ್ರಾಮುಖ್ಯವಾದದ್ದು ಭಕ್ತಿ, ಶ್ರದ್ದೆ, ಮನಸ್ಸಿನ ಏಕಾಗ್ರತೆ ಎಂಬುದನ್ನು ಮರೆಯಬಾರದು ಶಾಂತಿಯಿಂದ ಯಾವುದೇ ಪೂಜೆಯನ್ನು ಮಾಡಿದರೆ ಪೂಜಾಫಲಸಿಗುತ್ತದೆ.

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ
ಸುಣ್ಣದಕೇರಿ  ಮೈಸೂರು
9845371416