ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಇಂತಹವರು ಆಚರಿಸಿದರೆ ಶ್ರೇಯಸ್ಸು ಹೆಚ್ಚು.

0
1447

ಶ್ರಾವಣ ಮಾಸ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿಯ ವ್ರತವನ್ನು ಆಚರಿಸಿದರೆ ಸದ್ಗೃಹಿಣಿಯರು ಬಯಸುವ ಮಾಂಗಲ್ಯ ಭದ್ರತೆ ಮುತ್ತೈದೆತನ ಸಂಸಾರದಲ್ಲಿ ಸುಖ ಸಂತೋಷ ಸಂಪತ್ಸಮೃದ್ಧಿ ಮತ್ತು ಶಾಂತಿ ರೋಗ ಋಣ ದಾರಿದ್ಯ್ರಗಳಿಂದ ವಿಮುಕ್ತಿ ಇವೆಲ್ಲವನ್ನು ಪಡೆಯಲು ವರ್ಷಕೊಮ್ಮೆ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಮಾಡುತ್ತಬಂದರೆ ಸಾಕು ಎಂದು ತಿಳಿಸುವುದು ಭವಿಷ್ಯೋಪುರಾಣ.

source: divineavatars.com

ಭಕ್ತಿ ಮುಕ್ತಿಪ್ರದಾಯಿನಿ ಜಗಜ್ಜನನಿಯಾದ ಮಹಾಲಕ್ಷ್ಮಿಯ ವ್ರತದ ಪೂಜೆಯಲ್ಲಿ ಋಗ್ವೇದದ ಶ್ರೇಷ್ಠ ಮಂತ್ರಭಾಗವಾದ ಶ್ರೀಸೂಕ್ತ ಅಳವಡಿಸಿರುವುದು ಅರ್ಥಗರ್ಭಿತ ಮತ್ತು ಅಮೂಲ್ಯವಾಗಿದೆ.

ವರಮಹಾಲಕ್ಷ್ಮಿ ವ್ರತವನ್ನು ಪ್ರತಿಯೊಬ್ಬರ ಮನೆಯಲ್ಲೂ ಆಚರಿಸಬಹುದು ಅಥವಾ ಎಲ್ಲರ ಮನೆಯ ಸುಮಂಗಲೆಯರು ಒಂದೆಡೆ ಸೇರಿ ಆಚರಿಸಬಹುದು, ಇಲ್ಲವಾದರೆ ಲಕ್ಷ್ಮೀದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ತುಂಬಾ ಒಳ್ಳೆಯದಾಗುತ್ತದೆ.

ಬಹಳ ಮುಖ್ಯವಾಗಿ ಮದುವೆ ಆಗದೇ ಇರುವ ಅವಿವಾಹಿತ ಕನ್ಯೆಯರು ಪೂಜೆಯಲ್ಲಿ ಪಾಲ್ಗೊಂಡು ಲಕ್ಷ್ಮೀದಾರ ಸ್ವೀಕರಿಸಿ ಕಟ್ಟಿಕೊಂಡರೆ ಶೀಘ್ರವಾಗಿ ವಿವಾಹ ವಾಗುವುದು.ಭವಿಷ್ಯದಲ್ಲಿ ಸುಖ ಸಂಸಾರ, ಒಳ್ಳೆಯ ಜೀವನ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

source: travelwhistle.com

ವರಮಹಾಲಕ್ಷ್ಮಿ ವ್ರತವನ್ನು ಶ್ರದ್ದೆ, ಭಕ್ತಿ ಮತ್ತು ನಂಬಿಕೆಯಿಂದ ಆಚರಿಸಿ ತಮ್ಮ ತಮ್ಮ ಇಷ್ಟಾರ್ಥಗಳನ್ನು ಭಗವತಿಯ ಕೃಪೆ ಮತ್ತು ವಕವನ್ನು ಪಡೆಯಿರಿ ಭಾಗ್ಯವಂತರಾಗಿರಿ.