ಕಡೆಗೂ ನಿರುದ್ಯೋಗ ಸಮಸ್ಯೆಯ ಬಗ್ಗೆ ಎಚ್ಚೆತ್ತುಕೊಂಡ ಮೋದಿ ಸರ್ಕಾರ, 21 ದಿನಗಳಲ್ಲೇ ಉದ್ಯೋಗ ನೀಡುವ ವರುಣ್ ಮಿತ್ರ ಯೋಜನೆ!

0
1180

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿ ಬರುವ ಹೊಸ ವರ್ಷದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವರುಣ್ ಮಿತ್ರ ಎಂಬ ಹೊಸ ಯೋಜನೆಯನ್ನು ತಂದಿದ್ದು, ಈ ಯೋಜನೆಯ ಮೂಲಕ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸಲು ಮುಂದಾಗಲಿದೆ. ಈ ಯೋಜನೆಯು ಜನವರಿ 1ರಿಂದ ಪ್ರಾರಂಭವಾಗಲಿದ್ದು, ಇದರಿಂದ ನಿರುದ್ಯೋಗಿಗಳಿಗೆ ಕೇವಲ 21 ದಿನಗಳಲ್ಲಿ ಉದ್ಯೋಗ ಸಿಗುವ ಭರವಸೆ ಇದೆ.

Also read: ಕಾರು ತಯಾರಕ ಟೊಯೊಟೋ ಕಂಪನಿಯಲ್ಲಿ ಮಾತ್ರ ಕನ್ನಡಿಗರಿಗೆ ನ್ಯಾಯ ಸಿಗುತ್ತಿದೆ: ಶೇಕಡ 98% ನೌಕರರು ಕನ್ನಡಿಗರೇ, ಬೇರೆ ಕಂಪನಿಗಳಲ್ಲಿ ಹೀಗೆ ಯಾಕಿಲ್ಲ??

ಏನಿದು ವರುಣ್ ಮಿತ್ರ ಯೋಜನೆ ?

ಮುಖ್ಯವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಯೋಜನೆಯಾಗಿದೆ. ವರುಣ್ ಮಿತ್ರ ಎಂಬುದು ಸೌರ ವಾಟರ್​ ಪಂಪಿಂಗ್ ಯೋಜನೆ ಆಗಿದ್ದು, MNRE ಮತ್ತು NISE ಸಚಿವಾಲಯದಡಿಯಲ್ಲಿ ಈ ಯೋಜನೆಯ ತರಬೇತಿ ಕಾರ್ಯಕ್ರಮಗಳು ನಡೆಯಲಿದೆ. ಈ ಯೋಜನೆಯಲ್ಲಿ ಸಂಪೂರ್ಣ ನವೀಕರಿಸಬಹುದಾದ ಇಂಧನ, ಸೌರ ಸಂಪನ್ಮೂಲ ಅಸೆಸ್ಮೆಂಟ್, ವಾಟರ್ ಟೇಬಲ್​, ಸೋಲಾರ್ಗ್ ವಾಟರ್​ ಪಂಪಿಂಗ್, ಬ್ಯಾಟರಿ, ಮೋಟಾರ್​, ಮೋಟಾರ್ ಪಂಪ್​ ಗ್ರೀಡ್​ ಅಳವಡಿಸುವಿಕೆ, ಪಿವಿ ಪಂಪಿಂಗ್ ಸಿಸ್ಟಂ ಬಗ್ಗೆ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಸುರಕ್ಷತೆ, ಕಾರ್ಯಾಚರಣೆ, ನಿರ್ವಹಣೆಯ ಸಂಪೂರ್ಣ ಮಾಹಿತಿಗಳನ್ನು ಒದಗಿಸಲಾಗುತ್ತದೆ.

ಜನವರಿ 1 ರಿಂದ ತರಬೇತಿ ಆರಂಭ:

ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ವರುಣ್ ಮಿತ್ರ ಯೋಜನೆಯ ತರಬೇತಿ ಜನವರಿ 1 ರಿಂದ ಆರಂಭವಾಗಲಿದ್ದು, ಜನವರಿ 19 ರವರೆಗೆ ತರಗತಿಗಳು ನಡೆಯಲಿದೆ. ಒಟ್ಟಾರೆಯಾಗಿ ಮೂರು ವಾರಗಳ ಒಳಗೆ 120 ಗಂಟೆಗಳ ಕ್ಲಾಸ್​ ನಡೆಸಲಾಗುತ್ತದೆ. ಈ ತರಬೇತಿಯಲ್ಲಿ ಉದ್ಯೋಗದ ಕುರಿತು ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುತ್ತದೆ. ಈ ಯೋಜನೆಯಲ್ಲಿ ಭಾಗವಹಿಸಲು ಡಿಸೆಂಬರ್​ 28 ರ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಎಂದು ತಿಳಿಸಲಾಗಿದೆ.

ತರಬೇತಿಯಲ್ಲಿ ಯಾವ ವಿಷಯ ಇರುತ್ತೆ?

ವರುಣ್ ಮಿತ್ರ ಯೋಜನೆಯಲ್ಲಿ ಮುಖ್ಯವಾಗಿ ಟ್ರೈನಿಂಗ್​ ಕಾರ್ಯಕ್ರಮದಲ್ಲಿ ಉಪನ್ಯಾಸಗಳನ್ನು ಹೊರತುಪಡಿಸಿ, ಪ್ರಾಕ್ಟಿಕಲ್ ಕ್ಲಾಸ್, ಫೀಲ್ಡ್​ ಭೇಟಿ ಮತ್ತು ಇಂಡಸ್ಟ್ರಿಯಲ್ ಭೇಟಿ ಸಹ ಇರಲಿದೆ. ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಹಾಸ್ಟೆಲ್​ನಲ್ಲಿ ಉಳಿಯಲು ಬಯಸಿದರೆ ಪ್ರತಿದಿನ 600 ರೂ. ಪಾವತಿಸಬೇಕಾಗುತ್ತದೆ. ಈ ತರಬೇತಿಗಳು ಎಲೆಕ್ಟ್ರಾನಿಕ್​, ಮೆಕಾನಿಕಲ್​ ಡಿಪ್ಲೋಮಾ, ಇಂಜಿನಿಯರ್ ಪದವಿ, ಸೋಲಾರ್​ ಕುರಿತಾದ ತಿಳುವಳಿಕೆ ಹೊಂದಿರುವವರಿಗೆ ಉಪಯೋಗವಾಗಲಿದೆ ಎನ್ನಲಾಗಿದೆ.

ಅರ್ಜಿ ಸಲ್ಲಿಸುವುದು ವಿಧಾನ:

ನೀವು ವರುಣ್ ಮಿತ್ರ ಯೋಜನೆಯಲ್ಲಿ ಪಾಲ್ಗೊಳ್ಳಬೇಕಾದರೆ varunmitra.nise@gmail.com ಅಥವಾ startups.nise@gmail.com ಮೇಲ್ ಮಾಡಬಹುದು. ಅಥವಾ https://mnre.gov.in/sites/default/files/webform/notices/Revised%20Solar%20Water%20Pumping%20System.pdf ಕ್ಲಿಕ್​ ಮಾಡಿ ಪಿಡಿಎಫ್​ ಫಾರ್ಮ್​ನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು.

Also read: ನಿಮ್ಮ ಮಕ್ಕಳಿಗೆ ಈ ಹುದ್ದೆಗಳಿಗೆ ಸಂಬಂಧ ಪಟ್ಟ ವಿಷಯಗಳನ್ನು ಓದಿಸಿ, ಇವೇ ಇಂದು ಲಕ್ಷಗಿಂತಲೂ ಹೆಚ್ಚು ಸಂಬಳ ನೀಡುವ ಹುದ್ದೆಗಳು!!