2018 ವರ್ಷ ನಿಮ್ಮ ರಾಶಿಗೆ ಏನೇನೆಲ್ಲ ಫಲಾನುಫಲ ತರಲಿದೆ ಎಂದು ತಿಳುದುಕೊಳ್ಳಿ..!!

0
5158

ಮೇಷ ರಾಶಿ

 • ಮೇಷ ರಾಶಿಗೆ 2018ರಲ್ಲಿ ಸಂಪೂರ್ಣ ಉತ್ಸಾಹದಿಂದ ವರ್ಷ ಆರಂಭವಾಗುತ್ತದೆ. ಈ ವರ್ಷ ನೀವು ಆತ್ಮವಿಶ್ವಾಸದಿಂದ ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.
 • ಈ ವರ್ಷ ತಂತ್ರಜ್ಞರು ಹೊಸತಾಗಿ ಕೈಗೊಳ್ಳುವ ಕನಸುಗಳು ಸಾಕಾರಗೊಳ್ಳಲಿವೆ. ಮಹತ್ವದ ಕೆಲಸಗಳಿಗಾಗಿ ದೂರದ ಪ್ರಯಾಣ ಕೈಗೊಳ್ಳುವ ಸಂಭವವಿದ್ದು, ವೇಗವಾಗಿ ಹೋಗುವುದು ಬೇಡ.
 • ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುತ್ತದೆ. ಸರಕಾರಿ ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯದಿಂದ ಬದಲಾವಣೆ ಕಾಣುವಿರಿ. ಸಾವಧಾನದಿಂದ ಹೆಜ್ಜೆ ಹಾಕಿದರೆ ಯಶಸ್ಸು ಸಾಧಿಸುವಿರಿ.
 • ತಾಂತ್ರಿಕರಿಗೆ ಶುಭಫಲ ತೋರಿ ಬರಲಿದೆ. ಬಂಧುಗಳಲ್ಲಿ ಬಾಂಧವ್ಯ ವೃದ್ದಿಗೊಳ್ಳುವಿಕೆಯಿಂದ ಜೀವನ ಮಟ್ಟ ಸುಧಾರಿಸಲಿದೆ. ಕುಟುಂಬದಲ್ಲಿ ಒದಗಿ ಬರುವ ಭಾಧ್ಯತೆಗಳನ್ನು ಚೆನ್ನಾಗಿ ನಿಭಾಯಿಸುವಿರಿ. ಜೊತೆಗೆ ಸತ್ಕಾರ್ಯಗಳ ನಿರ್ವಹಣೆ, ಬೌದ್ಧಿಕ ಕಾರ್ಯಕ್ರಮಗಳ ಸಂಭ್ರಮ ನಡೆಯಲಿದೆ.
 • ಆಗದವರು ಮಿತ್ರರಾಗುವ ಸಂದರ್ಭ ಕೂಡಿ ಬಂದು ವಿವಾದದಿಂದ ಬಿಡುಗಡೆ ಹೊಂದುವಿರಿ. ಹೊಸ ಉದ್ಯೋಗಿಗಳಿಗೆ ಔದ್ಯೋಗಿಕ ರಂಗದಲ್ಲಿ ಅನುಕೂಲ, ಪ್ರಗತಿ ಇದೆ. ಒಟ್ಟಾರೆಯಾಗಿ ನಿಮಗೆ ಉತ್ತಮ ಹಾಗೂ ಪ್ರಗತಿಯ ವರ್ಷ ಇದಾಗಿರುತ್ತದೆ.

ವೃಷಭ ರಾಶಿ

 • ಈ ವರ್ಷ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸಬೇಕು ಏಕೆಂದರೆ ಅತಿರೇಕದಿಂದ ವರ್ಷಾರಂಭವಾಗುವ ಸಾಧ್ಯತೆಯಿದೆ.
 • ಇದು ನಿಮ್ಮ ಮೇಲೆ ಅಡ್ಡಪರಿಣಾಮ ಬೀರಬಹುದು. ಈ ವರ್ಷ ನೀವು ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಹೆಚ್ಚಿನ ಗಮನಹರಿಸಿದರೆ ಉತ್ತಮ. ಹಿರಿಯರೊಡನೆ ಅನವಶ್ಯಕ ವಾದ ವಿವಾದ ಬೇಡ. ನೆರೆ ಹೊರೆಯವರಲ್ಲಿ ನೀವು ವಿಶ್ವಾಸದಿಂದ ನಡೆಯುವುದರಿಂದ ಗೌರವ ಹೆಚ್ಚಲಿದೆ.
 • ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಗಂಭಿರವಾಗಿ ನಡೆದುಕೊಂಡರೆ ಪ್ರಗತಿ ಕಾಣಲಿದೆ. ಪ್ರಮುಖ ವ್ಯಕ್ತಿಯೊಬ್ಬರ ಪರಿಚಯದಿಂದ ವ್ಯವಹಾರಗಳು ಸರಾಗವಾಗಿ ಸಾಗಿ ಅಭಿವೃದ್ಧಿ ಕಾಣುವಿರಿ. ವೈಯಕ್ತಿಕ ವ್ಯವಹಾರಗಳಲ್ಲಿ ಗೊಂದಲದ ಹೇಳಿಕೆ ನೀಡುವುದರಿಂದ ಸಂಕಟ, ಕಷ್ಟ ಉಂಟಾಗಲಿದೆ.
 • ಆದರೆ ವಾಹನ ವ್ಯಾಪಾರಿಗಳಿಗೆ ವಹಿವಾಟುಗಳಲ್ಲಿ ನಿರೀಕ್ಷೆಗೆ ತಕ್ಕ ಲಾಭವಿದೆ.ನೀವು ಧನಾಗಮನದಲ್ಲಿ ಏರುಪೇರು ಕಾಣುವಿರಿ. ನೆರೆ ಹೊರೆಯವರಿಂದ ವಿನಾಕಾರಣ ಕಲಹಗಳು ತೋರಿ ಬರುವುದರಿಂದ ಕೊಂಚ ಬೇಸರವೆನಿಸಲಿದ್ದು, ಗುರುವಾರಾಧನೆಯಿಂದ ಪರಿಹಾರ ಪಡೆಯುವಿರಿ. ಅಲ್ಪ ನೆಮ್ಮದಿ ಸಮಾಧಾನ ತರಲಿದೆ.

ಮಿಥುನ ರಾಶಿ

 • 2018 ಮಿಥುನರ ರಾಶಿ ಭವಿಷ್ಯದ ಪ್ರಕಾರ ಈ ವರ್ಷ ನೀವು ಆರಂಭದಲ್ಲಿ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆದರೆ ಇತಿ ಮಿತಿ ಇಲ್ಲದ ಸುತ್ತಾಟದಿಂದ ಪ್ರಯಾಸ ಪಡುವಿರಿ.
 • ನಿಮ್ಮ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅದು ನಿಮ್ಮ ಆತ್ಮವಿಶ್ವಾಸದ ಹಂತವನ್ನು ಮೇಲಕ್ಕೆತ್ತಲು ಸಹಾಯ ಮಾಡುವುದು. ಬಂಧುಮಿತ್ರರು ಪ್ರೀತಿಯಿಂದ ಕಾಣುವರು. ಮನೆಯಲ್ಲಿ ಮಂಗಳ ಕಾರ್ಯಗಳ ಸಂಭ್ರಮ.
 • ಅವಿವಾಹಿತರಿಗೆ ಡಿಸೆಂಬರ್‌ ಮಧ್ಯದವರೆಗೆ ವೈವಾಹಿಕ ವ್ಯವಹಾರಗಳಿಗೆ ಚಾಲನೆ ದೊರೆಯಲಿದೆ. ಈ ವರ್ಷ ನಿಮಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಗೊಳ್ಳುವಿಕೆಯಿಂದ ನೆಮ್ಮದಿ ಮತ್ತು ಸಂತಸ ಪಡುವಿರಿ. ಕಲಾವಿದರು, ಸಂಶೋಧಕರುಗಳಿಗೆ ಖರ್ಚಿಗೇನೂ ತೊಂದರೆ ಇಲ್ಲ.
 • ನಡೆಯಬೇಕಾದ ಶುಭ ಕಾರ್ಯಗಳಿಗೆ ಎಲ್ಲ ಅನುಕೂಲ ಒದಗಲಿದೆ. ಚಿಕ್ಕಮಕ್ಕಳಿಗೆ ಅಧ್ಯಯನದಲ್ಲಿ ಪ್ರಗತಿ ಇದೆ. ಹಿರಿಯರ ಉತ್ತಮ ಅನುಭವದ ಸಲಹೆಗಳಿಂದ ನಿಮ್ಮ ಯೋಜನೆಗೆ ಅನುಕೂಲವಾಗಲಿದೆ. ನಿರೀಕ್ಷೆ ಹುಸಿಯಾಗದಂತೆ ಉತ್ತಮ ಧನಾಗಮವಿದೆ.
 • ಒಟ್ಟಾರೆಯಾಗಿ, ನೀವು ಬೆಳೆಯಲು ಮತ್ತು ಯಶಸ್ಸು ಸಾಧಿಸಲು ಹಲವು ಅವಕಾಶಗಳನ್ನು ಈ ವರ್ಷ ಒದಗಿಸುತ್ತದೆ.

ಕಟಕ ರಾಶಿ

 • ಕಟಕ ರಾಶಿಗೆ 2018ರ ರಾಶಿ ಭವಿಷ್ಯದ ಪ್ರಕಾರ, ನಿಮ್ಮ ಆತ್ಮ ಗೌರವ ವೃದ್ಧಿಗೆ ಸತತ ಪ್ರಯತ್ನ ನಡೆಯುವ ಸಂಭವವಿದ್ದು, ಪತ್ನಿ ಸಹಕಾರ ಪಡೆಯುವುದು ಉತ್ತಮ, ಸ್ವತ್ತು ವ್ಯವಹಾರಗಳಲ್ಲಿ ಸೋದರರೊಂದಿಗೆ ಕಿರಿಕಿರಿಯಾಗದಂತಹ ವರ್ತನೆ ಇರಲಿ.
 • ಹಣಕಾಸಿನ ವಿಚಾರದ ಬಗ್ಗೆ ಮಾತುಕತೆ ನಡೆವ ಸಾಧ್ಯತೆಯಿದ್ದು ಎಲ್ಲ ಒಳಿತಿನ ಹಾದಿಯಲ್ಲಿ ನಡೆಯಲಿದೆ. ಇದರಿಂದ ನಿಮ್ಮ ಸುತ್ತ ಇನ್ನಷ್ಟು ಹುಮ್ಮಸ್ಸು ಕಂಡುಬರಲಿದೆ ಮತ್ತು ನೀವು ಇತರರನ್ನು ಮುನ್ನಡೆಸುತ್ತೀರಿ. ಧಾರ್ಮಿಕ ವಿಷಯಗಳತ್ತ ಹೆಚ್ಚಿನ ಸಮಯ ವ್ಯಯಿಸುವುದರಿಂದ ನ್ಯಾಯಾಂಗ ವ್ಯವಹಾರಗಳಲ್ಲಿ ಜಯ ಸಿದ್ಧಿಸಲಿದೆ.
 • ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶವಿದೆ. ಆರೋಗ್ಯದಲ್ಲಿನ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ಇದರಿಂದ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ವ್ಯಾಪಾರಿಗಳಿಗೆ ಸಕಾರಾತ್ಮಕ ಬದಲಾವಣೆಯಿಂದ ಲಾಭವಿದೆ. ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆ ಹೆಚ್ಚಲಿದೆ.
 • ಹೊಸ ಪ್ರಯತ್ನಗಳಿಗೆ ತಕ್ಕ ಫಲವಿದೆ. ಮಂಗಲ ಕಾರ್ಯಗಳಿಗೆ ನೆರವು ಸಿಗಲಿದೆ. ಜೊತೆಗೆ ಕೈಗೂಡುವ ಯೋಜನೆಗಳಿಂದ ಅಧಿಕ ಧನಾಗಮನವಿದೆ. ಆಪ್ತರ ಭೇಟಿ, ರುಚಿಕರ ಖಾದ್ಯಗಳ ಸೇವನೆಯಿಂದ ಮನೋಲ್ಲಾಸ, ನೆಮ್ಮದಿ ಇದೆ. ಒಟ್ಟಾರೆಯಾಗಿ, ಈ ವರ್ಷವು ಕೆಲವು ಸವಾಲುಗಳೊಂದಿಗೆ ಉತ್ತಮವಾಗಿರುತ್ತದೆ.

ಸಿಂಹ ರಾಶಿ

 • ಸಿಂಹ ರಾಶಿಗೆ 2018ರ ರಾಶಿ ಭವಿಷ್ಯದ ಪ್ರಕಾರ, ಈ ವರ್ಷ ನಿಮಗೆ ದೈವಬಲ ಕೂಡಿಬಂದಿದ್ದು ನೀವು ಧಾರ್ಮಿಕ ವಿಚಾರಗಳಿಂದ ಗಳಿಕೆ ಮಾಡುತ್ತೀರಿ ಮತ್ತು ನೀವು ತೀರ್ಥಯಾತ್ರೆಗೂ ತೆರಳಬಹುದು, ಇದರಿಂದ ಎಲ್ಲ ರೀತಿಯ ಮುನ್ನಡೆಗೆ ಅನುಕೂಲವಿದೆ.
 • ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರೀಕ್ಷೆ ಸಾಧ್ಯವಾಗದಿದ್ದುರಿಂದ ಗುರು ರಾಘವೇಂದ್ರರ ಸೇವೆ ಉತ್ತಮ. ದುಡುಕಿನ ನಿರ್ಧಾರ ಕಾರ್ಯ ಭಂಗಕ್ಕೆ ಕಾರಣವಾಗಲಿದ್ದು, ಎಚ್ಚರಿಕೆ ವಹಿಸುವುದು ಒಳಿತು. ಕುಟುಂಬದಲ್ಲಿ ಸ್ವಲ್ಪ ಅಡಚಣೆಗಳಿದ್ದು, ತಾಳ್ಮೆ ಸಮಾಧಾನ ವಹಿಸುವುದು ಒಳ್ಳೆಯದು.
 • ಹಿರಿಯರ ಮಧ್ಯಸ್ಥಿಕೆಯಿಂದ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಈ ವರ್ಷ ವೈದ್ಯರು, ಕೃಷಿಕರು ತಮ್ಮ ತಮ್ಮ ರಂಗದಲ್ಲಿ ಹಣ ಹೂಡುವಿಕೆಯಿಂದ ಲಾಭವೆನಿಸಲಿದೆ. ವ್ಯಾಪಾರಿಗಳಿಗೆ ಸಕಾಲವಿದೆ. ಸಜ್ಜನರ ಸಂಗದಿಂದ ಪ್ರತಿಷ್ಠೆ ಬೆಳೆಯಲಿದೆ.
 • ಹಣಕಾಸು ಸಂಸ್ಥೆಗಳಿಂದ ನಿಮ್ಮ ಹೊಸ ಯೋಜನೆಗೆ ಸಹಕಾರ ದೊರೆಯಲಿದ್ದು, ಹೊಸ ಮಾತುಗಳಿಗೆ ದಿಟ್ಟ ಹೆಜ್ಜೆ ಇಡುವುದು ಒಳಿತು. ಸಮಾಜ ಸೇವೆಯಲ್ಲಿ ಶ್ರದ್ಧೆ ವಹಿಸುವುದರಿಂದ ಗೌರವವಿದೆ. ಒಟ್ಟಾರೆಯಾಗಿ, ಈ ವರ್ಷವು ಜೀವನವು ಧನಾತ್ಮಕ ಬದಲಾವಣೆಗಳನ್ನು ಕಾಣುತ್ತವೆ. ಸಾರ್ವಜನಿಕವಾಗಿಯೂ ನಿಮ್ಮ ಗೌರವ ಹೆಚ್ಚುತ್ತದೆ.

ಕನ್ಯಾ ರಾಶಿ

 • 2018ರ ಕನ್ಯಾ ರಾಶಿ ಭವಿಷ್ಯದ ಪ್ರಕಾರ ನಿಮಗೆ ಈ ವರ್ಷವು ಅತ್ಯಂತ ಅಧಿಕ ಸಾಧನೆ ಮಾಡುವ ವರ್ಷವಾಗಿದೆ. ನಿಮಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಲಭಿಸಲಿದೆ. ಬುದ್ಧಿ ಜೀವಿಗಳು ವೈಯಕ್ತಿಕ ಕೆಲಸ ವಿಸ್ತರಿಸಲು ವಿವಿಧ ಅವಕಾಶಗಳು ಒದಗಿ ಬರಲಿವೆ.
 • ವ್ಯವಹಾರಗಳು ಸರಾಗವಾಗಿ ನಡೆಯಲಿವೆ. ಕುಟುಂಬದಲ್ಲಿನ ಹಿರಿಯರ ಸಹಕಾರದಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ. ವರ್ಷದ ಮಧ್ಯದಲ್ಲಿ ಕೆಲವು ನಿರೀಕ್ಷಿತ ಅಚ್ಚರಿಯ ಕಾರ್ಯಗಳು ಕೈಗೂಡಲಿವೆ. ಅದರಿಂದ ಸ್ವಲ್ಪ ಮಟ್ಟಿಗೆ ಸಂತಸವೆನಿಸಲಿದೆ.
 • ಅಲ್ಲದೇ ಮಹಾನ್ ಸಂತರ ದರ್ಶನ ಭಾಗ್ಯ ಸಿಗಲಿದೆ. ಹಾಗೆಯೇ ವೃತ್ತಿ ರಂಗದಲ್ಲಿ ಬೆಳವಣಿಗೆ ಕಂಡುಬರಲಿದೆ. ನಿಮ್ಮ ನಿಸ್ವಾರ್ಥನೆ ನಿಮ್ಮನ್ನು ರಕ್ಷಿಸಲಿದೆ.
 • ಸೂಕ್ತ ಮಹತ್ವದ ನಿರ್ಧಾರ ಕೈಗೊಳ್ಳುವುದರಿಂದ ಉತ್ತಮ ಗುರಿ ತಲುಪುವಿರಿ. ಕೀರ್ತಿ, ಗೌರವ ಪಡೆಯುವಿರಿ. ಹಿತ ಶತ್ರುಗಳ ಮಾತಿಗೆ ಮರುಳಾಗದೇ ಹೆಜ್ಜೆ ಹಾಕಿದರೆ ಉತ್ತಮ ಲಾಭವಿದೆ.

ತುಲಾ ರಾಶಿ

 • ತುಲಾ ರಾಶಿಯವರಿಗೆ ಒಟ್ಟಾರೆಯಾಗಿ 2018 ಒಂದು ಅನುಕೂಲಕರ ವರ್ಷವಾಗಿದೆ. ನೀವು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರುತ್ತೀರಿ.
 • ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿರಿ. ಮಗುವಿನ ಮುದ್ದು ಮಾತು ನಿಮ್ಮ ದಣಿವನ್ನು ಬಗೆಹರಿಸುವುದು. ಕೆಲಸದಲ್ಲಿ ಹೊಸ ಉತ್ಸಾಹ ಮೂಡುವುದು.
 • ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗುರುವಿನ ಮೊರೆ ಹೋಗುವಿರಿ. ಗುರುವಿನ ಶುಭ ಆಶೀರ್ವಾದದಿಂದ ಗೊಂದಲದ ಮನಸ್ಥಿತಿ ದೂರವಾಗುವುದು. ಆರ್ಥಿಕ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡುಬರುವುದು. ವಿದ್ಯಾರ್ಥಿಗಳು ಶ್ರಮವಹಿಸಿದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ವಿದೇಶದಲ್ಲಿ ಶಿಕ್ಷಣ ಪಡೆಯಬಯಸುವವರಿಗೆ ಈ ಸಮಯವು ಸಕಾರಾತ್ಮಕವಾಗಿರುತ್ತದೆ.
 • ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಉತ್ತಮ ಸಮಯವಾಗಿದೆ. ಪ್ರೇಮ ಸಂಬಂಧಗಳು ಮತ್ತು ವಂಶದ ಬೆಳವಣಿಗಗೂ ಒಂದು ಸಕಾರಾತ್ಮಕ ಅವಧಿಯಾಗಿದೆ.
 • ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ನೀವು ಯಾವುದೇ ಪ್ರಮುಖ ಅನಾರೋಗ್ಯವನ್ನು ಎದುರಿಸದಿದ್ದರೂ, ಆಗಾಗ ಬರುವ ರೋಗಗಳು ನಿಮ್ಮನ್ನು ಭಾಧಿಸಬಹುದು.

ವೃಶ್ಚಿಕ ರಾಶಿ

 • ನಿಮ್ಮ 2018ರ ಜ್ಯೋತಿಷ್ಯದ ಪ್ರಕಾರ ವೃಶ್ಚಿಕ ರಾಶಿಯವರಿಗೆ ವರ್ಷದ ಪ್ರಾರಂಭದಲ್ಲಿ ನೀವು ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಲು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
 • ಅಭದ್ರತೆಯ ಭಾವನೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಜಾಗರೂಕರಾಗಿರಿ. ಅನಗತ್ಯ ಪ್ರವಾಸಗಳೂ ನಿಮಗೆ ಒಳ್ಳೆಯದಲ್ಲ. ಪ್ರೀತಿಯ ವಿಷಯದಲ್ಲೂ ಕೆಲವು ಅಪಶ್ರುತಿಗಳಿರಬಹುದು. ಶ್ರಮವಹಿಸಿ ಕೆಲಸ ಮಾಡುವುದೂ ನಿರೀಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ.
 • ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ನಿಮ್ಮ ಗಳಿಕೆಯೂ ಹೆಚ್ಚಾಗಬಹುದು. ನೀವು ಉನ್ನತ ಶಿಕ್ಷಣಕ್ಕಾಗಿ ಹೋಗಬಯಸಿದರೆ, ನೀವು ಅತ್ಯಂತ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.
 • ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ಜೂನ್ ನಂತರದ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಕೆಟ್ಟ ಜನರ ಸ್ನೇಹ, ಸಜ್ಜನರಲ್ಲಿ ವಿರೋಧವೂ ಬರುವ ಸಂಭವವಿದೆ.
 • ಬಾಕಿ ಉಳಿದ ಕೋರ್ಟ್ ವಿವಾದಗಳಿಂದ ಕಿರಿಕಿರಿ. ಧನವ್ಯಯವಾಗಲಿದೆ. ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಉತ್ತಮ. ಕೃಷಿಕರಿಗೆ ರಸ ಪದಾರ್ಥಗಳಿಂದ ಲಾಭ, ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಜಯವಿದೆ.

ಧನಸ್ಸು ರಾಶಿ

 • ಧನುರಾಶಿಯವರಿಗೆ 2018ರ ಮೊದಲ ಭಾಗ ಬಹಳ ಉತ್ತಮವಾಗಿರುತ್ತದೆ. ಉಪಾಧ್ಯಾಯರಿಗೆ ಹೆಚ್ಚಿನ ಒತ್ತಡ ಎದುರಾಗುವುದು.
 • ಹೋಟೆಲ್‌ ಉದ್ಯಮಿಗಳಿಗೆ ಒಳ್ಳೆಯ ವರ್ಷ. ದೇಹದಲ್ಲಿ ಆಲಸ್ಯವು, ಚಿತ್ತ ಚಾಂಚಲ್ಯದಿಂದ ಕೆಲಸದಲ್ಲಿ ತಪ್ಪು ನುಸುಳುವುದು.
 • ಕುಲದೇವತಾ ಆರಾಧನೆಯಿಂದ ಒಳಿತಾಗುವುದು. ಶೀಘ್ರ ಹಣ ಮಾಡುವ ದುರಾಸೆಯಿಂದ ದೂರವಿರಿ. ಉದ್ಯೋಗಸ್ಥರು ಬಹಳ ಎಚ್ಚರಿಕೆಯಿಂದಿರಬೇಕು.
 • ಶತ್ರುಗಳ ವಿರುದ್ಧ ನಿಮಗೆ ಮೇಲುಗೈಯಾಗುತ್ತದೆ. ಒಟ್ಟಾರೆಯಾಗಿ ನಿಮಗೆ ಉತ್ತಮ ವರ್ಷ ಇದಾಗಿರುತ್ತದೆ. ಆರೋಗ್ಯದ ಮೇಲೆ ಗಮನವಿರಲಿ. ಈ ವರ್ಷ ನೀವು ಹಣಕಾಸಿನ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಹೆಚ್ಚಿನ ಗಮನಹರಿಸಿದರೆ ಉತ್ತಮ.
 • ಹಿರಿಯರೊಡನೆ ಅನವಶ್ಯಕ ವಾದ ವಿವಾದ ಬೇಡ. ನೆರೆ ಹೊರೆಯವರಲ್ಲಿ ನೀವು ವಿಶ್ವಾಸದಿಂದ ನಡೆಯುವುದರಿಂದ ಗೌರವ ಹೆಚ್ಚಲಿದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಗಂಭಿರವಾಗಿ ನಡೆದುಕೊಂಡರೆ ಪ್ರಗತಿ ಕಾಣಲಿದೆ.

ಮಕರ ರಾಶಿ

 • ಮಕರ ರಾಶಿಯವರಿಗೆ 2018ರ ವರ್ಷ ಮಿಶ್ರ ಫಲಿತಾಂಶಗಳನ್ನು ಹೊಂದಿದೆ. ಹಣಕಾಸಿನ ವಿಷಯಗಳಲ್ಲಿ ಏಳುಬೀಳುಗಳನ್ನು ಕಾಣಬಹುದು.
 • ನೀವು ಸಾಲಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿಶೇಷ ಗಮನ ಹರಿಸಬೇಕಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿರಬಹುದೆಂದು ಹೇಳುತ್ತದೆ. ಅಲ್ಲದೆ, ಆರೋಗ್ಯ ಅಷ್ಟೇನೂ ಉತ್ತಮವಾಗಿರದಿರಬಹುದು.
 • ನಿಮ್ಮ ಶತ್ರುಗಳು ಕೆಲವು ಹಂತದವರೆಗೆ ನಿಮಗೆ ತೊಂದರೆ ನೀಡಬಹುದಾದರೂ ಕೊನೆಯಲ್ಲಿ ಜಯ ನಿಮ್ಮದೇ ಆಗಿರುತ್ತದೆ. ಸಾಮಾಜಿಕ ಸಮಾರಂಭ ಹಾಗೂ ಕಾರ್ಯಗಳ ನಿಮಿತ್ತ ವೈಯಕ್ತಿಕ ವ್ಯವಹಾರಗಳಿಗೆ ಹಿಂದೇಟು ಹಾಕುವ ಸಂಭವವಿದೆ. ಹಿಂದಿನ ಸಾಲದಿಂದ ವೇದನೆಯುಂಟಾಗಲಿದೆ.
 • ಹಿರಿಯ ಸಹೋದರನ ಸಲಹೆ ಸಹಾಯದಿಂದ ನಿಧಾನ ಪ್ರಗತಿ ಕಾಣಲಿದೆ. ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ ಮತ್ತು ನೀವು ವೈಯಕ್ತಿಕ ಜೀವನವನ್ನು ಖುಷಿಪಡುತ್ತೀರಿ. ಒಟ್ಟಾರೆಯಾಗಿ, ಜೀವನದಲ್ಲಿ ಮುಂದೆ ಸಾಗಲು ಮತ್ತು ನಿಮ್ಮ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಲು ಉತ್ತಮ ವರ್ಷವಾಗಿದೆ.

ಕುಂಭ ರಾಶಿ

 • ಕುಂಭ ರಾಶಿಯವರು 2018ರಲ್ಲಿ ಒಂದು ಅದ್ಭುತ ಆರಂಭವನ್ನು ಹೊಂದುತ್ತಾರೆ. ಈ ವರ್ಷ ನಿಮ್ಮ ಶಕ್ತಿಗಳ ಮೂಲಕ ಹೊಸತನ್ನು ಕಲಿಯುತ್ತೀರಿ. ನೀವು ಕಲಿತಿರುವುದನ್ನು ಇತರರಿಗೆ ಹೇಳುವ / ಬೋಧಿಸುವ ಮೂಲಕ ಗೌರವವನ್ನು ಸಂಪಾದಿಸುವಿರಿ.
 • ಮೇಲಧಿಕಾರಿಗಳಿಂದ ಪ್ರಶಂಸೆಯು ದೊರೆಯುವುದು. ಕೈಗೊಂಡ ಕಾರ್ಯಗಳಿಗೆ ಸೋದರಿಯರಿಂದ ಸಹಕಾರವಿದೆ. ನಿಮಗೆ ಧನಾತ್ಮಕ ಹಾಗೂ ಪ್ರಗತಿಯ ವರ್ಷ ಇದಾಗಿರುತ್ತದೆ.
 • ಮನೆಯಲ್ಲಿ ಹರ್ಷದ ವಾತಾವರಣ ಕಾಣಲಿದೆ. ಏಜೆಂಟರು, ಗುತ್ತಿಗೆದಾರರು, ಯುವ ಕಲಾವಿದರಿಗೆ ಸಕಾಲವಿದ್ದು ಹೆಚ್ಚು ಪ್ರಯತ್ನಕ್ಕೆ ಲಾಭವಿದೆ. ಬರಹಗಾರರು, ಚಿತ್ರಕಲಾವಿದರಿಗೆ ಸೂಕ್ತ ಗೌರವ, ಸಂಭಾವನೆಯೊಂದಿಗೆ ಸ್ಥಾನಮಾನ ಕೂಡ ಲಭಿಸಲಿದೆ.
 • ನೀವು ಉತ್ತಮ ಆರೋಗ್ಯವನ್ನು ಆನಂದಿಸುವಿರಿ ಆದರೆ ನಿಮ್ಮ ಆಹಾರದ ಮೇಲೆ ಗಮನವಿರಿಸುವುದು ಅತ್ಯಗತ್ಯ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ನಿರುದ್ಯೋಗಿಗಳಿಗೆ ಅವರ ಇಚ್ಛೆಗೆ ಅನುಗುಣವಾಗಿ ಉದ್ಯೋಗ ಲಭಿಸಲಿದೆ.

ಮೀನ ರಾಶಿ

 • ಮೀನ ರಾಶಿಯವರು 2018ರಲ್ಲಿ ನೀವು ಸಾಮಾಜಿಕ ಸಮಾರಂಭ ಹಾಗೂ ಕಾರ್ಯಗಳ ನಿಮಿತ್ತ ವೈಯಕ್ತಿಕ ವ್ಯವಹಾರಗಳಿಗೆ ಹಿಂದೇಟು ಹಾಕುವ ಸಂಭವವಿದೆ.
 • ಹಿಂದಿನ ಸಾಲದಿಂದ ವೇದನೆಯುಂಟಾಗಲಿದೆ. ಕೈಗೊಂಡ ಕಾರ್ಯಗಳಿಗೆ ಸೋದರಿಯರಿಂದ ಸಹಕಾರವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ಸಾಹ ಉಂಟಾಗಲಿದೆ.
 • ರಾಜಕಾರಣಿಗೆ ಶುಭವಿದೆ. ಈ ಸಮಯ ಆರೋಗ್ಯ, ಉದ್ಯೋಗ, ಶಿಕ್ಷಣ ಮತ್ತು ಪ್ರಯಾಣಕ್ಕೆ ಅನುಕೂಲಕರವಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಆರೋಗ್ಯದ ಬಗ್ಗೆ ಯಾವತ್ತೂ ಎಚ್ಚರಿಕೆಯಿಂದಿರಬೇಕು.
 • ನಿಮ್ಮ ಹಿರಿಯ ಸಹೋದ್ಯೋಗಿಗಳೊಡನೆ ಯಾವುದೇ ಅನುಪಯುಕ್ತ ವಾದವನ್ನು ತಪ್ಪಿಸಿ, ಅಲ್ಲದೆ ಪ್ರಮುಖವಲ್ಲದ ಪ್ರಯಾಣವನ್ನೂ ತಪ್ಪಿಸಿ. ಈ ಅವಧಿ ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಸಕಾರಾತ್ಮಕವಲ್ಲ.
 • ನೀವು ಕೆಲವು ಅನುಪಯುಕ್ತ ಪ್ರಯಾಣಗಳಿಗಾಗಿ ಹೋಗಬೇಕಾಬಹುದು. ಇದು ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಳ್ಳೆಯ ವರ್ಷವಾಗಿರುತ್ತದೆ. ಕುಟುಂಬದಲ್ಲಿ ಒದಗಿ ಬರುವ ಭಾಧ್ಯತೆಗಳನ್ನು ಚೆನ್ನಾಗಿ ನಿಭಾಯಿಸುವಿರಿ.
 • ಜೊತೆಗೆ ಸತ್ಕಾರ್ಯಗಳ ನಿರ್ವಹಣೆ, ಬೌದ್ಧಿಕ ಕಾರ್ಯಕ್ರಮಗಳ ಸಂಭ್ರಮ ನಡೆಯಲಿದೆ. ಪ್ರತಿಷ್ಠಿತರ ಭೇಟಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಲಾಭವಿದೆ.