2019 ವರ್ಷ ನಿಮ್ಮ ರಾಶಿಗೆ ಏನೇನೆಲ್ಲ ಫಲಾನುಫಲ ತರಲಿದೆ ಎಂದು ತಿಳುದುಕೊಳ್ಳಿ..!!

0
1718

Astrology in kannada | kannada news 

ಮೇಷ ರಾಶಿ

 • 2019 ರ ರಾಶಿ ಭವಿಷ್ಯದ ಪ್ರಕಾರ ಮೇಷ ರಾಶಿನವರಿಗೆ ಈ ವರ್ಷ ಮಿಶ್ರ ಪ್ರತಿಫಲ ಪಡೆಯುವಿರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅಗಲಿ ಅಥವಾ ಆರೋಗ್ಯದ ವಿಚಾರದಲ್ಲೇ ಆಗರಲಿ ಈ ವರ್ಷ ನಿಮಗೆ ಮಿಶ್ರ ಪ್ರತಿಫಲ ಸಿಗಲಿದೆ.
 • ವರ್ಷದ ಪ್ರಾರಂಭದಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡರೂ ಮದ್ಯದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಗಳಿವೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಲ್ಲಿ ಮಾತ್ರ ನಿಮ್ಮ ಆರೋಗ್ಯದ ಮೇಲೆ ಸುಧಾರಣೆಯಾಗುವ ಸಾಧ್ಯತೆ ಇದೆ.
 • ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವಿರಿ. ನಿಮ್ಮ ಅದ್ಭುತ ಪ್ರಯತ್ನಗಳಿಂದಾಗಿ ನೀವು ಯಶಸ್ಸು ಕಾಣುವಿರಿ.
 • ಈ ವರ್ಷ ನಿಮ್ಮ ಅದೃಷ್ಟ ನಿಮಗೆ ವಲಿಯಲಿದೆ. ಅದರಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸುವಿರಿ. ವರ್ಷದ ಪ್ರಾರಂಭದಿಂದಲೇ ನೀವು ನಿಮ್ಮ ಯೋಜನೆಗಳಲ್ಲಿ ಮನಸ್ಸಿಟ್ಟು ಕೆಲಸ ಮಾಡುವಿರಿ. ಆದರೆ, ಅದರ ಪ್ರತಿ ಫಲ ಮಾತ್ರ ಭವಿಷ್ಯದಲ್ಲಿ ಖಂಡಿತಾ ದೊರೆಯುತ್ತದೆ.
 • ಆರ್ಥಿಕ ಪರಿಸ್ಥಿತಿಯಲ್ಲಿ ಅಸ್ಥಿರತೆಯನ್ನು ಅನುಭವಿಸುವ ಸಾದ್ಯತೆಗಳಿವೆ. ವರ್ಷದ ಪ್ರಾರಂಭದಲ್ಲಿ, ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಆದರೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗುತ್ತವೆ.
 • ನಿಮ್ಮ ಸಂಬಂಧವನ್ನು ಅತ್ಯುತ್ತಮ ಸ್ಥಿತಿಯಲ್ಲಿಡಲು, ನಿಮ್ಮ ಪ್ರೀತಿಯಲ್ಲಿ ನೀವು ಪಾರದರ್ಶಕತೆ ಕಾಪಾಡುವುದು ಒಳ್ಳೆಯದು.

ವೃಷಭ ರಾಶಿ

ದಿನ ಭವಿಷ್ಯ

 • 2019 ರ ರಾಶಿ ಭವಿಷ್ಯದ ಪ್ರಕಾರ ನೀವು ಈ ವರ್ಷ ದೀರ್ಘಕಾಲದ ರೋಗದಿಂದ ಬಳಲಬಹುದು. ಆದುದರಿಂದ ನೀವು ಈ ವರ್ಷ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅದರಲ್ಲೂ ಊಟದ ಪದ್ಧತಿಯ ಬಗ್ಗೆ ಹೆಚ್ಚು ಗಮನ ಕೊಡಿ. ಮತ್ತು ಆದಷ್ಟು ಆರೋಗ್ಯಕರ ಆಹಾರವನ್ನೇ ಸೇವಿಸಿ.
 • ನಿಮ್ಮ ವೃತ್ತಿ ಜೀವನದಲ್ಲಿ ಏರುಪೇರುಗಳಾಗುತ್ತವೆ ಮತ್ತು ವೃತ್ತಿ ಜೀವನಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಈ ವರ್ಷದ ಪ್ರಾರಂಭದಲ್ಲಿ ಎದುರಿಸಬಹುದಾಗಿದೆ. ಒಳ್ಳೆಯ ಫಲಿತಾಂಶ ಪಡೆಯುವುದಕ್ಕಾಗಿ ತುಂಬಾ ಕಷ್ಟ ಪಡಬೇಕು.
 • ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ ಆದರೆ ನಿಮ್ಮ ಖರ್ಚುಗಳು ಜಾಸ್ತಿಯಾಗುವ ಸಾಧ್ಯತೆಯಿರುತ್ತದೆ. ನೀವು ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿದರೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣುವಿರಿ.
 • ಈ ವರ್ಷದ ಮದ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಪ್ರಬಲಗೊಳ್ಳುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಿರಿಯರೊಡನೆ ಅನವಶ್ಯಕ ವಾದ ವಿವಾದ ಬೇಡ. ನೆರೆ ಹೊರೆಯವರಲ್ಲಿ ನೀವು ವಿಶ್ವಾಸದಿಂದ ನಡೆಯುವುದರಿಂದ ಗೌರವ ಹೆಚ್ಚಲಿದೆ.
 • ಈ ವರ್ಷದ ಎಲ್ಲ ತೊಂದರೆಗಳಿಗೆ ಗುರುವಾರಾಧನೆಯಿಂದ ಪರಿಹಾರ ಪಡೆಯುವಿರಿ. ಇದು ನಿಮ್ಮ ಜೀವನಕ್ಕೆ ಅಲ್ಪ ನೆಮ್ಮದಿ ಸಮಾಧಾನ ತರಲಿದೆ.

ಮಿಥುನ ರಾಶಿ

ದಿನ ಭವಿಷ್ಯ

 • 2019 ರಾಶಿ ಭವಿಷ್ಯದ ಪ್ರಕಾರ ಮಿಥುನರಾಶಿಯವರಿಗೆ ಈ ವರ್ಷ ನೀವು ಆರಂಭದಲ್ಲಿ ಕೆಲ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆದರೆ ಇತಿ ಮಿತಿ ಇಲ್ಲದ ಸುತ್ತಾಟದಿಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
 • ಈ ವರ್ಷ ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುತ್ತಿರಿ. ಸರಕಾರಿ ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯದಿಂದ ಬದಲಾವಣೆ ಕಾಣುವಿರಿ. ಸಾವಧಾನದಿಂದ ನಿಮ್ಮ ಕೆಲಸದಲ್ಲಿ ಹೆಜ್ಜೆ ಹಾಕಿದರೆ ಯಶಸ್ಸು ಸಾಧಿಸುವಿರಿ. ಉತ್ತಮ ಪರಿಶ್ರಮದಿಂದ ಪ್ರತಿಫಲ ಸಿಗುವುದು.
 • ಈ ವರ್ಷ ನಿಮಗೆ ಅತ್ಯುತ್ತಮ ಆರ್ಥಿಕ ಪರಿಸ್ಥಿತಿಯ ಜೀವನ ಹೊಂದುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳ್ಳುವಿಕೆಯಿಂದ ನೆಮ್ಮದಿ ಮತ್ತು ಸಂತಸ ಪಡುವಿರಿ. ಕಲಾವಿದರು, ಸಂಶೋಧಕರುಗಳಿಗೆ ಖರ್ಚಿಗೇನೂ ತೊಂದರೆ ಇಲ್ಲ.
 • ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ನೀಡುವ ಹೊಸ ವಿಚಾರಗಳು ನಿಮ್ಮ ಆರ್ಥಿಕ ಲಾಭಗಳನ್ನು ಹೆಚ್ಚಿಸುತ್ತದೆ. ನಿಮಗೆ ಸಾಕಷ್ಟು ಹಣ ದೊರೆಯುತ್ತದೆ. ಆದಾಗ್ಯೂ, ನಿಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸುವುದಕ್ಕಾಗಿ ನೀವು ಬೇರೆಡೆ ಪ್ರಯಾಣ ಬೆಳೆಸಬೇಕಾಗಬಹುದು.
 • ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುತ್ತದೆ. ನಿಮ್ಮ ಹಿರಿಯ ಅಧಿಕಾರಿಗಳ ಸಹಾಯದಿಂದ ವೃತ್ತಿ ಜೀವನದಲ್ಲಿ ಬದಲಾವಣೆ ಕಾಣುವಿರಿ. ಸಾವಧಾನದಿಂದ ಹೆಜ್ಜೆ ಹಾಕಿದರೆ ಯಶಸ್ಸು ಸಾಧಿಸುವಿರಿ.
 • ಬಂಧುಗಳಲ್ಲಿ ಬಾಂಧವ್ಯ ವೃದ್ದಿಗೊಳ್ಳುವಿಕೆಯಿಂದ ಜೀವನ ಮಟ್ಟ ಸುಧಾರಿಸಲಿದೆ.

ಕಟಕ ರಾಶಿ

ದಿನ ಭವಿಷ್ಯ

 • 2019 ರಾಶಿ ಭವಿಷ್ಯದ ಪ್ರಕಾರ ಕಟಕ ರಾಶಿಯವರು ಆರ್ಥಿಕವಾಗಿ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಮತ್ತು ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುವಿರಿ.
 • ವರ್ಷದ ಆರಂಭದಲ್ಲಿ ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮಗೆ ಒಳ್ಳೆಯ ಸುದ್ದಿ ದೊರೆಯುತ್ತದೆ. ಮಾರ್ಚ್ ಮುಗಿದ ನಂತರ ಸದ್ಯದ ವ್ಯಾಪಾರವನ್ನು ವಿಸ್ತರಿಸಲು ಅಥವಾ ಹೊಸ ವ್ಯವಹಾರಕ್ಕೆ ಕೈ ಹಾಕುವುದು ಒಳ್ಳೆಯದು. ಅದರಲ್ಲೂ ಏಪ್ರಿಲ್ ಮತ್ತು ಮೇ ತಿಂಗಳುಗಳು ಧನ ಲಾಭಕಾರಿಯಾಗಲಿವೆ.
 • ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ನೀವು ಯಾವುದೇ ಪ್ರಮುಖ ಅನಾರೋಗ್ಯವನ್ನು ಎದುರಿಸದಿದ್ದರೂ, ಆಗಾಗ ಬರುವ ರೋಗಗಳು ನಿಮ್ಮನ್ನು ಭಾಧಿಸಬಹುದು.
 • ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗುರುವಿನ ಮೊರೆ ಹೋಗುವಿರಿ. ಗುರುವಿನ ಶುಭ ಆಶೀರ್ವಾದದಿಂದ ಗೊಂದಲದ ಮನಸ್ಥಿತಿ ದೂರವಾಗುವುದು. ಆರ್ಥಿಕ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡುಬರುವುದು. ವಿದ್ಯಾರ್ಥಿಗಳು ಶ್ರಮವಹಿಸಿದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.
 • ಆಗದವರು ಮಿತ್ರರಾಗುವ ಸಂದರ್ಭ ಕೂಡಿ ಬಂದು ವಿವಾದದಿಂದ ಬಿಡುಗಡೆ ಹೊಂದುವಿರಿ. ಹೊಸ ಉದ್ಯೋಗಿಗಳಿಗೆ ಔದ್ಯೋಗಿಕ ರಂಗದಲ್ಲಿ ಅನುಕೂಲ, ಪ್ರಗತಿ ಇದೆ. ಒಟ್ಟಾರೆಯಾಗಿ ನಿಮಗೆ ಉತ್ತಮ ಹಾಗೂ ಪ್ರಗತಿಯ ವರ್ಷ ಇದಾಗಿರುತ್ತದೆ.

ಸಿಂಹ ರಾಶಿ

ದಿನ ಭವಿಷ್ಯ

 • ಸಿಂಹ ರಾಶಿ ಭವಿಷ್ಯ 2019 ರ ಪ್ರಕಾರ ಆರೋಗ್ಯದಲ್ಲಿನ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ಇದರಿಂದ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.
 • ನಿಮ್ಮ ಔದ್ಯೋಗಿಕ ಜೀವನದಲ್ಲಿ ಯಶಸ್ಸು ಸಾಧಿಸಲು ನೀವು ಶ್ರಮ ವಹಿಸುತ್ತೀರಿ. ಇದರಿಂದಾಗಿ ಸಾಕಷ್ಟು ಉತ್ತಮ ಫಲಿತಾಂಶಗಳು ದೊರೆಯುತ್ತವೆ, ಆದರೆ ಅವು ನಿಮಗೆ ಸಂತೃಪ್ತಿ ನೀಡುವುದಿಲ್ಲ. ಕೆಲಸದಲ್ಲಿ ನೀವು ತೋರುವ ಶ್ರದ್ಧೆಯಿಂದಾಗಿ ನಿಮ್ಮ ಸಾಮರ್ಥ್ಯಕ್ಕೆ ಬೆಲೆ ಬರುತ್ತದೆ. ವ್ಯಾಪಾರಿಗಳಿಗೆ ಸಕಾರಾತ್ಮಕ ಬದಲಾವಣೆಯಿಂದ ಲಾಭವಿದೆ. ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆ ಹೆಚ್ಚಲಿದೆ.
 • ಹೊಸ ಪ್ರಯತ್ನಗಳಿಗೆ ತಕ್ಕ ಫಲವಿದೆ. ಮಂಗಲ ಕಾರ್ಯಗಳಿಗೆ ನೆರವು ಸಿಗಲಿದೆ. ಜೊತೆಗೆ ಕೈಗೂಡುವ ಯೋಜನೆಗಳಿಂದ ಅಧಿಕ ಧನಾಗಮನವಿದೆ. ಆಪ್ತರ ಭೇಟಿ, ರುಚಿಕರ ಖಾದ್ಯಗಳ ಸೇವನೆಯಿಂದ ಮನೋಲ್ಲಾಸ, ನೆಮ್ಮದಿ ಇದೆ. ಒಟ್ಟಾರೆಯಾಗಿ, ಈ ವರ್ಷವು ಕೆಲವು ಸವಾಲುಗಳೊಂದಿಗೆ ಉತ್ತಮವಾಗಿರುತ್ತದೆ.
 • ಹಣಕಾಸಿನ ವಿಚಾರದ ಬಗ್ಗೆ ಮಾತುಕತೆ ನಡೆವ ಸಾಧ್ಯತೆಯಿದ್ದು ಎಲ್ಲ ಒಳಿತಿನ ಹಾದಿಯಲ್ಲಿ ನಡೆಯಲಿದೆ. ಇದರಿಂದ ನಿಮ್ಮ ಸುತ್ತ ಇನ್ನಷ್ಟು ಹುಮ್ಮಸ್ಸು ಕಂಡುಬರಲಿದೆ ಮತ್ತು ನೀವು ಇತರರನ್ನು ಮುನ್ನಡೆಸುತ್ತೀರಿ. ಧಾರ್ಮಿಕ ವಿಷಯಗಳತ್ತ ಹೆಚ್ಚಿನ ಸಮಯ ವ್ಯಯಿಸುವುದರಿಂದ ನ್ಯಾಯಾಂಗ ವ್ಯವಹಾರಗಳಲ್ಲಿ ಜಯ ಸಿದ್ಧಿಸಲಿದೆ.
 • ಈ ವರ್ಷ ನಿಮ್ಮ ಪ್ರೇಮ ಜೀವನ ಸವಾಲಿನದ್ದಾಗಿರುತ್ತದೆ. ಆದ್ದರಿಂದ ನೀವು ಆ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ನೀವು ನಿಮ್ಮ ಪ್ರೇಮ ಸಂಗಾತಿಯೊಂದಿಗೆ ಜಗಳವಾಡಬಹುದು ಅಥವಾ ಯಾವುದೋ ತಪ್ಪು ಕಲ್ಪನೆಯಿಂದಾಗಿ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.

ಕನ್ಯಾ ರಾಶಿ

ದಿನ ಭವಿಷ್ಯ

 • ಕನ್ಯಾ ರಾಶಿಗೆ 2019ರ ರಾಶಿ ಭವಿಷ್ಯದ ಪ್ರಕಾರ, ಈ ವರ್ಷ ನಿಮಗೆ ದೈವಬಲ ಕೂಡಿಬಂದಿದ್ದು ನೀವು ಧಾರ್ಮಿಕ ವಿಚಾರಗಳಿಂದ ಗಳಿಕೆ ಮಾಡುತ್ತೀರಿ ಮತ್ತು ನೀವು ತೀರ್ಥಯಾತ್ರೆಗೂ ತೆರಳಬಹುದು, ಇದರಿಂದ ಎಲ್ಲ ರೀತಿಯ ಮುನ್ನಡೆಗೆ ಅನುಕೂಲವಿದೆ.
 • ನಿಮ್ಮ ಆರೋಗ್ಯದಲ್ಲಿ ಸುಧಾರಣೆಯ ಜೊತೆಗೆ ಕೆಲವು ಸಮಸ್ಯೆಗಳು ಕೂಡ ಎದುರಾಗುತ್ತವೆ. ನಿಮ್ಮ ಉದ್ಯೋಗದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರೀಕ್ಷೆ ಸಾಧ್ಯವಾಗದಿದ್ದುರಿಂದ ಗುರು ರಾಘವೇಂದ್ರರ ಸೇವೆ ಉತ್ತಮ. ದುಡುಕಿನ ನಿರ್ಧಾರ ಕಾರ್ಯ ಭಂಗಕ್ಕೆ ಕಾರಣವಾಗಲಿದ್ದು, ಎಚ್ಚರಿಕೆ ವಹಿಸುವುದು ಒಳಿತು. ಕುಟುಂಬದಲ್ಲಿ ಸ್ವಲ್ಪ ಅಡಚಣೆಗಳಿದ್ದು, ತಾಳ್ಮೆ ಸಮಾಧಾನ ವಹಿಸುವುದು ಒಳ್ಳೆಯದು.
 • ಹಿರಿಯರ ಮಧ್ಯಸ್ಥಿಕೆಯಿಂದ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಈ ವರ್ಷ ವೈದ್ಯರು, ಕೃಷಿಕರು ತಮ್ಮ ತಮ್ಮ ರಂಗದಲ್ಲಿ ಹಣ ಹೂಡುವಿಕೆಯಿಂದ ಲಾಭವೆನಿಸಲಿದೆ. ವ್ಯಾಪಾರಿಗಳಿಗೆ ಸಕಾಲವಿದೆ. ಸಜ್ಜನರ ಸಂಗದಿಂದ ಪ್ರತಿಷ್ಠೆ ಬೆಳೆಯಲಿದೆ.
 • ನಿಮ್ಮ ಸಮರ್ಥ ಸಂವಹನ ಕೌಶಲ್ಯಗಳ ಮೂಲಕ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತೀರಿ. ನಿಮ್ಮ ಆರ್ಥಿಕ ಜೀವನ ಮುಂಚೆಗಿಂತ ಚೆನ್ನಾಗಿರುತ್ತದೆ ಮತ್ತು ಈ ಸುಧಾರಣೆ ವರ್ಷದ ಪ್ರಾರಂಭದಲ್ಲೇ ಆಗುತ್ತದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನೀವು ವಿವಿಧೆಡೆಗಳಿಂದ ಹಣ ಪಡೆಯುವಿರಿ. ಆದರೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗುತ್ತವೆ.
 • ಈ ವರ್ಷ ನಿಮ್ಮ ಪ್ರೇಮ ಜೀವನದಲ್ಲಿ ಸಾಕಷ್ಟು ಸವಾಲುಗಳು ಎದುರಾಗಬಹುದು. ಉದ್ಯೋಗ/ವ್ಯಾಪಾರದಿಂದಾಗಿ ನೀವು ದೂರದ ಪ್ರದೇಶಗಳಿಗೆ ಪ್ರಯಾಣಿಸಬೇಕಾಗಬಹುದು.

ತುಲಾ ರಾಶಿ

ದಿನ ಭವಿಷ್ಯ

 • 2019ರ ತುಲಾ ರಾಶಿ ಭವಿಷ್ಯದ ಪ್ರಕಾರ ನಿಮಗೆ ಈ ವರ್ಷವು ಅತ್ಯಂತ ಅಧಿಕ ಸಾಧನೆ ಮಾಡುವ ವರ್ಷವಾಗಿದೆ. ನಿಮಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಲಭಿಸಲಿದೆ. ಬುದ್ಧಿ ಜೀವಿಗಳು ವೈಯಕ್ತಿಕ ಕೆಲಸ ವಿಸ್ತರಿಸಲು ವಿವಿಧ ಅವಕಾಶಗಳು ಒದಗಿ ಬರಲಿವೆ.
 • ಈ ವರ್ಷ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಈ ವರ್ಷ ನಿಮಗೆ ಆರೋಗ್ಯ ಭಾಗ್ಯ ದೊರೆಯುವುದಲ್ಲದೇ, ದೀರ್ಘ ಕಾಲದವರೆಗೆ ನಿಮ್ಮನ್ನು ಕಾಡುತ್ತಿದ್ದ ರೋಗಗಳು ಕೂಡ ವಾಸಿಯಾಗುತ್ತವೆ.
 • ವ್ಯವಹಾರಗಳು ಸರಾಗವಾಗಿ ನಡೆಯಲಿವೆ. ಕುಟುಂಬದಲ್ಲಿನ ಹಿರಿಯರ ಸಹಕಾರದಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ. ವರ್ಷದ ಮಧ್ಯದಲ್ಲಿ ಕೆಲವು ನಿರೀಕ್ಷಿತ ಅಚ್ಚರಿಯ ಕಾರ್ಯಗಳು ಕೈಗೂಡಲಿವೆ. ಅದರಿಂದ ಸ್ವಲ್ಪ ಮಟ್ಟಿಗೆ ಸಂತಸವೆನಿಸಲಿದೆ.
 • ಅಲ್ಲದೇ ಮಹಾನ್ ಸಂತರ ದರ್ಶನ ಭಾಗ್ಯ ಸಿಗಲಿದೆ. ಹಾಗೆಯೇ ವೃತ್ತಿ ರಂಗದಲ್ಲಿ ಬೆಳವಣಿಗೆ ಕಂಡುಬರಲಿದೆ. ನಿಮ್ಮ ನಿಸ್ವಾರ್ಥನೆ ನಿಮ್ಮನ್ನು ರಕ್ಷಿಸಲಿದೆ. ಆರ್ಥಿಕ ಕ್ಷೇತ್ರದಲ್ಲಿ ನಿಮಗೆ ನಿರೀಕ್ಷೆಗೆ ತಕ್ಕ ಫಲಿತಾಂಶಗಳು ದೊರೆಯುತ್ತವೆ.
 • ಸೂಕ್ತ ಮಹತ್ವದ ನಿರ್ಧಾರ ಕೈಗೊಳ್ಳುವುದರಿಂದ ಉತ್ತಮ ಗುರಿ ತಲುಪುವಿರಿ. ಕೀರ್ತಿ, ಗೌರವ ಪಡೆಯುವಿರಿ. ಹಿತ ಶತ್ರುಗಳ ಮಾತಿಗೆ ಮರುಳಾಗದೇ ಹೆಜ್ಜೆ ಹಾಕಿದರೆ ಉತ್ತಮ ಲಾಭವಿದೆ.
 • ಈ ವರ್ಷದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ನಿಮ್ಮ ಹೊಸ ಸಂಬಂಧ ಬೆಸೆಯಬಹುದು. ನಿಮ್ಮ ಪ್ರೇಮ ಸಂಗಾತಿಯೊಂದಿಗೆ ನಿಮ್ಮ ಹೊಂದಾಣಿಕೆ ಚೆನ್ನಾಗಿರುತ್ತದೆ. ನೀವು ಅವರೊಂದಿಗೆ ಪ್ರವಾಸ ಕೂಡ ಮಾಡಬಹುದು. ಮನರಂಜನೆಗಾಗಿ ಕೂಡ ನೀವಿಬ್ಬರೂ ಯಾವುದೋ ಒಂದು ಜಾಗಕ್ಕೆ ಪ್ರಯಾಣ ಬೆಳೆಸುತ್ತೀರಿ.

ವೃಶ್ಚಿಕ ರಾಶಿ

ದಿನ ಭವಿಷ್ಯ

 • ವೃಶ್ಚಿಕ ರಾಶಿ ಭವಿಷ್ಯ 2019 ರ ಪ್ರಕಾರ ವೃತ್ತಿ ಜೀವನದಲ್ಲಿ ಸಾಕಷ್ಟು ಒಳ್ಳೆಯ ಅವಕಾಶಗಳು ದೊರೆಯುತ್ತವೆ. ವೃತ್ತಿ ರಂಗದಲ್ಲಿ ಬೆಳವಣಿಗೆ ಕಂಡುಬರಲಿದೆ. ನಿಮ್ಮ ನಿಸ್ವಾರ್ಥನೆ ನಿಮ್ಮನ್ನು ರಕ್ಷಿಸಲಿದೆ. ಮತ್ತು ಕೆಲಸದ ಮೇಲೆ ವಿದೇಶ ಪ್ರಯಾಣ ಕೂಡ ಮಾಡುವ ಸಾಧ್ಯತೆಯಿರುತ್ತದೆ.
 • ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ನೀವು ಯಾವುದೇ ಪ್ರಮುಖ ಅನಾರೋಗ್ಯವನ್ನು ಎದುರಿಸದಿದ್ದರೂ, ಆಗಾಗ ಬರುವ ರೋಗಗಳು ನಿಮ್ಮನ್ನು ಭಾಧಿಸಬಹುದು. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಲೇಸು.
 • ನಿಮ್ಮ ಆರ್ಥಿಕ ಜೀವನದಲ್ಲಿ ಏರುಪೇರುಗಳಾಗುತ್ತವೆ. ಕುಟುಂಬದಲ್ಲಿನ ಹಿರಿಯರ ಸಹಕಾರದಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ. ವರ್ಷದ ಮಧ್ಯದಲ್ಲಿ ಕೆಲವು ನಿರೀಕ್ಷಿತ ಅಚ್ಚರಿಯ ಕಾರ್ಯಗಳು ಕೈಗೂಡಲಿವೆ. ಅದರಿಂದ ಸ್ವಲ್ಪ ಮಟ್ಟಿಗೆ ಸಂತಸವೆನಿಸಲಿದೆ. ನಿಮ್ಮ ಖರ್ಚುಗಳು ಹೆಚ್ಚಾಗುವುದು. ಆದುದರಿಂದ ಅವುಗಳ ನಡುವೆ ಸಮತೋಲನ ಕಾಪಾಡಲು ಪ್ರಯತ್ನಿಸಿ.
 • ಈ ವರ್ಷ ನಿಮಗಿಷ್ಟವಾದವರು ನಿಮಗೆ ದೊರೆಯುತ್ತಾರೆ ಮತ್ತು ನಿಮ್ಮ ಸಂಬಂಧ ತುಂಬಾ ಪ್ರಬಲಗೊಳ್ಳುವುದು. ಮತ್ತು ವಂಶದ ಬೆಳವಣಿಗಗೂ ಒಂದು ಸಕಾರಾತ್ಮಕ ಅವಧಿಯಾಗಿದೆ.
 • ಈ ವರ್ಷ ತಾಂತ್ರಿಕರಿಗೆ ಶುಭಫಲ ತೋರಿ ಬರಲಿದೆ. ಬಂಧುಗಳಲ್ಲಿ ಬಾಂಧವ್ಯ ವೃದ್ದಿಗೊಳ್ಳುವಿಕೆಯಿಂದ ಜೀವನ ಮಟ್ಟ ಸುಧಾರಿಸಲಿದೆ. ಕುಟುಂಬದಲ್ಲಿ ಒದಗಿ ಬರುವ ಭಾಧ್ಯತೆಗಳನ್ನು ಚೆನ್ನಾಗಿ ನಿಭಾಯಿಸುವಿರಿ. ಜೊತೆಗೆ ಸತ್ಕಾರ್ಯಗಳ ನಿರ್ವಹಣೆ, ಬೌದ್ಧಿಕ ಕಾರ್ಯಕ್ರಮಗಳ ಸಂಭ್ರಮ ನಡೆಯಲಿದೆ.

ಧನಸ್ಸು ರಾಶಿ

ದಿನ ಭವಿಷ್ಯ

 • ಧನು ರಾಶಿ ಭವಿಷ್ಯ 2019 ರ ಪ್ರಕಾರ ನಿಮ್ಮ ಆತ್ಮ ಗೌರವ ವೃದ್ಧಿಗೆ ಸತತ ಪ್ರಯತ್ನ ನಡೆಯುವ ಸಂಭವವಿದ್ದು, ಪತ್ನಿ ಸಹಕಾರ ಪಡೆಯುವುದು ಉತ್ತಮ, ಸ್ವತ್ತು ವ್ಯವಹಾರಗಳಲ್ಲಿ ಸಹೋದರರೊಂದಿಗೆ ಕಿರಿಕಿರಿಯಾಗದಂತಹ ವರ್ತನೆ ಇರಲಿ. ಕುಟುಂಬ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನಿಮ್ಮ ತಂದೆ-ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
 • ಈ ವರ್ಷದ ಪ್ರಾರಂಭದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬಹುದು. ನಿಮಗೆ ಪ್ರಯಾಣದ ವೇಳೆ ದಣಿವಾಗಬಹುದು. ವಾಹನವನ್ನು ಎಚ್ಚರಿಕೆಯಿಂದ ಓಡಿಸಿದರೆ ಒಳ್ಳೆಯದು.
 • ವೃತ್ತಿ ಜೀವನದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ. ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳಾಗಬಹುದು. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಇದರ ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಭಂದು ಮಿತ್ರರಿಂದ ನಿಮಗೆ ಆರ್ಥಿಕ ಸಹಾಯ ದೊರೆಯುವುದು.
 • ಈ ವರ್ಷ ನೀವು ಯಾವುದಾದರೂ ವ್ಯವಹಾರಕ್ಕೆ ಕೈ ಹಾಕಿ ಆರ್ಥಿಕ ಲಾಭ ಗಳಿಸಾಲು ಈ ವರ್ಷ ನಿಮಗೆ ಅನುಕೂಲಕರವಾಗಿದೆ.
 • ಆಗದವರು ಮಿತ್ರರಾಗುವ ಸಂದರ್ಭ ಕೂಡಿ ಬಂದು ವಿವಾದದಿಂದ ಬಿಡುಗಡೆ ಹೊಂದುವಿರಿ. ಹೊಸ ಉದ್ಯೋಗಿಗಳಿಗೆ ಔದ್ಯೋಗಿಕ ರಂಗದಲ್ಲಿ ಅನುಕೂಲ, ಪ್ರಗತಿ ಇದೆ. ಒಟ್ಟಾರೆಯಾಗಿ ನಿಮಗೆ ಉತ್ತಮ ಹಾಗೂ ಪ್ರಗತಿಯ ವರ್ಷ ಇದಾಗಿರುತ್ತದೆ.

ಮಕರ ರಾಶಿ

ದಿನ ಭವಿಷ್ಯ

 • ಮಕರ ರಾಶಿ ಭವಿಷ್ಯ 2019 ರ ಪ್ರಕಾರ ಈ ವರ್ಷ ಚೆನ್ನಾಗಿರುತ್ತದೆ. ವರ್ಷದ ಆರಂಭದಲ್ಲಿ ನಿಮ್ಮ ಅರೋಗ್ಯ ಅನುಕೂಳಕರವಾಗಿದ್ದರು ನಂತರದ ದಿನಗಳಲ್ಲಿ ನಿಮ್ಮ ಅರೋಗ್ಯಕ್ಕೆ ಸಂಭಂದಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
 • ಆರ್ಥಿಕ ಜೀವನದಲ್ಲಿ ಏರುಪೇರುಗಳಾಗುತ್ತವೆ. ಈ ವರ್ಷ ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಿಂದಾಗಿ ನೀವು ಆರ್ಥಿಕ ಲಾಭ ಗಳಿಸುವ ಸಾಧ್ಯತೆಯಿರುತ್ತದೆ. ನಿಮ್ಮ ಕೆಲಸವನ್ನು ನೋಡಿ ನಿಮಗೆ ನಿಮ್ಮ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯನ್ನು ಪದೆಯುವಿಸು.
 • ವರ್ಷದ ಕೊನೆಯ ಮೂರು ತಿಂಗಳಲ್ಲಿ ನಿಮಗೆ ಸಾಕಷ್ಟು ಒಳ್ಳೆಯ ಸುದ್ದಿಗಳು ದೊರೆಯುತ್ತವೆ. ನೀವು ನಿಮ್ಮ ವ್ಯವಹಾರದಲ್ಲಿ ಬೆಳೆಯುತ್ತೀರಿ.
 • ನಿಮ್ಮ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅದು ನಿಮ್ಮ ಆತ್ಮವಿಶ್ವಾಸದ ಹಂತವನ್ನು ಮೇಲಕ್ಕೆತ್ತಲು ಸಹಾಯ ಮಾಡುವುದು. ಬಂಧುಮಿತ್ರರು ಪ್ರೀತಿಯಿಂದ ಕಾಣುವರು. ಮನೆಯಲ್ಲಿ ಮಂಗಳ ಕಾರ್ಯಗಳ ಸಂಭ್ರಮ.
 • ನಿಮ್ಮ ಪ್ರೇಮ ಜೀವನ ಕೂಡ ಚೆನ್ನಾಗಿರುತ್ತದೆ. ನೀವು ಪ್ರೀತಿಸಿದವರನ್ನೇ ಮದುವೆಯಾಗಬೇಕೆಂದರೆ ಈ ವರ್ಷ ಅನುಕೂಲಕರವಾಗಿದ್ದು ನಿಮ್ಮ ಕನಸನ್ನು ನನಸಾಗುತ್ತದೆ.
 • ನಡೆಯಬೇಕಾದ ಶುಭ ಕಾರ್ಯಗಳಿಗೆ ಎಲ್ಲ ಅನುಕೂಲ ಒದಗಲಿದೆ. ಚಿಕ್ಕಮಕ್ಕಳಿಗೆ ಅಧ್ಯಯನದಲ್ಲಿ ಪ್ರಗತಿ ಇದೆ. ಹಿರಿಯರ ಉತ್ತಮ ಅನುಭವದ ಸಲಹೆಗಳಿಂದ ನಿಮ್ಮ ಯೋಜನೆಗೆ ಅನುಕೂಲವಾಗಲಿದೆ. ನಿರೀಕ್ಷೆ ಹುಸಿಯಾಗದಂತೆ ಉತ್ತಮ ಧನಾಗಮವಿದೆ.

ಕುಂಭ ರಾಶಿ

ದಿನ ಭವಿಷ್ಯ

 • ಕುಂಭ ರಾಶಿ ಗೆ 2019ರಲ್ಲಿ ಸಂಪೂರ್ಣ ಉತ್ಸಾಹದಿಂದ ವರ್ಷ ಆರಂಭವಾಗುತ್ತದೆ. ಈ ವರ್ಷ ನೀವು ಆತ್ಮವಿಶ್ವಾಸದಿಂದ ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಆರೋಗ್ಯ ಇಡೀ ವರ್ಷ ಚೆನ್ನಾಗಿರುತ್ತದೆ. ನಿಮ್ಮ ದೈಹಿಕ ಶಕ್ತಿ ಹೆಚ್ಚಾಗುತ್ತದೆ. ನಿಮ್ಮಲ್ಲಿ ಸಾಕಷ್ಟು ಉತ್ಸಾಹ ಮತ್ತು ಹುಮ್ಮಸ್ಸು ತುಂಬಿಕೊ‌ಳ್ಳುತ್ತದೆ.
 • ಈ ವರ್ಷ ತಂತ್ರಜ್ಞರು ಹೊಸತಾಗಿ ಕೈಗೊಳ್ಳುವ ಕನಸುಗಳು ಸಾಕಾರಗೊಳ್ಳಲಿವೆ. ನಿಮ್ಮ ಔದ್ಯೋಗಿಕ ಜೀವನದಲ್ಲಿ ಉನ್ನತಿ ಸಾಧಿಸುತ್ತೀರಿ. ಮಹತ್ವದ ಕೆಲಸಗಳಿಗಾಗಿ ದೂರದ ಪ್ರಯಾಣ ಕೈಗೊಳ್ಳುವ ಸಂಭವವಿದ್ದು, ವೇಗವಾಗಿ ಹೋಗುವುದು ಬೇಡ. ಉತ್ತಮ ನಿರ್ಧಾರಗಳಿಂದಾಗಿ ನಿಮಗೆ ಅತ್ಯುತ್ತಮ ಫಲಿತಾಂಶಗಳು ದೊರೆಯುತ್ತವೆ. ಅಷ್ಟೇ ಅಲ್ಲ ಅದ್ಭುತ ನಿರ್ಧಾರಗಳ ಮೂಲಕ ನೀವು ಒಳ್ಳೆಯ ಅವಕಾಶಗಳನ್ನು ನಿಮ್ಮದಗಿಸುವ ಅವಕಾಶ ನಿಮಗೆ ಸಿಗಲಿದೆ.
 • ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿ ಶ್ರೇಷ್ಠವಾಗಿರುತ್ತದೆ. ಮತ್ತು ಎಲ್ಲ ರೀತಿಯಲ್ಲೂ ಆರ್ಥಿಕ ಲಾಭಗಳು ದೊರೆಯುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಹಲವೆಡೆಯಿಂದ ಬೇಕಾದಷ್ಟು ಹಣ ಸಹಾಯ ದೊರೆಯತ್ತದೆ. ಅಲ್ಲದೇ ಇಡೀ ವರ್ಷ ಸಾಕಷ್ಟು ಧನ ಪ್ರಾಪ್ತಿಯಾಗುವುದು.
 • ಈ ವರ್ಷ ನಿಮ್ಮ ಪ್ರೇಮ ಜೀವನ ಮೊದಲಿಗಿಂತ ಚೆನ್ನಾಗಿರುತ್ತದೆ. ಮತ್ತು ಆಂತರಿಕ ಕಲಹದಿಂದಾಗಿ ಸಂಬಂಧಗಳು ಕಳಚದಂತೆ ನೋಡಿಕೊಳ್ಳಿ. ಜೀವನ ಶೈಲಿಯಲ್ಲಿ ಬದಲಾವಣೆಯಾಗುವುದು. ತಾಯಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಯಾವುದೇ ಕಾರಣಕ್ಕೂ ನಿಮ್ಮನ್ನು ನಂಬಿದವರ ನಂಬಿಕೆಗೆ ಧಕ್ಕೆ ತರಬೇಡಿ.
 • ಅವಿವಾಹಿತರಿಗೆ ಡಿಸೆಂಬರ್‌ ಮಧ್ಯದವರೆಗೆ ವೈವಾಹಿಕ ವ್ಯವಹಾರಗಳಿಗೆ ಚಾಲನೆ ದೊರೆಯಲಿದೆ. ಈ ವರ್ಷ ನಿಮಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಗೊಳ್ಳುವಿಕೆಯಿಂದ ನೆಮ್ಮದಿ ಮತ್ತು ಸಂತಸ ಪಡುವಿರಿ. ಕಲಾವಿದರು, ಸಂಶೋಧಕರುಗಳಿಗೆ ಖರ್ಚಿಗೇನೂ ತೊಂದರೆ ಇಲ್ಲ.

ಮೀನ ರಾಶಿ

ದಿನ ಭವಿಷ್ಯ

 • ಮೀನ ರಾಶಿ ಭವಿಷ್ಯ 2019 ರ ಪ್ರಕಾರ, ಈ ವರ್ಷ ನಿಮಗೆ ದೈವಬಲ ಕೂಡಿಬಂದಿದ್ದು ನೀವು ಧಾರ್ಮಿಕ ವಿಚಾರಗಳಿಂದ ಗಳಿಕೆ ಮಾಡುತ್ತೀರಿ ಮತ್ತು ನೀವು ತೀರ್ಥಯಾತ್ರೆಗೂ ತೆರಳಬಹುದು, ಇದರಿಂದ ಎಲ್ಲ ರೀತಿಯ ಮುನ್ನಡೆಗೆ ಅನುಕೂಲವಿದೆ. ಕುಲದೇವತಾ ಆರಾಧನೆಯಿಂದ ಒಳಿತಾಗುವುದು. ಶೀಘ್ರ ಹಣ ಮಾಡುವ ದುರಾಸೆಯಿಂದ ದೂರವಿರಿ.
 • ಮೀನ ರಾಶಿಯವರಿಗೆ ಒಟ್ಟಾರೆಯಾಗಿ 2019 ಒಂದು ಅನುಕೂಲಕರ ವರ್ಷವಾಗಿದೆ. ನೀವು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರುತ್ತೀರಿ. ಅದರೂನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ನೀವು ಯಾವುದೇ ಪ್ರಮುಖ ಅನಾರೋಗ್ಯವನ್ನು ಎದುರಿಸದಿದ್ದರೂ, ಆಗಾಗ ಬರುವ ರೋಗಗಳು ನಿಮ್ಮನ್ನು ಭಾಧಿಸಬಹುದು. ಸಾದ್ಯವಾದಷ್ಟು ನಿಮ್ಮ ದೈನಂದಿನ ಜೀವನ ಆರೋಗ್ಯಕರ ಚಟುವಟಿಕೆಗಳಿಂದ ಕೂಡಿರಲಿ.
 • ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿರಿ. ಮಗುವಿನ ಮುದ್ದು ಮಾತು ನಿಮ್ಮ ದಣಿವನ್ನು ಬಗೆಹರಿಸುವುದು. ಯೋಗ ಧ್ಯಾನದಿಂದ ಕೆಲಸದಲ್ಲಿ ಹೊಸ ಉತ್ಸಾಹ ಮೂಡುವುದು. ಜೊತೆಗೆ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಪಡೆಯುವಿರಿ. ಇದರಿಂದಾಗಿ ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮಗೆ ಹೊಸ ಗುರುತು ದೊರೆಯುವುದು.
 • ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ಜೂನ್ ನಂತರದ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಕೆಟ್ಟ ಜನರ ಸ್ನೇಹ, ಸಜ್ಜನರಲ್ಲಿ ವಿರೋಧವೂ ಬರುವ ಸಂಭವವಿದೆ.
 • ನಿಮ್ಮ ಆತುರ ಸ್ವಭಾವದಿಂದಾಗಿ ಆಗಬೇಕಾದ ಕೆಲಸಗಳು ಕೂಡಾ ಆಗದೆ ಹೋಗಬಹುದು. ಬಂಧುಮಿತ್ರರು ಕೊಡುವ ಸಲಹೆಗಳನ್ನು ಸ್ವೀಕರಿಸಿ. ಅವು ಮುಂದೆ ನಿಮಗೆ ಉಪಯೋಗವಾಗುವುದು. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಬೇರೆಯವರ ಬಿರುಸು ನುಡಿಗಳಿಗೆ ಈಡಾಗುವುದನ್ನು ಜಾಣತನದಿಂದ ತಪ್ಪಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

Also read: ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಯಾವ ಉದ್ಯೋಗ ಸೂಕ್ತ ನೋಡಿ..