ಈ ವಾಸ್ತು tipsಗಳನ್ನು ಫಾಲೋ ಮಾಡುದ್ರೆ ಕೋಟಿ ಕೋಟಿ ಹಣ ಗಳಿಸಬಹುದು…

0
11735

ಸಂಪತ್ತು ವೃದ್ಧಿಸಲು ಈ ವಾಸ್ತು ಟಿಪ್ಸ್ಗಳನ್ನ ಅನುಸರಿಸಿ…. ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಆದ್ದರಿಂದ ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಉದಾಹರಣೆಗೆ ನಿಮ್ಮ ಬಳಿ ಕಾರಿದ್ದರೆ, ವಿಮಾನದಂತೆ ಮೇಲೆ ಹಾರಬೇಕೆಂದು ನೀವು ಅದರಿಂದ ನಿರೀಕ್ಷಿಸುವಂತಿಲ್ಲ. ಅದೇ ರೀತಿ ಒಳ್ಳೆಯ ವಾಸ್ತು ಕೂಡ ನಿಮ್ಮ ಹಣಕಾಸು ಸ್ಥಾನಮಾನ ಮತ್ತು ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುತ್ತದೆ.

ಕೋಟಿ ಕೋಟಿ ಸಂಪಾದಿಸಲು ಈ ಟಿಪ್ಸ್ ಫಾಲೋ ಮಾಡಿ :

  1. ತೊಳೆಯದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೇ ಬಿಡದೇ ಆದಷ್ಟು ಬೇಗ ತೊಳೆಯುವುದು ಒಳ್ಳೆಯದು. ತಕ್ಷಣವೇ ತೊಳೆಯದಿರುವುದು ಅಪೂರ್ಣತೆಯ ಸಂಕೇತವಾಗಿದ್ದು, ಹಣಕಾಸು ಪರಿಸ್ಥಿತಿಯ ಅವ್ಯವಸ್ಥೆಗೆ ಪುರಾವೆ ಒದಗಿಸುತ್ತದೆ.
  2. ಹಣ ಮತ್ತು ಆಭರಣಗಳನ್ನು ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಿಸಬೇಕು.
  3. ಮನೆ ಅಥವಾ ಫ್ಯಾಕ್ಟರಿಯ ಈಶಾನ್ಯ ಭಾಗದಲ್ಲಿ ನೀರಿನ ಚಿಲುಮೆ ಇದ್ದರೆ ಅದು ಅದೃಷ್ಟವನ್ನು ತರುತ್ತದೆ.
  4. ಮನೆ ಅಥವಾ ಫ್ಯಾಕ್ಟರಿಯ ಈಶಾನ್ಯ ಮೂಲೆಯಲ್ಲಿ ಗೋಲ್ಡ್‌ಫಿಷ್ ಮತ್ತು ಕಪ್ಪು ಮೀನುಗಳ ಅಕ್ವೆರಿಯಂ ಇರುವುದು ತುಂಬ ಒಳ್ಳೆಯದು.
  5. ಸ್ನಾನದ ಗೃಹ ಅಥವಾ ಅಡುಗೆ ಮನೆಯ ನಲ್ಲಿಗಳಲ್ಲಿ ನೀರು ತೊಟ್ಟಿಕ್ಕದಂತೆ ಖಾತರಿ ಮಾಡಿಕೊಳ್ಳಿ.ಸತತ ನೀರಿನ ತೊಟ್ಟಿಕ್ಕುವಿಕೆಯು ನಕಾರಾತ್ಮಕ ಶಕ್ತಿಯನ್ನು ಸೂಸುವುದರಿಂದ ನೀರಿನ ತೊಟ್ಟಿಕ್ಕುವಿಕೆಯು ಸಂಪತ್ತಿನ ಸೋರುವಿಕೆಯನ್ನು ಸಂಕೇತಿಸುತ್ತದೆ.
  6. ನೆಲದಿಂದ ಒಂದು ಅಡಿ ಎತ್ತರದಲ್ಲಿ ಹಾಸಿಗೆಯಿರಬೇಕು. ಇದರಿಂದ ನೆಲದಲ್ಲಿ ಮುಕ್ತವಾಗಿ ಶಕ್ತಿ ಹರಿಯಲು ಅವಕಾಶ ಕಲ್ಪಿಸುತ್ತದೆ. ಶಕ್ತಿಯ ಮುಕ್ತ ಹರಿಯುವಿಕೆ ತಡೆದರೆ ನಿಮ್ಮ ಸಂಪತ್ತು ಗಳಿಸುವ ಅವಕಾಶ ಕೂಡ ಮೊಟಕಾಗುತ್ತದೆ.
  7. ನೆಲವನ್ನು ಮನೆಯ ಒಳಗೆ ಗುಡಿಸಿಕೊಂಡು ಹೋಗಬೇಕು. ಮುಖ್ಯ ದ್ವಾರದತ್ತ ಕಸ ಗುಡಿಸುವುದರಿಂದ ಸಂಪತ್ತು ಕ್ಷೀಣಿಸುತ್ತದೆ.
  8. ಕಸದ ಬುಟ್ಟಿಗಳನ್ನು ಸದಾ ಮುಚ್ಚಿರಬೇಕು. ಇಲ್ಲದಿದ್ದರೆ ಸಂಪತ್ತಿನ ಶಕ್ತಿಯ ಭ್ರಷ್ಟತೆಗೆ ದಾರಿಕಲ್ಪಿಸುತ್ತದೆ.
  9. ಕೆಲವು ದೇವತೆಗಳ ಫೋಟೊಗಳನ್ನು, ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಸಾಧ್ಯ.
  10. ಉತ್ತರ ದಿಕ್ಕು ಬ್ಲಾಕ್ ಆಗಿದ್ದರೆ ಅದು ಸಂಪತ್ತಿಗೆ ತಡೆ ವಿಧಿಸುತ್ತದೆ.
  11. ನಿಮ್ಮ ಮನೆಯ ಹತ್ತಿರ ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ಇದ್ದರೆ ತುಂಬ ಒಳ್ಳೆಯದು.
  12. ದಕ್ಷಿಣ ದಿಕ್ಕಿನಲ್ಲಿ ಭೂಗತ ಟ್ಯಾಂಕ್ ಅಥವಾ ಹೊಂಡ ಇದ್ದರೆ ಅದು ನಿಮ್ಮ ಹಣಕಾಸಿಗೆ ಹಾನಿ ಉಂಟುಮಾಡುತ್ತದೆ.
  13. ದಕ್ಷಿಣ ದಿಕ್ಕಿನಲ್ಲಿ ಕೊಳವೆ ಬಾವಿ ಅಥವಾ ಟ್ಯೂಬ್ ಬಾವಿ ಇದ್ದರೂ ಅದು ಆರ್ಥಿಕ ಶಕ್ತಿಗೆ ತೊಂದರೆ ಕೊಡುತ್ತದೆ.