ಪುಣೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ‘ವೆಜ್ ಕೊಲ್ಲಾಪುರಿ ರೆಸಿಪಿಯನ್ನು’ ಕೇವಲ 15 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ತಯಾರಿಸಿಕೊಳ್ಳಬಹುದು.

0
1107

ದಿನ ಬೆಳಗಾದರೆ ಪ್ರತಿಯೋಬ್ಬರ ಮನೆಯಲ್ಲಿ ಊಟದ ವಿಷಯವಾಗಿ ಮಾತುಗಳು ಕೇಳಿಬರುವುದು ಸಾಮಾನ್ಯ. ಏಕೆಂದರೆ ಮನೆಯಲ್ಲಿ ಎಲ್ಲರ ರುಚಿ ಒಂದೇ ಇರುವುದಿಲ್ಲ ಒಬ್ಬರಿಗೆ ಇಷ್ಟವಾದ ಅಡುಗೆ ಇನೋಬ್ಬರಿಗೆ ಇಷ್ಟವಾಗೋದಿಲ್ಲ ಇದರಿಂದ ಮನೆಯಲ್ಲಿ ಅಡುಗೆ ಮಾಡುವುದೇ ತಲೆನೋವು. ಅಂತ ಚಿಂತೆ ಮಾಡುವವರಿಗೆ ಪ್ರತಿದಿನವೂ ವಿಶೇಷವಾದ ರೆಸಿಪಿ ಮಾಡುವ ವಿಧಾನವನ್ನು ನಾವು ತಿಳಿಸುತ್ತೇವೆ. ಈಗ ಸುಲಭವಾಗಿ ವೆಜ್ ಕೊಲ್ಲಾಪುರಿ ರೆಸಿಪಿ ತಯಾರಿಸುವ ಮಾಹಿತಿ ಇಲ್ಲಿದೆ ನೋಡಿ.

Also read: ಫಟಾಫಟ್ ತಯಾರಿಸಬಹುದಾದ ಮತ್ತು ರುಚಿಕರವಾದ ವೆಜಿಟೆಬಲ್ ಫ್ರೈಡ್ ರೈಸ್ ಮಾಡುವ ವಿಧಾನ..!!

ಪುಣೆಯಲ್ಲಿ ಅತಿ ಜನಪ್ರಿಯವಾಗಿರುವ ವೆಜ್ ಕೊಲ್ಲಾಪುರಿ ದೇಶದ ಇತರ ಭಾಗಗಳಲ್ಲಿಯೂ ಹೆಚ್ಚು ಜನರ ಇಷ್ಟದ ಖಾದ್ಯವಾಗಿದೆ. ಕೊಲ್ಲಾಪುರದಲ್ಲಿ ಮೊದಲು ಇದರ ರುಚಿ ಕಂಡುಹಿಡಿದು ಇದರ ರುಚಿಯು ದೇಶದ ತುಂಬೆಲ್ಲ ಹರಡಿದೆ. ವಿಶೇಷವೆಂದರೆ ಇದರಲ್ಲಿ ಬಹುತೇಕ ಎಲ್ಲಾ ಸಾಂಬಾರ ಪದಾರ್ಥಗಳೂ ಇವೆ. ಇದಕ್ಕೆ ಹಲವು ಹಸಿರು ತರಕಾರಿ, ಪನೀರ್ ಮತ್ತು ಇತರ ಸಾಮಾಗ್ರಿಗಳನ್ನು ಸೇರಿಸುವ ಮೂಲಕ ರುಚಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಇದನ್ನು ರೊಟ್ಟಿ, ಚಪಾತಿ, ಅನ್ನದೊಂದಿಗೆ ಕಲಸಿ ತಿನ್ನಲೂ ಹೆಚ್ಚು ರುಚಿಕರವಾಗಿದೆ.

Also read: ಮಾಡಿ ನೋಡಿ ರುಚಿಯಾದ ‘ವೆಜಿಟಬಲ್‌ ಬಿರಿಯಾನಿ’….!!

ತಯಾರಿಕೆಗೆ ಬೇಕಾಗಿರುವ ಸಾಮಾಗ್ರಿಗಳು:

* ಹತ್ತು ಗೋಡಂಬಿಗಳನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಬೇಕು
* ಒಂದು ಕಪ್  ಬೀನ್ಸ್
* ಒಂದು ಕಪ್ ಕ್ಯಾರೆಟ್ ತುರಿ
* ಒಂದು ಕಪ್ ‘ದೊಣ್ಣೆಮೆಣಸು’
* ಒಂದು ಕಪ್ ಪನೀರ್
* ಒಂದು ಕಪ್ ಹೂಕೋಸು
* ಒಂದು ಕಪ್  ಹಸಿರು ಬಟಾಣಿ
* ಎರಡು ಟೊಮೇಟೊ
* 4 ರಿಂದ 5 ಹಸಿಮೆಣಸಿನ ಕಾಯಿ
* ಒಂದು ತುಪ್ಪದ ಚಮಚ ಗರಂ ಮಸಾಲೆ ಪುಡಿ
* ಒಂದು ತುಪ್ಪದ ಚಮಚ ಅರಿಶಿನ ಪುಡಿ
* ಒಂದು ತುಪ್ಪದ ಚಮಚ ಕೆಂಪು ಮೆಣಸಿನ ಪುಡಿ (ಕಾರ ಕಡಿಮೆ ಇದ್ದರೆ ಎರಡು ಚಮಚ ಹಾಕಿ)
* 1 ರಿಂದ 2 ದಾಲ್ಚಿನ್ನಿ ಎಲೆ-
* 1/2 ತುಪ್ಪದ ಚಮಚ  ಜೀರಿಗೆ
* 1/2 ತುಪ್ಪದ ಚಮಚ ಹಸಿಶುಂಠಿ ಪೇಸ್ಟ್-
* ಒಂದು ಪ್ರಮಾಣದಲ್ಲಿ (1 ದೊಡ್ಡ ಚಮಚ) ಬೆಣ್ಣೆ
* ಒಂದು ಪ್ರಮಾಣದಲ್ಲಿ ಅಡುಗೆಎಣ್ಣೆ
* ಕೊತ್ತಂಬರಿ ಸೊಪ್ಪು

Also read: ದಿಢೀರ್‌ ಮಾಡಬಹುದಾದ ಹಾಗೂ ಆರೋಗ್ಯಕ್ಕೆ ಒಳ್ಳೆಯದಾದ ಮಜ್ಜಿಗೆ ಹುಳಿ ಮಾಡುವ ವಿಧಾನ..!!
ತಯಾರಿಸುವ ವಿಧಾನ:

1) ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಮೊದಲು ಹೂಕೋಸು ಹಾಕಿ ನಂತರ ಪನೀರ್ ಮತ್ತು ಎಲ್ಲಾ ತರಕಾರಿಗಳನ್ನು ಕಂದು ಬಣ್ಣ ಬರುವವರೆಗೆ ಹುರಿದು ನಂತರ ಬೀನ್ಸ್, ಕ್ಯಾರೆಟ್, ದೊಣ್ಣೆಮೆಣಸು ಹಾಕಿ. 5 ನಿಮಿಷ ಬಿಟ್ಟು ಒಂದು ತಟ್ಟೆಯಲ್ಲಿ ಹರಡಿ.
2) ಟೊಮೇಟೊ ಮತ್ತು ನೆನೆಸಿಟ್ಟ ಗೋಡಂಬಿಗಳನ್ನು ಮಿಕ್ಸರ್ ಗೆ ಹಾಕಿ ಹಾಕಿಕೊಂಡು. ಅರೆಯಿರಿ.
3) ಇನ್ನೊಂದು ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಜೀರಿಗೆ, ದಾಲ್ಚಿನ್ನಿ ಎಲೆ, ಅರಿಶಿನ, ಶುಂಠಿ ಪೇಸ್ಟ್, ಹಸಿಮೆಣಸು ಎಲ್ಲವನ್ನೂ ಹಾಕಿ ಸ್ವಲ್ಪ ಹುರಿದು ನಂತರ ಗರಂ ಮಸಾಲಾ, ಕೆಂಪುಮೆಣಸಿನ ಪುಡಿ ಹಾಕಿ ಹುರಿಯಿರಿ. ಬಳಿಕ ಕೊಂಚ ನೀರು ಹಾಕಿ ಚೆನ್ನಾಗಿ ಬಾಡಿಸಿ.
4) ಐದು ನಿಮಿಷಗಳ ಬಳಿಕ ಮಿಕ್ಸಿ ಜಾರ್ ನಲ್ಲಿದ್ದ ಟೊಮೇಟೊ ಮತ್ತು ಗೋಡಂಬಿ ಲೇಪನವನ್ನು ಸೇರಿಸಿ ತಿರುವಿ.
5) ಚೆನ್ನಾಗಿ ಮಿಶ್ರಣಗೊಂಡ ಬಳಿಕ ಹುರಿದಿಟ್ಟ ಎಲ್ಲಾ ತರಕಾರಿಗಳನ್ನು ಒಂದೊಂದಾಗಿ ಸೇರಿಸಿ. ನಂತರ ಬೆಣ್ಣೆ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
6) ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಒಂದು ವೇಳೆ ಚಪಾತಿಗೆ ಬೇಕಿದ್ದರೆ ಕಡಿಮೆ ನೀರು ಹಾಕಿ. ರೈಸ್ ಗೆ ಬೇಕಿದರೆ ಹೆಚ್ಚು ನೀರನು ಸೇರಿಸಬಹುದು.
7) ಚೆನ್ನಾಗಿ ಕುದಿಬಂದ ಬಳಿಕ ಇಳಿಸಿ ಕೊತ್ತಂಬರಿ ಸೊಪ್ಪನ್ನು ಹಾಕಿ. ಈಗ ನಿಮ್ಮ ನೆಚ್ಚಿನ ವೆಜ್ ಕೊಲ್ಲಾಪುರಿ ತಯಾರಾಗಿದೆ. ಬರಿ 15-20 ನಿಮಿಷದಲ್ಲಿ ತಯಾರಾದ ರೆಸೆಪಿಯನ್ನು 4 ಜನ ತಿನ್ನಬಹುದು ಹೆಚ್ಚಿಗೆ ಬೇಕಾದರೆ ಹೆಚ್ಚು ಪದಾರ್ಥಗಳನ್ನು ಹಾಕಿ ಮಾಡಿಕೊಳ್ಳಬಹುದು.