ರೋಚಕ ನೈಜ ಘಟನೆ: ಐಎಎಸ್ ಮಾಡಿ ತಂದೆ ಸಾವಿನ ಸೇಡು ತೀರಿಸಿಕೊಂಡ ಯುವತಿಯರು!!

0
2854

ಎನ್‌ಕೌಂಟರ್‌ಗಳಿಗೆ ಬಲಿಯಾಗುವರ ಸಂಖ್ಯೆ ದೇಶದಲ್ಲಿ ಹೆಚ್ಚಿದೆ. ಇಂತಹ ಘಟನೆಗಳಲ್ಲಿ ಅಮಾಯಕರೂ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ೩೫ ವರ್ಷಗಳ ಹಿಂದೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಬಲಿಯಾದ ಕುಟುಂಬಕ್ಕೆ ಈಗ ನ್ಯಾಯ ಸಿಕ್ಕಿದೆ. ಈ ಪ್ರಕರಣದಲ್ಲಿ ೧೩ ಜನ ಸಾವನ್ನಪ್ಪಿದ್ದರು, ಅದರಲ್ಲಿ ಡಿಎಸ್‌ಪಿ ಕೆ.ಪಿ ಸಿಂಗ್ ಸಹ ಸೇರಿದ್ದರು.

ಈ ಸಾವಿಗೆ ಸಂಬಂಧಿಸಿದ್ದಂತೆ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಸಿಂಗ್ ಕುಟುಂಬಕ್ಕೆ ಮರಿಚೀಕೆಯಾಗಿದ್ದ ನ್ಯಾಯವನ್ನು ಒದಗಿಸಲು ಇಬ್ಬರು ಹೆಣ್ಣು ಮಕ್ಕಳು ಪಟ್ಟ ಕಷ್ಟದ ಫಲವಾಗಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. 

ವಿದವೇ ತಾಯಿ ಹಾಗೂ ಇಬ್ಬರು ಮಕ್ಕಳು ನ್ಯಾಯ ದೇವತೆ ತಮ್ಮನ್ನೂ ಎಂದಿಗೂ ಕೈ ಬಿಡುವದಿಲ್ಲ ಎಂಬ ಭರವಸೆಯಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ತಾಯಿ ಕೆಲಸವನ್ನು ಮಾಡಿ ಇಬ್ಬರು ಮಕ್ಕಳನ್ನು ಓದಿಸಿ ಸಾಕಿ, ಸಲುಹಿದ್ದಳು. ಈ ಪ್ರಕರಣ ದಾಖಲಾಗಿ ೩೧ ವರ್ಷಗಳೇ ಕಳೆದಿದ್ದವು. ಆದರೂ ಕುಟುಂಬದಲ್ಲಿ ನ್ಯಾಯದ ಬೆಳಕು ಉರಿಯುತ್ತಲೇ ಇತ್ತು.
Image result for kinjal singh
ನಿಷ್ಠಾವಂತೆ ಡಿಎಸ್‌ಪಿ ಕೆ.ಪಿ ಸಿಂಗ್ ಅವರನ್ನು ಸಹೋದ್ಯೋಗಿಗಳು ಸುಳ್ಳು ಸೃಷ್ಠಿಸಿ ಇವರನ್ನು ಎನ್‌ಕೌಂಟರ್‌ನಲ್ಲಿ ಬಲಿ ಮಾಡಿದ್ದರು. ಈ ಪ್ರಕರಣಕ್ಕೆ ನ್ಯಾಯ ಸಿಗಲೇ ಬೇಕೆಂದು ಹಠ ತೊಟ್ಟ ಸಿಂಗ್ ಅವರ ಇಬ್ಬರೂ ಹೆಣ್ಣು ಮಕ್ಕಳು ಕಷ್ಟ ಪಟ್ಟು ಓದಿದರು. ಅಷ್ಟೇ ಅಲ್ಲ ತಂದೆ ಕಂಡ ಐಎಎಸ್ ಕನಸನ್ನು ಇವರು ಸಾಕಾರಗೊಳಿಸಿದರು.

ಕಿಂಜಾಲ್ ಹಾಗೂ ಪ್ರಜಾಂಲ್ ಸಿಂಗ್ ಎಂಬ ಇಬ್ಬರೂ ಮಹಿಳೆಯರು ಈ ಕಥೆಯ ನಾಯಕಿಯರು. ವರ್ಷಗಳ ಹಿಂದೆ ತಯಾಯಿಯನ್ನು ಕಳೆದುಕೊಂಡಿದ್ದ ಇವರು ೨೦೦೭ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕ್ರಮವಾಗಿ ೨೫ ಹಾಗೂ ೨೫೨ನೇ ರ‍್ಯಾಂಕ್‌ನೊಂದಿಗೆ ಪಾಸ್ ಆದರು. ಇಷ್ಟಕ್ಕೇ ಅವರು ಗುರಿ ಮುಟ್ಟಿದ ನಿಟ್ಟುಸಿರು ಬಿಡಲೇ ಇಲ್ಲ. ತಂದೆ ಸಾವಿಗೆ ಕಾರಣ ಹುಡುಕಿ ಹೊರಟರು.
ಇದಕ್ಕೆ ಸಂಬಂಧಿಸಿಂದಂತೆ ಲಖನೌ ಸಿಬಿಐ ವಿಶೇಷ ನ್ಯಾಯಾಲಯ ೨೦೧೩ರಲ್ಲಿ ಸಿಂಗ್ ಪ್ರಕರಣದಲ್ಲಿ ಭಾಗಿಯಾದ ೧೮ ಜನರಿಗೆ ಶೀಕ್ಷೆ ವಿಧಿಸಿತು.
ತಂದೆ ಸಾವಿನ ಜಾಡು ಬೇಧಿಸಲು ಇಬ್ಬರು ಮಕ್ಕಳು ಪಟ್ಟ ಶ್ರಮಕ್ಕೆ ಕೊನೆಗೂ ಫಲ ಲಭಿಸಿತು.