ಕಾಂಗ್ರೆಸ್ ಮೈತ್ರಿಯ ನಾಯಕರು ವಿವಿಪ್ಯಾಟ್​ ತಾಳೆ ಹಾಕಬೇಕು ಎನ್ನುವ ದೂರಿಗೆ ಚುನಾವಣಾ ಆಯೋಗ ತನ್ನ ಭದ್ರತೆಯ ಬಗ್ಗೆ ಮಾಹಿತಿ ನೀಡಿದ್ದು ಹೀಗಿದೆ..

0
245

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಅರ್ಧ ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಹಲವು ಸಮೀಕ್ಷೆಗಳು ಹೊರ ಬಂದಿದ್ದು. ಬಿಜೆಪಿ ಪಕ್ಷ ಗೆಲ್ಲುವ ಸೂಚನೆಯನ್ನು ನೀಡಿವೆ, ಇದರಿಂದ ಬೇಸತ್ತ ಎಡಪಕ್ಷಗಳು ಮತ್ತೆ ಇವಿಎಂಮೇಲೆ ಅನುಮಾನಗೊಂಡು ಸುಪ್ರಿಂ ಮೊರೆಹೊಗಿದ್ದು ಕುತೂಹಲ ಮೂಡಿಸಿದೆ, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಚುನಾವಣೆ ಯಾವರೀತಿಯ ಭದ್ರತೆ ವಹಿಸಿತ್ತು ಎನ್ನುವುದನ್ನು ತಿಳಿಸಿದ್ದು ಅನುಮಾನಗೊಂಡ ಪಕ್ಷಗಳಿಗೆ ಮುಖಭಂಗವಾಗಿದೆ ಎಂದು ಹಲವು ರಾಜಕೀಯ ನಾಯಕರು ಹೇಳಿಕೆ ನೀಡಿದ್ದಾರೆ.

ಏನು ಹೇಳುತ್ತೆ ಆಯೋಗ?

ಸೋಲು ಖಚಿತ ಎಂದು ತಿಳಿದ ಬಳಿಕ ಪ್ರತಿಪಕ್ಷಗಳು ಹತಾಶೆಯಿಂದ ನಡೆಸುತ್ತಿರುವ ಆರೋಪಗಳಿಗೆ. ಚುನಾವಣಾ ಆಯೋಗ ಉತ್ತರ ನೀಡಿದ್ದು, ಈ ಹಿಂದೆ ಆರೋಪ ಮಾಡಿದ 22 ಪ್ರತಿಪಕ್ಷಗಳ ನಾಯಕರು ಚುನಾವಣೆ ಆಯೋಗವನ್ನು ಭೇಟಿ ಮಾಡಿ ಇವಿಎಂಗಳ ‘ಅನಧಿಕೃತ ಸಾಗಣೆ’ ಎಂದು ಹೇಳಲಾದ ವೀಡಿಯೋ ಕ್ಲಿಪಿಂಗ್‌ ಅನ್ನು ಸಲ್ಲಿಸಿವೆ. ಮತಗಳ ಎಣಿಕೆಗೂ ಮುನ್ನವೇ ಮತ ಖಾತರಿ ಚೀಟಿಗಳ ಎಣಿಕೆ ಮಾಡಬೇಕೆಂದು ಆಗ್ರಹಿಸಿದವು ಇದನ್ನು ಚುನಾವಣೆ ಆಯೋಗ ತಳ್ಳಿಹಾಕಿದ್ದು ದುರುದ್ದೇಶಪೂರಿತ ಮತ್ತು ಆಧಾರರಹಿತ ಆರೋಪಗಳಿವು ಎಂದು ಸ್ಪಷ್ಟಪಡಿಸಿದೆ. ಮತಯಂತ್ರಗಳು ಭದ್ರತಾ ಕೊಠಡಿಯಲ್ಲಿ ಸಂಪೂರ್ಣ ಸುರಕ್ಷಿತವಾಗಿದ್ದು, ವೀಡಿಯೋ ಕ್ಲಿಪಿಂಗ್‌ನಲ್ಲಿ ತೋರಿಸಲಾದ ಇವಿಎಂಗಳು ಚುನಾವಣೆಗೆ ಬಳಸಿದವುಗಳಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ ವಿವಿಪ್ಯಾಟ್ ಪರಿಶೀಲನೆ ಸಮಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ, ಆ ಮತಗಟ್ಟೆಯ ಎಲ್ಲಾ ಮತಯಂತ್ರಗಳ ಜೊತೆಗೂ ಶೇ.100 ರಷ್ಟು ವಿವಿಪ್ಯಾಟ್​ ಮತಗಳನ್ನು ಖಡ್ಡಾಯವಾಗಿ ತಾಳೆ ಹಾಕಬೇಕು. ಆ ನಂತರವೇ ಫಲಿತಾಂಶ ಘೋಷಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಈ ಕುರಿತು ಮನವಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಂತರ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್​ ನಭಿ ಆಜಾದ್, “ಮತ ಎಣಿಕೆಗೆ ಮುಂಚಿತವಾಗಿ 5 ವಿವಿಪ್ಯಾಟ್​ ನಲ್ಲಿ ದಾಖಲಾಗಿರುವ ಮತಗಳನ್ನು ಮೊದಲು ತಾಳೆ ಹಾಕಬೇಕು ಎಂದು ಸುಪ್ರೀಂ ಆದೇಶ ನೀಡಿದೆ. ಆದರೆ, ಚುನಾವಣಾ ಆಯೋಗ ಅದಕ್ಕೆ ನಿರಾಕರಿಸಿದೆ. ಆದರೆ, ಸುಪ್ರೀಂ ಆದೇಶ ಪಾಲಿಸಲೇಬೇಕು ಎಂದು ವಿರೋಧ ಪಕ್ಷಗಳ ಸಭೆ ಆಯೋಗಕ್ಕೆ ಮನವಿ ಮಾಡಿದೆ.

ದ್ರತೆ ಕುರಿತು ಆಯೋಗದ ಮಾಹಿತಿ ಏನು?

ಚುನಾವಣೆ ಆಯೋಗ ಬಾಡಿಗೆಗೆ ಪಡೆದ ಪೂರ್ವ ನಿಯೋಜಿತ ಸರಕಾರಿ ಬಸ್‌ಗಳು, ಖಾಸಗಿ ಟ್ರಕ್‌ಗಳು, ಜೀಪ್‌ಗಳು ಮತ್ತು ಪೊಲೀಸ್ ವಾಹನಗಳು ಸೇರಿದಂತೆ ವಿಶೇಷ ವಾಹನಗಳ ಮೂಲಕ ಮಾತ್ರ ಇವಿಎಂಗಳನ್ನು ಮತಗಟ್ಟೆಗಳಿಂದ ನಿಗದಿತ ಭದ್ರತಾ ಕೊಠಡಿಗೆ ಸಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಪೊಲೀಸ್‌ ಪಡೆಗಳ ಜಂಟಿ ಭದ್ರತಾ ಸಿಬ್ಬಂದಿಗಳ ಬೆಂಗಾವಲಿನೊಂದಿಗೆ ಇವಿಎಂ, ವಿವಿಪ್ಯಾಟ್‌ಗಳನ್ನು ಸಾಗಿಸಲಾಗಿದೆ. ಪ್ರತಿ ಮತಗಟ್ಟೆಯ ಅಧಿಕಾರಿಗಳು ಈ ವಾಹನಗಳಲ್ಲಿ ಕುಳಿತು ಭದ್ರತಾ ಕೊಠಡಿಯ ವರೆಗೂ ಇವಿವಿಎಂ, ವಿವಿಪ್ಯಾಟ್ ಗಳನ್ನು ಸಾಗಿಸಿದ್ದಾರೆ. ಎಂದು ಸ್ಪಷ್ಟ ಪಡಿಸಿದೆ.

ಆಯೋಗದ ತಂತ್ರಜ್ಞಾನ ಹೇಗಿದೆ?

ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಮತಗಟ್ಟೆಗಳಿಂದ ಭದ್ರತಾ ಕೊಠಡಿಗಳಿಗೆ ದೋಷರಹಿತವಾಗಿ ಸಾಗಿಸಲು ಚುನಾವಣೆ ಆಯೋಗ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುತಿದ್ದು. ಅಧಿಕಾರಿಗಳ ದೇಹದ ಮೇಲೆ ಕ್ಯಾಮರಾಗಳನ್ನು ಹೊಂದಿದ್ದು, ಮೇಲಿನಿಂದ ನಿಗಾವಹಿಸಲು ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಸಾಗಣೆ ವಾಹನಕ್ಕೆ ಜಿಪಿಎಸ್‌ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ ಜಿಐಎಸ್‌ ಅಳವಡಿಸಲಾಗಿದೆ. ಇವಿಎಂ ಎರಡು ಘಟಕಗಳನ್ನು ಹೊಂದಿದೆ. ಮೊದಲನೆಯದು ಕಂಟ್ರೋಲಿಂಗ್ ಯುನಿಟ್, ಮತ್ತೊಂದು ಬ್ಯಾಲೆಟ್ ಯುನಿಟ್. ಅವುಗಳನ್ನು ಕೇಬಲ್ ಮೂಲಕ ಜೋಡಿಸಲಾಗಿರುತ್ತದೆ. ಕಂಟ್ರೋಲಿಂಗ್ ಯುನಿಟ್ ಅನ್ನು ಮತಗಟ್ಟೆ ಅಧಿಕಾರಿ ಬಳಿ ಇಟ್ಟುಕೊಳ್ಳಲಾಗುತ್ತದೆ. ಅದಕ್ಕೆ ಒಂದಕ್ಕಿಂತ ಹೆಚ್ಚು ಬ್ಯಾಲೆಟಿಂಗ್ ಯುನಿಟ್‌ಗಳನ್ನು ಜೋಡಿಸಿರಬಹುದಾಗಿದೆ.

ಅಷ್ಟೇ ಅಲ್ಲದೆ ಭದ್ರತಾ ಕೊಠಡಿಯಲ್ಲಿ ಕರ್ತವ್ಯದಲ್ಲಿರುವ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಬಹಿರಂಗಪಡಿಸಲಾಗದು. ಯಾಕೆಂದರೆ ದುಷ್ಕರ್ಮಿಗಳಿಗೆ ಈ ಮಾಹಿತಿ ಸಿಗಬಾರದು. ಭದ್ರತಾ ವ್ಯವಸ್ಥೆಯ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ. ಎನುದ್ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.