25 ಸಂಸದರನ್ನು ಆರಿಸಿ ಲೋಕಸಭೆಗೆ ಕಳುಹಿಸಿಕೊಟ್ಟ ರಾಜ್ಯಕ್ಕೆ ಮೋದಿಯಿಂದ ಸಿಕ್ಕಿದ್ದೇನು? ಪರಿಹಾರಕ್ಕಾಗಿ ಮೋದಿ ವಿರುದ್ಧ ಹೋರಾಟಕ್ಕೆ ಇಳಿದ ನೆರೆ ಸಂತ್ರಸ್ತರು.!

0
211

ಕರ್ನಾಟಕದ 17 ಜಿಲ್ಲೆಗಳು ನೀರಲ್ಲಿ ನಿಂತರು ಕೂಡ ಮೋದಿ ಸರ್ಕಾರ ಇತ್ತ ತಿರುಗಿ ನೋಡಿತಿಲ್ಲ ಎನ್ನುವುದು ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ ಬಿಜೆಪಿ ಗೆಲ್ಲಿಸಿದ ಕ್ಷೇತ್ರಗಳೇ ನೀರಲ್ಲಿ ನಿಂತಿದ್ದು, ಮೋದಿ ಸರ್ಕಾರ ಮಾತ್ರ ಕಣ್ಣು ಬಿಟ್ಟು ನೋಡುತ್ತಿಲ್ಲ ಬೇರೆ ದೇಶಗಳಿಗೆ ಸಾಲ ನೀಡಲು ಹಣವಿದೆ ಆದರೆ 25 MP ಗಳನ್ನು ಗೆಲ್ಲಿಸಿದ ರಾಜ್ಯಕ್ಕೆ ಈ ರೀತಿಯ ಪರಿಸ್ಥಿತಿಯಲ್ಲಿ ಕಡೆಗಣಿಸಿರುವ ಮೋದಿಯವರಿಗೆ ಧಿಕ್ಕಾರ ಕೂಗುತ್ತಿದ್ದಾರೆ. ಸ್ವತಹ ನಾವೇ ಬಿಜೆಪಿ ಗೆ ವೋಟ್ ಹಾಕಿದ್ದು ಈಗ ನಾವೇ ಸ್ವತಹ ಮೋದಿ ಸರ್ಕಾರದಿಂದ ಸುಖ ಅನುಭವಿಸುತ್ತಿದೇವೆ ಎಂದು ನೆರೆ ಸಂತ್ರಸ್ತರು ರಾಜ್ಯ ತುಂಬೆಲ್ಲ ಹೋರಾಟಕ್ಕೆ ಸಜ್ಜಾಗಿದ್ದಾರೆ.


Also read: ಮೈಸೂರು ದಸರಾದಲ್ಲಿವೂ ರಾಜಕೀಯ? ವೇದಿಕೆ ತೆಗೆದು ಹಾಕದಿದ್ರೆ ಅರಮನೆಯಿಂದ ಓಡಿಸ್ತೀನಿ, ಪೊಲೀಸರಿಗೆ ಪ್ರತಾಪ್ ಸಿಂಹ ಆವಾಜ್

ಹೌದು ನೆರೆ ಬಂದೂ 2 ತಿಂಗಳಾದರೂ ರಾಜ್ಯದ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಾವು ಆಯ್ಕೆ ಮಾಡಿ ಕಳುಹಿಸಿದ 25 ಸಂಸದರು ಸಹ ನಮ್ಮ ಕಷ್ಟ ಕೇಳುತ್ತಿಲ್ಲ. ಪ್ರಧಾನಿ ಮೋದಿ ಪ್ರೀತಿಸುವ ಜನರೇ ಇದೀಗ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಎಲ್ಲಾ ಚೆನ್ನಾಗಿದೆ ಎಂದು, ಬಾಗುಂದಿ, ಭಾರತ್ ದೇಶ್‍ಮೇ ಸಬ್ ಕುಚ್ ಅಚ್ಚಾ ಹೇ ಹೀಗಂತ ದೂರದ ಅಮೆರಿಕದಲ್ಲಿ ಪ್ರಧಾನಿ ಮೋದಿ ಘಂಟಾಘೋಷವಾಗಿ ಹೇಳಿದರು. ಇದೇ ಹೊತ್ತಲ್ಲಿ, ರಣಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಉತ್ತರ ಕರ್ನಾಟಕ ನಲುಗಿ ಹೋಗಿತ್ತು. ಪ್ರವಾಹ ಬಂದು ಬದುಕು ಕುಸಿದು ಎರಡು ತಿಂಗಳಾಗುತ್ತಾ ಬಂದರು ಕೇಂದ್ರ ಸರ್ಕಾರ ಪರಿಹಾರ ಹಣ ನೀಡುತ್ತಿಲ್ಲ.


Also read: ಪೊಲೀಸರ ದೌರ್ಜನ್ಯದ ಸುದ್ದಿಗಳ ನಡುವೆ ಕದ್ದು ಸಿನೆಮಾ ನೋಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಜೀವನಕ್ಕೆ ದಾರಿ ಮಾಡಿ ಕೊಟ್ಟ ಈ ಪೋಲಿಸ್ ಎಲ್ಲರಿಗೂ ಮಾದರಿ!!

ನೆರೆ ಸಂತ್ರಸ್ತರಿಗೆ ಸಚಿವ ಈಶ್ವರಪ್ಪನವರು ಕೂಡ ಈಗ ಕೊಟ್ಟಿರೋದೇ ಜಾಸ್ತಿ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಇದೇ ಹೊತ್ತಲ್ಲಿ ಪ್ರಧಾನಿ ಮೋದಿ, ರಷ್ಯಾಗೆ ಸಾಲ ಕೊಡುತ್ತಾರೆ. ಅಲ್ಲದೆ ಕೆಲ ಕೆರಿಬಿಯನ್ ದೇಶಗಳಿಗೆ ಸಾಲ, ನೆರವು ಘೋಷಣೆ ಮಾಡುತ್ತಾರೆ. ಆದರೆ ಬಿಜೆಪಿಗೆ ಅತೀ ಹೆಚ್ಚು ಮತ ಕೊಟ್ಟು ಗೆಲ್ಲಿಸಿದ ಉತ್ತರ ಕರ್ನಾಟಕದ ಮಂದಿ ಇದೀಗ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ಸಿಡಿದು ನಿಂತಿದ್ದಾರೆ. ಸೇವ್ ಉತ್ತರ ಕರ್ನಾಟಕ ಎಂಬ ಹ್ಯಾಷ್‍ಟ್ಯಾಗ್‍ನಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.


Also read: ಮತ್ತೆ 6 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ! ಹಿಂದೆ ಇದ್ದ ಕಾನೂನನ್ನು ಮತ್ತೆ ಜಾರಿಗೆ ತರಲು ಮುಂದಾದ ಸರ್ಕಾರ.!

ಅದರಂತೆ ಮೋದಿ ಮೇನಿಯಾದಲ್ಲಿ ಮತದಾರರು ರಾಜ್ಯದಿಂದ ಬಿಜೆಪಿ 25 ಸಂಸದರನ್ನು ಆರಿಸಿ ಲೋಕಸಭೆಗೆ ಕಳುಹಿಸಿಕೊಟ್ಟರು. ಆದರೆ ನೆರೆ ಬಂದಾಗ ಪ್ರಧಾನಿ ಮೋದಿಗೆ ಕರುನಾಡು ನೆನಪಾಗಲಿಲ್ಲ. ಈಗ ಜನ ಎಚ್ಚೆತ್ತು ಕೇಂದ್ರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಮೋದಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸಂತ್ರಸ್ತರು ಎಚ್ಚರಿಕೆ ಕೊಡುತ್ತಾರೆ. ಇಷ್ಟಕ್ಕೆ ನಿಲ್ಲುತ್ತಿಲ್ಲ ಉತ್ತರ ಕರ್ನಾಟಕ ಮಂದಿಯ ಕೋಪ. ಇದೇ 29ಕ್ಕೆ ರಾಜ್ಯಾದ್ಯಂತ ಸೇವ್ ಉತ್ತರ ಕರ್ನಾಟಕ. ಉತ್ತರ ಕರ್ನಾಟಕ ಬಿಲಾಂಗ್ಸ್ ಇಂಡಿಯಾ ಎನ್ನುತ್ತ ದೊಡ್ಡ ಮಟ್ಟದಲ್ಲಿ ಬಿಜೆಪಿ ಮತ್ತು ಮೋದಿ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ರೂ ನಮ್ಮ ಸಂಸದರು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವ ರೀತಿ ಸೈಲೆಂಟಾಗಿ ಕುಳಿತ್ತಿದ್ದಾರೆ. ಇದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೇಗೆ ಬಹುಮತ ಸಿಗುತ್ತೆ ಎನ್ನುವುದು ಒಂದು ಅನುಮಾನವಾಗಿದೆ. ಕೆಲವು ಮೂಲಗಳು ಹೇಳುವ ಪ್ರಕಾರ ಉಪ ಚುನಾವಣೆ ಮುಂದಿರುವ ಕೆಲವು ದಿನಗಳಲ್ಲಿ ಮೋದಿ ಪರಿಹಾರ ನೀಡಿದರೆ ಮತ್ತೆ ಜನರು ಬಿಜೆಪಿ ಗೆ ಜೈ ಎನ್ನುತ್ತಾರೆ ಅದಕ್ಕಾಗಿ ಸ್ವಲ್ಪ ಕಾಯ್ದು ಚುನಾವಣೆ ಸಂದರ್ಭದಲ್ಲಿ ನೀಡುವ ಸುಳಿವು ಇದೆ ಎಂದು ಕಾಂಗ್ರೆಸ್ ನವರು ದೂರಿದ್ದಾರೆ. ಒಟ್ಟಾರೆಯಾಗಿ ಮೋದಿ ಸರ್ಕಾರದ ವಿರುದ್ಧ ಹೋರಾಟ ನಡೆಯುವುದು ಪಕ್ಕಾ ಆಗಿದೆ.