ವಿಧಾನ ಸೌಧ ಕಟ್ಟೋಕೆ ೧.೭೫ ಕೋಟಿ ಖರ್ಚು ಆಗಿತ್ತು, ಆದರೆ ಇದರ ಮೇಲೆ ಸಾಕ್ಷ್ಯ ಚಿತ್ರ ಮಾಡಲು ೩.೫ ಕೋಟಿ ಖರ್ಚುಮಾಡುತ್ತಿದೆ ಕರ್ನಾಟಕ ಸರ್ಕಾರ!!

0
536

ದುಂದು ವೆಚ್ಚ ಮಾಡೋದು ಸರ್ಕಾರಗಳಿಗೆ ಹೊಸದೇನಲ್ಲ, ಅದರಲ್ಲೂ ಈಗಿನ ಘನತೆವೆತ್ತ ಕರ್ನಾಟಕ ಸರ್ಕಾರ ಅನೇಕ ದುಂದು ವೆಚ್ಚಗಳಿಗೆ ಅನೇಕ ಬಾರಿ ನಾಗರೀಕರ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಇತ್ತೀಚಿನ ಉದಾಹರಣೆಯೆಂದರೆ, ಸರ್ಕಾರದ ಸ್ಟೀಲ್ ಬ್ರಿಡ್ಜ್ ಯೋಜನೆ. ಬೆಂಗಳೂರು ನಾಗರೀಕರ ಅನೇಕ ತಿಂಗಳುಗಳ ಪ್ರತಿಭಟನೆಯಿಂದ ಸದ್ಯಕ್ಕೆ ಆ ಯೋಜನೆ ಆಗುತ್ತಿಲ್ಲ.

ಈಗ ಇನ್ನೊಂದು ಹೊಸ ವಿವಾದ ಒಂದು ಹುಟ್ಟಿಕೊಂಡಿದೆ, ವಿಧಾನ ಸೌಧದ ವಜ್ರ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಸಂಭ್ರಮಾಚರಣೆಗೆ ಸುಮಾರು ೨೭ ಕೋಟಿ ಹಣವನ್ನು ಸರ್ಕಾರಿ ಈಗಾಗಲೇ ಬಿಡುಗಡೆಯಾಗಿದೆ, ಸಂಭ್ರಮಾಚರಣೆಗೆ ಇಷ್ಟೊಂದು ದುಬಾರಿ ವೆಚ್ಚ ಮಾಡಬೇಕೆ ಎಂದು ಹಲವಾರು ನಾಗರೀಕ ಸಂಘಗಳು ಮತ್ತು ಸಮಾಜ ಸೇವಕರು ಸರ್ಕಾರವನ್ನು ಟೀಕಿಸಿದ್ದಾರೆ.

ಈ ೨೭ ಕೋಟಿಯಲ್ಲಿ ಸುಮಾರು ೩,೫ ಕೋಟಿಯಷ್ಟು ಹಣವನ್ನು ೩ ಸಾಕ್ಷ್ಯ ಚಿತ್ರಗಳನ್ನು ನಿರ್ಮಾಣ ಮಾಡಲು ಬಿಡುಗಡೆ ಮಾಡಿದೆ. ಈ ಸಾಕ್ಷ್ಯ ಚಿತ್ರಗಳನ್ನು ಹೆಸರಾಂತ ನಿರ್ದೇಶಕರಾದ ಟಿ.ಏನ್.ಸೀತಾರಾಮ್, ಗಿರೀಶ್ ಕಾಸರವಳ್ಳಿ ಹಾಗು ಮಾಸ್ಟರ್ ಕಿಶನ್-ರವರುಗಳು ನಿರ್ಮಿಸಿದ್ದಾರೆ. ನಿರ್ದೇಶಕಿ ಸುಮನಾ ಕಿತ್ತೂರ್ ಈ ವಿಷಯವಾಗಿ ಮಾತನಾಡಿ, “ಒಂದು ಸಂಪೂರ್ಣ ದೊಡ್ಡ ಮಟ್ಟದ ಚಿತ್ರವನ್ನೇ ೨-೩ ಕೋಟಿಯಲ್ಲಿ ಕನ್ನಡದಲ್ಲಿ ನಿರ್ಮಾಣ ಮಾಡಲಾಗುತ್ತಿದೆ, ಅಂಥದ್ರಲ್ಲಿ ಕೇವಲ ಒಂದು ಸಾಕ್ಷ್ಯ ಚಿತ್ರಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿರುವುದು ಬೇಸರದ ಸಂಗತಿ” ಎಂದು ಹೇಳಿದ್ದಾರೆ.

ಪತ್ರಿಕಾ ವರದಿಗಳ ಪ್ರಕಾರ “ಶಾಸನಸಭೆ ನಡೆದುಬಂದ ದಾರಿ”, ಟಿ.ಏನ್.ಸೀತಾರಾಮ್ ನಿರ್ದೇಶನದ ಈ ಸಾಕ್ಷ್ಯಚಿತ್ರಕ್ಕೆ ಬರೋಬ್ಬರಿ ೧.೫೮ ಕೋಟಿ ರೂಪಾಯಿ ವೆಚ್ಚ ತಗಲುತ್ತಿದೆ. ಹಾಗೆಯೇ ಗಿರೀಶ್ ಕಾಸರವಳ್ಳಿ ನಿರ್ದೇಶನದ “ವಿಧಾನಸಭೆ ಕಟ್ಟಡ” ಸಾಕ್ಷ್ಯ ಚಿತ್ರಕ್ಕೆ ಒಂದು ಕೋಟಿ ವೆಚ್ಚ ತಗಲುತ್ತಿದೆ ಹಾಗು ಮಾಸ್ಟರ್ ಕಿಶನ್ ನಿರ್ದೇಶನದ “ವಿಧಾನಸೌಧದ ೩ಡ್ ಎಫೆಕ್ಟ್” ಸಾಕ್ಷ್ಯ ಚಿತ್ರಕ್ಕೆ ಒಂದು ಕೋಟಿ ಎರಡು ಲಕ್ಷ ವೆಚ್ಚ ತಗಲುತ್ತಿದೆ.

ಹಲವಾರು ಚಲನಚಿತ್ರ ನಿರ್ಮಾಪಕರ ಪ್ರಕಾರ ಒಂದು ಒಳ್ಳೆ ಚಿತ್ರ ನಿರ್ಮಾಣ ಮಾಡಿ ಬಿಡುಗಡೆ ಮಾಡೋದಕ್ಕೆ ಸುಮಾರು ೩ ಕೋಟಿ ತಗಲಬಹುದು, ಆದರೆ ಕೇವಲ ಸಾಕ್ಷ್ಯ ಚಿತ್ರಕ್ಕೆ ೩,೫ ಕೋಟಿ ರೂಪಾಯಿ ತಗಲುತ್ತಿರುವುದು ಆಶ್ಚರ್ಯ ಅಂತ ಹೇಳಿದ್ದಾರೆ. ಇನ್ನೊಂದು ತಮಾಷೆಯ ಸಂಗತಿ ಏನೆಂದರೆ, ವಿಧಾನ ಸೌಧ ಕಟ್ಟುವುದಕ್ಕೆ ಆಗಿನ ಕಾಲದಲ್ಲಿ ೧.೭೫ ಕೋಟಿ ವೆಚ್ಚವಾಗಿತ್ತು, ಅದರ ಮೇಲೆ ಸಾಕ್ಷ್ಯ ಚಿತ್ರ ಮಾಡೋಕ್ಕೆ ೩.೫ ಕೋಟಿ ವೆಚ್ಚ ಮಾಡುವುದು ಎಷ್ಟು ಸರಿ??