ವಿಯೆಟ್ನಾಂ ನಲ್ಲಿ ಇಸ್ರೋ ಕೇಂದ್ರ ಸ್ಥಾಪನೆ; ಇದು ಮೋದಿ ಮಾಸ್ಟರ್ ಪ್ಲಾನ್

0
1245

ಪಾಕಿಸ್ತಾನ ಹೊರತು ಪಡಿಸಿ ಎಲ್ಲಾ ಸಾರ್ಕ್ ರಾಷ್ಟ್ರಗಳ ವಿಶ್ವಾಸ ಗಳಿಸುವಲ್ಲಿ ಸಫಲರಾದ ಮೋದಿ, ಇದೀಗ ಅವರ ಚಿತ್ತ ಆಸಿಯಾನ್ ರಾಷ್ಟ್ರಗಳತ್ತ ನೆಟ್ಟಿದೆ. ಚೀನಾದ ವಿರೋಧದ ನಡುವೆಯೂ ವಿಯೆಟ್ನಾಂನಲ್ಲಿ ಇಸ್ರೋ ಕೇಂದ್ರ ಆರಂಭಿಸುವ ಭಾರತದ ಪ್ರಯತ್ನ ಸಫಲವಾಗಿದೆ.

ಆಸಿಯಾನ್ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಯೆಟ್ನಾಂ ಪ್ರಧಾನಿ ಗುವೆನ್ ಕ್ಸುವನ್ ಫುಕ್ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. 2015ರಲ್ಲಿ ಇಸ್ರೋ ಕೇಂದ್ರ ಆರಂಭಿಸಲು ಆಸಿಯಾನ್ ದೇಶಗಳು ಒಪ್ಪಿಕೊಂಡಿದ್ದವು. ಆದರೆ, ಚೀನಾದ ವಿರೋಧ ಹಾಗೂ ವಿಯೆಟ್ನಾಂ ನಿರಾಸಕ್ತಿಯಿಂದ ಅನುಷ್ಠಾನಕ್ಕೆ ವಿಳಂಬವಾಗಿತ್ತು.

ISRO Recruitment

ಭಾರತ ಸೇರಿದಂತೆ ಆಸಿಯಾನ್ ದೇಶಗಳಿಗೆ ಹವಾಮಾನ ವೈಪರೀತ್ಯ ಹಾಗೂ ಇತರ ಮಾಹಿತಿ ರವಾನೆಗೆ ಪ್ರಮುಖವಾಗಿ ಈ ಉಪಗ್ರಹ ಕೇಂದ್ರ ಬಳಕೆಯಾಗಲಿದೆ. ಹಾಗೆಯೇ ಇಂಡೋನೇಷ್ಯಾದ ಬಿಯೋಕ್ನಲ್ಲಿರುವ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಲು ಕೂಡ ಇದರಿಂದ ನೆರವಾಗಲಿದೆ. ಚೀನಾ ಗಡಿ ಪ್ರದೇಶ ಹಾಗೂ ವಿವಾದಿತ ದಕ್ಷಿಣ ಚೀನಾ ಸಮುದ್ರದ ಬಳಿಯ ಹೊ ಚಿ ಮಿನ್ ಸಿಟಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿದೆ. ಉಪಗ್ರಹ ನಿಗಾ, ದತ್ತಾಂಶ ಸ್ವೀಕಾರ ಹಾಗೂ ಸಂಸ್ಕರಣೆಯು ಈ ಕೇಂದ್ರದಲ್ಲಿ ನಡೆಯಲಿದೆ.

ಸುಮಾರು 150 ಕೋಟಿ ವೆಚ್ಚದಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿದ್ದು, ಇದು ಕಾರ್ಯಾರಂಭ ಮಾಡಿದ ಬಳಿಕ ಉಪಗ್ರಹ ಚಲನವಲನದ ಮೇಲಿನ ನಿಗಾ ಇನ್ನಷ್ಟು ಸುಲಭವಾಗಲಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಅಂಡಮಾನ್-ನಿಕೋಬಾರ್, ಬ್ರೂನಿ, ಇಂಡೋನೇಷ್ಯಾದ ಬಿಯಾಕ್ ಹಾಗೂ ಮಾರಿಷಸ್ನಲ್ಲಿ ಇಸ್ರೋ ಉಪಗ್ರಹ ನಿಗಾ ಕೇಂದ್ರಗಳಿವೆ. ಈ 4 ಕೇಂದ್ರಗಳು ವಿಯೊಟ್ನಾಂ ಕೇಂದ್ರದೊಂದಿಗೆ ಸಂಪರ್ಕ ಸಾಧಿಸಲಿವೆ.

ಭಾರತವನ್ನು ಉತ್ತುಂಗಕ್ಕೇರಿಸಲು ಮೋದಿ ಈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈ ಮೂಲಕ ಈಗಾಗ್ಲೇ ಪಾಕಿಸ್ಥಾನಕ್ಕೆ ಬಿಸಿ ಮುಟ್ಟಿಸಿರುವ ಪ್ರಧಾನಿ ಮೋದಿ ಇದೀಗ ಚೀನಾಗೆ ನಡುಕ ಹುಟ್ಟಿಸಿದ್ದಾರೆ.