ವಿಜಯನಗರ ಸಾಮ್ರಾಜ್ಯ ರೋಮ್ ನಗರಕ್ಕಿಂತಲೂ ಶ್ರೀಮಂತ ,ವಜ್ರವೈಢೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು

0
6023

ವಿಜಯನಗರ ಸಾಮ್ರಾಜ್ಯ:

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲು, ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ. ಗುರು ವಿದ್ಯಾರಣ್ಯರ ನಿರ್ದೇಶನದ ಮೇರೆಗೆ ಹರಿಹರ ಮತ್ತು ಬುಕ್ಕ ಕ್ರಿ.ಶ.1336ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರು.

vijayanagara_flag
ಹಂಪಿ ಬಾವುಟ

 

vijaynaa
ವಿಜಯನಗರ ಸಾಮ್ರಾಜ್ಯ

 

ಹಂಪೆ ಅದರ ರಾಜಧಾನಿಯಾಗಿತ್ತು. ವಿರೂಪಾಕ್ಷ ಅವರ ಆರಾಧ್ಯ ದೈವ.

vittala-temple-hampi-593

ವಿಜಯ ವಿರೂಪಾಕ್ಷ ದೇವಾಲಯ ಹಂಪಿ

ಯುನೆಸ್ಕೊ ಹಂಪೆಯನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿ ಅದರ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಹಂಪೆ ಇಂದು ವಿಶ್ವವಿಖ್ಯಾತ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಹೊರದೇಶಿಗರು:

ಹೂಯನ್ ತ್ಸಾಂಗ್:

250px-xuanzang0012
ಹೂಯನ್ ತ್ಸಾಂಗ್

ಚೈನಾ ದೇಶದ ಬೌದ್ಧ ಬಿಕ್ಷು ತನ್ನ ವಿಜಯನಗರದ ಭೇಟಿಯ ಬಗ್ಗೆ ಈ ರೀತಿ ಬರೆದು ಕೊಂಡಿದ್ದಾನೆ
ವಿಜಯನಗರದ ಜನರು ಬಹಳ ಸಂತೋಷದಿಂದಿರುವರು ,ಎಲ್ಲಿ ನೋಡಿದರೂ ಭವ್ಯವಾದ ಅರಮನೆಗಳೇ, ರಾಜ ಬೀದಿಗಳಲ್ಲಿ ಅಸಂಖ್ಯಾತ ಮೊತ್ತದ ಚಿನ್ನ ,ವಜ್ರ,ವೈಡೂರ್ಯಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರ ಮಾಡುತ್ತಾರೆ.ನಿಜವಾಗಿಯು ಇದೊಂದು ಸ್ವರ್ಗ ಭೂಮಿ.

ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್

ಭಾರತಕ್ಕೆ ಬಂದ ಪೋರ್ಚುಗೀಸ್ ಯಾತ್ರಿಕರಾದ ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್
ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾ ನಿ೦ದ ರಾಯಚೂರನ್ನು ಗೆದ್ದಾಗ. ಒಟ್ಟು ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು ೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು.

 

media_gallery-2016-02-3-12-fernao_nunes_p_b0f3a8b9e4d5424b67d401c6bce07388
ಫೆರ್ನಾವ್ ನೂನೀಜ್

ಅಂದಿನ ವಿಜಯ ನಗರ ರೋಮ್ ನಗರದಷ್ಟಾದರೂ ದೊಡ್ಡದಿದ್ದು , ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದೀತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ.

೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ ಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ . ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು.

download
ಡೊಮಿಂಗೋ ಪಾಯಸ್

ಪೋರ್ಚುಗೀಸ್ ಚರಿತ್ರೆ ಡೊಮಿಂಗೊ ಪೇಸ್ ಅತ್ಯಂತ ಪರಿಪೂರ್ಣ ,ಹೆಚ್ಚು ನ್ಯಾಯಯುತವಾದ ಶ್ರೇಷ್ಠ ರಾಜ ಎಂದು ಕೃಷ್ಣ ರಾಯ ಹೊಗಳುತ್ತಾನೆ. ವೈಷ್ಣವ ಅನುಯಾಯಿ ಆದರೂ ಎಲ್ಲ ಪಂಥಗಳಿಗೂ ಅವರವರ ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಅವಕಾಶಗಳನ್ನು ನೀಡಲಾಗಿತ್ತು , ಬಾರ್ಬೋಸಾ ಪ್ರಕಾರ ಪ್ರತಿ ವ್ಯಕ್ತಿ ತನ್ನ ಮತದ ಪ್ರಕಾರ ಜೀವಿಸಬಹುದಾದ ಸ್ವಾತಂತ್ರ್ಯ ವನ್ನು ನೀಡಲಾಗಿತ್ತು .
ವಿರೂಪಾಕ್ಷ ದೇವಾಲಯದ ಮುಂಭಾಗ 732 ಮೀ.ಉದ್ದ ಹಾಗೂ 28ಮೀ.ಅಗಲದ ಹಂಪೆ ಬಜಾರ್ ಇದೆ. ಇದು ವಿಜಯನಗರದ ಅತಿ ದೊಡ್ಡ ಬಜಾರ್. ಇಲ್ಲಿ ಮುತ್ತು ರತ್ನ ವಜ್ರವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಡೊಮಿಂಗೋ ಪಾಯಸ್ ದಾಖಲಿಸಿದ್ದಾನೆ .

ದ್ವಾರ್ಟ್ ಬಾರ್ಬೊಸಾ:

ಹಂಪಿಪಟ್ಟಣವನ್ನು ಕಂಡು ಬೆರಗಾದ ಪೋರ್ಚುಗೀಸ್ ಪ್ರವಾಸಿಗ ದ್ವಾರ್ಟ್ ಬಾರ್ಬೊಸಾ “ವಜ್ರ,ಮುತ್ತು,ರೇಶ್ಮೆ,ಬೆಲೆಬಾಳುವ ವಸ್ತುಗಳು ಬೀದಿಗಳಲ್ಲೇ ಮಾರಲ್ಪಡುತ್ತವೆ” ಎಂದಿದ್ದಾನೆ
ಪೋರ್ಚುಗೀಸ್ ಪ್ರವಾಸಿಗ ದ್ವಾರ್ಟ್ ಬಾರ್ಬೊಸಾ (1500/1511 A.D) ವಿಜಯನಗರ ಸಾಮ್ರಾಜ್ಯದ ಹಂಪಿ ಪಟ್ಟಣದ ಅಗಲವಾದ ಬೀದಿ ಮತ್ತು ಚೌಕಗಳನ್ನು ಕಂಡು ಹೊಗಳಿದ್ದಾನೆ.

ಅಬ್ದುಲ್ ರಜಾಕ್:

ಹಂಪಿ ಪಟ್ಟಣದ ನೀರುಪೂರೈಕೆ,ಒಳಚರಂಡಿಗಳ ಏರ್ಪಾಟುಗಳನ್ನು ನೋಡಿ ಇಂತಹ ಬೆರಗಿನ ದೊಡ್ಡಪಟ್ಟಣವನ್ನು ತಾನೆಲ್ಲೂ ಕಂಡಿಲ್ಲವೆಂದು ಇರಾನಿಪ್ರವಾಸಿಗ ಅಬ್ದುಲ್ ರಜಾಕ್ ಹೇಳುತ್ತಾನೆ.

220px-abd_al-razzaq
ಅಬ್ದುಲ್ ರಜಾಕ್

ನಿಕೋಲೋ ಕಂಟಿ-ಇಟಲಿ:

ತನ್ನ ಬರವಣಿಗೆಯಲ್ಲಿ ವಿಜಯನಗರವನ್ನು ಬಿಜಿನೆಗಾಲಿಯ ಎಂದು ಕರೆದಿದ್ದು , ನಗರವು ಕಡಿದಾದ ಕಲ್ಲುಗಳಿಂದ ಆವೃತ್ತವಾಗಿದೆ , 60 ಮೈಲು ಸುತ್ತಳತೆ ಹೊಂದಿದೆ , ಸುತ್ತಲೂ ಬೆಟ್ಟಗಳು , ಕಣಿವೆಗಳು ,

7096132
ನಿಕೋಲೋ ಕಂಟಿ

ಈ ನಗರದಲ್ಲಿ ತೊಂಬತ್ತು ಸಾವಿರ ಜನರು ಬಲಾಢ್ಯ ತೋಳುಗಳನ್ನು ಹೊಂದಿದ್ದರು ಎಂದು ಅಂದಾಜಿಸಲಾಗಿದೆ
ವರ್ಷದ ಮೂರು ಬಾರಿ ಅವರು ನದಿಗಳು ಅಥವಾ ಸಮುದ್ರದಲ್ಲಿ ಸ್ನಾನ ಮೂಲಕ ಹಬ್ಬಗಳನ್ನು ಆಚರಿಸುತ್ತಿದ್ದರು , ಈ ಸಂದರ್ಭಗಳಲ್ಲಿ ಗಂಡು ಮತ್ತು ಹೆಣ್ಣು ಎಲ್ಲಾ ವಯಸ್ಸಿನವರು ಹೊಸ ಉಡುಪುಗಳನ್ನು ತೊಟ್ಟು ಹಾಡುತ್ತಿರುತ್ತಾರೆ ,ಛಾವಣಿಯ ಮೇಲೆ ಇಡೀ ಮೂರು ದಿನಗಳ ಕಾಲ ನೃತ್ಯ ಮಾಡುತ್ತಾರೆ ಮತ್ತು ತಮ್ಮ ದೇವಾಲಯಗಳ ಉತ್ಸವಗಳಲ್ಲಿ ಸಾಮೂಹಿಕ ಭಾರಿ ಭೋಜನವು ಒಂಬತ್ತು ದಿನಗಳವರೆಗೆ ಇರುತ್ತದೆ .ನಗರವೆಲ್ಲ ಶೃಂಗಾರಗೊಂಡು ದೀಪಗಳ ಸಾಲು ದಿನ ರಾತ್ರಿ ಬೆಳಗುತ್ತಿರುತ್ತವೆ .
ಲೈನ್ಸ್ಕಿಹೊಟೇನ್ :

ರಾಜ ನರಸಿಂಗನ ರಾಜಧಾನಿ ವಿಜಯನಗರ
ಪೋರ್ಚುಗೀಸ್ ನ ಮುಖ್ಯ ಪಟ್ಟಣ ಗೋವಾ ಆಗಿತ್ತು

437068882_db2591998f_o
ಲೈನ್ಸ್ಕಿಹೊಟೇನ್

ಕ್ಯಾಂಬೆಯ ದಕ್ಷಿಣ ಪ್ರದೇಶವನ್ನು ಪೋರ್ಚುಗೀಸ್ ಭಾರತ ಎಂದು ಕರೆಯಲಾಗಿತ್ತು ಇನ್ನುಳಿದ ಪ್ರದೇಶಗಳನ್ನು ದಖ್ಖನ್ ಹಾಗೂ ಕೊಂಕಣ ಎಂದು ಕರೆಯಲಾಗುತ್ತಿತ್ತು ಎಂದು ದಾಖಲಿಸಿದ್ದಾನೆ .

ಇಬನ್ ಬತೂತಾ:

ibn-battuta
ಇಬನ್ ಬತೂತಾ

ಹರಿಹರ (ಕ್ರಿ.ಶ. 1336-1357) ಆಳ್ವಿಕೆಯ ವಿಜಯನಗರ ಭೇಟಿ ನೀಡಿದ ಇಬನ್ ಬತೂತಾ, ಅವರು “ಮೆಣಸು, ಹಸಿರು ಶುಂಠಿ, ಅಥವಾ ನಿಂಬೆ ಉಪ್ಪಿನಕಾಯಿ ,ಭೋಜನವನ್ನು ಕೊಂಡಾಡಿದ್ದಾನೆ. ಹಪ್ಪಳ ಮತ್ತು ಸಂಡಿಗೆ ಒಂದು ಭೋಜನದ ಇತರ ಪ್ರಮುಖ ವಸ್ತುಗಳಾಗಿದ್ದವು ಎಂದು ಬಣ್ಣಿಸಿದ್ದಾನೆ .
ಅಂದಿನ ಹಂಪಿ ಇಂದು ನಿರ್ಲಕ್ಷ್ಯದಿಂದ ಕೊಂಪೆಯಾಗಿರುವುದು ಖೇದಕರ ಸಂಗತಿ .

ಮೂಲ
The VijayaNagar Empire
Chronicles of Paes and Nuniz
Ibn Batuta travels in Asia and Africa 1325-1354
Book of Duarte Barbosa’