ಈ ಚುನಾವಣೆ ಪೂರ್ವ ಸಮೀಕ್ಷೆಯ ಪ್ರಕಾರ ಚುನಾವಣೆಯಲ್ಲಿ ಭಾಗ್ಯಗಳು ಸಿಎಂ ಅನ್ನು ಕೈಹಿಡಿಯಲಿವೆಯಂತೆ…!!

0
526

Kannada News | Karnataka News

ಪ್ರಮುಖ ಸುದ್ದಿ ಸಂಸ್ಥೆಯೊಂದು ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಆ ಸಮೀಕ್ಷೆ ಯಾರು ನಡೆಸಿದರು, ಸಮೀಕ್ಷೆಯ ವಿಷಯಗಳು ಯಾವುವು ಮತ್ತು ಅದಕ್ಕೆ ಯಾರು ಮತ ನೀಡಿದರು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ರಾಜ್ಯದ ಪ್ರಮುಖ ದಿನ ಪತ್ರಿಕೆಗಳಲ್ಲೊಂದಾದ ವಿಶ್ವವಾಣಿ, ಸ್ಟಾರ್ ಪೋಲ್ ಹಾಗೂ ಜನಮನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ಈಗಲೇ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೇರಲಿದೆ ಎಂಬ ಪ್ರಶ್ನೆಗೆ ಪಾಲ್ಗೊಂಡ ಬಹುತೇಕ ಜನರು ಸಿಎಂ ಸಿದ್ದರಾಮಯ್ಯ ಸರ್ಕಾರದ ಪರವಾಗಿ ವೋಟ್ ಹಾಕಿದ್ದಾರೆ.

ಇನ್ನು ಕಳೆದ ನವೆಂಬರ್ ಹಾಗೂ ಡಿಸೆಂಬರ್ ಮಧ್ಯೆ ನಲವತ್ತು ದಿನಗಳ ಕಾಲ ಈ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯ ಮತಗಳಿಗಾಗಿ ವಲಯಕ್ಕೆ 500 ರಂತೆ ಒಟ್ಟು 3000 ಮತದಾರರ ಸಂದರ್ಶನ ನಡೆಸಿ, ಅಭಿಪ್ರಾಯ ಪಡೆಯಲಾಗಿದೆ. ಇದರಲ್ಲಿ ಮಹಿಳೆಯರು, ಪುರುಷರು ಹಾಗೂ ಯುವಕರು ಸೇರಿ ಎಲ್ಲ ವಯೋಮಾನದವರು ಪಾಲ್ಗೊಂಡಿದ್ದರು.

ಸಮೀಕ್ಷೆಯ ವಿವರ ಈ ಕೆಳಗಿನಂತಿದೆ : ಪಕ್ಷದ ಬಲಾ-ಬಲ:

1. ಕಾಂಗ್ರೆಸ್ 110-115 ಶೇಕಡಾ 34 ರಿಂದ 37 ರಷ್ಟು ಮತ.

2. ಬಿಜೆಪಿ 70-75 ಶೇಕಡಾ 33 ರಿಂದ 35 ರಷ್ಟು ಮತ.

3. ಜೆಡಿಎಸ್ 33-38 ಶೇಕಡಾ 18 ರಿಂದ 21 ರಷ್ಟು ಮತ.

ಮುಖ್ಯಮಂತ್ರಿ ಅಭ್ಯರ್ಥಿಗಳು:
ಕಾಂಗ್ರೆಸ್:
ಸಿದ್ದರಾಮಯ್ಯ- ಶೇ 58
ಡಿಕೆ ಶಿವಕುಮಾರ್- ಶೇ 18
ಮಲ್ಲಿಕಾರ್ಜುನ ಖರ್ಗೆ- ಶೇ 13
ಡಾ.ಜಿ.ಪರಮೇಶ್ವರ- ಶೇ 10

ಬಿಜೆಪಿ:
ಬಿಎಸ್ ಯಡಿಯೂರಪ್ಪ-ಶೇ 52
ಅನಂತಕುಮಾರ್- ಶೇ 28
ಅನಂತ ಕುಮಾರ್ ಹೆಗಡೆ- ಶೇ 12
ಸಂತೋಷ್- ಶೇ 8

ಜೆಡಿಎಸ್:
ಎಚ್.ಡಿ.ಕುಮಾರಸ್ವಾಮಿ- ಶೇ 90
ಎಚ್.ಡಿ.ರೇವಣ್ಣ- ಶೇ 10

ಪಕ್ಷಕ್ಕೆ ಪ್ಲಸ್ ಪಾಯಿಂಟ್ಸ್:
ಕಾಂಗ್ರೆಸ್:
ಸ್ಥಿರ ಆಡಳಿತ- ಶೇ 45
ಭ್ರಷ್ಟಾಚಾರರಹಿತ ಆಳ್ವಿಕೆ- ಶೇ 15
ನಾನಾ ಭಾಗ್ಯಗಳು- ಶೇ 40

ಬಿಜೆಪಿ:
ಮೋದಿ ಅಲೆ-ಶೇ 65
ಅಮಿತ್ ಶಾ ತಂತ್ರಗಾರಿಕೆ- ಶೇ 25
ಹಿಂದುತ್ವ ವಾದ- ಶೇ 10

ಜೆಡಿಎಸ್:
ಪರ್ಯಾಯ ಶಕ್ತಿ- ಶೇ 25,
ಸಮ್ಮಿಶ್ರ ಸರಕಾರದ ಸಾಧನೆ- ಶೇ 60,
ಪ್ರಾದೇಶಿಕ ಪಕ್ಷದ ಅನಿವಾರ್ಯತೆ- ಶೇ 15

ಪಕ್ಷಕ್ಕೆ ಮೈನಸ್ ಪಾಯಿಂಟ್ಸ್:
ಕಾಂಗ್ರೆಸ್:
ಅಹಿಂದ ಓಲೈಕೆ- ಶೇ 55,
ಕಾನೂನು ವ್ಯವಸ್ಥೆ ವೈಫಲ್ಯ- ಶೇ 25,
ಕಾವೇರಿ, ಮಹಾದಾಯಿ ವಿವಾದ- ಶೇ 20

ಬಿಜೆಪಿ:
ಆಂತರಿಕ ಕಚ್ಚಾಟ-ಶೇ 54
ಮಹಾದಾಯಿ ವಿವಾದ- ಶೇ 30
ಪ್ರತಿಪಕ್ಷ ಹೊಣೆ ನಿರ್ವಹಣೆಯಲ್ಲಿ ವೈಫಲ್ಯ- ಶೇ 16

ಜೆಡಿಎಸ್:
ಸಂಘಟನೆ ಕೊರತೆ- ಶೇ 48
ಭಿನ್ನಮತ- ಶೇ 40
ಕುಟುಂಬ ರಾಜಕೀಯ- ಶೇ 12

ಪ್ರಮುಖ ಸುದ್ದಿ ಸಂಸ್ಥೆಯೊಂದು ನಡೆಸಿದ ಚುನ್ನವನೇ ಪೂರ್ವ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಆ ಸಮೀಕ್ಷೆ ಯಾರು ನಡೆಸಿದರು, ಸಮೀಕ್ಷೆಯ ವಿಷಯಗಳು ಯಾವುವು ಮತ್ತು ಅದಕ್ಕೆ ಯಾರು ಮತ ನೀಡಿದರು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ರಾಜ್ಯದ ಪ್ರಮುಖ ದಿನ ಪತ್ರಿಕೆಗಳಲ್ಲೊಂದಾದ ವಿಶ್ವವಾಣಿ, ಸ್ಟಾರ್ ಪೋಲ್ ಹಾಗೂ ಜನಮನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ಈಗಲೇ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೇರಲಿದೆ ಎಂಬ ಪ್ರಶ್ನೆಗೆ ಪಾಲ್ಗೊಂಡ ಬಹುತೇಕ ಜನರು ಸಿಎಂ ಸಿದ್ದರಾಮಯ್ಯ ಸರ್ಕಾರದ ಪರವಾಗಿ ವೋಟ್ ಹಾಕಿದ್ದಾರೆ.

ಇನ್ನು ಕಳೆದ ನವೆಂಬರ್ ಹಾಗೂ ಡಿಸೆಂಬರ್ ಮಧ್ಯೆ ನಲವತ್ತು ದಿನಗಳ ಕಾಲ ಈ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯ ಮತಗಳಿಗಾಗಿ ವಲಯಕ್ಕೆ 500 ರಂತೆ ಒಟ್ಟು 3000 ಮತದಾರರ ಸಂದರ್ಶನ ನಡೆಸಿ, ಅಭಿಪ್ರಾಯ ಪಡೆಯಲಾಗಿದೆ. ಇದರಲ್ಲಿ ಮಹಿಳೆಯರು, ಪುರುಷರು ಹಾಗೂ ಯುವಕರು ಸೇರಿ ಎಲ್ಲ ವಯೋಮಾನದವರು ಪಾಲ್ಗೊಂಡಿದ್ದರು.

ಸಮೀಕ್ಷೆಯ ವಿವರ ಈ ಕೆಳಗಿನಂತಿದೆ:
ಪಕ್ಷದ ಬಲಾ-ಬಲ:
1. ಕಾಂಗ್ರೆಸ್ 110-115 ಶೇಕಡಾ 34 ರಿಂದ 37 ರಷ್ಟು ಮತ.

2. ಬಿಜೆಪಿ 70-75 ಶೇಕಡಾ 33 ರಿಂದ 35 ರಷ್ಟು ಮತ.

3. ಜೆಡಿಎಸ್ 33-38 ಶೇಕಡಾ 18 ರಿಂದ 21 ರಷ್ಟು ಮತ.

ಕೆಪಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ ಲೆಕ್ಕಕಿಲ್ಲ:
ಉಪೇಂದ್ರರ ಕೆಪಿಜೆಪಿ ಹಾಗೂ ಅರವಿಂದ್ ಕೇಜ್ರಿವಾಲ್ ರ ಆಮ್ ಆದ್ಮಿ ಪಕ್ಷ ಯಾವುದೇ ಪರಿಣಾಮ ಬೀರಲ್ಲ ಎಂಬ ಅಂಶ ಬಹಿರಂಗವಾಗಿದ್ದರೆ, ನೋಟಾದಿಂದ ಹತ್ತಕ್ಕಿಂತ ಹೆಚ್ಚು ಕ್ಷೇತ್ರಗಳ ಫಲಿತಾಂಶ ಬದಲಾವಣೆ ಆಗಲಿದೆಯಂತೆ.

ಲಿಂಗಾಯತ ಮತಗಳು:
ಲಿಂಗಾಯತ ಸತಂತ್ರ ಧರ್ಮ ಹೋರಾಟಕ್ಕೆ ಬೆಂಬಲ ನೀಡಿರುವುದು ಕಾಂಗ್ರೆಸ್ ಪಾಲಿಗೆ ವರದಾನವಾಗಲಿದೆ. ಎಂ.ಬಿ.ಪಾಟೀಲ ಹಾಗೂ ವಿನಯ ಕುಲಕರ್ಣಿ ಸ್ವತಂತ್ರ ಧರ್ಮದ ಪರವಾಗಿರುವುದು ಆ ಪಕ್ಷಕ್ಕೆ ನೆರವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ವತಂತ್ರ ಧರ್ಮದ ವಿಚಾರವಾಗಿ ತಟಸ್ಥವಾಗಿರುವುದರಿಂದ ಬಿಜೆಪಿಗೆ ಇದರ ಲಾಭ ಸಿಗುವುದಿಲ್ಲವಂತೆ.

ಇನ್ನು ಈ ಸಮೀಕ್ಷೆಯ ವರದಿ ಎಷ್ಟರ ಮಟ್ಟಿಗೆ ಚುನಾವಣೆಯಲ್ಲಿ ಸತ್ಯವಾಗಬಹುದು ಎಂದು ಕಾದು ನೋಡಬೇಕು…!!

Also Read: ಇನ್ನು ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಮುನ್ನ ಯೋಚಿಸಿ!!!