ಅಂಬಿಯ ಆರೋಗ್ಯದ ಬಗ್ಗೆ ನಾವು ಎಷ್ಟೇ ಕಾಳಜಿವಹಿಸಿಕೊಂಡರೂ, ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ; ವಿಷಾದ ವ್ಯಕ್ತ ಪಡಿಸಿದ ವಿಕ್ರಂ ಆಸ್ಪತ್ರೆಯ ವೈದ್ಯರು!!

0
439

ಕಲಿಯುಗ ಕರ್ಣ, ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅವರ ನಿಧನ ಇಡೀ ಚಿತ್ರರಂಗಕ್ಕೆ ಹಾಗೂ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ. ಅಂಬಿಯ ಅಗಲಿಕೆಯಿಂದ ಇಡೀ ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ಅವರ ಅಂತ್ಯ ಕ್ರಿಯೆಗೆ ಲಕ್ಷಾಂತರ ಜನರು ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದು ಶಾಂತರೀತಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಅಂಬಿ ಸಾಯುವ ದಿನ ಮಂಡ್ಯದಲ್ಲಿ ಬಸ್ ಅಪಘಾತವಾಗಿ 30 ಜನರು ಸಾವನ್ನಪ್ಪಿದರು ಈ ಇದನ್ನು ತಿಳಿದ ಅಂಬಿ ಅವರ ಕುಟುಂಬಕ್ಕೆ ಸ್ವಾತನ ಹೇಳಿದರು ತಾವು ಇಹಲೋಕ ತೇಜಿಸಿ ಬರಲಾರದ ಲೋಕಕ್ಕೆ ತೆರೆಳಿದ್ದಾರೆ.

ಅಂಬಿ ಸಾವಿನ ದಿನ ಏನಾಯಿತು?

ಅಂಬಿಯವರ ಸಾವಿನ ಬಗ್ಗೆ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಅವರು ಅಂಬಿಗೆ ಹೇಗೆ ಹೃದಯಾಘಾತವಾಗಿತು ಅಂತ ವಿವರಿಸಿದ್ದಾರೆ. ಶನಿವಾರ ದಿನ ಆರಾಮವಾಗಿ ಇದ್ದ ಅಂಬಿಯವರು ಪ್ರತಿದಿನದಂತೆ ಮಾತನಾಡುತ ಇದ್ದರು ಮಂಡ್ಯದ ಬಸ್ ದುರಂತದಿಂದ ಸ್ವಲ್ಪ ಮಗ್ನರಾಗಿದ್ದ ಅಂಬರೀಶ್ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಎಂದು ಹೇಳಿ ಆವತ್ತು ನಡೆದ ವಿಷಯದ ಬಗ್ಗೆ ವಿವರಿಸಿದ್ದಾರೆ.

ಪ್ರತಿದಿನದಂತೆ ಶನಿವಾರ ಸಂಜೆ ಅಂಬಿ ಮನೆಯಲ್ಲಿ ರೂಮಿಗೆ ಮಲಗಲು ಹೋಗುವ ಸಂದರ್ಭದಲ್ಲಿ ಸಡನ್ ಆಗಿ ಆಕ್ಸಿಜನ್ ಕಡಿಮೆಯಾಗಿ ಹೃದಯಾಘಾತವಾಯಿತು. ಆ ಸಮಯದಲ್ಲಿ ನನಗೆ ಫೋನ್ ಮಾಡಿದ್ರು. ಫೋನ್-ನಲ್ಲೆ ಜೋರಾಗಿ ಅಳೋದು ಕೇಳಿತ್ತು. ಇದರಿಂದ ಗಾಬರಿಗೊಂಡ ನಾನು ಅಂಬರೀಶ್ ಆರೋಗ್ಯದ ಬಗ್ಗೆ ತಿಳಿದಿದ್ದ ಅಲ್ಲೆ ಒಬ್ಬರು ಒಳ್ಳೆಯ ನರ್ಸ್ ಇದ್ದರು ಅವನ ಜೊತೆ ಮಾತನಾಡಿ ಮನೆಯಲ್ಲಿರುವ 2 ಆಕ್ಸಿಜನ್ ಎಲ್ಲಾ ಆಕ್ಸಿಜನ್ ನನ್ನು ಜಾಸ್ತಿ ಮಾಡು. ಹಾಗೆಯೇ ಹೃದಯಘಾತವಾದ ಸಮಯದಲ್ಲಿ ಕೂಡಲೇ ಮಾಡುವ ಮಸಾಜ್ ಮಾಡಲು ಹೇಳಿ. ಕೂಡಲೇ ಆಂಬುಲೆನ್ಸ್ ಕಳುಹಿಸಿಕೊಟ್ಟೆ.

ಅಂಬುಲೆನ್ಸ್ ತಗೆದುಕೊಂಡು ಅವರ ಮನೆಯತ್ತ ಹೊರಟೆ ನಾನು ಬರೋದ್ರೊಳಗೆ ಹೃದಯಾಘಾತವಾಗಿತ್ತು. ಬಂದಾಗ ಹಾರ್ಟ್ ಬೀಟಿಂಗ್, ಬ್ಲಡ್ ಫ್ರೆಶರ್, ಪಲ್ಸ್, ಪ್ರಜ್ಞಾಹೀನರಾಗಿದ್ದರು. ನಮ್ಮ ಆಸ್ಪತ್ರೆಯಿಂದ ಅವರ ಮನೆಗೆ ಹೋಗೋಕೆ 5 ನಿಮಿಷ ಬೇಕು. ಅವರಿಗೆ ಹೃದಯಾಘಾತವಾಗಿ ಸುಮಾರು 10ರಿಂದ 15 ನಿಮಿಷ ಆಗಿರಬಹುದು. ಇಂತಹ ಸಮಯದಲ್ಲಿ ವ್ಯಕ್ತಿ ಬದುಕುವುದು ಕಡಿಮೆ ಆದರಿಂದ ಬದುಕಿಸುವುದು ಕಷ್ಟವಾಗುತ್ತದೆ. ಹಾಗಾಗಿ ಮನೆಯಲ್ಲಿ ಇದಕ್ಕೆ ಚಿಕಿತ್ಸೆ ನೀಡಲು ಆಗುವುದಿಲ್ಲ. ಆಸ್ಪತ್ರೆಯಲ್ಲೂ ಹೀಗಾದಾಗ ಕೆಲವು ಬಾರಿ ಕಷ್ಟ ಆಗುತ್ತದೆ. ಹಾಗೆಯೇ ಇವರದು ಕೂಡ ಆಯಿತ್ತು ನಂತರ ಹೃದಯಾಘಾತವಾಗಿ ಸುಮಾರು 1 ಗಂಟೆ ಆದ ಬಳಿಕ ಅಂಬರೀಶ್ ನಿಧನರಾಗಿದ್ದಾರೆ ಅಂತ ಘೋಷಣೆ ಮಾಡಿದ್ದೇವೆ ಅಂತ ಅವರು ಅಂಬಿಯ ಅವರಲ್ಲಿ ಕೊನೆಯ ಬಾರಿ ಆದ ಘಟನೆ ಅಂತ ಅಂಬಿಯ ಸಾವಿನ ಬಗ್ಗೆ ವಿವರಿಸಿದ್ದಾರೆ.

ಏನೇ ಆಗಲಿ ಇಂತಹ ಮಾಹನ್ ಕನ್ನಡ ನಟನನ್ನು ಕಳೆದುಕೊಂಡು ಇಂದು ರಾಜ್ಯವು ದುಃಖದಲ್ಲಿದೆ ಅಂಬಿಯಂತಹ ದೈರ್ಯವಂತ ವ್ಯಕ್ತಿ ಹುಟ್ತಿಬರಲು ಸಾದ್ಯವಿಲ್ಲ ಇಡಿ ಕನ್ನಡ ಚಿತ್ರರಂಗವೇ ಅವರನ್ನು ಕಳೆದುಕೊಂಡು ಅವರ ಜೊತೆ ಕಳೆದ ದಿನಗಳ ಸವಿ ನೆನಪನ್ನು ಮೆಲಕು ಹಾಕುತ್ತಿದೆ.