ಆದಿಕವಿ ಪಂಪನ ‘ಆದಿಪುರಾಣ’ ವಿಕ್ರಮಾರ್ಜುನ ವಿಜಯವನ್ನು ಕನ್ನಡದ ಅಮೋಘಮೇರು ಕೃತಿ

0
2057

ಪಂಪ (ಕ್ರಿ.ಶ. ೯೦೨-೯೫೦) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಎಂಬ ಎರಡು ಕೃತಿಗಳ ಕರ್ತೃ. ಗದ್ಯ ಮತ್ತು ಪದ್ಯ ಸೇರಿದ “ಚಂಪೂ ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ ಒಬ್ಬನಾಗಿದ್ದನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ ವೆಂದು ಕರೆದಿದ್ದಾರೆ.

ರಾಷ್ಟ್ರಕೂಟರ ಕಾಲದದಲ್ಲಿ ರಾಜರು ಕನ್ನಡ ಮತ್ತು ಸಂಸ್ಕೃತಿ ಎರಡಕ್ಕೂ ಪ್ರೋತ್ಸಾಹ ನೀಡಿದರು. ಸಂಸ್ಕೃತದಲ್ಲಿ ಅತ್ಯುತ್ತಮ ಗ್ರಂಥಗಳು ರಚನೆಯಾದವು. ತ್ರಿವಿಕ್ರಮನು ‘ನಳಚಂಪು’ ಎಂಬ ಸಂಸ್ಕೃತ ಸಾಹಿತ್ಯದ ಪ್ರಥಮ ಚಂಪೂಕೃತಿಯನ್ನು ರಚಿಸಿದನು, ಹಲಾಯುಧನು ‘ಕವಿರಹಸ್ಯ’ವನ್ನು ಬರೆದನು, ಜಿಮಸೇನ, ಗಣಿತಜ್ಞ ಮಹಾವೀರಾಚಾರ್ಯ, ವ್ಯಾಕರಣ ಶಾಸ್ತ್ರಜ್ಞನಾದ ಶಕಟಾಯನ, ಗುಣಭದ್ರ, ವೀರಸೇನ, ಅಮೋಘವರ್ಷನ ಆಸ್ಥಾನದಲ್ಲಿದ್ದರು, ಆದಿಕವಿ ಪಂಪನು ‘ಆದಿಪುರಾಣ’, ವಿಕ್ರಮಾರ್ಜುನ ವಿಜಯವನ್ನು ಕನ್ನಡದಲ್ಲಿ ಬರೆದನು. ಉಭಯಕವಿ ಚಕ್ರವರ್ತಿ ಪೊನ್ನನು ‘ಶಾಂತಿಪುರಾಣ’ವನ್ನು ರಚಿಸಿದನು. ಅಮೋಘವರ್ಷನ ಆಸ್ಥಾನದಲ್ಲಿದ್ದ ಶ್ರೀ ವಿಜಯ ‘ಕವಿರಾಜಮಾರ್ಗ’ವನ್ನು ರಚಿಸಿದನು. ಇದು ಕನ್ನಡದ ಮೇರುಕೃತಿಯಾಗಿದೆ. ಇದರಿಂದ ಕನ್ನಡ ಸಾಹಿತ್ಯವು ಕಾಲದಿಂದಲೂ ಬೆಳೆದು ಬಂದಿರುವುದನ್ನು ತಿಳಿಯಬಹುದು.

ಅದಿಕವಿ ಪಂಪನ ಹೆಸರಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು, ‘ನಾಡೋಜ’ ಎಂಬ ಪ್ರಶಸ್ತಿಯನ್ನು ಕರ್ನಾಟಕದ ಹಿರಿಯ ಸಾಧಕರಿಗೆ ನೀಡುತ್ತಾ ಬಂದಿದೆ.

ರಾಷ್ಟ್ರಕೂಟರ ಕಾಲದ ಇನ್ನೊಂದು ಸಂಪನ್ನವಾದ ಗದ್ಯಕೃತಿ ‘ವಡ್ಡಾರಾಧನೆ’ ಶಿವಕೋಟ್ಯಾಚಾರ್ಯ ಇದರ ಕರ್ತೃ. ಇದು ಜೈನ ಧಾರ್ಮಿಕ ಕಥೆಗಳ ಸಂಗ್ರಹ. ಇಲ್ಲಿ ಕನ್ನಡ ದೇಸಿಗೆ ವಿಶೇಷ ಪ್ರಾಧಾನ್ಯತೆ ದೊರೆತಿದೆ. ಸನ್ನಿವೇಶ, ರಚನೆ ಪಾತ್ರ ಸೃಷ್ಟಿ. ಸಂವಾದಗಳಲ್ಲಿ ಸಜೀವತೆ ಇದೆ. ಪಂಪ ಪೂರ್ವಯುಗದ ಶ್ರೇಷ್ಠ ಗದ್ಯ ಗ್ರಂಥವಾಗಿದ್ದು. ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಂತರವಾಗಿ ನಿಲ್ಲತಕ್ಕ ಕೃತಿಯಾಗಿದೆ.

ಹಿನ್ನೆಲೆ

  • ಪಂಪನು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಲಬ್ಬೆ. ಕ್ರಿ.ಶ.ಸುಮಾರು ೯೩೫ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸು ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ.
  • ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ.
  • ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಱಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ.
  • ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ.
  • ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು.