ಏಷ್ಯಾದ ಅತಿ ವೇಗದ ಚಿತ್ರಕಾರ ಕನ್ನಡಿಗ ವಿಲಾಸ್ ನಾಯಕ್

0
1910

ಏಷ್ಯಾದ ಅತಿ ವೇಗದ ಚಿತ್ರಕಾರ ಈ ಹುಡುಗ ವಿಲಾಸ್ ನಾಯಕ್ ಮೂಲತಃ ದಕ್ಷಿಣ ಕನ್ನಡದ ಉಜಿರೆಯವರು.

ಓದು ಬರಹ:

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯಲ್ಲಿ Rank ಪಡೆದ ಇವರು, MSWನಲ್ಲೂ ಚಿನ್ನದ ಪದಕವನ್ನು ಮೈಸೂರು ವಿವಿಯಿಂದ ಪಡೆದಿದ್ದಾರೆ.

ಮೊದಲಿನ ಕೆಲಸ:

ಐಬಿಎಂನಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ನಿರ್ವಹಿಸಿದರು. ಐದು ವರ್ಷಗಳ ಐಬಿಎಂನಲ್ಲಿ ಕೆಲಸ ಮಾಡುತ್ತಲೇ ಕುಂಚಗಳೊಂದಿಗಿನ ಸಂಬಂಧವನ್ನು ಮುಂದುವರೆಸುತ್ತಿದ್ದರು.

ಚಿತ್ರದ ನಂಟು:

ಆದರೆ ಒಂದು ಹಂತದಲ್ಲಿ ತನಗಿಷ್ಟವಾಗುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳ ಬೇಕೆಂದು ವೃತ್ತಿಯನ್ನು ಬಿಟ್ಟು , ಮತ್ತೆ ಬಣ್ಣಗಳ ನಂಟಿಗೆ ಬೆಸುಗೆಯಾದರು.
ಚಿತ್ರ ಬರೆಯುವುದು ಶುರು ಮಾಡಿದ್ದು 3 ವರ್ಷದ ಮಗುವಾಗಿದ್ದಾಗ .

ಖಾಸಗಿ ವಾಹಿನಿಯ ಸೂಪರ್ ಸ್ಟಾರ್ ಆಫ್ ಕರ್ನಾಟಕ ಎಂಬ ರಿಯಾಲಿಟಿ ಶೋ ವಿಲಾಸ್ ಅವರನ್ನು ವೇದಿಕೆಗೆ ಪರಿಚಯಿಸಿದ್ದು, ಅಲ್ಲಿಂದ ಇಲ್ಲಿಯವರಗೂ ಕನ್ನಡ, ಹಿಂದಿ,ತಮಿಳು, ಬೆಂಗಾಲಿ, ತೆಲುಗು, ಹಿಂದಿ, ಇಂಗ್ಲೀಷ್ನ ಎಎಕ್ಸ್ಎನ್ ಚಾನೆಲ್ಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ವಿಲಾಸ್ ಅವರ ಚಿತ್ರಕಲೆಯ ವಿಶೇಷವೆಂದರೆ ಕೇವಲ ಎರಡು ಮೂರು ನಿಮಿಷಗಳಲ್ಲಿ ಚಿತ್ರ ಬಿಡಿಸುವುದು.ಕೆಲವೊಮ್ಮೆ ಯಾವುದೋ ಹಾಡು ಮುಗಿಯುವುದರೊಳಗೆ ಬಿಡಿಸಬೇಕಾಗುತ್ತದೆ.

ಅಬ್ದುಲ್ ಕಲಾಂ, ಸಚಿನ್ ತೆಂಡೂಲ್ಕರ್, ಫುಟ್ಬಾಲ್ ದಂತಕಥೆ ಪೀಲೆ ಅವರ ಚಿತ್ರಗಳನ್ನು ಅವರ ಮುಂದೆಯೇ ಅತಿ ವೇಗವಾಗಿ ಚಿತ್ರಿಸಿ ಅವರುಗಳಿಂದ ಮೆಚ್ಚುಗೆ ಗಳಿಸಿದ್ದಾರೆ, ಶಾರೂಕ್ ಖಾನ್ ಆಯೋಜಿಸಿದ್ದ ಇಂಡಿಯಾ ಗಾಟ್ ಟ್ಯಾಲೆಂಟ್ (India Got Talent) ಎಂಬ ಕಾರ್ಯಕ್ರಮದಲ್ಲು ಸೈ ಎನಿಸಿಕೊಂಡಿದ್ದಾರೆ.

ಸಾಮಾಜಿಕ ಬದ್ಧತೆ:

ಸುಮಾರು 20 ಮಿಲಿಯನ್ ಅಮೆರಿಕನ್ ಡಾಲರ್ನಷ್ಟು ಹಣ ಇವರ ಚಿತ್ರಕಲೆಗಳಿಂದ ಸಂಗ್ರಹಿತವಾಗಿ ಸಮಾಜ ಸೇವೆಗೆ ಬಳಕೆಯಾಗಿದೆ.

ಪ್ರಶಸ್ತಿ ಪುರಸ್ಕಾರಗಳು:

ಮಧುರೈನ ಜೆಸಿಐ ‘ಔಟ್ಸ್ಟ್ಯಾಂಡಿಂಗ್ ಯಂಗ್ ಪರ್ಸನ್ ಆಫ್ ಇಂಡಿಯಾ’ ಪ್ರಶಸ್ತಿ, ಕರ್ನಾಟಕ ಸರಕಾರ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಯುವ ಪುರಸ್ಕಾರ’, ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಪ್ರಶಸ್ತಿ ಹೀಗೆ ಸಾಕಷ್ಟು ಪುರಸ್ಕಾರಗಳು ವಿಲಾಸ್ ನಾಯಕ್ ಅವರ ಪ್ರತಿಭೆ ಸಂದಿವೆ.