ನಮ್ಮ ಕನ್ನಡದವರಾದ ಮಾಂತ್ರಿಕ ಚಿತ್ರಕಾರ ವಿಲಾಸ್ ನಾಯಕ್!!!

0
556
ನಿರ್ಜಿವ ಕಪ್ಪು ಹಲಗೆಯಲ್ಲಿ ಬಣ್ಣಗಳಿಂದ ಜೀವ ತುಂಬುವುದು ಕಷ್ಟದ ಕೆಲಸ ಈ ಕೆಲಸ ಎಲ್ಲರಿಗೂ ಬರುವುದಿಲ್ಲ. ಇದಕ್ಕಾಗಿ ಶ್ರಮದ ಅವಶ್ಯಕತೆ ಇದೆ. ಅದರಲ್ಲೂ ಗುರುವಿಲ್ಲದೆ ವಿದ್ಯ ಕರಗತವನ್ನು ಮಾಡಿಕೊಳ್ಳುವುದು ಕಷ್ಟದ ಕೆಲಸ. ತಪ್ಪುಗಳೆಂಬ ಮೆಟ್ಟಿಲನ್ನೇ ಏರಿ ಸಾಧನೆಯ ಶಿಖರವನ್ನು ಮುಟ್ಟಿದ ಸಾಧಕ ಕನ್ನಡದ ವಿಲಾಸ್ ನಾಯಕ್.
ಸುಮಾರು ಐದು ಅಡಿ ಕಪ್ಪು ಬೋರ್ಡ್ ಮೇಲೆ ಇವರು ಬಿಡಿಸುವ ಚಿತ್ರಗಳಿಗೆ ಸಾಧಕರೆ ಶಬ್ಬಾಸ್ ಎಂದಿದ್ದಾರೆ. ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಫುಟ್ಬಾಲ್ ಆಟಗಾರ ಬ್ರೆಜಿಲ್‌ನ ಪೀಲೆ ಇವರ ಕಲೆಗೆ ಬೆನ್ನು ತಟ್ಟಿ ಪ್ರೋತ್ಸಾಹವನ್ನು ನೀಡಿದ್ದಾರೆ. ಇವರು ತಮ್ಮ ಕಲೆಯ ಪ್ರದರ್ಶನ ಇತ್ತೀಚೀಗೆ ಅಮೆರಿಕದಲ್ಲಿ ನೀಡಿ ಸಭೀಕರಿಂದ ಬೆನ್ನು ತಟ್ಟಿಸಿಕೊಂಡವರು.
Image result for vilas nayak
ಐದು ಬಾರಿ ವಿಶ್ವ ಚಾಮಪಿಯನ್ ಬಾಸ್ಕೆಟ್‌ಬಾಲ್ ಆಟಗಾರ ಟಿಮ್ ಡಂಕನ್ ಅವರ ಚಿತ್ರವನ್ನು ಕೆಲವೇ ನಿಮಿಷಗಳಲ್ಲಿ ಕೆಂಪು, ಕಂದು, ಬಿಳಿ, ಕೇಸರಿ ಬಣ್ಣಗಳಿಂದ ಜೀವ ತುಂಬಿದ ಚಾಣಕ್ಯ ಪೇಂಟರ್ ಮಂಗಳೂರಿನ ವಿಲಾಸ್, ವಿದೇಶದಲ್ಲಿ ರಾಜ್ಯದ ಬಣ್ಣದ ಕಂಪನ್ನು ಪಸರಿಸಿದ್ದಾರೆ. ಇವರು ೨೩ ದೇಶಗಳಲ್ಲಿ ತಮ್ಮ ಕಲೆಯ ಪರಿಚಯ ನೀಡಿದ್ದಾರೆ. ವೇದಿಕೆ ಒಂದು ಸಿಕ್ಕರೆ ಸಾಕು ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಇವರು ತಿಳಿದುಕೊಂಡಿದ್ದಾರೆ. ಇವರಿಗೆ ಏಷ್ಯಾದ ಫಾಸ್ಟ್ ಪೇಂಟರ್ ಎಂಬ ಹೆಗ್ಗುರುತಿದೆ.
Image result for vilas nayak
ಟಿಮ್ ಡಂಕನ್ ಯಾರು? ಅಮೆರಿಕದ ಖ್ಯಾತ ಬಾಸ್ಕೆಟ್‌ಬಾಲ್ ಆಟಗಾರ ಟಿಮ್ ಡಂಕನ್. ೧೯ ವರ್ಷಗಳ ಕಾಲ ಟಿಮ್ ಡಂಕನ್ ಬಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ತಮ್ಮ ಛಾಪು ಮೂಡಿಸಿದವರು. ಸ್ಯಾನ್ ಆಂಟೋನಿಯೋ ಸ್ಟರ್ಸ್ ಪರ ಆಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಇವರು ಐದು ಬಾರಿ ವಿಶ್ವ ಚಾಂಪಿಯನ್ ಆಟಗಾರ.