ಬೆಂಗಳೂರು NH 7 ನಲ್ಲಿ ಎಲ್ಲ ಡ್ಯೂಕ್ ಬೈಕ್ ಸವಾರರನ್ನು ಹಿಡಿದು ಥಳಿಸುತ್ತಿದ್ದಾರೆ ಸ್ಥಳೀಯ ಜನ …!

1
546

ಇನ್ನುಮುಂದೆ ಈ ರಸ್ತೆಯಲ್ಲಿ ಡ್ಯೂಕ್ ಬೈಕ್ ಅಥವಾ ಇನ್ನಾವುದೇ ಸ್ಪೋರ್ಟ್ಸ್ ಬೈಕ್ ಓಡಿಸಿದರೆ ನಿಮಗೆ ಜನರಿಂದ ಏಟು ಬಿಳೋದಂತು ಖಚಿತವಂತೆ, ಹೀಗೊಂದು ಮಾಹಿತಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನೆಲ್ಲೆಡೆ ವೈರಲ್ ಆಗಿಬಿಟ್ಟಿದೆ. ಅಷ್ಟಕ್ಕೂ ಡ್ಯೂಕ್ ಬೈಕ್-ಗೆ, ಜನ ಓಡಿಯೋಕೆ ಏನು ಸಂಭಂದ ಅಂತೀರ ಮುಂದೆ ಓಡಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ರಾಷ್ಟ್ರೀಯ ಹೆದ್ದಾರಿ 7ರ ಬುಳ್ಳಹಳ್ಳಿ ಗೇಟ್ ಬಳಿ ತಂದೆಯೊಂದಿಗೆ ತೆರಳುತ್ತಿದ್ದ 11 ವರ್ಷದ ಅಂಜು ಎಂಬ ಬಾಲಕಿಗೆ ತುಂಬ ವೇಗವಾಗಿ ಬಂದ ಡ್ಯೂಕ್ ಬೈಕ್ ಡಿಕ್ಕಿ ಹೊಡೆದಿದೆ, ಬೈಕ್ ಅಷ್ಟು ರಭಸವಾಗಿ ಡಿಕ್ಕಿ ಹೊಡೆದ ಕಾರಣ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಬೆಂಗಳೂರಿನ ಜನ ವಾರಾಂತ್ಯದಲ್ಲಿ ಮತ್ತು ರಜಾ ದಿನಗಳಲ್ಲಿ ರೇಸಿಂಗ್ ಎಂದು ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ತಮ್ಮ ಸ್ಪೋರ್ಟ್ಸ್ ಬೈಕ್-ಗಳಿಂದ ಅತಿ ವೇಗದ ಚಾಲನೆ ಮಾಡುತ್ತಿದ್ದಾರೆ, ಇದೆ ಕಾರಣದಿಂದ ಇಲ್ಲಿ ಅಪಘಾತಗಳ ಸಂಖ್ಯೆ ತುಂಬ ಜಾಸ್ತಿ, ಈಗ ಚಿಕ್ಕ ಬಾಲಕಿಯ ಸಾವಿನಿಂದ ರೋಸಿ ಹೋದ ಗ್ರಾಮದ ಜನರು, ಬೈಕ್ ಸವಾರನನ್ನು ಹಿಡಿದು ಕಂಬಕ್ಕೆ ಕಟ್ಟಿ ಚೆನ್ನಾಗಿ ಹೊಡೆದಿದ್ದಾರೆ.

ಇನ್ನು ಈ ತರಹದ ಘಟನೆಯ ಬಗ್ಗೆ ಸರ್ಕಾರದ ಗಮನ ಸೆಳೆಯುವುದಕ್ಕೆ ಗ್ರಾಮಸ್ಥರು ರಾಷ್ಟೀಯ ಹೆದ್ದಾರಿ 7 ರಲ್ಲಿ ಕೆಲ ಗಂಟೆಗಳ ಕಾಲ ವಾಹನಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಈ ರಸ್ತೆಯ ಮೂಲಕ ಸಾಗುವ ಎಲ್ಲ ಡ್ಯೂಕ್ ಮತ್ತು ಇತರೆ ಸ್ಪೋರ್ಟ್ಸ್ ಮತ್ತು ಐಷಾರಾಮಿ ಬೈಕ್-ಗಳನ್ನು ಹಿಡಿದು ನಿಲ್ಲಿಸುತ್ತಿದ್ದಾರೆ.

ಇನ್ನು ರಾಷ್ಟೀಯ ಹೆದ್ದಾರಿ 7 ರಲ್ಲಿ ಡ್ಯೂಕ್ ಬೈಕ್-ಗಳನ್ನು ಹಿಡಿದು, ಬೈಕ್ ಸವಾರರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂಬ ವೀಡಿಯೊ ಮತ್ತು ಪೋಸ್ಟ್-ಗಳು ಸಾಮಾಜಿಕ ಜಾಲತಾಣ ಫೇಸ್ಬುಕ್-ನೆಲ್ಲೆಡೆ ಹರಿದಾಡುತ್ತಿವೆ.

ಆದರೆ ಚಿಕ್ಕ ಮಕ್ಕಳನ್ನು ರಸ್ತೆಯಲ್ಲಿ ಅದರಲ್ಲೂ ರಾಷ್ಟೀಯ ಹೆದ್ದಾರಿಯಲ್ಲಿ ಬಿಡುವುದು ಎಷ್ಟು ಸೂಕ್ತ, ಇನ್ನು ರಾಷ್ಟೀಯ ಹೆದ್ದಾರಿಯಲ್ಲಿ ದೊಡ್ಡವರಾಗಲಿ ಚಿಕ್ಕವರಾಗಲಿ ಜೀಬ್ರಾ ಕ್ರಾಸ್ ಬಳಸಿಯೇ ರಸ್ತೆ ದಾಟಬೇಕು, ಮತ್ತು ಒಬ್ಬ ಬೈಕ್ ಸವಾರ ಮಾಡಿದ ತಪ್ಪಿಗೆ ದಾರಿಯಲ್ಲಿ ಹೋಗುವ ಎಲ್ಲ ಬೈಕ್ ಸವಾರರನ್ನು ಹಿಡಿಯುವುದು ಎಷ್ಟು ಸರಿ. ಇನ್ನು ಬೈಕ್ ಸವಾರರು ಕೂಡ ಇದು ರೇಸಿಂಗ್-ಗಾಗಿ ಮಾಡಿದ ರಸ್ತೆಯಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಸರ್ಕಾರ ಮತ್ತು ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಂಡಾಗಲೇ ಇಂತಹ ಘಟನೆಗಳು ಮರುಕಳಿಸುವುದಿಲ್ಲ.