ಪ್ರವಾಹದಿಂದ ಪಾರು ಮಾಡಿ ಜೀವ ಉಳಿಸಿದ ವೀರಯೋಧರಿಗೆ ರಾಖಿ ಕಟ್ಟಿ ಕಣ್ಣೀರಿನ ವಿದಾಯ ಹೇಳಿದ ಸಂತ್ರಸ್ತರು.!

0
223

ರಾಜ್ಯದಲ್ಲಿ ಪ್ರವಾಹದ ಅಬ್ಬರಕ್ಕೆ ಜನರ ಜೀವನವೇ ನೀರಿನಲ್ಲಿ ಮುಳುಗಿ ಹೋಗಿದ್ದು, ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಪ್ರವಾಹದಲ್ಲಿದ ಜನರನ್ನು ಹೊರ ತೆಗೆಯಲು ಶ್ರಮಿಸಿದ ಎನ್​ಡಿಆರ್​ಎಫ್ ತಂಡಕ್ಕೆ ಎಷ್ಟೇ ಧನ್ಯವಾದವನ್ನು ಹೇಳಿದರು ಕಡಿಮೆಯಾಗಿದೆ. ತಮ್ಮ ಜೀವನವನ್ನು ಬದಿಗಿಟ್ಟು ಜನರನ್ನು ಬದುಕಿಸಿದ ಯೋಧರಿಗೆ ಚಿಕ್ಕಮಗಳೂರಿನ ಮೂಡಿಗೆರೆ ಗ್ರಾಮಸ್ಥರು, ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಕಣ್ಣೀರಿಟ್ಟು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟಿದ್ದಾರೆ. ಈ ವೇಳೆ ಸೈನಿಕರು ತಂದಿದ್ದ ಹಣ್ಣು, ಬಿಸ್ಕೆಟ್‍ಗಳನ್ನು ಸಂತ್ರಸ್ತರಿಗೆ ಹಂಚಿದ್ದಾರೆ.

@publictv.in

ಕಳೆದೊಂದು ವಾರದಿಂದ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಯ ಲಕ್ಷಾಂತರ ಜನ ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇಂಥ ವೇಳೆ ಎನ್‌ಡಿಆರ್‌ಎಫ್‌ ಮತ್ತು ಭಾರತೀಯ ಸೇನೆ ಸಕಾಲದಲ್ಲಿ ಆಗಮಿಸಿ ಲಕ್ಷಾಂತರ ಜನರನ್ನು ಅಪಾಯದಿಂದ ಪಾರು ಮಾಡಿತ್ತು.ರಕ್ಷಣಾ ಕಾರ್ಯ ಪೂರ್ಣಗೊಂಡ ಬಳಿಕ ಯೋಧರು ಸೋಮವಾರ ತಮ್ಮ ಸ್ವಸ್ಥಾನಗಳಿಗೆ ಮರಳಲು ಆರಂಭಿಸಿದ್ದಾರೆ. ಈ ವೇಳೆ ತಮ್ಮನ್ನು ಪ್ರಾಣಾಪಾಯದಿಂದ ಕಾಪಾಡಿದ್ದ ಯೋಧರಿಗೆ ರಾಖಿ ಕಟ್ಟಿಸೋದರಿಯರ ಪ್ರೀತಿ ತೋರಿದ ಸಾಂಗ್ಲಿಯ ಮಹಿಳೆಯರು, ಯೋಧರಿಗೆ ಆರತಿ ಬೆಳಗಿ ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ತಮ್ಮ ಜೀವ ಕಾಪಾಡಿದ ಯೋಧರಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಯೋಧರ ರಕ್ಷಣಾ ಕಾರ್ಯಾಚರಣೆ ನೋಡಿ ನೂರಾರು ಜನರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೆ ಇಂಡಿಯನ್ ಆರ್ಮಿ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ. ಸದ್ಯ ಮಿಲಿಟರಿ ಪಡೆ ಕಾರ್ಯಾಚರಣೆ ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಗ್ರಾಮಸ್ಥರು ಕಣ್ಣೀರು ಹಾಕುತ್ತಲೇ ಯೋಧರಿಗೆ ವಿದಾಯ ಹೇಳಿದ್ದಾರೆ. ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಗ್ರಾಮದ ಮಾರ್ಗ ಬಂದ್ ಆಗಿ ಕಳೆದ 6 ದಿನಗಳಿಂದ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 10ಕ್ಕೂ ಮಂದಿಯನ್ನು ಸೇನಾಪಡೆ ಸೋಮವಾರ ರಕ್ಷಣೆ ಮಾಡಿದೆ. ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆಯೇ ಹೊತ್ತು ಸಾಗಿಸುವ ಮೂಲಕ ತಂಡ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದಾರೆ. ಇದೆಲ್ಲವನ್ನು ನೋಡಿದ ಜನರು
ಗೌರವ ಪೂರಕವಾಗಿ ಯೋಧರನ್ನು ಕಳುಹಿಸಿದ್ದಾರೆ.

@publictv.in

ವಿರುಪಾಪುರಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 350 ಜನರನ್ನು ಕಾಪಾಡಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಎನ್​ಡಿಆರ್​ಎಫ್ ಕಮಾಂಡರ್​ಗಳು ಮುಂದಾಗಿದ್ದರು. ಆದರೆ, ಎನ್​ಡಿಆರ್​ಎಫ್ ತಂಡ ಈ ವೇಳೆ ಸ್ಥಳೀಯರನ್ನು ಕರೆತರಲು ಹೋದಾಗ ನೀರಿನ ರಭಸಕ್ಕೆ ಅವರ ಬೋಟ್ ಮರವೊಂದಕ್ಕೆ ಬಡಿದು ಮಗುಚಿಹೋಗಿದೆ. ಪರಿಣಾಮ ಅದರಲ್ಲಿದ್ದ ಚೇತನ್, ಗೌತಮ್, ನಾಗರಾಜ ಹಾಗೂ ಅಗ್ನಿಶಾಮಕ ದಳದ ಸೂಗನಗೌಡ ಸೇರಿದಂತೆ 5 ಜನ ಕಮಾಂಡರ್​ಗಳು ನೀರುಪಾಲಾಗಿದ್ದರು. ನೀರು ಪಾಲಾದ ಕಮಾಂಡರ್​ಗಳನ್ನು ರಕ್ಷಿಸಲು ಹೆಲಿಕಾಪ್ಟರ್ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಈ ನಡುವೆ ಕಮಾಂಡರ್ ಚೇತನ್ ಪ್ರವಾಹದ ನಡುವೆಯೂ ಸುಮಾರು 12 ಕಿ.ಮೀ ಈಜಿ ದಡ ಸೇರಿದ್ದಾರೆ. ನಡುಗಡ್ಡೆಯಲ್ಲಿ ಗಿಡವೊಂದರ ಆಶ್ರಯದಲ್ಲಿ ನಿಂತಿದ್ದ ಇವರನ್ನ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಇವರ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಉಳಿದ ನಾಲ್ವರನ್ನೂ ಸಹ ಹೆಲಿಕಾಪ್ಟರ್​ ಸಹಾಯದಿಂದ ರಕ್ಷಿಸಲಾಗಿದೆ.

Video credit: publictv.in