ಶಶಿಕಲಾ ಬಗ್ಗೆ ವೈರಲ್ ಆದ ಫೋಟೋ ನಿಜವಾದ ಕಥೆ!

0
5851

ಶಶಿಕಲಾ!!! ಈಗ ದೇಶಾದ್ಯಂತ ತುಂಬಾ ಪ್ರಚಾರದಲ್ಲಿರುವ ಹೆಸರು. ಜಯಲಲಿತಾ ಇರುವಷ್ಟು ದಿನ ಆಕೆಯ ಸುತ್ತ ಚಿಕ್ಕಮ್ಮನಂತೆ ತಮಿಳುನಾಡಿನ ಜನತೆಗೆ ಪರಿಚಯವಾಗಿದ್ದ ಈಕೆ, ಅಮ್ಮ ಮರಣದ ನಂತರ ಭಾರತಾದ್ಯಂತ ಪಾಪ್ಯುಲರ್ ಆಗಿದ್ದಾಳೆ. ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿರುವ ತಮಿಳುನಾಡಿನ ರಾಜಕೀಯ ಪಂದ್ಯದಲ್ಲಿ ಶಶಿಕಲಾ ಹೆಸರು ಮತ್ತಷ್ಟು ಪಾಪ್ಯುಲರ್ ಅಗಿದೆ. ಇದೇ ಸಮಯದಲ್ಲಿ ಒಂದು ಪೋಟೋ ವಾಟ್ಸಪ್, ಫೇಸ್ಬುಕ್’ನಲ್ಲಿ ಸಕತ್ ಸುದ್ದಿ ಮಾಡುತ್ತಿದೆ. ಐದು ವರ್ಷದ ಕೆಳಗೆ ಶಶಿಕಲಾದ ನಿಜ ಸ್ವರೂಪ ತಿಳಿದ ಜಯಲಲಿತಾ ಸ್ವತಃ ಜೈಲಿಗೆ ಕಳಿಸಿದ್ದಳು. ಆ ಸಂದರ್ಭದಲ್ಲಿ ಪೋಲೀಸರು ಶಶಿಕಲಾನ ಕತ್ತು ಹಿಡಿದು ಜೈಲಿಗೆ ಎಳೆದುಕೊಂಡು ಹೋಗುತ್ತಿರುವ ಪೋಟೋ ಎಂದು. ಈ ಪ್ರಸ್ತುತ ಸೋಷಿಯಲ್‌ ಮಿಡಿಯಾದಲ್ಲಿ ಸಾಕತ್ ಶೇರ್ ಆಗುತ್ತಿದೆ.

ವೈರಲ್ ಆಗಿರುವ ಮೊರ್ಫ್ ಫೋಟೋ :

ಇದು ದಂಡುಪಾಳ್ಯ ಸಿನಿಮಾದ ಒಂದು ದೃಶ್ಯ :

ಸತ್ಯ ಸಂಗತಿಯೆಂದರೆ ಇದು ಒಂದು ಮಾರ್ಫಿಂಗ್ ಪೋಟೋ. ದಂಡುಪಾಳ್ಯ ಸಿನಿಮಾದ ಒಂದು ದೃಶ್ಯದಲ್ಲಿ ಇರುವ ನಟಿ ಪೂಜಾ ಗಾಂಧಿಯ ಮುಖದ ಜಾಗದಲ್ಲಿ ಶಶಿಕಲಾ ಮುಖವನ್ನು ಮಾರ್ಫಿಂಗ್ ಮಾಡಿ ಬಿಟ್ಟಿದ್ದಾರೆ. ಪ್ರಸ್ತುತ ಶಶಿಕಲಾ ವಿಷಯ ಟ್ರೇಡಿಂಗ್’ನಲ್ಲಿ ಇರುವುದರಿಂದ ಈ ಪೋಟೋ ಒಮ್ಮೆಲೇ ಪುಲ್ ವೈರಲ್ ಆಗಿದೆ. ಪ್ರತಿಯೊಬ್ಬರು ಶೇರ್ ಮಾಡುತ್ತಿರುವುದು ಗಮನಾರ್ಹ.