ಕೋತಿ ಮರಿಗೆ ತಾಯಿಯಾಗಿ ಹಾಲುಣಿಸುವ ನಾಯಿ; ತನ್ನ ಮರಿಯಂತೆ ಬೆನ್ನಮೇಲೆ ಹೊತ್ತು ರಕ್ಷಣೆ ನೀಡುತ್ತಿರುವ ನಾಯಿಅಮ್ಮನ ವೀಡಿಯೊ ಫುಲ್ ವೈರಲ್..

0
443

ನಾಯಿ ಕೋತಿ ಆಗರ್ಭ ವೈರಿಗಳು ಒಂದನ್ನು ಕಂಡರೆ ಒಂದಕ್ಕೆ ಆಗುವುದಿಲ್ಲ, ಅದರಲ್ಲಿ ನಾಯಿಗೆ ಕೋತಿಯ ಮೇಲೆ ಏಕೆ ದ್ವೇಷ ಗೊತ್ತಿಲ್ಲ ಕೋತಿ ಗಿಡವೇರಿ ಕುಳಿತರೆ ನಾಯಿ ಅದನ್ನೇ ನೋಡುತ್ತಾ ಊಟ ವಿಲ್ಲದೆ ದಿನವಿಡೀ ಕುಳಿತ ಉದಾಹರಣೆಗಳು ಬಹಳಷ್ಟು ಇವೆ. ಜನರು ಕೂಡ ಮಂಗನ ಕಾಟ ತಪ್ಪಿಸಲು ನಾಯಿ ಚೂ ಬಿಡುವುದು ಸಾಮಾನ್ಯವಾಗಿದೆ. ಅದೇರೀತಿ ಈ ಎರಡು ಪ್ರಾಣಿಗಳು ಯಾವತ್ತು ವೈರಿಗಳೇ. ಒಂದು ವೇಳೆ ಕೋತಿ ರಾಜಿಯಾದರು ನಾಯಿ ರಾಜಿಯಾಗುವ ಮಾತಿಲ್ಲ. ಇಷ್ಟೊಂದು ದ್ವೇಷದಲ್ಲಿ ಕೋತಿಯ ಮರಿ ನಾಯಿಯ ಕೈಯಲ್ಲಿ ಸಿಕ್ಕರೆ ಏನಾಗುತ್ತೆ ಅಂತ ಗೊತ್ತೇ ಇದೆ.

ಅದರಂತೆ ಕೋತಿಗಳು ಹೆಚ್ಚಾಗಿ ಸಾಯಿಯುದು ಖಾಯಿಲೆ ಬಿಟ್ಟರೆ ನಾಯಿಯ ಕೈಯಲ್ಲಿ ಅಂತೆ. ಹಾಗಾದ್ರೆ ನಾಯಿಗೆ ಕೋತಿ ಸಿಕ್ಕರೆ ಸತ್ತೆ ಹೋಗುತ್ತೆ ಅಂತ ತಿಳಿದಿರುವ ಜನರಿಗೆ ಆಶ್ಚರ್ಯಿಯ ಘಟನೆಯೊಂದು ನಡೆದಿದೆ ಇದನ್ನು ಕೇಳಿದರೆ ಬಾಯಿಮೇಲೆ ಬೇರೆಲಿಟ್ಟುಕೊಳುವುದರಲ್ಲಿ ಸಂದೇಹವೇ ಇಲ್ಲ. ಹೋದು ನಾಯಿ ಕೋತಿ ಮರಿಗೆ ಹಾಲು ಉಣಿಸಿ ತನ್ನ ಮಗುವಂತೆ ಜೋಪಾನ ಮಾಡುವುದು ಜಗತ್ತಿನಲ್ಲಿ ಮೊದಲನೇಯದು ಅನಿಸುತ್ತೆ.

ಕೋತಿಮರಿಗೆ ನಾಯಿ ಅಮ್ಮ?

ಮಧ್ಯಪ್ರದೇಶದ ಹೋಷಂಗಾಬಾದ್​ ಜಿಲ್ಲೆಯ ಸಿಯೋನಿ ಕಾನ್ಸಿಕೇಡಿ ಗ್ರಾಮದಲ್ಲಿ ನಾಯಿಯೊಂದು ಕೋತಿ ಮರಿಯನ್ನು ಪೋಷಣೆ ಮಾಡುತ್ತಿರುವ ದೃಶ್ಯವೊಂದು ಸೆರೆಯಾಗಿದೆ. ಗ್ರಾಮಸ್ಥರೊಬ್ಬರು ಕೋತಿಗೆ ಹಾಲುಣಿಸುತ್ತಿರುವ ನಾಯಿಯ ದೃಶ್ಯವನ್ನು ಸಾಮಾಜಿಕ ತಾಣದಲ್ಲಿ ಹರಿಯ ಬಿಟ್ಟಿದ್ದು, ಇದೀಗ ವೈರಲ್​ ಆಗುತ್ತಿದೆ. ಆ ಊರಲ್ಲಿ ನಾಯಿಗಳ ಗುಂಪೊಂದು ನಮ್ಮ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಕೋತಿ ಮರಿಗಳ ಮೇಲೆ ದಾಳಿ ಮಾಡಿದವು. ನಂತರ, ಅದನ್ನು ನೋಡಿದ ಅದನ್ನು ನೋಡಿದ ರೂಬಿ, ಹೆಸರಿನ ನಾಯಿ ದಾಳಿ ಮಾಡಿದ ನಾಯಿಗಳನ್ನು ಓಡಿಸಿ ನಂತರ ಆ ಕೋತಿ ಮರಿಯನ್ನು ರಕ್ಷಿಸಿದೆ.

ಆದಾದ ನಂತರ ನಾಯಿ ಈ ಕೋತಿ ಮರಿಯನ್ನು ರಕ್ಷಣೆ ಮಾಡುವ ರೂಬಿ, ಕೋತಿ ಮರಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತೊಯ್ಯುತ್ತೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ, ಒಂದು ವೇಳೆ ಬೆನ್ನಿನ ಮೇಲೆ ಇಲ್ಲದಿದ್ದ ಪಕ್ಷದಲ್ಲೂ, ಅದನ್ನು ಗಮನಿಸುತ್ತಿರುತ್ತದೆ ಎಂದು ನಾಯಿಯ ಮಾಲೀಕ ಸುರೇಶ್‌ ಮಾಹಿತಿ ನೀಡಿದ್ದಾರೆ. ಘಟನೆ ನಡೆದು ಒಂದೂವರೆ ತಿಂಗಳು ಕಳೆದಿದ್ದರೂ, ನಾಯಿ – ಕೋತಿ ಮರಿ ಜೋಡಿ ನಮ್ಮ ಗ್ರಾಮದ ಕೇಂದ್ರಬಿಂದುವಾಗಿದೆ” ಎಂದು ರೂಬಿ ಮಾಲೀಕ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ.

ಈ ಅಪರೂಪದ ಬೀದಿನಾಯಿ – ಕೋತಿಯಾ ಜೋಡಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ಬಳಿಕ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಲ್ಲದೆ, ಹೋಷಂಗಾಬಾದ್ ಜಿಲ್ಲೆಯ ಸಿಯೋನಿ ಮಾಳ್ವಾ ನಗರದಲ್ಲೂ ಇದು ಚರ್ಚೆಗೆ ಗ್ರಾಸವಾಗಿದ್ದು, ಈ ಜೋಡೊಯನ್ನು ನೋಡಲು ಬೇರೆ ಗ್ರಾಮಗಳಿಂದಲೂ ಭೇಟಿ ನೀಡುತ್ತಿದ್ದಾರೆ. ಎಂದು ಸ್ಥಳಿಯರು ತಿಳಿಸಿದ್ದಾರೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ ಮೂಖ ಪ್ರಾಣಿಗಳಿಗೆ ಇರುವಷ್ಟು ಬುದ್ಧಿ ಮಾನವರಾದ ನಮಗೆ ಕಡಿಮೆಯಾಗುತ್ತ ಹೊರಟಿದೆ ಇದರಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯುತ್ತಿದ್ದಾರೆ.

Also read: ಗಂಡು ಮಗುವಿಗೆ ಜನ್ಮ ನೀಡಿದ ತೃತೀಯ ಲಿಂಗಿ; ತಾಯ್ತನ ಅನ್ನೋದು ಕೇವಲ ಹೆಣ್ಣಿಗೆ ಮಾತ್ರ ಸೀಮಿತವಲ್ಲ ಎನ್ನುವ ಕಾಲ ಬಂದಾಯಿತು..