ವಿಶ್ವಕಪ್ ಪಂದ್ಯದ ವೇಳೆ ಮಿಂಚಿದ 87 ವರ್ಷದ ಅಜ್ಜಿ; ಪಂದ್ಯ ಗೆದ್ದ ಕೂಡಲೇ ಅಜ್ಜಿಯತ್ತ ಓಡಿ ಹೋಗಿ ಆಶಿರ್ವಾದ ಪಡೆದು ಅಜ್ಜಿಯ ಕಿವಿಮಾತು ಕೇಳಿದ ಕೊಹ್ಲಿ!!

0
340

ನಿನ್ನೆ ನಡೆದ ವಿಶ್ವಕಪ್ ಭಾರತ- ಬಾಂಗ್ಲಾದೇಶ ಪಂದ್ಯದಲ್ಲಿ ಕ್ರಿಕೆಟ್ ಆಟಗಾರರಿಗಿಂತ ಹೆಚ್ಚು ವೀಕ್ಷಣೆ ಪಡೆದ 87 ರ ಹರಯದ ಅಜ್ಜಿಯ ಚಿಯರ್ ಹೇಗಿತ್ತು ಎಂದರೆ. 15 ವರ್ಷದ ಹುಡುಗಿಯರ ಕ್ರೆಜಿನಲ್ಲಿ ಅಜ್ಜಿ ಕುಣಿದು ಕುಪ್ಪಲಿಸಿದ್ದಾರೆ. ನೋಡಿದವರು ಅಜ್ಜಿಯ ಉತ್ಸಾಹ ಕಂಡು ತಂಡಕ್ಕೆ ಮತ್ತಷ್ಟು ಹುರಿದುಂಬಿಸುತ್ತಿದ್ದರು. ಹೀಗೆ ಪಂದ್ಯ ಮುಗಿಯಿವ ವರೆಗೆ ಅಜ್ಜಿಯನ್ನು ಕಂಡ ಭಾರತದ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪಂದ್ಯ ಗೆದ್ದ ಕೂಡಲೇ ಅಜ್ಜಿಯನ್ನು ಬೇಟಿ ಮಾಡಿ ಆಶಿರ್ವಾದ ಪಡೆದು ಅಜ್ಜಿಯ ಹೇಳಿದ ಕಿವಿ ಮಾತನ್ನು ಆಲಿಸಿದ್ದಾರೆ. ಸದ್ಯ ಅಜ್ಜಿ ಪಂದ್ಯಕ್ಕೆ ಚಿಯರ್ ಮಾಡಿ ಕುಣಿದು ಕುಪ್ಪಲ್ಲಿಸಿದ ವಿಡಿಯೋ ಬಾರಿ ಮೆಚ್ಚುಗೆ ಪಡೆದಿದೆ.

Also read: ಎರಡು ಮಕ್ಕಳ ತಾಯಿ; ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗಲು ಸಿದ್ದಳಾದ ‘ಪವರ್ ಲಿಫ್ಟರ್’ ಕವಿತಾ ದೇವಿ! ದೇಶಕ್ಕೆ ಮಾದರಿ..

ಹೌದು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಣಾಹಣಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕ್ಯಾಮೆರಾಗಳ ಗಮನ ಸೆಳೆದಿದ್ದ ಸುಮಾರು 87 ವರ್ಷದ ಅಜ್ದಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಮನವನ್ನೂ ಸೆಳೆದಿದ್ದಾರೆ. ಇಂದು ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ವೇಳೆ ಆಟಗಾರರ ಪ್ರದರ್ಶನಕ್ಕಿಂತ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ಕ್ಯಾಮೆರಾಗಳ ಗಮನ ಸೆಳೆದಿದ್ದ 87 ವರ್ಷ ವಯಸ್ಸಿನ ಚಾರುಲತಾ ಪಟೇಲ್ ಎಂಬ ಅಜ್ಜಿ ಇದೀಗ ದೇಶದ ತುಂಬೆಲ್ಲ ಮಿಂಚುತ್ತಿದ್ದಾರೆ.

ಅಜ್ಜಿಯ ಬಗ್ಗೆ ವಿರಾಟ್ ಹೇಳಿದ್ದು ಹೀಗೆ

ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಹಿರಿಯ ಅಭಿಮಾನಿ ಅವರ ಆಶೀರ್ವಾದ ಪಡೆಯುತ್ತಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಮಗೆ ಪ್ರೀತಿ ಹಾಗೂ ಬೆಂಬಲ ನೀಡಿದ್ದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ಮುಖ್ಯವಾಗಿ ಚಾರುಲತಾ ಅವರಿಗೆ ಧನ್ಯವಾದಗಳು. ಚಾರುಲತಾ ಅವರಿಗೆ 87 ವರ್ಷವಾಗಿದ್ದು, ನಾನು ನೋಡಿದ ಅತ್ಯಂತ ಡೆಡಿಕೇಟ್ ಫ್ಯಾನ್ಸ್ ಗಳಲ್ಲಿ ಇವರು ಒಬ್ಬರು. ವಯಸ್ಸು ಕೇವಲ ಒಂದು ಸಂಖ್ಯೆ. ಇವರ ಆಶೀರ್ವಾದ ಪಡೆದು ಮುಂದಿನ ಪಂದ್ಯದ ಕಡೆ ಹೋಗುತ್ತಿದ್ದೇವೆ” ಎಂದು ಪೋಸ್ಟ್ ಮಾಡಿದ್ದಾರೆ.

ಕ್ರಿಕೆಟ್ ವರ್ಲ್ಡ್ ಕಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅವರು ಹಿರಿಯ ಅಭಿಮಾನಿ ಚಾರುಲತಾ ಅವರನ್ನು ತಬ್ಬಿಕೊಳ್ಳುತ್ತಿರುವ ಫೋಟೋವನ್ನು ಹಾಕಿ, ಪ್ಲೇಯರ್ ಆಫ್ ದಿ ಮ್ಯಾಚ್ ರೋಹಿತ್ ಶರ್ಮಾ ತಮ್ಮ ಗೆಲುವನ್ನು ವಿಶೇಷ ಅಭಿಮಾನಿ ಜೊತೆ ಆಚರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ. ಅಲ್ಲದೆ ಚಾರುಲತಾ ಅವರು ಅಭಿಮಾನಿಗಳ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಕೂಡ ಟ್ವೀಟ್ ಮಾಡಿದ್ದಾರೆ.

ಟೀಂ ಇಂಡಿಯಾ ಕುರಿತು ಚಾರುಲತಾ ಕಿವಿಮಾತು?

ನಾನು ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆಯಿದೆ. ಅಲ್ಲದೆ ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದೆ. ಬಳಿಕ 1975ರಲ್ಲಿ ನಾನು ಇಲ್ಲಿಗೆ ಬಂದೆ. ನಾನು ತುಂಬಾ ಧಾರ್ಮಿಕ ವ್ಯಕ್ತಿ ಹಾಗೂ ನಾನು ದೇವರನ್ನು ತುಂಬಾ ನಂಬುತ್ತೇನೆ. ಗಣೇಶನನ್ನು ನಾನು ಪ್ರಾರ್ಥನೆ ಮಾಡಿದರೆ ಅದು ನಿಜವಾಗುತ್ತದೆ. ಭಾರತ ತಂಡ ಈ ಬಾರಿ ಪಕ್ಕಾ ವಿಶ್ವಕಪ್ ಗೆಲ್ಲುತ್ತದೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ನಾನು ಮೈದಾನದಲ್ಲೇ ಇದ್ದೆ. ಅವರು ವಿಶ್ವಕಪ್ ಗೆದ್ದಾಗ ನನಗೆ ತುಂಬಾ ಹೆಮ್ಮೆ ಆಯಿತು. ಅಲ್ಲದೆ ನಾನು ಖುಷಿಯಿಂದ ಡ್ಯಾನ್ಸ್ ಮಾಡಿದ್ದೆ. ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಡ್ಯಾನ್ಸ್ ಮಾಡುವುದಾಗಿ ನಾನು ನನ್ನ ಮೊಮ್ಮಗಳ ಬಳಿ ಹೇಳಿದೆ ಎಂದು ಹೇಳಿದರು.