ಸಾವಿನ ನಂತರವೂ ಒಂದಾಗಲಿದ್ದಾರೆ ಕನ್ನಡ ಚಿತ್ರರಂಗದ ದಿಗ್ಗಜರು; ಒಂದೇ ಜಾಗದಲ್ಲಿ ರಾಜ್, ವಿಷ್ಣು ಮತ್ತು ಅಂಬಿಯವರ ಸ್ಮಾರಕ!!

0
505

ಇಡಿ ಮನುಕುಲಕ್ಕೆ ಮಾದರಿಯಾದ ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹ ವರ್ಣಿಸಲು ಸಾಧ್ಯವಾಗದು ಇವರ ಸ್ನೇಹಕ್ಕೆ ಬೆಲೆಕಟ್ಟಲು ಆಗುತ್ತೆ? ಇಂತಹ ಮಹಾನ್ ನಟರನ್ನು ಕಳೆದುಕೊಂಡ ಕರ್ನಾಟಕದ ರಾಜ್ಯದ ಜನರಿಗೆ ಅನಾಥ ಪ್ರಜ್ಞೆ ಮೂಡಿದೆ. ವಿಷ್ಣುವರ್ಧನ್ ಮರಣದ ನಂತರ ಅಂಬಿ ಸ್ನೇಹಿತನನ್ನು ಕಳೆದುಕೊಂಡ ನೋವನ್ನು ಒಬ್ಬರೇ ಅನುಭವಿಸುತ್ತಿದರು. ಈಗ ಅಂಬಿ ಕೂಡ ತಮ್ಮ ಸ್ನೇಹಿತನ ಜಾಗಕ್ಕೆ ಹೋಗಿದ್ದು ಸಾವಿನ ನಂತರ ಮತ್ತೆ ಒಂದಾಗುತ್ತಾರೆ ಎಂಬ ಆಸೆಯು ಇಡಿ ಕರ್ನಾಟಕದ ಜನರಲ್ಲಿ ಮೂಡಿತ್ತು ಏಕೆಂದರೆ ಅಂಬರೀಶ್ ಗೆ ಒಂದು ಆಸೆಯಿತ್ತಂತೆ. ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ನಡೆದ ಜಾಗದಲ್ಲಿ ನನ್ನ ಅಂತ್ಯಕ್ರಿಯೆಯೂ ಆಗಬೇಕು ಎಂಬ ಬಯಕೆ ಇತ್ತಂತೆ. ಇದರಂತೆ ದಿಗ್ಗಜರ ಅಂತ್ಯಕ್ರಿಯೆ ಒಂದೇ ಕಡೆ ನಡೆಯಲಿಲ್ಲ ಎಂಬ ಬೇಸರದಲ್ಲಿದ ಅಭಿಮಾನಿಗಳಿಗೆ ರಾಜ್ಯಸರ್ಕಾರ ಮಹತ್ವದ ವಿಷಯ ಘೋಷಿಸಿದೆ.

Also read: ಹೊಸ ಸಿನೆಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿ ಧೂಳೆಬ್ಬಿಸುತ್ತಿರುವ ನಾಗರಹಾವು!!

ಹೌದು ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ಆಪ್ತಮಿತ್ರರು. ಬದುಕಿದ್ದಾಗ ಒಬ್ಬರನ್ನ ಬಿಟ್ಟು ಇನ್ನೊಬ್ಬರ ಇರದಂತೆ ಜೀವಿಸಿದ್ದರು. ಸ್ನೇಹಕ್ಕೆ ಮಾದರಿಯಾಗಿದ್ದರು. ಆದ್ರೆ, ಅಂಬಿಯನ್ನ ಬಿಟ್ಟು ವಿಷ್ಣು ವಿಧಿವಶರಾಗಿದ್ದರು. ಇದೀಗ, ಸ್ನೇಹಿತನನ್ನ ಬಿಟ್ಟು ಇರದ ಅಂಬಿ ಕುಚಿಕು ಬಳಿ ಹೋದರು. ಇಂತಹ ಸ್ನೇಹತರನ್ನು ಒಂದು ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಂಬರೀಶ್ ಅವರ ಸ್ಮಾರಕದ ಪಕ್ಕದಲ್ಲೇ ವಿಷ್ಣುವರ್ಧನ ಅವರ ಸ್ಮಾರಕವು ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ. ಇದರಿಂದ ವಿಷ್ಟು- ಅಂಬಿ ಇಬ್ಬರು ಒಂದಾಗುತ್ತಾರೆ ಎಂದು ಅಭಿಮಾನಿಗಳಿಗೆ ಎಲ್ಲಿಲ್ಲದ ಹರ್ಷಮೂಡಿದೆ.

ಅಂಬಿ ಆಸೆ ಏನಿತ್ತು?

Also read: ರಾಜ್ ಕುಟುಂಬ ಎಂದಿಗೂ ಆಡಂಬರಕ್ಕೆ ಮಣೆ ಹಾಕಿದವರಲ್ಲ, ರಸ್ತೆ ಬದಿ ಚಿತ್ರಾನ್ನ ತಿಂದು ಪುನೀತ್ ತಮ್ಮ ಸರಳತೆ ಮೆರೆದಿದ್ದಾರೆ..

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರ ನಡೆಯುತ್ತಿರುವಾಗ ಆ ಸ್ಥಳದಿಂದ ನೂರು ಅಡಿ ಹಿಂದೆ ಅಂಬಿ ಒಂದು ಮಾತು ಹೇಳಿದ್ರು. ”ಏನೋ ನನ್ನ ಬಿಟ್ಟು ಹೋಗ್ತಿದ್ದೀಯಾ ನೀನು, ಹೆಂಗೋ ಬಿಟ್ಟೋಗ್ತೀಯಾ ನೀನು.. ನಡಿ ನಾನು ಬರ್ತೀನಿ, ನಿನ್ನ ಬಿಟ್ಟು ಇರಲ್ಲ” ಅಂತ ಹೇಳಿದ್ರು. ಈಗ ಸ್ನೇಹಿತನನ್ನ ಬಿಟ್ಟು ಇರದ ಅಂಬಿ ಕುಚಿಕು ಬಳಿ ಹೋದರು. ಹಾಗೆಯೇ ಅಂಬರೀಶ್ ಗೆ ಒಂದು ಆಸೆಯಿತ್ತಂತೆ. ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ನಡೆದ ಜಾಗದಲ್ಲಿ ನನ್ನ ಅಂತ್ಯಕ್ರಿಯೆಯೂ ಆಗಬೇಕು ಎಂಬ ಬಯಕೆ ಇತ್ತಂತೆ.

ಅಭಿಮಾನಿಗಳ ಆಸೆ ಏನಿತ್ತು?

ವಿಷ್ಣುವರ್ಧನ್ ಅವರ ಸಮಾಧಿ ಆಗಿರುವ ಅಭಿಮಾನ್ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸಮಾಧಿಯಾಗಬೇಕು. ಇಬ್ಬರಿಗೂ ಒಟ್ಟಿಗೆ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಆಸೆಯನ್ನ ಅಭಿಮಾನಿಗಳು ವ್ಯಕ್ತಪಡಿಸಿದರು ಇದಕ್ಕೆ ಸಾಮಾಜಿಕ ಜಾಲತಾಣದಲ್ಲಂತೂ ಸಾವಿನಲ್ಲದಾರೂ ಅಂಬಿ-ವಿಷ್ಣುವನ್ನ ಒಂದಾಗಲು ಬಿಡಿ ಎಂದು ಹೆಚ್ಚಿನ ಕೂಗು ಕೇಳಿಬಂದಿತ್ತು. ವಿಷ್ಣು ಅವರನ್ನ ಒಬ್ಬಂಟಿ ಮಾಡಿ, ಉಳಿದ ಇಬ್ಬರ ಸ್ಮಾರಕ ಒಂದು ಕಡೆ ಮಾಡಲು ಮುಂದಾಗಿರುವುದಕ್ಕೆ ಅಭಿಮಾನಿಗಳಲ್ಲಿ ಬೇಸರ ತಂದಿತ್ತು.

ಜೊತೆಯಾಗಲಿದ್ದಾರ? ಚಿತ್ರರಂಗದ ತ್ರಿಮೂರ್ತಿಗಳು:

Also read: ಅಂಬರೀಶ್ ಪುತ್ರ ಅಭಿಷೇಕ್ ಹೀರೋ ಆಗಿ ಸ್ಯಾಂಡಲ್-ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ, ಜೂ. ರೆಬೆಲ್ ಸ್ಟಾರ್ ಕಾಲ್ ಶೀಟ್-ಗಾಗಿ ದೊಡ್ಡ ದೊಡ್ಡ ನಿರ್ಮಾಪಕರು ಕಾದು ಕುಳಿತ್ತಿದ್ದಾರಂತೆ…!

ಕನ್ನಡ ಚಿತ್ರರಂಗದಲ್ಲಿ ತ್ರಿಮೂರ್ತಿಗಳು ಎಂದು ಕರೆಯಿಸಿಕೊಳ್ಳುವ, ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಡಾ ಅಂಬರೀಶ್. ಈ ಮೂರು ಜನರ ಸ್ಮಾರಕಗಳನ್ನ ಒಂದೇ ಕಡೆ ಇರಲಿ ಎಂಬ ಚಿಂತನೆಯನ್ನ ಸರ್ಕಾರ ಮಾಡಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ ಸ್ಮಾರಕದ ಬಳಿಯೇ ಅಂಬಿ ಜೊತೆಗೆ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡುವ ಬಗ್ಗೆ ಯೋಚಿಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಈ ಘೋಷಣೆ ರಾಜ್ಯದ ತುಂಬೆಲ್ಲ ಮೆಚ್ಚುಗೆ ಪಡೆದಿದೆ.