ಅಭಿಮಾನಿಗಳಿಂದಲೇ ಡಾ ವಿಷ್ಣು ಸ್ಮಾರಕ

1
1201

ನಿರೀಕ್ಷೆ ಹುಸಿಯಾಯಿತು! ನೋವು ಹೆಚ್ಚಾಯಿತು! ಅಭಿಮಾನದ ಅಗ್ನಿಪರೀಕ್ಷೆಗೆ ಕಾಲ ಕೂಡಿಬಂದಾಯ್ತು!!.

ಹದಿನಾಲ್ಕು ದಿವಸಗಳ ಹೋರಾಟ ಮಾಡಿದ್ವಿ. ಮುಖ್ಯಮಂತ್ರಿಗಳಿಗೆ ನಾಲ್ಕೈದು ಸಲ ಮನವಿ ಮಾಡಿದ್ವಿ. ಟೌನ್ ಹಾಲ್ನಿಂದ ಫ್ರೀಡಂಪಾರ್ಕವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದ್ವಿ. ಇವು ಸಾಲುತ್ತಿಲ್ಲವೆಂದು ತಿಳಿದು ರಕ್ತದಲ್ಲಿ ಪತ್ರ ಬರೆದ್ವಿ. ಒಟ್ಟಿನಲ್ಲಿ ಜೀವತ್ಯಾಗ ಮಾಡೋದು ಬಿಟ್ಟು ಡಾ.ವಿಷ್ಣು ಸ್ಮಾರಕಕ್ಕಾಗಿ ಎಲ್ಲವನ್ನೂ ಮಾಡಿದ್ವಿ. ಆದ್ರೆ ಇವ್ಯಾವು ಕೂಡ ಸಂಬಂಧಿಸಿದವರ ಮೇಲೆ ನಿರೀಕ್ಷಿತ ಪರಿಣಾಮ ಬೀರಲೇ ಇಲ್ಲ. ಏಕೆಂದರೆ ಅವರವರ ಲೆಕ್ಕಾಚಾರಗಳು ಅವರಿಗಿದ್ದವು!! ಆ ಲೆಕ್ಕಾಚಾರಗಳೇನು ಅಂತೀರಾ!!

1ನೇ ಲೆಕ್ಕಾಚಾರ ಏನು ಅಂದರೆ ರಾಜಕಾರಣಿಗಳ ಭೂಮಿಗೆ ಬೆಲೆ ತಂದುಕೊಡುವುದು. ಹೌದು ವಿಷ್ಣು ಸ್ಮಾರಕ ಮೈಸೂರಿನಲ್ಲಾಗುತ್ತಿರುವುದರ ಹಿಂದಿನ ಬಹಳ ಪ್ರಮುಖ ಉದ್ದೇಶ ಆ ಸುತ್ತಮುತ್ತಲ ಜಾಗದ ಮೌಲ್ಯವನ್ನು ಹೆಚ್ಚಿಸುವುದು. ಬೇಕಾದ್ರೆ ಈಗ ಮೈಸೂರಿನಲ್ಲಿ ಸ್ಮಾರಕವಾಗ್ತಿರೋ ಜಾಗದಿಂದ ಮೂರ್ನಾಲ್ಕು ಕಿ.ಮಿ. ರೇಡಿಯೇಷನ್ನಿನಲ್ಲಿ ಯಾವ ಯಾವ ರಾಜಕಾರಣಿಗಳ ಎಷ್ಟೆಷ್ಟು ಜಮೀನಿದೆ ಎಂದು ಸುಮ್ನೆ ಒಂದು ಸರ್ವೇ ಮಾಡಿ ನೋಡಿ ನಿಮಗೆ ಶಾಕ್ ಆಗಿಬಿಡುತ್ತದೆ. ಡಾ. ವಿಷ್ಣು ಸ್ಮಾರಕ ಸ್ಥಳಾಂತರವಾದುದರ ಹಿಂದಿನ ಅಸಲಿಯತ್ತು ಮನದಟ್ಟಾಗುತ್ತದೆ. ಸ್ಮಾರಕವನ್ನು ವ್ಯಾಪರೀಕೇಂದ್ರವನ್ನಾಗಿಸಿದವರ ಮುಖವಾಡ ಕಳಚಿ ಬೀಳುತ್ತದೆ.

2ನೇ ಲೆಕ್ಕಾಚಾರ ಏನು ಅಂದರೆ “ಯಾವುದೇ ಕಾರಣಕ್ಕೂ ಡಾ.ವಿಷ್ಣು ಅವರ ಸ್ಮಾರಕ ಬೆಂಗಳೂರಿನಲ್ಲಿ ಆಗಬಾರದು” ಎಂಬ ವ್ಯವಸ್ಥಿತ ಷಡ್ಯಂತ್ರ. ಬದುಕಿದ್ದಾಗ ನೋವು ಕೊಟ್ಟವರು, ಸಾವಲ್ಲೂ ತಮ್ಮ ಪ್ರತಾಪ ಶುರುಮಾಡಿಕೊಂಡಿದ್ದಾರೆ. ಆ ಒಂದು ಕಾರಣಕ್ಕಾಗಿಯೇ ಅಭಿಮಾನ್ ಸ್ಟುಡಿಯೋದ ಜಾಗ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಾ ಹೋಗಿದ್ದು. ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಜಮೀನು ನೀಡಲು ಒಪ್ಪಿಗೆ ಕೊಟ್ಟವರು, ನಂತರ ಕೋರ್ಟಿನಲ್ಲಿ ತಡೆಯಾಜ್ಞೆ ತಂದದ್ದರ ಹಿಂದೆ ಕೂಡ ಈ ಷಡ್ಯಂತ್ರಿಗಳ ಕೈವಾಡವಿದೆ.

ಇನ್ನು 3ನೇ ಲೆಕ್ಕಾಚಾರ ಹೇಳೋಣವಾ ಬೇಡವಾ ಎಂಬ ಗೊಂದಲ ನನ್ನದು. ಏಕೆಂದರೆ ಅದು ಬಹಳ ನೋವಿನ ವಿಷ್ಯವಾಗಿದೆ. ಅದನ್ನು ಹೇಳಿ ಬೀದಿರಂಪ ಮಾಡೋಕೆ ಮನಸಾಗುತ್ತಿಲ್ಲ!! ಅವರವರ ಪಾಪ ಅವ್ರು ಅನುಭವಿಸಲಿ.

ಇಷ್ಟೆಲ್ಲಾ ಲಾಭಗಳ, ಷಡ್ಯಂತ್ರಗಳ ಮತ್ತು ಪ್ರತಿಷ್ಠೆಗಳ ಕಾರಣಕ್ಕೆ ಡಾ.ವಿಷ್ಣು ಎಂಬ ಸಾಧು ಸಾಧಕ ಇನ್ನಿಲ್ಲದ ನೋವನ್ನು ಅನುಭವಿಸುತ್ತಿದ್ದಾರೆ. ಅತ್ಯಂತ ನೋವಿನ ವಿಷಯವೇನೆಂದರೆ ಬದುಕಿದ್ದಾಗ ವಿಷ್ಣುದಾದಾ ಅನುಭವಿಸಿದ ನೋವಿಗಿಂತ ಹೆಚ್ಚು ನೋವನ್ನು ವಿಧಿವಶರಾದ ಮೇಲೆ ಅನುಭವಿಸುತ್ತಿದ್ದಾರೆ!! ಲೆಕ್ಕಾಚಾರಗಳಿಗೆ ಬಲಿಪಶುವಾಗುತ್ತಿದ್ದಾರೆ.

ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರೋಕಾಗಲ್ಲ!
ಹೌದು ಈ ಲೆಕ್ಕಾಚಾರಗಳಿಗೆ ತಿರುಗೇಟು ನೀಡಲೇಬೇಕು. ಅದಕ್ಕಾಗಿ ನಾನು ಮತ್ತು #ವಿಎಸ್ಎಸ್ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಬೆಂಗಳೂರಲ್ಲಿ ಡಾ.ವಿಷ್ಣು ಅವರ ಪರ್ಯಾಯ ಸ್ಮಾರಕ ನಿರ್ಮಿಸಿಯೇ ಸಿದ್ದ ಎಂಬುದು ಆ ನಿರ್ಧಾರ. ಇನ್ನು ಮೇಲೆ ಸ್ಮಾರಕ ಇಲ್ಲೇ ಮಾಡಿ ಅಂತ ಯಾರ ಹತ್ತಿರವೂ ಬಿಕ್ಷೆ ಕೇಳಲ್ಲ. ಹೋರಾಟವೂ ಮಾಡಲ್ಲ. #ಅಭಿಮಾನಿಗಳಿಂದಲೇ_ಡಾ_ವಿಷ್ಣು_ಸ್ಮಾರಕ ಎಂಬ ಅಭಿಯಾನ ಶುರುಮಾಡಿ, ರಾಜಧಾನಿಯಲ್ಲಿ ಸ್ಮಾರಕ ನಿರ್ಮಿಸಿಯೇ ತೀರುತ್ತೇವೆ.

ಆ ಮೂಲಕ “ಅಭಿಮಾನಿಗಳಿಂದಲೇ ಸ್ಮಾರಕ ನಿರ್ಮಿಸಿಕೊಂಡ ಭಾರತದ ಏಕೈಕ ಕಲಾವಿದ ಡಾ ವಿಷ್ಣುವರ್ಧನ್” ಎಂಬ ದಾಖಲೆಯನ್ನು ವಿಷ್ಣುದಾದಾ ಹೆಸರಲ್ಲಿ ಬರೆಯುತ್ತಿದ್ದೇವೆ.

ಈ ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲಬೇಕು. ಕನಿಷ್ಠ 2000 ಜನರ ಒಂದು ತಂಡಬೇಕು. ಈ ಸಂದೇಶವನ್ನು ಎಷ್ಟು ಸಾಧ್ಯವೋ ಅಷ್ಟು ಷೇರ್ ಮಾಡಿ. ತಮ್ಮ ಸ್ನೇಹಿತರನ್ನು ಈ ತಂಡದ ಭಾಗವಾಗಿಸಿ. ಸದಸ್ಯರಾಗಲು ಇಚ್ಚಿಸುವವರು ತಮ್ಮ ಫೋನ್ ನಂಬರಿಂದ 9036001147 ನಂಬರಿಗೆ ಒಂದು ಮಿಸ್ಡ್ ಕಾಲ್ ಕೊಡಲು ಹೇಳಿ. ನೆನಪಿರಲಿ ಬರೀ ಮಿಸ್ಡ್ ಕಾಲ್ ಮಾತ್ರ. ನಿಮ್ಮ ಮಿಸ್ಡ್ ಕಾಲ್ ಬಂದ ಕೆಲವೇ ದಿನಗಳಲ್ಲಿ ನಾವೇ ನಿಮ್ಮನ್ನು ಸಂಪರ್ಕಿಸಿ, #ಅಭಿಮಾನಿಗಳಿಂದಲೇ_ಡಾ_ವಿಷ್ಣು_ಸ್ಮಾರಕ ಅಭಿಯಾನದ ಸಂಪೂರ್ಣ ವಿವರ ಕೊಡುತ್ತೇವೆ. ಸರ್ಕಾರದಿಂದ ನಿರ್ಮಾಣವಾಗುತ್ತಿರುವ ವ್ಯಾಪಾರೀಕೇಂದ್ರಕ್ಕಿಂತ ಒಂದು ಗುಲಗಂಜಿ ತೂಕವಾದರೂ ಹೆಚ್ಚು ಮೌಲ್ಯದ ಸ್ಮಾರಕವನ್ನು ನಾವೇ ನಿರ್ಮಿಸೋಣ.

ನೋವು, ಅವಮಾನಗಳಿಗೆ ಅಂಜಿ ಹಿಂದೆ ಸರಿದವರು ಹೇಳ ಹೆಸರಿಲ್ಲದಂತಾಗುತ್ತಾರೆ!
ಮೆಟ್ಟಿ ನಿಂತವರು ಚರಿತ್ರೆ ಬರೆಯುತ್ತಾರೆ!! ದಾದಾ ಅಭಿಮಾನಿಗಳು ಚರಿತ್ರೆ ಬರೆಯುವ ಕಾಲವಿದು!!!

ಬನ್ನಿ ಜೊತೆಯಾಗಿ.. ಇಂದಿಲ್ಲದಿದ್ದರೆ ಮತ್ತೆಂದೂ ಇಲ್ಲ.

ನಿಮ್ಮ
ವೀರಕಪುತ್ರ ಶ್ರೀನಿವಾಸ
ರಾಜ್ಯಾಧ್ಯಕ್ಷರು (ಡಾ.ವಿಷ್ಣು ಸೇನಾ ಸಮಿತಿ)