ಇದೇ ಮೊದಲಬಾರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಆಚರಣೆ

0
963

ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ನ ಮುಖ್ಯ ಕಚೇರಿ ಹೊತಭಾಗದಲ್ಲಿ ದೀಪಾವಳಿ ಶುಭಾಶಯ ಕೋರುವ ಸಂದೇಶ ಪ್ರಸರ್ಶಿಸಲಾಯಿತು.

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಇದು ಒಂದು ಉದಾಹರಣೆ ಎನ್ನಲಾಗುತ್ತದೆ. 2014ರಲ್ಲಿ ಮಾನ್ಯತೆ ದೊರೆಕಿದ ಬಳಿಕ ಇದೇ ಪ್ರಪ್ರಥಮ ಬಾರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗಿದೆ. ಹ್ಯಾಪಿ ದಿವಾಳಿ. ವಿಶ್ವಸಂಸ್ಥೆಯಲದಲಿ ಪ್ರಪ್ರಥಮ ಬಾರಿಗೆ ದೀಪಾವಳಿಯನ್ನು ಆಚರಿಸಲಾಯಿತು. ಇದಕ್ಕಾಗಿ ವಿಶ್ವಸಂಸ್ಥೆ ಅಧ್ಯಕ್ಷರಿಗೆ ಧನ್ಯವಾದಗಳು. ವಿಶ್ವಸಂಸ್ಥೆಯಲ್ಲಿ ದೇಶವನ್ನು ಪ್ರತಿವಿಧಿಸುವುದು ನನ್ನ ಸುಯೋಗ ಮತ್ತು ನನಗೆ ದೊರೆತ ಗೌರವವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾತತದ ಖಾಯಂ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ದೀಪಾವಳಿಯನ್ನು ಐಚ್ಛಿಕ ರಜೆ ಎಂದು ವಿಶ್ವಸಂಸ್ಥೆ ಘೋಷಿಸಿದ್ದು ವಿಶ್ವಸಂಸ್ಥೆಯ ನ್ಯೂಯಾರ್ಕ್ ಕಟ್ಟಡದಲ್ಲಿ ‘ಹ್ಯಾಪಿ ದಿವಾಲಿ’ ಎಂಬ ಸಂದೇಶವನ್ನು ಪ್ರದರ್ಶಿಸಲಾಗಿದೆ.

ಒಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಆಚರಣೆಯೂ ವಿಶ್ವದಲ್ಲಿ ಭಾರತದ ನಿಲುವು ಹಾಗೂ ಸಂಬಂಧ ವೃದ್ಧಿಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.