ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹೊಸ ರೂಪ

0
545

ಮ್ಯೂಸಿಯಂಮ ಇಡೀ ಚಿತ್ರಣ ‘ಡಿಜಿಟಲೈಜೇಷನ್ ಆಫ್ ಗ್ಯಾಲರಿ’ ಆ್ಯಫ್ ನಲ್ಲಿ ಲಭ್ಯ

ವಿಶ್ವದ ಮಾಹಿತಿ ಕಣಜವನ್ನೇ ಒಡಲಲ್ಲಿ ಹೊತ್ತಿರುವ ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಗ್ಯಾಲರಿಗಳು ಆಧಿನಿಕ ಸ್ಪರ್ಶದೊಂದಿಗೆ ವೀಕ್ಷಕರನ್ನು ಸೆಳೆಯುತ್ತಿವೆ. ವಿಜ್ಞಾನದ ವಿಸ್ಮಯಗಳನ್ನು ಬಿಂಬಿಸುವ ಹಲವು ಅಪರೂಪದ ಆವಿಷ್ಕಾರಗಳೊಂದಿಗೆ ದೇಶದ ಎರಡನೇ ಅತ್ಯುತ್ತಮ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೇಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಮ್ಯೂಸಿಯಂನಲ್ಲಿ ಯಾಂತ್ರಿಕ ಕೈಶಾಲೆ, ಡೈನೊಸರ್ ಗ್ಯಾಲರಿ, ಜೈವಿಕ ತಂತ್ರಜ್ಞಾನ ಗ್ಯಾಲರಿ, ಸ್ಪೇಸ್ ಗ್ಯಾಲರಿ; ಬಿಇಎಲ್ ಎಲೆಕ್ಟ್ರಾನಿಕ್ ಗ್ಯಾಲರಿ, ಫನ್ ಸೈನ್ಸ್, ಎಲೆಕ್ಟ್ರಾನಿಕ್ ಗ್ಯಾಲರಿ, ವಿಜ್ಞಾನ, ಪರಿಸರ ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಹಲವು ವಿನ್ಯಾಸಗಳು ಸಂಪೂರ್ಣ ಹಾಳಾಗಿದ್ದವು. ಇವೆಲ್ಲವನ್ನೂ ದುರಸ್ತಿಪಡಿಸುವುದರ ಜತೆಗೆ ಹೊಸ ಮಾದರಿಯ ವಿನ್ಯಾಸಗಳನ್ನೂ ಅಳವಡಿಸಲಾಗಿದೆ. ಮ್ಯೂಸಿಯಂನ ಇಡೀ ಚಿತ್ರಣವನ್ನು ಮೊಬೈಲ್ ನಲ್ಲೇ ವಿವರಿಸುವ ಆಡಿಯೋ ಗೈಡ್ ಉಳ್ಳ ‘ಡಿಜಿಟಲೈಜೇಷನ್ ಆಫ್ ಗ್ಯಾಲರಿ’ ಎಂಬ ನೂತನ ಆ್ಯಪ್ ಅಭೊವೃದ್ಧಪಡಿಸಲಾಗಿದೆ. ಈ ಆ್ಯಪ್ ಮೂಲಕ ಕನ್ನಡ, ಇಂಗ್ಲೀಷ್, ಹಿಂದಿ ಹೀಗೆ ತಮಗೆ ಬೇಕಾದ ಭಾಷೆಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.

ರೋಬೋಟ್ ಪ್ರದರ್ಶನ ಮೋಡಿ

ಗೋಳದ ಮೇಲೆ ವಿಜ್ಞಾನದ ಮಾದರಿಯು ವಿಶೇಷವಾಗಿದೆ. ಇದನ್ನು ದೇಶದಲ್ಲಿಯೇ ಮೊದಲ ಬಾರಿಗೆ ನಿರ್ಮಿಸಲಾಗಿದ್ದು. ಪ್ರತಿದಿನ ನಾಲ್ಕು ಪ್ರದರ್ಶನಗಳಿರುತ್ತವೆ, ನೂತನವಾಗಿ ರೋಬೋಟ್ ಪ್ರದರ್ಶನ ವಿಂಗ್ ಅನ್ನು ರೋಪಿಸಲಾಗಿದೆ. ಇಲ್ಲಿ ಮೂರು ರೋಬೋಟ್ ಗಳಿದ್ದು, ಮಾನವನ ನಾನಾ  ರೀತಿಯ ವ್ಯಾಯಾಮದ ಭಂಗಿಗಳು ಹಾಗೂ  ಇತರ ಕಾರ್ಯ ಚಟುವಟಿಕೆಗಳನ್ನು ಈ ರೋಬೋಟ್ ಗಳು ಪ್ರದರ್ಶಿಸುತ್ತವೆ.

ಲಿಟರ್ ಡಾಲ್ಫಿನ್ ಶೋ

ವಸ್ತು ಸಂಗ್ರಹಾಲಯದ ಮೊದಲ ಮಹಡಿಯಲ್ಲಿ ಈ ಹಿಂದೆ ಡೈನೋಸಾರ್ ಗಳ ತ್ರಿಡಿ ಪ್ರಸರ್ಶನ ನಡೆಯುತ್ತಿತ್ತು. ಈ ಬಾರಿ ಲಿಟರ್ ಡಾಲ್ಫಿನ್ ಗಳ ತ್ರಿಡಿ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದು ಈ ವರ್ಷವಿಡೀ ನಡೆಯುತ್ತದೆ.

ಸ್ಪೇಸ್ ಗ್ಯಾಲರಿ ನವೀಕರಣ

ಎರಡನೇ ಮಹಡಿಯ ಬಲಬದಿಯಲ್ಲಿರುವ ಸ್ಪೇಸ್ ಗ್ಯಾಲರಿಯ ನವೀಕರಣ ಕಾರ್ಯ ನಡೆಯುತ್ತಿದ್ದು. ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳ್ಳಲಿದೆ, ಸ್ಪೇಸ್ ಗ್ಯಾಲರಿಯಲ್ಲಿ ಇದೀಗ ಪ್ಲೈಟ್ ಮೆಕ್ಯಾನಿಕ್, ಭೂ ಸ್ಥಾಯಿ ಉಪಗ್ರಹಮ ಭಾರತೀಯ ದೂರ ಸಣವೇದಿ ಕೇಂದ್ರ (ಐಆರ್ ಎನ್- 1ಸಿ). ಆರ್ಯಭಟ, ಭಾಸ್ಕರಗಳ ಮಾದರಿ, ಪಿಎಸ್ ಎಲ್ ವಿ ಉಷ್ಣಫಲಕ, ಉಪಗ್ರಹ ವಾಹಕದಲ್ಲಿ ಪಯಣಿಸುವವನ ವೇಷ ಇವೆ. ಇದರ ಜೊತೆಗೆ ನವೀಕರಣದ ವೇಳೆ ಹೊಸದಾಗಿ ಉಡಾವಣೆಯಾದ ರಾಕೆಟ್ ಗಳು, ಆರ್ಬಿಟ್ಸ್, ರಾಕೆಟ್ ಉಡಾವಣೆ ಕೇಂದ್ರ ಹಾಗೂ ಆರಂಭದಿಂದ ಈವರೆಗಿನ ಉಪಗ್ರಹಗಳ ಸಂಪೂರ್ಣ ಚಿತ್ರಣ ಸ್ಪೇಸ್ ಗ್ಯಾಲರಿಯಲ್ಲಿರಲಿದೆ.