ಮುಂದಿನ ಚುನಾವಣೆಗೆ ನಿಮ್ಮ ಹೆಸರನ್ನು ವೋಟರ್ ಲಿಸ್ಟ್-ಗೆ ಸೇರಿಸಲು ಇನ್ನು ಕೆಲವೇ ದಿನಗಳು ಬಾಕಿ ಇದೆ.. ವೋಟರ್ ಲಿಸ್ಟ್ -ಗೆ ನಿಮ್ಮ ಹೆಸರು ಹೇಗೆ ಸೇರಿಸಬೇಕು?? ಮುಂದೆ ಓದಿ…

0
498

ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ, ಇನ್ನು ಈ ವರ್ಷ ಕೆಲವು ಪ್ರಾದೇಶಿಕ ಪಕ್ಷಗಳು ಚುನಾವಣೆಗೆ ಸ್ಪರ್ಧಿಸುತ್ತಿರುವುದು, ಕುತೂಹಲ ಮೂಡಿಸಿದೆ. ಚುನಾವಣೆಗೆ ರಾಜಕೀಯ ಪಕ್ಷಗಳಂತೆಯೇ ನಾವು ಅಂದ್ರೆ ಮತದಾರರು ಸಿದ್ಧವಾಗೋದು ಬೇಡವೆ, ಅರೆ ನಾವೇನು ರೆಡಿ ಆಗೋದು ಕಣ್ರೀ ಅಂತೀರ, ಮುಂದೆ ಓದಿ ಗೊತ್ತಾಗುತ್ತೆ.

2018 ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಅಥವಾ ಅಳಿಸಿಹಾಕುವದಕ್ಕೆ ಇದೆ ಡಿಸೆಂಬರ್ 29 ಕೊನೆಯ ದಿನವಾಗಿದೆ. ಈಗಾಗಲೇ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಎಲ್ಲಾ ಜಿಲ್ಲೆಯ DC ಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಮತ್ತು ಇವು ಈಗಾಗಲೇ ನಿಮ್ಮ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಅಥವಾ ಮುನ್ಸಿಪಲ್ ಆಫೀಸ್-ಗಳಿಗೆ ತಲುಪಿವೆ.

ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸೋಕೆ ಚುನಾವಣಾ ಇಲಾಖೆಯ ಫಾರಂ ನಂಬರ್.6 ಅನ್ನು ತುಂಬಾ ಬೇಕು ಇದರಲ್ಲಿ ನಿಮ್ಮ ಹೆಸರು, ವಿಳಾಸ, ಮತ ಕ್ಷೇತ್ರ, ತಂದೆ/ತಾಯಿ/ಪತಿ ಹೆಸರು, ಹುಟ್ಟಿದ ದಿನಾಂಕ, ಮನೆಯಲ್ಲಿ ಇರುವ ಮತದಾರರ ಹೆಸರು ಅವರ ಐಡಿ ನಂಬರ್ ಮತ್ತು ಅವರ ನಿಮ್ಮ ಸಂಭಂದ, ಪಿನ್ ಕೋಡ್ ತುಂಬಿ ಹತ್ತಿರದ ಮತ ಕಚೇರಿಯಲ್ಲಿ ಸಹಿ ಮಾಡಿಸಿ ತಹಶೀಲ್ದಾರ ಕಚೇರಿಗೆ ತಲುಪಿಸಬೇಕು.

ಇನ್ನು ನಿಮ್ಮ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆಯಲು ಚುನಾವಣಾ ಇಲಾಖೆಯ ಫಾರಂ ನಂಬರ್.7 ಅನ್ನು ತುಂಬಾ ಬೇಕು ಇದರಲ್ಲಿ ನಿಮ್ಮ ಹೆಸರು, ವಿಳಾಸ, ಮತ ಕ್ಷೇತ್ರ, ತಂದೆ/ತಾಯಿ/ಪತಿ ಹೆಸರು, ಹುಟ್ಟಿದ ದಿನಾಂಕ, ಹಳೆಯ ಮತದಾರರ ಪಟ್ಟಿಯಲ್ಲಿಯ ನಿಮ್ಮ ಕ್ರಮ ಸಂಖ್ಯೆ, ಪಿನ್ ಕೋಡ್ ಮತ್ತು ನಿಮ್ಮ ಹೆಸರನ್ನು ಕೈಬಿಡಲು ಕಾರಣವನ್ನು ತುಂಬಿ ಹತ್ತಿರದ ಮತ ಕಚೇರಿಯಲ್ಲಿ ಸಹಿ ಮಾಡಿಸಿ ತಹಶೀಲ್ದಾರ ಕಚೇರಿಗೆ ತಲುಪಿಸಬೇಕು.

ಅದಕ್ಕೆ ವೋಟರ್ ಲಿಸ್ಟ್ ನಲ್ಲಿ ಸೇರಿಸುವುದ್ದಿದರೆ ಕೂಡಲೇ ಹತ್ತಿರದ ಆಫೀಸ್ ಗಳಿಗೆ ಸಂಪರ್ಕಿಸಲು ಚುನಾವಣಾ ಇಲಾಖೆ ತಿಳಿಸಿದೆ. ಮಾಹಿತಿ ಪ್ರಕಾರ ಈ ಬಾರಿ ನಮ್ಮ ರಾಜ್ಯದಲ್ಲಿ 4,90,06,901 ಜನರು ಮತ ಚಲಾಯಿಸಲಿದ್ದಾರೆ, ಇದರಲ್ಲಿ 72 ಲಕ್ಷ ಹೊಸದಾಗಿ ಸೇರಿದ ಮತದಾರರು ಇದ್ದಾರೆ. ಇದರಲ್ಲಿ ಮಹಿಳಾ ಮತದಾರರು 2,41,34,805, ಪುರುಷ ಮತದಾರರು 2,48,67,756 ಮತ್ತು 4340 ತೃತೀಯ ಲಿಂಗ ಅಥವಾ ಲಿಂಗ ಅಲ್ಪಸಂಖ್ಯಾತ ಮತದಾರರಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಅಂದ್ರೆ 2013 ರಲ್ಲಿ ರಾಜ್ಯದಲ್ಲಿ ಒಟ್ಟು 4,18,38,541 ಜನ ಮತದಾರರು ವೋಟ್ ಮಾಡಿದ್ದರು.