ಸಿಯಾಚಿನ್-ನಲ್ಲಿ ಕಾವಲು ಕಾಯೋದು ಅಷ್ಟು ಸುಲಭ ಅಲ್ಲ…!

0
597

ಪಾಕಿಸ್ತಾನಿಗಳು ನಮ್ಮ ದೇಶಕ್ಕೆ ನುಗ್ಗೋಕೆ ಸಾಧ್ಯವಾಗೋ ಒಂದೇ ಒಂದು ಜಾಗ ಅಂದ್ರೆ ಸಿಯಾಚಿನ್. ನಮ್ಮ ಸೈನಿಕರು ಇವತ್ತು ಅಲ್ಲಿ ಕಾವಲು ನಿಂತು ನಮ್ಮನ್ನ ಕಾಪಾಡ್ತಿದಾರೆ. ಆದ್ರೆ ಸಿಯಾಚಿನ್ನಲ್ಲಿ ಕಾವಲು ಕಾಯೋದು ಅಷ್ಟು ಸುಲಭ ಅಲ್ಲ. ಯಾಕೆ ಅಷ್ಟು ಕಷ್ಟಾನಾ? ಇಲ್ಲಿ ನೋಡಿ..

1. ಪ್ರಪಂಚದ ಅತೀ ಎತ್ತರದ, ಭಯಾನಕ ಯುದ್ಧ ಭೂಮಿ ಸಿಯಾಚಿನ್

ಹಿಮಾಯಲಯ ಪರ್ವತದ ಕಾರಾಕೋರಂ ಸಾಲಿನ ಪೂರ್ವದಲ್ಲಿರೋ ಸಿಯಾಚಿನ್ ಭಾರತ ಹಾಗು ಪಾಕಿಸ್ತಾನದ ಗಡಿ.(ಲೈನ್ ಆಫ್ ಕಂಟ್ರೋಲ್)

2. ನೆಲದಿಂದ 5400 ಮೀಟರ್ ಎತ್ತರದಲ್ಲಿದೆ

ಲಡಾಕ್ ಮತ್ತೆ ಕಾರ್ಗಿಲ್ಲಿಗಿಂತ ಎರಡರಷ್ಟು ಎತ್ತರ ಇದರದ್ದು. ಅಷ್ಟ್ ಎತ್ರದ ಜಾಗದ ಪರಿಸರಕ್ಕೆ ನಮ್ ದೇಹ ಅಡ್ಜಸ್ಟ್ ಆಗೋದು ಭಾಳ ಕಷ್ಟ.

3. ವರ್ಷಕ್ಕೆ ಸುಮಾರು 36 ಅಡಿ ಹಿಮಪಾತ ಆಗತ್ತೆ ಪ್ರಪಂಚದ ಅತೀದೊಡ್ಡ ಹಿಮಪಾತದ ಜಾಗ ಇದು.

4. ಇಲ್ಲಿ ಉಸಿರಾಡಕ್ಕೆ ಸಿಗೋದು ಬರೀ 10% ಆಮ್ಲಜನಕ

5. ಈ ಜಾಗದಲ್ಲಿ ನಮ್ಮ ಸೈನಿಕರು -50 ಇಂದ -60 ಡಿಗ್ರಿ ಚಳೀಲಿ ನಿಂತ್ಕೋತಾರೆ

ಇಂಥ ಭಯಾನಕ ಚಳೀಲಿ ನಮ್ ಸೈನಿಕರು ವರ್ಷಪೂರ್ತಿ ನಿಲ್ತಾರೆ. ಬೆಟ್ಟ ಹತ್ತೋರು ವಾತಾವರಣ ಚೆನ್ನಾಗಿದ್ರೆ ಮಾತ್ರ ಹತ್ತಕ್ಕೆ ಹೋಗೋದು. ಅದ್ಬಿಟ್ರೆ ನಮ್ ಸೈನಿಕರೇ ಅಲ್ಲಿ ಯಾವಾಗ್ಲೂ ಇರೋದು!

6. ಎಷ್ಟೋ ಜನ ಸೈನಿಕರು ಚಳಿಗೆ ಸತ್ತೋಗ್ತಾರೆ. ಬರಿಗೈಯಲ್ಲಿ ಕಬ್ಬಿಣ ಮುಟ್ಟುದ್ರೆ 15 ಸೆಕೆಂಡೊಳಗಡೆ ಕೈಬೆರಳು ಕಟ್ಟಾಗತ್ತೆ

ಅಪ್ಪಿತಪ್ಪಿ ಯಾಮಾರಿ ಗನ್ನಿನ ಟ್ರಿಗರನ್ನ ಬರಿಗಯ್ಯಲ್ಲಿ ಮುಟ್ಟುದ್ರೆ ಕೈಬೆರಳನ್ನೇ ಕಳ್ಕೋಬೇಕಾಗತ್ತೆ. ಆ ಚಳೀನ ನಮ್ ದೇಹಕ್ಕೆ ತಡ್ಕೊಳಕ್ಕಾಗಲ್ಲ.

7. ಗನ್ನುಗಳನ್ನ ತಕ್ಷಣ ಕುದಿಯೋನೀರಲ್ಲಿ ತೊಳಿಬೇಕು ಇಲ್ಲ ಅಂದ್ರೆ ಗನ್ನು ಕಚ್ಕೊಳತ್ತೆ, ಹಾಳಾಗತ್ತೆ

8. 1984ಕ್ಕೂ ಮುಂಚೆ ಇಲ್ಲಿ ಯಾವ ಸೈನಿಕರೂ ಇರ್ಲಿಲ್ಲ

ಈಗಲೂ ಸುತ್ತಮುತ್ತಲಿನ ಜಾಗದಲ್ಲಿ ಸೈನಿಕರನ್ನ ಇಟ್ಟು, ಇಲ್ಲಿಂದ ಸೈನಿಕರನ್ನ ತೆಗಿಯೋಣ ಅಂತ ಎರಡೂ ದೇಶಗಳು ಸುಮಾರ್ ಸಲ ಪ್ರಯತ್ನ ಪಟ್ರು ಆದ್ರೆ ಯಾಕೋ ಅದು ಸರಿಬರಲಿಲ್ಲ.

9. ಸಿಯಾಚಿನ್ನಲ್ಲಿ 80% ಸಮಯ ಸೈನಿಕರನ್ನ ತಯಾರಿ ಮಾಡಕ್ಕೇ ಬೇಕಾಗತ್ತಾದೆ

10. ತಾಜಾ ಆಹಾರ ನಮ್ಮ ಸೈನಿಕರಿಗೆ ಬರಿ ಕನಸು

ನಮ್ಮ ಸೈನಿಕರಿಗೆ ಸೇಬು, ಕಿತ್ತಲೆಹಣ್ಣು ಇವೆಲ್ಲ ತಿನ್ನಕ್ಕೆ ಆಗಲ್ಲ. ಯಾಕಂದ್ರೆ ಆ ಚಳೀಗೆ ಈ ಹಣ್ಣು ಕ್ರಿಕೆಟ್ ಬಾಲಷ್ಟು ಗಟ್ಟಿ ಆಗ್ಬಿಡತ್ತೆ.

11. ಇಲ್ಲಿಗೆ ಊಟ ತಲುಪಿಸಕ್ಕೆ ಹೆಲಿಕಾಪ್ಟರ್ರಿಗೆ ಇರೋ ಸಮಯ ಕೇವಲ 20 – 30 ಸೆಕೆಂಡು

21,000 ಅಡಿ ಎತ್ತರಕ್ಕೆ ಹೋಗಿ ಊಟ ತಲುಪಿಸೋದು ಸಿಕ್ಕಾಪಟ್ಟೆ ಕಷ್ಟ. “ಚೀತಾ” ಅನ್ನೋ ಹೆಲಿಕಾಪ್ಟರನ್ನ ಇದಕ್ಕೆ ಅಂತಾನೆ ತಯಾರ್ ಮಾಡಿದಾರೆ. ವಾತಾವರಣ ಚೆನ್ನಾಗಿಲ್ಲ ಅಂದ್ರೆ ಅರ್ಧ ಊಟ ಹಿಮದ ಪಾಲಾಗಿರತ್ತೆ.

12. ಇವರಿಗೆ ಸ್ನಾನ ತಿಂಗಳಿಗೆ ಒಂದೇ ಸತಿ

ಡಿ.ಆರ್.ಡಿ.ಓ ಕಟ್ಟಿರೋ ಸ್ಪೆಷಲ್ ಬಚ್ಚಲುಮನೆಲಿ ( ಇಲ್ಲ ಅಂದ್ರೆ ಚಳೀಗೆ ನಾವೇ ಐಸ್ ಆಗ್ಬಿಡ್ತೀವಿ ) ಇವರು ತಿಂಗಳಿಗೆ ಒಂದು ಸತಿ ಸ್ನಾನ ಮಾಡ್ತಾರೆ.

13. ಇಲ್ಲಿರೋ ಸೈನಿಕರಿಗೆ ಸಾಕಷ್ಟು ಆರೋಗ್ಯ ತೊಂದ್ರೆ ಆಗತ್ತೆ

ಸರಿಯಾಗಿ ನಿದ್ದೆ ಬರೋಲ್ಲ. ಸಿಕ್ಕಾಪಟ್ಟೆ ತೂಕ ಕಡಿಮೆ ಆಗೋದು, ಮಾತಾಡಕ್ಕಾಗಲ್ಲ, ಮರೆವು ಇದೆಲ್ಲಾ ತೊಂದ್ರೆಗಳು ಮುಕ್ಕಾಲುವಾಸಿ ಸೈನಿಕರಿಗೆ ಆಗತ್ತೆ.

14. ಕಳೆದ 30 ವರ್ಷದಲ್ಲಿ 846 ಸೈನಿಕರನ್ನ ಸಿಯಾಚಿನ್ನಲ್ಲಿ ಕಳ್ಕೊಂಡಿದೀವಿ

ಇಲ್ಲಿ ಕಾವಲು ಕಾಯಕ್ಕಿಂತ ಯುದ್ಧದಲ್ಲಿ ಗುದ್ದಾಡೋದು ಸುಲಭ. ಅದಕ್ಕೆ ಇವರ ಮರಣಗಳನ್ನು ವೀರಮರಣ ಅಂತ ಗೌರವಿಸಲಾಗಿದೆ.

ಇಷ್ಟೆಲ್ಲಾ ಕಷ್ಟ ಇದ್ರೂ, ಭಯ ಬೀಳಿಸೋ ಚಳಿ ಇದ್ರೂ, ದೇಶಕ್ಕಾಗಿ, ನಮಗಾಗಿ, ಛಲಬಿಡದೇ ನಮ್ಮನ್ನ ಸೈನಿಕರು ಕಾಪಾಡ್ತಿದಾರೆ. ನಾವು ಪ್ರತಿರಾತ್ರಿ ನೆಮ್ಮದಿಯಿಂದ ಮಲುಗ್ತಾ ಇದೀವಿ ಅಂದ್ರೆ ಇದಕ್ಕೆ ನಿಜವಾದ ಕಾರಣ ನಮ್ಮ ಸೈನಿಕರು