ಹುತಾತ್ಮ ಯೋಧ ಗುರು ಅವರ ಗರ್ಭಿಣಿ ಪತ್ನಿ ಕಲಾವತಿಯ ಹೊಟ್ಟೆಯಲ್ಲಿ ಗಂಡು ಮಗು ಹುಟ್ಟಿದರೆ ಸೈನ್ಯೆಕ್ಕೆ ಕಳುಹಿಸುತ್ತಾರೆ ಅಂತೆ ಈ ಮಾಹಾತಾಯಿ..

0
560

ದೇಶ ಸೇವೆಯನ್ನು ಮಾಡುತಲೇ ಪ್ರಾಣಬಿಟ್ಟ ವೀರಯೋಧನ ಕುಟುಂಬಸ್ಥರ ದೈರ್ಯೆ, ದೇಶ ಪ್ರೇಮ ಏತಹದು ಎನ್ನುವುದು ಅವರ ಮಾತಿನಿಂದಲೇ ತಿಳಿಯುತ್ತೆ. ಮಗನನ್ನು ಕಳೆದುಕೊಂಡ ನಂತರ ಇಂತಹ ನೋವು ಮತ್ತೆ ಬರಬಾರದು ಮಕ್ಕಳನ್ನು ಸೈನ್ಯೆಕ್ಕೆ ಕಳುಹಿಸಬಾರದು ಅನ್ನುವ ಯೋಚನೆ ಪ್ರತಿಯೋಬ್ಬರಲು ಹೊಳೆಯುತ್ತೆ. ಆದರೆ ಮಂಡ್ಯದ ಗುರು ಅವರ ತಾಯಿ ಮತ್ತು ಹೆಂಡತಿ ಹೇಳುವ ಮಾತುಗಳು ಪ್ರತಿಯೊಬ್ಬರಲ್ಲೂ ಆಸೆ ಮೂಡಿಸುತ್ತೆ, ನಾವು ದೇಶ ಸೇವೆಗೆ ಸೇರಬೇಕು ಎನ್ನುವ ಹಂಬಲ ಮೂಡಿಸುತ್ತೆ.

Also read: ನಿಮಗೂ ಹುತಾತ್ಮ ಸೈನಿಕರ ಕುಟುಂಬಗಳಿಗೆ ಧನ ಸಹಾಯ ಮಾಡುವ ಇಚ್ಛೆ ಇದ್ರೆ ಈ ಆ್ಯಪ್​ ಮೂಲಕ ಹುತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಿ..

ಹೌದು ಪುಲ್ವಾಮಾ ಉಗ್ರಗಾಮಿ ದಾಳಿಯಲ್ಲಿ ಹುತಾತ್ಮರಾದ ಜಿಲ್ಲೆಯ ಗುಡಿಗೆರೆ ಗ್ರಾಮದ ಯೋಧ ಗುರುವಿನ ಪತ್ನಿ ಕಲಾವತಿ ನಾಲ್ಕು ತಿಂಗಳ ಗರ್ಭವತಿ. ಈ ವಿಷಯ ನಿನ್ನೆ ಗುರುವಿನ ತಾಯಿ ಚಿಕ್ಕೋಳಮ್ಮ ಅವರಿಂದಲೇ ತಿಳಿದುಬಂತು. ಹುತಾತ್ಮ ಗುರುವಿನ ಅಂತ್ಯಸಂಸ್ಕಾರಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳು ಅವರನ್ನು ಮಾತನಾಡಿಸಿದ ಸಂದರ್ಭದಲ್ಲಿ, ನನ್ನ ಮಗ ಕರ್ತವ್ಯದಲ್ಲಿರುವಾಗ ಮೃತಪಟ್ಟಿದ್ದರೆ ನಾನಿಂದು ಇಷ್ಟು ಅಳುತ್ತಿರಲಿಲ್ಲ. ಊರಿನಿಂದ ರಜೆ ಮುಗಿಸಿಕೊಂಡು ಹೋಗುವಾಗಲೇ ಪಾಪಿಗಳು ಕೊಂದು ಹಾಕಿದ್ದಾರೆ. ಆತ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾನೆ, ಆ ಬಗ್ಗೆ ನನಗೆ ಹೆಮ್ಮೆಯಿದೆ.

Also read: ಭಾರತೀಯ ಸೇನಾ ನೇಮಕಾತಿ: ವಿವಿಧ ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಅಷ್ಟೇ ಅಲ್ಲದೆ ನನ್ನ ಸೊಸೆಯ ಹೊಟ್ಟೆಯಲ್ಲಿ ಮತ್ತೊಬ್ಬ ಯೋಧ ಹುಟ್ಟುತ್ತಿದ್ದಾನೆ ಅವಳು ಈಗ 4 ತಿಂಗಳ ಗರ್ಭಿಣಿ ಈ ಈ ವಿಚಾರ ಮಗನನ್ನು ಕಳೆದುಕೊಂಡ ದುಃಖದಲ್ಲಿ ಹೇಳುವ ವಿಚಾರವಲ್ಲ ಆದರು ಹೇಳುತ್ತೇನೆ. ನನ್ನ ಮೊಮ್ಮಗ ಹುಟ್ಟಿದರೆ ಅವನನ್ನು ಕೂಡ ಸೇನೆಗೆ ಕಳುಹಿಸುತ್ತೇನೆ, ಅವನ ತಂದೆ ಅರ್ಧ ಮಾಡಿದ ದೇಶಸೆವೆಯನ್ನು ಮಗ ಪೂರ್ತಿ ಮಾಡಲು ಕಳುಹಿಸುತ್ತೇನೆ. ತಂದೆಯಂತೆ ದೇಶದ ಮೇಲೆ ಅಭಿಮಾನ, ದೇಶ ಭಕ್ತಿ ಇಟ್ಟುಕೊಂಡು ಮೊಮ್ಮಗನನ್ನು ಬೆಳೆಯುಸುತ್ತೇನೆ. ಸದ್ಯದಲ್ಲಿ ನನ್ನ ಇನ್ನೊಬ್ಬ ಕಿರಿಯ ಮಗನನ್ನು ಕೂಡ ದೇಶಸೇವೆಗೆ ಕಳುಹಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಚಿಕ್ಕೋಳಮ್ಮ ದುಃಖದ ನಡುವೆಯೂ ಹೇಳಿದ್ದು ಎಂಥವರ ಮನಮಿಡಿಯುವಂತಿತ್ತು.

ಅವಕಾಶ ಕೊಡಿ ಪತಿ ಸೇವೆ ಪೂರ್ತಿ ಮಾಡುತ್ತೇನೆ.

ವೀರಯೋಧ ಪತಿಯನ್ನು ಕಳೆದುಕೊಂಡ ಕಲಾವತಿ ದೇಶಸೆವೆಯನ್ನು ಮಾಡುವ ಕುರಿತು ಮಾತನಾಡಿ. ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ. ಉಗ್ರರ ಚೆಂಡಾಡುತ್ತೇನೆ. ನನ್ನ ಪತಿ ಅರ್ಧಕ್ಕೆ ಬಿಟ್ಟು ಹೋಗಿರುವ ಕೆಲಸವನ್ನು ಪೂರೈಸುತ್ತೇನೆ. ನನ್ನ ಪತಿಯ ಆಸೆಗಳನ್ನು ಈಡೇರಿಸುತ್ತೇನೆ. ಗುರು ಅವರ ಪತ್ನಿ ಅನ್ನೋದಕ್ಕೆ ನಿಜಕ್ಕೂ ಹೆಮ್ಮೆ ಎನಿಸಿದೆ. ದೇಶದ ಸೇವೆ ಮಾಡುವಾಗ ತನ್ನ ಪತಿ ದೇವರನ್ನು ಆ ದೇವರು ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಅವರ ಈಗ ಅರ್ಧ ಕೆಲಸ ಮಾಡಿದ್ದಾರೆ. ನಾನು ಉಳಿದ ಕೆಲಸವನ್ನು ಮಾಡಲು ಸಜ್ಜಾಗಿದ್ದೇನೆ. ಸೇನೆಗೆ ನಾನೂ ಸೇರಬೇಕು ಎನಿಸಿದೆ. ಇದು ಸಾಧ್ಯವಾಗಲಿಲ್ಲ ಎಂದರೆ ನನಗೆ ಹುಟ್ಟುವ ಮಗುವನ್ನು ಸೈನ್ಯೆಕ್ಕೆ ಸೇರಿಸುತ್ತೇನೆ. ಅವರ ತಂದೆಯನ್ನು ಕೊಂದ ಉಗ್ರ ಪಾಪಿಗಳ ವಿರುಧ್ಧ ಹೋರಾಡಿ ದೇಶವನ್ನು ಕಾಪಾಡಲಿ. ಅವಕಾಶ ಕೊಟ್ಟರೆ ನಾನು ಸೇರುತ್ತೇನೆ ಎಂದು ಹೇಳಿದರು.

Also read: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ವೀರಮರಣ ಹೊಂದಿದ ‘ಮಂಡ್ಯದ ಗುರು’ ತಮ್ಮ ತಾಯಿಗೆ ಹೇಳಿದ ಕೊನೆಯ ಮಾತೇನು??

ಪತಿ ಕಳೆದುಕೊಂಡರು ಇಷ್ಟೊಂದು ದೇಶಾಭಿಮಾನ ಕಂಡು ಜನರು ಕಣ್ಣಿರು ಹಾಕಿದರು ಈ ವೇಳೆ ಕಲಾವತಿ ಪ್ರತಿದಿನವೂ ತನ್ನ ಪತಿ ಕರೆ ಮಾಡುತ್ತಿದ್ದರು. ಆದರೆ ದಾಳಿ ನಡೆದ ದಿನ ಸ್ವಲ್ಪ ಬ್ಯುಸಿಯಾಗಿದ್ದರು. ಹಾಗಾಗಿ ನಂತರ ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಈ ಕರೆ ಬರಲೇ ಇಲ್ಲ. ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದರು. ಇನ್ನೂ 10 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಗುರು ಸದಾ ನನ್ನೊಂದಿಗೆ ಚರ್ಚಿಸುತ್ತಿದ್ದರು ಎಂದು ಕಲಾವತಿ ತಿಳಿಸಿದರು.