ಮತ್ತೊಮ್ಮೆ ದಚ್ಚು, ಕಿಚ್ಚು ಮುಖಾಮುಖಿ; ಸ್ಯಾಂಡಲ್ ವುಡ್-ನಲ್ಲಿ ಮತ್ತೆ ದರ್ಶನ್ ಸುದೀಪ್ ನಡುವೆ ಕಾಳಗ; ಎಲ್ಲಿ? ಹೇಗೆ? ಇಲ್ಲಿದೆ ನೋಡಿ ಮಾಹಿತಿ..

0
369

ಸ್ಯಾಂಡಲ್- ವುಡ್ ನಲ್ಲಿ ತಮ್ಮದೇ ಹವಾ ಸೃಷ್ಟಿಸಿದ ಇಬ್ಬರು ಸ್ಟಾರ್ ಎಂದರೆ ದರ್ಶನ್ ಮತ್ತು ಸುದೀಪ್, ದಿ ಬಾಸ್ ಎಂದು ಹೆಸರು ವಾಸಿಯಾಗಿರುವ ದರ್ಶನ್ ಸಿನಿಮಾ ಬರುತ್ತದೆ ಎನ್ನುವ ಸುದ್ದಿ ತಿಳಿದರೆ ಸಾಕು ಅಭಿಮಾನಿಗಳು ಕಾತುರದಿಂದ ಪ್ರತಿನಿಮಿಷವೂ ಕಾಯಿತ್ತಿರುತ್ತಾರೆ. ಅದರಂತೆ ಕಿಚ್ಚನ ಸಿನಿಮಾ ಸುದ್ದಿ ಹರಡಿದರೆ ಸಾಕು ಸ್ಯಾಂಡಲ್ ವುಡ್ ವಿಲನ್ ಈ ಸಾರಿ ಯಾವ ಅವತಾರದಲ್ಲಿ ಕಾಣಿಸಲಿದ್ದಾರೆ. ಎನ್ನುವ ಕುತೂಹಲ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿವೂ ಮೂಡುತ್ತೆ. ಇವರಿಬ್ಬರ ಅಭಿಮಾನಿಗಳ ನಡುವೆ ನಮ್ಮ ಹೀರೋ ಮುಂದೆ ತಮ್ಮ ಹೀರೋನೆ ಮುಂದೆ ಎನ್ನುವ ಕಿತ್ತಾಟ್ಟಗಳು ನಡೆಯಿತ್ತಾನೆ ಇರುತ್ತೆ. ಇಷ್ಟೊಂದು ಹವಾದಲ್ಲಿರುವ ಯಜಮಾನ ಮತ್ತು ವಿಲನ್ ಮತ್ತೆ ಮುಖಾಮುಖಿಯಾಗಿ ಕಾಳಗ ನಡೆಸಲಿದ್ದಾರೆ.

ಹೌದು ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಮ್ಮೆ ‘ಡಚ್ಚ-ಕಿಚ್ಚ’ ವಾರ್ ಶುರುವಾಗಿದ್ದು, ಮುಂದಿನ ತಿಂಗಳ ವರಮಹಾಲಕ್ಷ್ಮಿ ಹಬ್ಬಕ್ಕೆ ಕನ್ನಡ ಚಿತ್ರರಂಗದಲ್ಲಿ ಇಬ್ಬರ ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್‌ ನಟನೆಯ ‘ಪೈಲ್ವಾನ್‌’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಿ ಪೈಲ್ವಾನ್ ಅವತಾರದಲ್ಲಿ ಮಿಂಚುತ್ತಿರುವ ಸುದೀಪ್. ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಧುರ್ಯೋಧನ ಪಾತ್ರವನ್ನು ಮಿಂಚುತ್ತಿರುವ ‘ಕುರುಕ್ಷೇತ್ರ’ ಸಿನಿಮಾಗಳು ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಥಿಯೇಟರ್‍ಗೆ ಭರ್ಜರಿಯಾಗಿ ಎಂಟ್ರಿ ಕೊಡಲಿವೆ ಎನ್ನುವ ಸುಳಿವು ಸಿಕ್ಕಿದ್ದು ಅಭಿಮಾನಿಗಳ ಮನದಲ್ಲಿ ಡವ-ಡವ ಶುರುವಾಗಿದೆ.

ಒಂದೇ ದಿನ ಪೈಲ್ವಾನ್, ಕುರುಕ್ಷೇತ್ರ?

ಕಿಚ್ಚನ ಬಾಕ್ಸಿಂಗ್‌ ಲುಕ್‌ ಈಗ ಬಹಿರಂಗಗೊಂಡಿದೆ. ಅದೂ ಅದ್ಧೂರಿಯಾಗಿ. ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್‌ ಲಾಲ್‌, ತಮಿಳಿನಲ್ಲಿ ವಿಜಯ್‌ ಸೇತುಪತಿ, ಹಿಂದಿಯಲ್ಲಿ ಸುನೀಲ್‌ ಶೆಟ್ಟಿ, ಕನ್ನಡದಲ್ಲಿ ಸುದೀಪ್‌ ಹೀಗೆ ಐದು ಭಾಷೆಗಳ ಪೋಸ್ಟರ್‌ ಅನ್ನು ಆಯಾ ಭಾಷೆಯ ಸ್ಟಾರ್‌ ಹೀರೋಗಳೇ ತಮ್ಮ ಟ್ವಿಟರ್‌ ಮೂಲಕ ಬಿಡುಗಡೆ ಮಾಡಿದ್ದಾರೆ. ಸುದೀಪ್ ಅವರ ಫಿಟ್ನೆಸ್‍ಗೆ ಅಭಿಮಾನಿಗಳು ಫಿದಾ ಆಗಿದ್ದು. ಈಗಾಗಲೇ ಪೈಲ್ವಾನ್ ಸಿನಿಮಾ ಶೂಟಿಂಗ್ ಮುಗಿಸಿ ಸೆನ್ಸಾರ್ ಹೋಗಲು ಸಿದ್ಧವಾಗಿದೆ. ಆದರೆ ನಿರ್ದೇಶಕ ಕೃಷ್ಣ ಅವರು ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿಲ್ಲ. ಆದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ನಾನು ಬರುತ್ತೇವೆ ಎಂದು ಹೇಳುತ್ತಿದ್ದಾರೆ.

ಅದರಂತೆ ರೆಬೆಲ್ ಸ್ಟಾರ್ ಅಂಬರೀಷ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್, ಯುವರಾಜ ನಿಖಿಲ್, ಶಶಿಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್ ಹೀಗೆ ದಿಗ್ಗಜ ಕಲಾವಿದರ ಮಹಾಸಂಗಮದ ಮಹಾದೃಶ್ಯಕಾವ್ಯ ‘ಕುರುಕ್ಷೇತ್ರ. ಬಹುದೊಡ್ಡ ತಾರಾಗಣದ ಈ ಸಿನಿಮಾದ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ಚಿತ್ರತಂಡ ಬಿಡುಗಡೆ ಮಾಡಿದ್ದು, ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಥಿಯೇಟರ್‍ಗೆ ಭರ್ಜರಿಯಾಗಿ ಎಂಟ್ರಿ ಕೊಡಲಿದೆ. ಈ ಎಲ್ಲ ಬೆಳವಣಿಗೆಯನ್ನು ಅರಿತ ಕನ್ನಡ ಚಿತ್ರರಂಗ ಇಬ್ಬರು ಮಹಾನ್ ನಾಯಕರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ನಾನ-ನಿನ ಎನ್ನುವ ವಾರ್ ಶುರುವಾಗಲಿದ್ದು ಮತ್ತೆ ಕನ್ನಡ ಬಾಕ್ಸ್ ಆಫೀಸ್-ನಲ್ಲಿ ಇತಿಹಾಸ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

13 ವರ್ಷಗಳ ನಂತರ ಸುದೀಪ್-ದರ್ಶನ್ ಮುಖಾಮುಖಿ?

ಸದ್ಯ ಹವಾ ಎಬ್ಬಿಸಿರುವ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಮುಖಾಮುಖಿಯಾಗಳಿವೆ. ಈ ಹಿಂದೆ ಅಂದರೆ 13 ವರ್ಷಗಳ ಹಿಂದೆ ಕಿಚ್ಚನ ‘ಮೈ ಆಟೋಗ್ರಾಫ್’ ಹಾಗೂ ದಚ್ಚುವಿನ ‘ಸುಂಟರಗಾಳಿ’ ಸಿನಿಮಾವೂ ಕೂಡ 2006ರ ಫೆಬ್ರವರಿ 17 ರಂದು ಒಂದೇ ದಿನ ತೆರೆಕಂಡು ಥಿಯೇಟರ್ ಅಖಾಡದಲ್ಲಿ ಧೂಳೆಬ್ಬಿಸಿದ್ದರು. ಇದೀಗ 13 ವರ್ಷಗಳ ನಂತರ ಮತ್ತೊಮ್ಮೆ ಗೆಳೆಯರ ನಡುವೆ ಬಾಕ್ಸ್ ಆಫೀಸ್‍ನಲ್ಲಿ ಯುದ್ಧ ಶುರುವಾಗುತ್ತಿದೆ. ಕುರುಕ್ಷೇತ್ರ ಸಿನಿಮಾದ ಮೂಲಕ ದರ್ಶನ್ ಅಖಾಡಕ್ಕೆ ಇಳಿದರೆ, ಇತ್ತ ಪೈಲ್ವಾನ್ ಚಿತ್ರದ ಮೂಲಕ ಸುದೀಪ್ ಪವರ್ ತೋರಿಸುವುದಕ್ಕೆ ಹೊರಟಿದ್ದಾರೆ. ಇದೆಲ್ಲ ನೋಡಿದರೆ ಕನ್ನಡ ಸಿನಿರಂಗ ಹಣದ ಹೊಳೆಯನ್ನು ಹರಿಸುತ್ತೆ ಎನ್ನುವುದರಲ್ಲಿ ಅನುಮಾನವಿಲ್ಲ