ಕೋರೋನದಿಂದ ಗುಣಮುಖವಾದವರು ಸದ್ಯಕ್ಕೆ ಸಾವನ್ನು ಗೆದ್ದಿರಬಹುದು, ಆದರೆ ದೀರ್ಘ ಕಾಲದಲ್ಲಿ ಅವರಿಗೆ ಮೆದಳು ಸಮಸ್ಯೆ ಕಾಡುತ್ತೆ ಅನ್ನುತ್ತೆ ಹೊಸ ಸಂಶೋಧನೆ!!

0
687

ಚೀನಾದ ವುಹಾನ್’ನಿಂದ ಶುರುವಾದ ಮಹಾಮಾರಿ ಕೊರೊನಾ ರೌದ್ರನರ್ತನಕ್ಕೆ ಇಡೀ ಜಗತ್ತೇ ಕಂಗಾಲಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಹರಡುವ ರೀತಿಗಳು ಸಹ ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ. ಸೋಮವಾರವಷ್ಟೇ ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎಂದ ಆಘಾತಕಾರಿ ವಿಚಾರವನ್ನು ಹೇಳಿದ್ದರು. ಈಗ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಕೊರೊನಾಗೆ ತುತ್ತಾದವರು ಮೆದುಳು, ನರಗಳು, ಶ್ವಾಸಕೋಶದ ತೊಂದರೆಗೆ ಒಳಪಡುವುದು ಪಕ್ಕಾ ಆಗಿದೆ. ಅದರಲ್ಲೂ ಕೆಲವರು ಮನೋ ರೋಗಕ್ಕೆ ಬಲಿಯಾಗುವ ಸಾಧ್ಯತೆ ಇದೆಯಂತೆ.

ಕಳೆದ ಆರು ತಿಂಗಳಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿರುವ ಮಹಾಮಾರಿ ಕೊರೊನಾ ಗಾಳಿಯಿಂದಲೂ ಹರಡುತ್ತೆ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿ ಕೇವಲ ಮೂರೇ ದಿನವಾಯ್ತು. ಇಷ್ಟು ದಿನ ಕೆಮ್ಮು, ಸೀನುವವರಿಂದ ವೈರಸ್ ಹರಡುತ್ತೆ ಎಂದು ಹೇಳಲಾಗಿತ್ತು. ಹಾಗಾಗಿ ಜನ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸುತ್ತಾ ಸುರಕ್ಷಿತವಾಗಿದ್ದೇವೆ ಎಂದು ನಂಬಿದ್ದರು. ಆದರೆ ಗಾಳಿಯಲ್ಲೂ ವೈರಸ್ ಹರಡುತ್ತೆ ಎಂಬ ಭಯಾನಕ ವಿಚಾರವನ್ನು ವಿಜ್ಙಾನಿಗಳು ಹೇಳಿದ್ದಾರೆ. ಕೊರೊನಾ ವೈಸ್ ಕುರಿತು ಸಂಶೋಧನೆ ನಡೆಸಿರುವ ವಿವಿಧ 32 ದೇಶಗಳ 239 ವಿಜ್ಞಾನಿಗಳು ಈ ಮಾಹಿತಿ ನೀಡಿದ್ದು, ಎಚ್ಚರಿಕೆಯಿಂದಿರಲು ಸೂಚಿಸಿದ್ದಾರೆ. ಸೋಂಕಿತರು ಸೀನದರೆ, ಕೆಮ್ಮಿದರೆ ವೈರಸ್ ಕಣಗಳು ಗಾಳಿ ಮೂಲಕ ಬೇರೆಡೆ ಹರಡುತ್ತವೆ. ಇದು ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದೀಗ ಕೊರೊನಾ ರೋಗಕ್ಕೆ ತುತ್ತಾದವರಿಗೆ ಇನ್ನೂ ಕೆಲ ರೋಗಗಳು ಕಾಡಲಿವೆಯಂತೆ. ಹೀಗಂತ ಯುಸಿಎಲ್ ವಿಜ್ಙಾನಿಗಳು ಹೇಳಿದ್ದಾರೆ. ಅದೂ ಅಂತಿಂಥ ಕಾಯಿಲೆಯಲ್ಲ. ಕೊರೊನಾ ಬಂದವರಿಗೆ ಬಹು ಮುಖ್ಯವಾಗಿ ಮೆದುಳಿನ ಸಮಸ್ಯೆ, ನರಗಳ ಸಮಸ್ಯೆ ಉಂಟಾಗಲಿದೆ. ಅಲ್ಲದೇ, ಕೊರೊನಾ ರೋಗಿಗಳು ಮನೋರೋಗಕ್ಕೂ ಒಳಗಾಗಬಹುದು, ಪಾರ್ಶ್ವವಾಯು ಸಂಭವಿಸಬಹುದು, ಶ್ವಾಸಕೋಶದ ಸಮಸ್ಯೆ, ಉಸಿರಾಟದ ಸಮಸ್ಯೆ ಕಾಡಲಿದೆ ಎಂದು ಇಂಗ್ಲೆಂಡಿನ ಯುನಿವರ್ಸಿಟಿ ಕಾಲೇಜ್ ಲಂಡನ್ ವಿಜ್ಙಾನಿಗಳು ಹೇಳಿದ್ದಾರೆ.

ಇನ್ನು ಈ ಸಂಶೋಧನೆ ನಡೆಸಲು ಇಂಗ್ಲೆಂಡಿನ ಯುನಿವರ್ಸಿಟಿ ಕಾಲೇಜ್ ಲಂಡನ್ ವಿಜ್ಙಾನಿಗಳಿಗೆ 43 ಕೊರೊನಾ ತಗುಲಿದ್ದ ರೋಗಿಗಳನ್ನು ಪ್ರಯೋಗಕ್ಕೆ ನೀಡಲಾಗಿತ್ತು. ಇವರ ಪ್ರಯೋಗದಿಂದ ಈ ಭಯಾನಕ ವಿಚಾರ ತಿಳಿದು ಬಂದಿದೆ. ಹಾಗಾಗಿ ಎಲ್ಲರೂ ಕೊರೊನಾ ಮಹಾಮಾರಿ ಬಗ್ಗೆ ಇನ್ನಷ್ಟು ಎಚ್ಚರ ವಹಿಸುವುದು ಸೂಕ್ತ.

Also read: ಗಾಳಿಯಿಂದಲೂ ಹರಡುತ್ತೆ ಮಹಾಮಾರಿ ಕೊರೊನಾ..! 239 ವಿಜ್ಞಾನಿಗಳು ಹೇಳಿದ್ದೇನು..?