ಮನೆಯ ತ್ಯಾಜ್ಯ ವಿಲೇವಾರಿಗೆ ಕೆಲವೊಂದು ಉಪಾಯಗಳು ಇಲ್ಲಿದೆ…!

0
1550

Kannada News | kannada Useful Tips

ನಮ್ಮ ಮನೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳಿಗೆ ನಾವೇ ಕಾರಣಕರ್ತರು. ಈ ತ್ಯಾಜ್ಯವಸ್ತುಗಳನ್ನು ಎರಡು ವಿಧವಾಗಿ ನಾವು ವಿಂಗಡನೆ ಮಾಡಬಹುದು.

1)ದೈನಂದಿಮನ ಜೀವನದ ತ್ಯಾಜ್ಯ ವಸ್ತುಗಳು

2)ಉಪಯೋಗಿಸಿ ಕಾಲಕ್ರಮೇಣ ಬಳಕೆಗೆ ಯೋಗ್ಯವಲ್ಲದ ವಸ್ತುಗಳು(ಗುಜುರಿ)

(1). ದೈನಂದಿನ ಜೀವನದ ತ್ಯಾಜ್ಯ ವಸ್ತುಗಳು:

*ಅಡುಗೆ ಮನೆಯ ತ್ಯಾಜ್ಯ: ತರಕಾರಿ ಕಸಗಳು, ಅಕ್ಕಿ ತೊಳೆದ ನೀರು, ತರಕಾರಿ ತೊಳೆದ ನೀರು, ಮಿಕ್ಕಿದ ಅನ್ನ (ಅನ್ನ ಬಿಸಾಡುವಂತಿಲ್ಲ) ಸಾಂಬಾರ್ ಇವುಗಳನ್ನು ಮನೆಯ ಸುತ್ತಮುತ್ತ ಇರುವ ಗಿಡಗಳಿಗೆ ಚಿನ್ನಾಗಿ ಹಿಸುಕಿ ಹಾಕಬೇಕು. ಮನೆಯಲ್ಲಿ ದನ ಸಾಕುವವರು ದನದ ಆಹಾರವಾಗಿ ಉಪಯೋಗಿಸಬಹುದು.

*ಸ್ನಾನಗೃಹ ಅಥವಾ ಶೌಚಾಲಯ ತ್ಯಾಜ್ಯಗಳು: ಇದನ್ನು ಶೇಖರಿಸಿ ಇಟ್ಟುಕೊಂಡು ಮನೆಯ ಸುತ್ತಮುತ್ತಲ ತರಗೆಲೆಗಳು ಮಣ್ಣಿನ ಜೊತೆಗೆ ಸುಟ್ಟು ಬೂದಿಯನ್ನು ಗಿಡಗಳಿಗೆ ಉಪಯೋಗಿಸಬಹುದು.

*ಪ್ರತಿ ದಿನ ಮನೆಯನ್ನು ಗುಡಿಸಿದ ಕಸಗಳನ್ನು ಒಣ ಕಸದೊಂದಿಗೆ ಶೇಖರಿಸಿ ನಂತರದಲ್ಲಿ ಅದನ್ನು ಸುಡುವುದು.

*ಒಂದು ವೇಳೆ ಮೇಲೆ ಉಲ್ಲೇಖಿಸಿದಂತೆ ತ್ಯಾಜ್ಯಗಳನ್ನು ಸುಡುವ ಯಾ ಗಿಡಗಳಿಗೆ ಬಳಕೆ ಮಾಡುವ ಅವಕಾಶ ಇಲ್ಲದಿರುವಲ್ಲಿ ಇವುಗಳಿಗೆ ಪ್ರತ್ಯೇಕವಾಗಿ ಮಾಡಬೇಕು. ಪಂಚಾಯತ್ ಗಳಿಂದ ಸೂಕ್ತ ವ್ಯವಸ್ಥೆ ಇದಕ್ಕಾಗಿ ಇದೆ.

*ಒಡೆದ ಬಾಡಲಿ, ಉಪಯೋಗಿಸಿದ ಔಷಧಿ ಬಾಟಲಿಗಳನ್ನು ಪ್ರತ್ಯೇಕವಾಗಿ ಇಟ್ಟು ಪಂಚಾಯತ್ ವ್ಯವಸ್ಥೆಯ ಪ್ರಕಾರ ವಿಲೇವಾರಿ ಮಾಡುವುದು.

*ಇತರ ಮೆಟಿರಿಯಲ್ ನಿಂದ ಮಾಡಿದ ಬಾಟಲಿಗಳು ಇದ್ದಲ್ಲಿ ಗುಜುರಿಯವರಿಗೆ ನೀಡುವುದು. ಅಂದರೆ ಮದ್ದಿನ ಬಾಟಲ್, ಡಿಟರ್ಜಂಟ್ ಪೌಡರ್’ಗಳು, ಕ್ರಿಮ್’ಗಳ ಡಬ್ಬಿ, ಕಾಸ್ಮೆಟಿಕ್ ಡಬ್ಬಿಗಳು, ಸೋಪು, ಪೌಡರ್, ಕ್ರೀಮ್ ಗಳು ಇತ್ಯಾದಿ.

*ಬಳಕೆಯಾದ ಪ್ಲಾಸ್ಟಿಕ್ ಬಾಟಲುಗಳು ಹಾಗೂ ಬಾಕ್ಸುಗಳನ್ನು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಬಳಸುವುದು.

(2)ಉಪಯೋಗಿಸಿ ಕ್ರಮೇಣ ಬಳಕೆಗೆ ಯೋಗ್ಯವಲ್ಲದ ವಸ್ತುಗಳು:

*ಸ್ಟೀಲ್, ಅಲುಮಿನಿಯಂ ಪಾತ್ರೆಗಳು, ರೆಕ್ಸಿನ್ ಬ್ಯಾಗ್’ಗಳು, ಇತರ ಬ್ಯಾಗ್ ಗಳು, ಟಯರ್ ಗಳು, ಪ್ಲಾಸ್ಟಿಕ್ ಬಕೆಟ್, ಮಗ್ ಗಳನ್ನು, ಪೈಪಿನ ತುಂಡುಗಳು, ಟ್ಯಾಪ್ ಗಳನ್ನು ಗುಜುರಿಯವರು ತೆಗೆದು ಕೊಳ್ಳುತ್ತಾರೆ.

*ಇಲೆಕ್ಟ್ರಿಕಲ್ ವಯರ್ ಗಳನ್ನು ಮತ್ತೆ ಮರುಬಳಕೆಗೆ ಸಾಧ್ಯವಿದ್ದಲ್ಲಿ, ಇಲೆಕ್ಟ್ರಾನಿಕ್ ಅಂಗಡಿಗೆ ನೀಡಬಹುದು.

ನಮ್ಮ ಮನೆಯ ತ್ಯಾಜ್ಯಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

Also Read: ಮಹಾಬಲಿಪುರದ ಪಂಚರಥಗಳು ಸುಪ್ರಸಿದ್ಧ ಏಕಶಿಲಾ ದೇವಾಲಯ