ತ್ಯಾಜ್ಯ ಮರುಬಳಕೆಯಿಂದ ವಿದ್ಯುತ್, ಕಾಂಪೋಸ್ಟ್ ಉತ್ಪತ್ತಿ: ಇಡೀ ದೇಶಕ್ಕೆ ಮಾದರಿಯಾಗಿದೆ ಮೈಸೂರು..

0
562

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತಗೊಂಡು ಮೈಸೂರು ನಗರ ಆಗ್ತಿದೆ ಕ್ಲೀನ್ ಸಿಟಿ. ಮೈಸೂರು ನಗರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕಸ ಮರುಬಳಕೆ ಸಂಸ್ಕರಣೆಗಳು ಕಾರ್ಯಪ್ರವೃತ್ತಗೊಂಡಿವೆ. ನಗರದಲ್ಲಿ ಒಂಭತ್ತು ಕಸ ಮರುಬಳಕೆ ಕೇಂದ್ರಗಳಿದ್ದು, ಕಸವನ್ನು ಮರುಬಳಕೆ ಮೂಲಕ ಕಾಂಪೋಸ್ಟ್ ಗೊಬ್ಬರ ಮತ್ತು ವಿದ್ಯುತ್ ಉತ್ಪಾಧಿಸಲಾಗುತ್ತಿದೆ.

ಆಲೀವ್ ಗ್ರೀನ್ ಆಪ್ರೋನ್ಸ್ ಎಂಬ ಸಂಸ್ಥೆ, ಕಾರ್ಪೋರೆಷನ್ ಮತ್ತು ಎನ್ಜಿಓ ಜೊತೆಗೂಡಿ ಕಸ ಮರುಬಳಕೆ ಕಾರ್ಯದಲ್ಲಿ ತೊಡಗಿದೆ. ಆಲೀವ್ ಗ್ರೀನ್ ಆಪ್ರೋನ್ಸ್ನ ಸಿಬ್ಬಂದಿ ನಿತ್ಯ ಬೆಳಗ್ಗೆ 6.30ಕ್ಕೆ ನಗರದ ಮನೆ ಮನೆಗೆ ತೆರಳಿ ಮಿಶ್ರಗೊಬ್ಬರ ಮತ್ತು ದಹಿಸಬಲ್ಲ ಕಸವನ್ನು ಎರಡು ಬೇರೆ ಬೇರೆ ಡಸ್ಟ್ಬಿನ್ಗಳಲ್ಲಿ ವಿಂಗಡಣೆ ಮಾಡಿ ಸಂಗ್ರಹಿಸುತ್ತಿದ್ದಾರೆ. ತದನಂತರ ಮಿಶ್ರಗೊಬ್ಬರವನ್ನು ರೈತರಿಗೆ ನೀಡುತ್ತಾರೆ.. ಮರುಬಳಕೆ ಮಾಡುವ ಕಸವನ್ನು ಸಾರ್ವಜನಿಕರೊಂದಿಗೆ ಜೊತೆಗೂಡಿ ಸಂಗ್ರಹಿಸುತ್ತಿದ್ದಾರೆ.

ಇನ್ನು ಇಲ್ಲಿನ ಸ್ಥಳೀಯ ಆಡಳಿತ ಮಂಡಳಿ ಕಸ ವಿಂಗಡಣೆ, ಮರುಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರೇಡಿಯೋ ಕಾರ್ಯಕ್ರಮ, ಜಿಂಗಲ್ಸ್, ವಾಟ್ಸಪ್ ಸಂದೇಶಗಳು, ಬೀದಿ ನಾಟಕ ಮತ್ತು ಪಾಂಪ್ಲೆಟ್ ಗಳನ್ನು ಹಂಚುವ ಮೂಲಕ ನಾಗರೀಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮೈಸೂರಿನಲ್ಲಿ ದಿನಕ್ಕೆ 402 ಟನ್ ಕಸ ಉತ್ಪತ್ತಿಯಾಗುತ್ತದೆ. ಅದರಲ್ಲಿ ಕಾಲು ಭಾಗದ ಕಸವನ್ನು ಈ ಸಂಸ್ಥೆ ಸಂಸ್ಕರಿಸುತ್ತಿದೆ. ಈ ಮೂಲಕ ಮೈಸೂರು ಇತರ ನಗರಗಳಿಗೆ ಮಾದರಿಯಾಗಿದೆ.