ರೈಲ್ವೆ ನಿಲ್ದಾಣದಲ್ಲೇ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ.!

0
122

ಹೈದರಾಬಾದ್‌ನ ಕಾಚೇಗುಡ ರೈಲು ನಿಲ್ದಾಣದ ಬಳಿ ರೈಲುಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಮಲ್ಟಿ-ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ (ಎಂಎಂಟಿಎಸ್) ರೈಲು ಬೆಳಿಗ್ಗೆ 10.30 ರ ಸುಮಾರಿಗೆ ಕರ್ನೂಲ್ ಸಿಟಿ-ಸಿಕಂದರಾಬಾದ್ ಹಂಡ್ರಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಡಿಕ್ಕಿಯಾಗಿದೆ. ಎರಡು ರೈಲುಗಳು ಒಂದಕ್ಕೊಂದು ಚಲಿಸುವ ಮೊದಲು ಒಂದೇ ಟ್ರ್ಯಾಕ್‌ನಲ್ಲಿ ಪರಸ್ಪರ ಚಲಿಸುವುದು ವೀಡಿಯೊದಲ್ಲಿ ವೈರಲ್ ಆಗಿದೆ.

ಈ ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಸಣ್ಣಪುಟ್ಟ ಗಾಯಗೊಂಡಿದ್ದ ಇಬ್ಬರು ಈಗಾಗಲೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಎರಡು ರೈಲುಗಳ ಪೈಕಿ ಒಂದರ ಚಾಲಕ ರೈಲುಗಳ ಮುಖಾಮುಖಿಯಿಂದ ಛಿದ್ರಗೊಂಡ ಅವಶೇಷಗಳ ನಡುವೆ ಇನ್ನೂ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ. ಆರಂಭದಲ್ಲಿ ಈ ಅಪಘಾತ ತಾಂತ್ರಿಕ ಪ್ರಮಾದಿಂದ ಉಂಟಾದ ಸಮಸ್ಯೆಯಿಂದಾಗಿ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ ಪ್ರಾಥಮಿಕ ತನಿಖೆಗಳು ಈ ಅಪಘಾತಕ್ಕೆ ಮಾನವ ತಪ್ಪುಗಳೇ ಕಾರಣ ಹೊರತು ತಾಂತ್ರಿಕ ಸಮಸ್ಯೆಯಲ್ಲ ಎಂದು ಸಾಬೀತುಪಡಿಸಿವೆ ಎಂದು ದಕ್ಷಿಣ-ಕೇಂದ್ರ ರೈಲ್ವೆಯ ಹೆಚ್ಚುವರಿ ಮಹಾ ವ್ಯವಸ್ಥಾಪಕ ಬಿಬಿ ಸಿಂಗ್ ತಿಳಿಸಿದ್ದಾರೆ.

ಅದೃಷ್ಟವಶಾತ್ ಅಪಘಾತ ಸಂಭವಿಸಿದ ವೇಳೆ ಎರಡೂ ರೈಲುಗಳ ವೇಗ ಸಾಕಷ್ಟು ತಗ್ಗಿತ್ತು. ಮುಖಾಮುಖಿ ಡಿಕ್ಕಿಯಾದ ಹೊಡೆತಕ್ಕೆ ರೈಲುಗಳ ಬೋಗಿಗಳು ಮೇಲೆದ್ದು ಕೆಲವು ಅಡಿಗಳವರೆಗೆ ದೂರದಲ್ಲಿ ತುಂಡಾಗಿ ಬಿದ್ದ ಭೀಕರ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಈ ರೈಲುಗಳು ವೇಗವಾಗಿ ಚಲಿಸುತ್ತಿದ್ದರೆ ಭಾರಿ ಪ್ರಮಾಣದ ಜೀವ ಹಾನಿ ಸಂಭವಿಸುವ ಅಪಾಯವಿತ್ತು.

ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಯೊಬ್ಬರ ಪ್ರಕಾರ, ಲಿಂಗಂಪಲ್ಲಿಯಿಂದ ಫಲಕ್ನುಮಾಗೆ ಪ್ರಯಾಣಿಸುತ್ತಿದ್ದ ಎಂಎಂಟಿಎಸ್ ರೈಲು ಕಾಚೇಗುಡ ನಿಲ್ದಾಣದ ಪ್ಲಾಟ್‌ಫಾರ್ಮ್ 2 ರಲ್ಲಿತ್ತು. ವೇಳಾಪಟ್ಟಿಯ ಪ್ರಕಾರ, ಹಂಡ್ರಿ ಎಕ್ಸ್‌ಪ್ರೆಸ್ (ಸಿಕಂದರಾಬಾದ್‌ನಿಂದ ಕರ್ನೂಲ್ ವರೆಗೆ) ನಿಲ್ದಾಣವನ್ನು ತಲುಪಿದ ನಂತರ, ಅದನ್ನು ಪ್ಲಾಟ್‌ಫಾರ್ಮ್ 4 ರಲ್ಲಿ ತೆಗೆದುಕೊಳ್ಳಲಾಗುತ್ತದೆ. ನಂತರ ಎಂಎಂಟಿಎಸ್ ರೈಲಿಗೆ ನಿರ್ಗಮಿಸುವ ಸಂಕೇತವನ್ನು ನೀಡಲಾಗುತ್ತದೆ. ಅದರಂತೆ ಹಂಡ್ರಿ ಎಕ್ಸ್‌ಪ್ರೆಸ್ ರೈಲಿಗೆ ಸಿಗ್ನಲ್ ನೀಡಿ ನಿಲ್ದಾಣಕ್ಕೆ ಪ್ರವೇಶಿಸುತ್ತಿತ್ತು. ಆದಾಗ್ಯೂ, ಎಂಎಂಟಿಎಸ್ ರೈಲಿನ ಲೊಕೊ ಪೈಲಟ್ ರೈಲನ್ನು ಚಲಿಸಲು ಪ್ರಾರಂಭಿಸಿದ್ದಾನೆ ಆದರೆ ಇದಕ್ಕೆ ಮೊದಲೇ ಸಿಗ್ನಲ್ ನೀಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಗಾಯಾಳುಗಳಿಗೆ ಪರಿಹಾರ

ರೈಲ್ವೆ ಸಚಿವಾಲಯವು ಸಣ್ಣಪುಟ್ಟ ಗಾಯಗೊಂಡವರಿಗೆ 5 ಸಾವಿರ ರೂ ಮತ್ತು ಅಧಿಕ ಗಾಯಗೊಮಡವರಿಗೆ 15 ಸಾವಿರ ರೂ ಪರಿಹಾರ ಘೋಷಣೆ ಮಾಡಿದೆ. ಘಟನೆಯಿಂದಾಗಿ ದಕ್ಷಿಣ ಕೇಂದ್ರ ರೈಲ್ವೆಯು ಕನಿಷ್ಠ 20 ರೈಲುಗಳ ಸಂಚಾರವನ್ನು ಭಾಗಶಃ ಸ್ಥಗಿತಗೊಳಿಸುವಂತಾಯಿತು. ಈ ಘಟನೆಯಿಂದ ಎಲ್ಲ ಪ್ರಯಾಣಿಕರೂ ಭಯಗೊಂಡಿದ್ದಾರೆ. ಅದರಲ್ಲಿಯೂ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು. ಕೆಲವು ಪ್ರಯಾಣಿಕರ ತಲೆ ಮತ್ತು ಮೊಣಕಾಲುಗಳು ಎದುರಿನ ಸೀಟುಗಳಿಗೆ ಹೊಡೆದ ರಭಸಕ್ಕೆ ಪೆಟ್ಟಾಗಿದ್ದು ಗಾಯ ಸುರಿಯುವಂತಾಗಿತ್ತು ಎಂದು ಪ್ರಯಾಣಿಕರು ಹೇಳಿದರು.