ಆಟೋದಲ್ಲೇ ಮಗುವನ್ನು ಮರೆತು ಹೋದ ಮಹಾತಾಯಿ; ಮೊಬೈಲ್-ನಲ್ಲಿ ಮಗ್ನಳಾಗಿದ್ದಳಂತೆ..

0
363

ಮೊಬೈಲ್ ಬಂದಾಗಿನಿಂದ ಎಷ್ಟೊಂದು ಒಳ್ಳೆಯದಾಗಿದೆ ಅಷ್ಟೊಂದೆ ಕೆಟ್ಟದೇ ಆಗಿದೆ ಅಂದರೆ ತಪ್ಪಾಗಲಾರದು ಏಕೆಂದರೆ ಜನರು ಮನೆಯಲ್ಲಿ ಮಾತನಾಡುವುದೆ ಕಡಿಮೆ ಮಾಡಿದ್ದಾರೆ ಗಂಡ- ಹೆಂಡತಿ ಮಕ್ಕಳಾಗಲಿ ಮನೆಯಲ್ಲಿ ಹೆಚ್ಚಾಗಿ ಮಾತನಾಡುವುದೇ ಕಡಿಮೆಯಾಗಿದ್ದು ಯಾಕೆ ಎನ್ನುವುದು ಒಂದೇ ಕಾರಣಕ್ಕೆಂದರೆ ಮೊಬೈಲ್-ನಲ್ಲಿ ಹೆಚ್ಚು ಮಗ್ನನಾಗಿರುವುದು. ಇತ್ತೀಚಿಗೆ ಅಂತು ಮಹಿಳೆಯರು ಹೆಚ್ಚಾಗಿ ಮೊಬೈಲ್ ಬಳಕೆಗೆ ಜಾರಿದ್ದು ತಾವು ಎಲ್ಲಿದ್ದೇವೆ ಏನನ್ನು ಮಾಡುತ್ತಿದ್ದೇವೆ ಎನ್ನುವುದನ್ನು ಕೂಡ ಮರೆತ್ತಿದ್ದಾರೆ. ನಿನ್ನೆ ಇಂತಹದೆ ಒಂದು ಪ್ರಕರಣ ನಡೆದಿದ್ದು ಮೊಬೈಲ್- ನಲ್ಲಿ ಮಾತನಾಡುತ್ತ ಆಟೋದಲ್ಲಿ ಮಗುವನ್ನೇ ಮರೆತು ತಾಯಿ ಹೋಗಿದ್ದ ಘಟನೆ ನಡೆದಿದೆ.

Also read: ಜಿಮ್-ಗಳಲ್ಲಿ ಬಾಡಿ ಬಿಲ್ಡಿಂಗ್ ಮಾಡಲು ಟ್ರೈನರ್-ಗಳ ಮಾತು ಕೇಳಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ, ಅದರಿಂದ ನಿಮ್ಮ ಪುರುಷತ್ವಕ್ಕೇ ಕುತ್ತು ಬಂದೀತು!!

ಹೌದು ಮಹಿಳೆಯೊಬ್ಬಳು ಮೊಬೈಲ್-ನಲ್ಲಿ ಮಾತನಾಡುತ್ತ ಮಗುವನ್ನು ಆಟೋದಲ್ಲಿ ಮರೆತು ಹೋದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆ ಮೊಬೈಲಿನಲ್ಲಿ ಮಾತನಾಡುತ್ತಾ ಮುಂದೆ ಹೋಗುತ್ತಿರುತ್ತಾಳೆ. ಹಿಂದೆ ಆಟೋ ಚಾಲಕ ಮಗುವನ್ನು ಎತ್ತಿಕೊಂಡು ಮಹಿಳೆಯನ್ನು ಕರೆಯುತ್ತಿರುತ್ತಾರೆ. ಚಾಲಕ ಕರೆಯುತ್ತಿರುವುದನ್ನು ಕೇಳಿದ ಮಹಿಳೆ ತಕ್ಷಣ ನಿಂತು ಹಿಂದೆ ತಿರುಗಿದ್ದಾಳೆ. ಈ ವೇಳೆ ಚಾಲಕ ಇದು ನಿಮ್ಮ ಮಗು ತಾನೇ ಎಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಆಗ ಮಹಿಳೆ ಹೌದು ಎಂದು ಉತ್ತರಿಸಿದ್ದಾಳೆ.

ಇದನ್ನು ನೋಡಿದ ಸ್ಥಳಿಯರು ಒಂದು ಕ್ಷಣ ಆತಂಕದಲ್ಲಿ ಮುಳುಗಿದ್ದಾರೆ. ಇದನ್ನು ಜನರು ಸೆರೆಹಿದಿದ್ದು ಅಮಿತ್ ಸ್ಮೈಲಿಂಗ್ ಎಂಬವರು ಈ ವಿಡಿಯೋವನ್ನು ಮೊದಲು ಟ್ವೀಟ್ ಮಾಡಿ ಅದಕ್ಕೆ, “ಸಾಮಾನ್ಯವಾಗಿ ಜನರು ಆಟೋದಲ್ಲಿ ತಮ್ಮ ಜೊತೆಯಲ್ಲಿ ಇರುವ ಕೊಡೆ ಅಥವಾ ಬ್ಯಾಗ್ ಮರೆತು ಹೋಗುತ್ತಾರೆ. ಆದರೆ ಈ ಮೆಡೆಮ್ ತಮ್ಮ ಮಗುವನ್ನೇ ಮರೆತು ಹೋಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಚಿತ್ರದ ಅಥವಾ ಜಾಹೀರಾತಿನ ಚಿತ್ರೀಕರಣ ಎಂಬುದರ ಬಗ್ಗೆಯೂ ಸ್ಪಷ್ಟವಾಗಿಲ್ಲ. ಆದರೆ ಟ್ವಿಟ್ಟರಿನಲ್ಲಿ ಈ ವಿಡಿಯೋ ನೋಡಿ ಕೆಲವರು, “ಇದು ಜಾಹೀರಾತಿನ ಶೂಟಿಂಗ್” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಇದು ಫೇಕ್ ವಿಡಿಯೋ” ಎಂದು ಕಮೆಂಟ್ ಮಾಡಿದ್ದಾರೆ.

ಇಂತಹದೆ ಹಲವು ರೀತಿಯ ಘಟನೆಗಳು ನಡೆಯುತ್ತಿದ್ದು ಮೊಬೈಲ್ ಅವಾಂತರದಿಂದ ಏನಲ್ಲ ಆಗುತ್ತಿದೆ ಎನ್ನುವುದು ಪ್ರಶ್ನೆಯಾದರೆ ಇಂತಹದೆ ಘಟನೆ ನಡೆದಿದ್ದು ಮೊಬೈಲ್ ಫೋನ್‍ನಲ್ಲಿ ಗೇಮ್ಸ್ ಆಡುತ್ತ ಮಗುವೊಂದು ಟಾಯ್ಲೆಟ್‍ ನಲ್ಲಿ ಸಿಲುಕಿಕೊಂಡಿದ್ದು, ಆತನನ್ನು ಹೊರ ತೆಗೆಯಲು ತಂದೆ-ತಾಯಿ ಪರದಾಡಿದ ಪ್ರಸಂಗ ನಡೆದಿದೆ. ಚೀನಾದ ವುಹಾನ್‍ನಲ್ಲಿ ಇದು ನಡೆದಿದ್ದು, ಉಳಿದ ಮಕ್ಕಳಿಗೆ ಹಾಗೂ ತಾಯಂದಿರಿಗೆ ಇದೊಂದು ಎಚ್ಚರಿಕೆ ಗಂಟೆ ಆಗಿದೆ. ಕಮೋಡ್‍ ನಲ್ಲಿ ಕುಳಿತಿದ್ದ 6 ವರ್ಷದ ಮಗು ಗೇಮ್ಸ್ ನಲ್ಲಿ ತಲ್ಲೀನಗೊಂಡು ತನ್ನ ಸೊಂಟದ ಭಾಗವನ್ನು ಸಿಕ್ಕಿ ಹಾಕಿಸಿಕೊಂಡಿತ್ತು. ಕೆಲ ಹೊತ್ತಿನ ಬಳಿಕ ಅದನ್ನು ನೋಡಿದ ತಾಯಿ ಮಗುವನ್ನು ಎತ್ತಲು ಹೋದರೆ ಆಗಲಿಲ್ಲ.
ಸುಮಾರು ಒಂದು ಗಂಟೆ ಕಾಲ ಹಾಗೆ ಸಿಲುಕಿಕೊಂಡಿದ್ದ ಮಗುವನ್ನು ರಕ್ಷಿಸಲು ಅವರು ಕೊನೆಗೆ ಅಗ್ನಿಶಾಮಕ ದಳದವರಿಗೆ ಕರೆ ಮಾಡಬೇಕಾಯಿತು. ಕೆಲವೇ ನಿಮಿಷಗಳಲ್ಲಿ ಆಗಮಿಸಿದ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಇದೆಲ್ಲವೂ ಮೊಬೈಲ್-ಗಳು ತಂದ ಅವಾಂತರಗಳಾಗಿದ್ದು ಇನ್ನೂ ಈ ಕಣ್ಣಲಿ ಏನೇನು ನೋಡಬೇಕು ಎನ್ನುವುದು ಕಾದುನೋಡಬೇಕು.