ಬೆಡ್ರೂಮ್-ನಲ್ಲಿ ನೀವು ಉಪಯೋಗಿಸೋ ಟೆಕ್ ಉಪಕರಣಗಳು ಹ್ಯಾಕ್ ಆಗಿ ನಿಮ್ಮ ಖಾಸಗಿ ಕ್ಷಣಗಳು ಲೋಕಕ್ಕೇ ಹರಡುತ್ತೆ ಹುಷಾರ್!!

0
497

ಜಗತ್ತಿನಲ್ಲಿ ಟೆಕ್ನಾಲಜಿ ಬೆಳೆದು ನಿಂತಿದೆ. ಕೂತಲ್ಲೇ ಎಲ್ಲ ಎನ್ನುವ ಮಟ್ಟಕ್ಕೆ ಬಂದು ಎಲ್ಲವೂ ಸ್ಮಾರ್ಟ್ ಆಗುತ್ತಾ ಹೋಗುತ್ತಿದೆ. ಬಳಸುವ ಮೊಬೈಲ್-ಗಳಿಂದ ಹಿಡಿದು ಟಿವಿಗಳು ಕೂಡ ಸ್ಮಾರ್ಟ್ ಆಗಿವೆ, ಅದರ ಜೊತೆಗೆ ಮರ್ಯಾದೆ ಕೂಡ ಸ್ಮಾರ್ಟ್ ನಲ್ಲೆ ಹೋಗುತ್ತಿದೆ. ಇದನ್ನು ಅರಿಯಲು ತುಸುವೇ ತಡವಾದರೂ ಒಂದಿಲ್ಲದೊಂದು ದಿನ ಅರಿವಿವೆ ಬರುತ್ತೆ ಅಂತ ಹಲವು ಹೇಳುತ್ತಿದ್ದಾರೆ. ಅದು ಇಷ್ಟು ಬೇಗನೆ ನಿಜವಾಗುತ್ತೆ ಅಂತ ಊಹಿಸಲಾಗದ ಘಟನೆಯೊಂದು ನಡೆದಿದ್ದು, ಸ್ಮಾರ್ಟ್ ಟಿವಿಯಲ್ಲಿ ಸೆಕ್ಸ್ ವಿಡಿಯೋಗಳನ್ನು ನೋಡುತ್ತಿದ್ದ ವ್ಯಕ್ತಿಯೊರ್ವನಿಗೆ ತನ್ನದೇ ವಿಡಿಯೋವನ್ನು ಸ್ಮಾರ್ಟ್ ಟಿವಿ ತೋರಿಸಿದೆ.

Also read: ದಾರಾಳವಾಗಿ ದೇವಾಲಯಕ್ಕೆ ಬಂದು ಸಹೋದರಿಯನ್ನೇ ಮದ್ವೆಯಾದ ಯುವತಿ; ಫೇಸ್‍ಬುಕ್‍ನಲ್ಲಿ ಫೋಟೋ ಹಂಚಿಕೊಂಡ ಸುದ್ದಿ ವೈರಲ್..

ಹೌದು ಈಗಿನ ಜನರಿಗೆ ಎಲ್ಲವೂ ಸ್ಮಾರ್ಟ್ ಕಾಣಬೇಕು ಎನ್ನುವ ಮನೋಭಾವನೆ ಹುಟ್ಟಿಕೊಂಡಿದೆ. ಅದರ ಪರಿಣಾಮವೇನು ಎನ್ನುವ ಲೆಕ್ಕ ಹಾಕಲು ಸಮಯ ಕೂಡ ಇಲ್ಲದಾಗಿದೆ. ಆದರೆ ತಾವು ಇಂಟರ್ನೆಟ್ ಸಹಾಯದಿಂದ ಉಪಯೋಸುವ ಇಲೆಕ್ಟ್ರಾನಿಕ್ ವಸ್ತುಗಳನ್ನು ಸರಳವಾಗಿ ಹ್ಯಾಕ್‌ ಮಾಡುವ ವಿಷಯವು ತಿಳಿದಿದೆ. ಅದರಂತೆ ಇಷ್ಟು ದಿನ ಬ್ಯಾಂಕ್ ಅಕೌಂಟ್, ಮೊಬೈಲ್, ಕಂಪ್ಯೂಟರ್-ಗಳನ್ನೂ ಹ್ಯಾಕ್ ಮಾಡುವುದು ತಿಳಿದಿತ್ತು, ಆದರೆ ಈಗ ಬೆಡ್ ರೂಮ್–ನಲ್ಲಿರುವ ಟಿವಿಗಳನ್ನೂ ಹ್ಯಾಕ್ ಮಾಡುವ ಸುದ್ದಿ ತಿಳಿದಿದ್ದು ಜನರಿಗೆ ಭಯ ಹುಟ್ಟಿಸಿದೆ.

ಏನಿದು ಘಟನೆ?

Also read: ಪ್ರೀತಿಸಿ ಕೈಕೊಡಲು ಯತ್ನಿಸಿದ ಯುವಕನ ಮುಖಕ್ಕೆ ಪ್ರಿಯತಮೆಯಿಂದಲೇ ಆ್ಯಸಿಡ್ ದಾಳಿ..

ಸೂರತ್‌ನಲ್ಲಿ ಕಂಡುಕೇಳರಿಯದ ಪ್ರಕರಣವೊಂದು ವರದಿಯಾಗಿದೆ. ಮನೆಯೊಂದರ ಬೆಡ್‌ರೂಂನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್‌ ಟೀವಿಯನ್ನು ಹ್ಯಾಕ್‌ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯಗಳನ್ನು ಸೆರೆ ಹಿಡಿದು, ಅಶ್ಲೀಲ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಲಾಗಿರುವ ಘಟನೆ ನಡೆದಿದೆ. ತನ್ನದೇ ವಿಡಿಯೋ ಆನ್‌ಲೈನ್‌ ಅಶ್ಲೀಲ ಜಾಲತಾಣದಲ್ಲಿರುವುದನ್ನು ಪತಿ ನೋಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಇದು ಸ್ಮಾರ್ಟ್‌ ಟೀವಿ ಬಳಕೆದಾರರಿಗೆ ಎಚ್ಚರಿಕೆ ಗಂಟೆಯಾಗಿದೆ.

ನಡೆದಿದ್ದು ಏನು?

ನಗರದ ಮಹೇಶ್ ಎನ್ನುವ ವ್ಯಕ್ತಿ ಆನ್ ಲೈನ್ ವೆಬ್ ಸೈಟ್ ಮೂಲಕ ಸ್ಮಾರ್ಟ್ ಟಿವಿಯಲ್ಲಿ ಸೆಕ್ಸ್ ವಿಡಿಯೋಗಳನ್ನು ನೋಡುತ್ತಿದ್ದ. ಒಂದೊಂದೆ ವಿಡಿಯೋಗಳನ್ನು ನೋಡುತ್ತಿದ್ದ ಮಹೇಶ್ ತನ್ನ ಪತ್ನಿ ಜೊತೆಗೆ ನಡೆಸಿದ್ದ ಸೆಕ್ಸ್ ವಿಡಿಯೋವೊಂದು ಪ್ರಸಾರವಾಗಿದೆ. ಇದರಿಂದ ಹೌಹಾರಿದ ಆತ ತಾನು ಯಾವುದೇ ರೀತಿಯಲ್ಲೂ ಹೆಂಡತಿ ಜೊತೆಗಿನ ರಾಸಲೀಲೆ ಕ್ಷಣಗಳನ್ನು ಮೊಬೈಲ್ ಅಥವಾ ಕ್ಯಾಮೆರಾ ಇಟ್ಟು ಸೆರೆ ಹಿಡಿದಿರಲಿಲ್ಲ. ಆದರೂ ತನ್ನ ಬೆಡ್ ರೂಂನಲ್ಲಿ ನಡೆದಿದ್ದ ರಾಸಲೀಲೆಯನ್ನು ಹೇಗೆ ವಿಡಿಯೋ ಮಾಡಲಾಗಿದೆ ಎಂದು ಗೊಂದಲದಲ್ಲಿ ಮುಳುಗಿದ್ದು, ಪೊಲೀಸರಿಗೆ ದೂರು ಕೊಟ್ಟರೇ ಅವಮಾನವಾಗುತ್ತದೆ ಎಂದು ಮಹೇಶ್ ಸೈಬರ್ ಸೆಕ್ಯೂರಿಟಿ ಹಾಗೂ ಸೈಬರ್ ಅಪರಾಧಗಳ ಕುರಿತು ಜ್ಞಾನವಿರುವ ತಜ್ಞರನ್ನು ಸಂಪರ್ಕಿಸಿದ್ದಾನೆ.

Also read: ಪತ್ನಿ ಮೇಲೆ ಅನುಮಾನಗೊಂಡ ಟೆಕ್ಕಿ ಮನೆಯಲ್ಲಿ ಬರೋಬರಿ 22 ಗುಪ್ತ ಕ್ಯಾಮೆರಾ ಇಟ್ಟಾಗ ತಿಳಿಯಿತು ಪತ್ನಿಯ ಅಸಲಿ ಹೊಡೆತ..

ನಂತರ ಅವರು ಮನೆಯಲ್ಲಿ ಹಿಡನ್ ಕ್ಯಾಮೆರಾಗಳನ್ನು ಇದೆ ಎಂದು ಪರಿಶೀಲಿಸಿದ್ದಾರೆ. ಆಗ ಅವರಿಗೆ ಯಾವುದೇ ಹಿಡನ್ ಕ್ಯಾಮೆರಾ ಸಿಕ್ಕಿಲ್ಲ. ಆದರೆ ವಿಡಿಯೋ ಯಾವ ರೀತಿ ಸೆರೆಯಾಯಿತು ಹಾಗೂ ಅಪ್‌ಲೋಡ್‌ ಆಯಿತು ಎಂಬ ವಿಚಾರಕ್ಕಾಗಿ ಸಾಕಷ್ಟುತಲೆಕೆಡಿಸಿಕೊಂಡಿದ್ದಾರೆ. ಕೊನೆಗೆ ಕೋಣೆಯಲ್ಲಿದ್ದ ಟೀವಿ ಮೇಲೆ ಅನುಮಾನ ಬಂದಿದೆ. ಆಗ ರಾಜೇಶ್ ಅವರಿಂದ ಮಾಹಿತಿ ಪಡೆದಾಗ ಅವರು ಅಶ್ಲೀಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಹ್ಯಾಕರ್‌ ಟೀವಿಯನ್ನು ಕಂಪ್ಯೂಟರ್‌ ರೀತಿ ಹ್ಯಾಕ್‌ ಮಾಡಿದ್ದಾನೆ. ಟಿವಿಯಲ್ಲಿರುವ ಬಿಲ್ಟ್ ಇನ್ ಕ್ಯಾಮೆರಾವನ್ನು ನಿಯಂತ್ರಿಸತೊಡಗಿದ್ದಾರೆ. ಈ ಮೂಲಕ ಮಹೇಶ್ ಅವರ ರಾಸಲೀಲೆಯ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಅದಕ್ಕಾಗಿ ಯಾವುದೇ ವಸ್ತುವನ್ನು ಉಪಯೋಸುವ ಮುನ್ನ ಎಚ್ಚರದಿಂದ ಉಪಯೋಸುವುದು ಒಳ್ಳೆಯದು.