ಟಿವಿ ಪ್ರಿಯರೆ ಎಚ್ಚರ; ಹೆಚ್ಚು ಹೊತ್ತು ಟಿವಿ ನೋಡಿದರೆ ಬರಿ ಕಣ್ಣಿಗೆ ಅಪಾಯವಲ್ಲ ಕ್ಯಾನ್ಸರ್ ಕೂಡ ಬರುತ್ತೆ..

0
637

ಟಿವಿ ನೋಡುವುದು ಅಪಾಯ ಅಂತ ಮನೆಯಲ್ಲಿ ಅಪ್ಪ- ಅಮ್ಮ ಕುಗಾಡುತ್ತಿದ್ದರು ಅದು ಇದಕ್ಕೆ ಅನಿಸುತ್ತೆ! ಟಿವಿ ನೋಡುವುದು ಕಣ್ಣಿನ ದೃಷ್ಟಿಯನ್ನು ಹಾಳು ಮಾಡುತ್ತೆ. ಮತ್ತು ಮಾನಸಿಕವಾಗಿ ಪ್ರಭಾವ ಬೀರುತ್ತೆ ಅಂತ ಹಲವರು ಮನೆಯಲ್ಲಿ ಹೆಚ್ಚು ಟಿವಿ ವೀಕ್ಷಣೆಗೆ ಅವಕಾಶ ಮಾಡಿ ಕೊಡುತ್ತಿರಲಿಲ್ಲ. ಮತ್ತೆ ಆ ವಿಷಯದಲ್ಲಿ ಯಾರಿಗೂ ಸಂಪೂರ್ಣ ಅಪಾಯಗಳು ಕೂಡ ತಿಳಿದಿರಲಿಲ್ಲ, ಈಗ ಟಿವಿ ವಿಕ್ಷಣೆಯ ಬಗ್ಗೆ ಹೊಸ ಸಂಶೋಧನೆ ನಡೆದು ಅದರ ಪಲಿತಾಂಶ ಬಂದಿದ್ದು, ಹೆಚ್ಚು ಟಿವಿ ನೋಡಿದರೆ ಕ್ಯಾನ್ಸರ್ ಬರುತ್ತೆ ಅಂತ ತಿಳಿಸಿದೆ.

Also read: ನಾವ್ ಹೇಳಿದಂತೆ ಈ ರೀತಿ ಮಾಡ್ತಾ ಬನ್ನಿ ನಿಮಗೆ ಬಾಯಿ ಕ್ಯಾನ್ಸರ್ ಬರುವ ಪ್ರಮೇಯ ಶೇಕಡ 50% ಕಮ್ಮಿಯಾಗುತ್ತೆ!!

ಹೌದು ಒಂದು ದಿನ ಟಿವಿ ನೋಡಿಲ್ಲ ಎಂದರೆ ಸಮಾದಾನವೇ ಇಲ್ಲ ಅನ್ನೋ ಜನರು ಬಹುತೇಕ ಅದರಂತೆ ಒಂದು ಮನೆಯಲ್ಲಿ ಕಡಿಮೆ ಎಂದರು ಎರಡರಿಂದ 3 ಟಿವಿ ಇರುವುದು ಸಾಮಾನ್ಯವಾಗಿದೆ ಹೇಗೆಂದರೆ ಹಾಲ್-ನಲ್ಲಿ ಒಂದು ಬೆಡ್ರೂಮ್-ನಲ್ಲಿ ಒಂದು ಅಂತ ಇರುತ್ತೆ. ಅದರಲ್ಲಿ ಮಕ್ಕಳಿಗೆ ಟಿವಿ ಇಲ್ಲದಿದ್ದರೆ ನಡೆಯುದೆ ಇಲ್ಲ, ಅವರಿಗಷ್ಟೇ ಯಾಕೆ ಮನೆಯಲ್ಲಿರುವ ಹಿರಿಯರಿಗೆ ಕೂಡ ಟಿವಿಯ ಅವಶ್ಯಕತೆ ತುಂಬಾನೇ ಇದೆ. ಇನ್ನೂ ಗೃಹಿಣಿಯರ ವಿಷಯ ಅಂತು ಹೇಳೋದೇ ಬೇಡ, ದಿನದ 24 ಗಂಟೆ ಬರುವ ಸಿರಿಯಲ್ಸ್-ಗಳು ಮನೆಯ ಮಹಿಳೆಯರಿಗೆ ಊಟ, ನಿದ್ದೆ, ಕೆಲಸ ಎಲ್ಲವು ಸಿರಿಯಲ್ ಮೇಲೆ ನಡೆಯುತ್ತೆ. ಮತ್ತು ಮನೆಯ ಕೆಲವೊಂದು ಜಗಳಗಳು ಕೂಡ ಟಿವಿ ಸಿರಿಯಲ್ಸ್-ಗಳ ಮಾದರಿಯಲ್ಲಿ ನಡೆಯುತ್ತಿವೆ. ಇಷ್ಟೊಂದು ಟಿವಿಯ ಪ್ರಭಾವಕ್ಕೆ ಒಳಗಾದ ಜನರು ಟಿವಿ ನೋಡಿದರೆ ಅಪಾಯ ಕಾದಿದೆ ಅಂತ ಹೇಗೆ ಹೇಳಿದರು ಸತ್ಯವೆಂದು ತಿಳಿಯುವುದು ಬಹುತೇಕ ಅನುಮಾನ.

ಹೆಚ್ಚು ಟಿವಿ ನೋಡಿದರೆ ಕ್ಯಾನ್ಸರ್ ಬರುತ್ತಾ?

Also read: ಇನ್ಮುಂದೆ ಕ್ಯಾನ್ಸರ್ ಖಾಯಿಲೆಗೆ ಹೆದರಬೇಕಿಲ್ಲ; ಅಂತು ಇಂತೂ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧಿ ಕಂಡು ಹಿಡಿದ ಇಸ್ರೇಲ್ ವಿಜ್ಞಾನಿಗಳು..

ಪ್ರತಿ ದಿನ ನಿರಂತರ 2 ಗಂಟೆಗೂ ಹೆಚ್ಚು ಕಾಲ ಟಿವಿ ಮುಂದೆ ಕೂರುವುದರಿಂದ ಕರುಳಿನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಶೇ.70ರಷ್ಟಿರುವುದಾಗಿ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಹಾಗೂ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಸಂಶೋಧನೆಗೆ ಮುಖ್ಯಕಾರಣ ಎಂದರೆ 50ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಡೆದ ಸಂಶೋಧನೆಯ ಬಳಿಕ ಈ ಫಲಿತಾಂಶಕ್ಕೆ ಬರಲಾಗಿದೆ. ಅದರಲ್ಲಿ ತುಂಬಾ ಹತ್ತಿರದಿಂದ ಟಿವಿ ವೀಕ್ಷಣೆ ಮಾಡುವ ಮಕ್ಕಳು ಕಣ್ಣಿನ ತೊಂದರೆಯನ್ನು ಎದುರಿಸ ಬೇಕಾಗುತ್ತೆ. ಮತ್ತು ಕಣ್ಣಿನ ಸಮಸ್ಯೆ ವಿರುವ ನಿರಂತರ 30 ನಿಮಿಷಗಳ ಕಾಲ ದಿಟ್ಟಿಸಿ ಟಿವಿ ನೋಡುವುದು ಅಪಾಯ ಎಂದು ಸಂಶೋಧನೆ ತಿಳಿಸದೆ. ಈ ಕುರಿತು ಮಾಸ ಪತ್ರಿಕೆಯಲ್ಲೂ ಮುದ್ರಿಸಲಾಗಿದೆ.

ಸಂಶೋಧನೆ ಹೇಳುವ ಪ್ರಕಾರ:

Also read: ಎಳೆ ಕಂದಮ್ಮಗಳಿಗೆ ಹಚ್ಚುವ ಜಾನ್ಸನ್ ಬೇಬಿ ಪೌಡರ್-ನಿಂದ ಮಕ್ಕಳಿಗೆ ಭೇಕರ ಕ್ಯಾನ್ಸರ್ ಬರಬಹುದು ಎಂದು ಶ್ರೀಲಂಕಾದಲ್ಲಿ ಬ್ಯಾನ್ ಮಾಡಲಾಗಿದೆ.. ನಮ್ಮ ದೇಶದಲ್ಲೂ ಹೀಗೆ ಮಾಡಬೇಕಾ?

ಅಮೆರಿಕದ 89,278 ಮಹಿಳೆಯರನ್ನು ಕ್ಯಾನ್ಸರ್‌ ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 118 ಯುವತಿಯರಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್‌ ಪತ್ತೆಯಾಗಿದೆ. ಇವರೆಲ್ಲರೂ ದಿನದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟಿವಿ ನೋಡುತ್ತಿರುವುದು ಸಮೀಕ್ಷೆಯಲ್ಲಿ ತಿಳಿಯಲಾಗಿದೆ. ಪ್ರತಿ ದಿನ 2 ಗಂಟೆಗೂ ಅಧಿಕ ಕಾಲ ಟಿವಿಯಲ್ಲಿ ತೊಡಗುವವರಲ್ಲಿ ಕ್ಯಾನ್ಸರ್‌ ಪತ್ತೆಯ ಸಾಧ್ಯತೆ ಶೇ.70ರಷ್ಟಿರುವುದಾಗಿ ಹೇಳಲಾಗಿದೆ. ಸಂಶೋಧನೆ ವೇಳೆ ಅನೇಕರಲ್ಲಿ ಕುಟುಂಬದಲ್ಲಿ ಯಾರಲ್ಲೂ ಇಲ್ಲದಿದ್ದರೂ ಕ್ಯಾನ್ಸರ್‌ ಪತ್ತೆಯಾಗಿದೆ. 20-30 ವರ್ಷದೊಳಗಿನವರಲ್ಲಿ ಕರುಳಿನ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ಅಲ್ಲದೆ ಆರಂಭಿಕ ಹಂತದಲ್ಲಿ ಇವುಗಳ ಪತ್ತೆಯಿಂದ ತಡೆಗಟ್ಟಲು ಸಾಧ್ಯವಿದೆ. ಇದಕ್ಕೆ ಸ್ಪಷ್ಟ ಕಾರಣಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.