ವಿಶ್ವ ಜಲ ದಿನ : ಜಲ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಿ

0
549

ಪ್ರತಿಯೊಂದು ಜೀವಿಗಳಿಗೂ ನೀರು ಅತ್ಯಮೂಲ್ಯವಾಗಿದ್ದು ಪ್ರತಿಯೊಬ್ಬರೂ ಜಲ ಸಂರಕ್ಷಣೆಯತ್ತ ಗಮನ ನಿಡಬೇಕು ಎಂದು ಪ್ರೊ.ಜಿ.ಪಿ.ಶಿವಶಂಕರ್ ತಿಳಿಸಿದರು.

ವಿಶ್ವದ ಸಮಸ್ತ “ಜೀವಜಂತು” ಗಳಿಗೆ “ಜೀವತಂತು” ಈ ಜಲ. ೭೦೦ ಕೋಟಿ  ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬುದು ವೈಜ್ಞಾನಿಕ ಸತ್ಯ. ಮಾನವನಿರಬಹುದು, ಇತರೆ ಪ್ರಾಣಿ ಪಕ್ಷಿಗಳಿರಬಹುದು,ಇಲ್ಲವೇ ಸಸ್ಯ ಸಂಕುಲವಿರಬಹು ಇವೆಲ್ಲವುದಕ್ಕೂ ನೀರು ಅತ್ಯಮೂಲ್ಯ.

ಮನುಷ್ಯನು ಊಟ ತಿ೦ಡಿ ಹಾಗೂ ನಿದ್ರೆಯಿಲ್ಲದೇ ಜೀವಿಸಬಲ್ಲ. ಆದರೆ ಬದುಕಿನ ಅವಿಭಾಜ್ಯ ಅ೦ಗವಾದ ಗಾಳಿ ಮತ್ತು ನೀರಿಲ್ಲದೇ ಬದುಕುವುದು ಕಷ್ಟಸಾಧ್ಯ. ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವದಾದ್ಯ೦ತ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ನೀರಿನ ಕೊರತೆಯ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದೇ ಈ ಆಚರಣೆಯ ಉದ್ದೇಶ. ಆದರೆ ಎಷ್ಟು ಜಾಗೃತಿ ಮೂಡಿಸಿದರೂ ನೀರಿಗೆ ಸಮಸ್ಯೆ ಇಲ್ಲದವರು ನೀರನ್ನು ಬೇಕಾ ಬಿಟ್ಟಿ ವಿನಿಯೋಗಿಸಿ ದುರುಪಯೋಗ ಮಾಡುವ ಪರಿ ಒ೦ದು ಕಡೆಯಾದರೆ, ಪ್ರತಿ ನಿತ್ಯ ನೀರಿಗಾಗಿ ಹಾಹಕಾರ ಪಡುವವರು ಇನ್ನೊ೦ದು ಕಡೆ ನಮಗೆ ಕಾಣಬಹುದಾಗಿದೆ. ಬಹುತೇಕ ಪ್ರದೇಶಗಳಲ್ಲಿ ಸರಿಯಾಗಿ ಮಳೆಯಾಗದೆ, ನೀರಾವರಿ ವ್ಯವಸ್ಥೆ ಇಲ್ಲದೇ ಜಲಕ್ಷಾಮ ತಲೆದೋರುತ್ತದೆ. ಕೆಲವೆಡೆ ನೀರನ್ನು ಅತಿಯಾಗಿ ಬಳಕೆ ಮಾಡುವುದರಿಂದ ಜಲವನ್ನು ದುರ್ಬಲಕೆ ಮಾಡಲಾಗುತ್ತದೆ. ಮತ್ತೂಂದೆಡೆ ನೀರಿಗಾಗಿ ಹಾಹಾಕಾರ ತಲೆದೋರಿದ್ದನ್ನು ಕಾಣಬಹುದಾಗಿದೆ.

ಪ್ರತಿನಿತ್ಯ 66.3 ಕೋಟಿ ಜನರು ಜಲ ಸಂಪನ್ಮೂಲ ಬಳಕೆಯ ಕೊರತೆ ಅನುಭವಿಸುತ್ತಿದ್ದು, ನಿತ್ಯ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 800 ಮಕ್ಕಳು ಕಲುಷಿತ ನೀರಿನ ಸೇವನೆಯಿಂದ ಅತಿಸಾರ ಮತ್ತಿತರೆ ಖಾಯಿಲೆಗಳಿಗೊಳಗಾಗಿ ಸಾವಿಗೀಡಾಗುತ್ತಿದ್ದಾರೆ.

ವರ್ತಮಾನದಲ್ಲಿ ಸಂಶೋಧನೆಗಳು ಹೇಳಿರುವಂತೆ ಈ “ಕ್ಷೀರಪಥ ತಾರಾಗಣ”ದಲ್ಲಿ (milkyway galaxi ) ಭೂಮಿಮಾತ್ರ ಮಾನವ ವಾಸಯೋಗ್ಯ ತಾಣ  ಮತ್ತು  ಶುದ್ಧ ಸಿಹಿನೀರು ಸಿಗುವ ಏಕೈಕ ಗ್ರಹ. ಆದರೆ ಇದನ್ನು ಅರ್ಥೈಸಿಕೊಳ್ಳದ ನಾವು ನೀರನ್ನು ಯತೆಚ್ಚವಾಗಿ ಬಳಸಿ ನೈಸರ್ಗಿಕ ಸಂಪತ್ತನ್ನು ಹಾಳುಗೆಡವುತ್ತಿದ್ದೇವೆ. ನೈಸರ್ಗಿಕ ಸಂಪತ್ತನ್ನು ದುರ್ವಿನಿಯೋಗ ಮಾಡುತ್ತಿದ್ದೇವೆ.

ಹೌದು ಇಂದು ಮಾರ್ಚ್ ೨೨ “ವಿಶ್ವ ಜಲ ದಿನ”. ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಇದರ ಮಹತ್ವವನ್ನು ಸಾರಿ ಹೇಳುವ, ಅರ್ಥಮಾಡಿಸುವ ಅಗತ್ಯವಿದೆ. ಈ ನೈಸರ್ಗಿಕ ಸಂಪತ್ತುಗಳು ನಮ್ಮ ಭವಿಷ್ಯದ ನಾಗರೀಕತೆಯ ಸೊತ್ತು ಎನ್ನುವುದನ್ನೂ ತಿಳಿಸಬೇಕಿದೆ. ಒಬ್ಬ ಸಾಧಾರಣ ನಾಗರೀಕನಾಗಿ “ಜಲ ಸಂಪತ್ತನ್ನು ಉಳಿಸಲು” ನಾವೇನು ಮಾಡಬಹುದೆಂದು ಅರಿಯುವ ಕಾರ್ಯವಾಗಬೇಕಿದೆ.