ದೈವ ಸ್ವರೂಪ ಹತ್ತಿ ಮರದಿಂದ ಕಣ್ಣೀರು, ಪವಾಡಕ್ಕೆ ಸಾಕ್ಷಿಯಾದ ನೆಲಮಂಗಲದ ಜನತೆಯಲ್ಲಿ ಆತಂಕ..

0
1600

ಕಣ್ಣೀರಿನ ಸುರಿಮಳೆಗೈಯುತ್ತಿದ್ದಾಳಾ ಹತ್ತಿ ದೇವಿ…?!

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೂಂದರಲ್ಲೂ ಪೂಜನೀಯ ಭಾವದಿಂದ ನೋಡ್ತೀವಿ. ಮರ, ಗಿಡ, ವಸ್ತುಗಳಲ್ಲೂ ದೇವರಿದ್ದಾನೆ ಅಂತ ನಂಬಿದೀವಿ. ಹಾಗೆ ಹತ್ತಿ ಮರವನ್ನು ಪೂಜಿಸ್ತೀವಿ.

ಹತ್ತಿ ಮರ.. ಹತ್ತಿಯ ಉಪಯೋಗಗಳು ನೂರಾರು. ದೇವರು ಕರುಣಿಸಿದ ಮತ್ತೊಂದು ಕಲ್ಪ ವೃಕ್ಷದ ಹೆಸರು- ಹತ್ತಿ..! ಬೇವಿನ ಮರ, ಬಿಲ್ಪತ್ರೆ ಮರ, ಅರಳಿ ಮರದಂತೆಯೇ ಹತ್ತಿ ಮರಕ್ಕೂ ಪೂಜನೀಯ ಭಾವವಿದೆ. ಈಗ್ಯಾಕೆ ಈ ಹತ್ತಿ ಮರದ ಕಥೆ ಅಂದುಕೊಂಡರ.. ಇಲ್ಲೊಂದು ಊರಲ್ಲಿ ಹತ್ತಿ ಮರ ಅಳುತ್ತಿದೆ ಕಂಡ್ರಿ. ಹತ್ತಿ ಮರದ ಕಣ್ಣೀರಿಗೆ ಜನ ನಿಬ್ಬೆರಗಾಗಿದ್ದಾರೆ. ಅಷ್ಟಕ್ಕೂ ಹತ್ತಿ ಮರ ಅಳುತ್ತಾ.? ಯಾಕೆ.? ಏನಾಯ್ತು..?

ಹ್ಮ್… ಇದೇ ನಾನ್ ಹೇಳಿದ್ ಹತ್ತಿ ಮರ. ನೋಡಿ ಅತ್ತು ಅತ್ತು ಕಣ್ಣೀರು ಹೇಗೆ ಸುರಿಸ್ತಿದೆ ಅಂತ. ಈ ಹತ್ತಿ ಮರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. 200 ವರ್ಷದ ಹಳೆಯ ಪುರಾತನ ಹತ್ತಿ ಮರವಂತೆ ಇದು. ಇಲ್ಲಿನ ಜನ ಇಷ್ಟು ವರ್ಷ ಈ ಹತ್ತಿ ಮರಕ್ಕೆ ಪೂಜೆ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಬೇರೊಂದು ಮರಕ್ಕೆ ಪೂಜೆ ಮಾಡಲು ಶುರು ಮಾಡಿದ್ದಾರೆ. ಸೋ, ಹತ್ತಿ ಮರಕ್ಕೆ ನೋವಾಗಿದೆ ಅದಕ್ಕೆ ಅಳುತ್ತಿದೆ ಅಂತಾರೆ ಇಲ್ಲಿನ ಜನ.

ನೆಲಮಂಗಲ ತಾಲೂಕಿನ ಕೂಲಿಪುರ ಗ್ರಾಮದಲ್ಲಿ ಈ ಹತ್ತಿ ಮರ ಇದೆ. ಗ್ರಾಮಸ್ಥರು ಇಷ್ಟು ವರ್ಷ ಗ್ರಾಮ ದೇವತೆ ಎಂಬ ಭಾವನೆಯಲ್ಲಿ ಈ ಹತ್ತಿ ಮರಕ್ಕೆ ಪೂಜೆ ಮಾಡುತ್ತಿದ್ರು. ಈಗ ಬೇರೆ ಮರಕ್ಕೆ ಪೂಜೆ ಮಾಡ್ತಿರೋದಕ್ಕೆ ಗ್ರಾಮದೇವತೆ ಈ ರೀತಿ ಕಣ್ಣೀರು ಸುರಿಸುತ್ತ ಅಳಲನ್ನು ತೋಡಿಕೊಂಡಿದ್ದಾಳಂತೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಗ್ರಾಮಸ್ಥರೆಲ್ಲರೂ ಮರದ ಬಳಿ ಬಂದು ಪೂಜೆ ಸಲ್ಲಿಸಿ ಗ್ರಾಮಕ್ಕೆ ಕೆಡುಕಾಗದಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.