ಸಿಲಿಕಾನ್ ಸಿಟಿಯಲ್ಲಿ ಕಾವೇರಿ ನೀರು ಕಳ್ಳತನ; ರಾತ್ರೋರಾತ್ರಿ ನಡೆಯುತ್ತಿದೆ ದೊಡ್ಡಮಟ್ಟದ ನೀರು ಮಾಫಿಯಾ..

0
411

ರಾಜ್ಯದಲ್ಲಿ ಮಳೆಯಿಲ್ಲದೆ ನೀರಿನ ದಾಹ ಹೆಚ್ಚಾಗಿ ಪ್ರಾಣಿಪಕ್ಷಿಗಳು ಅಷ್ಟೇ ಅಲ್ಲದೆ ಜನರೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಇಂತಹ ಸಮಯದಲ್ಲಿ, ಬೆಂಗಳೂರಿನಂತ ದೊಡ್ಡ ನಗರಕ್ಕೆ ಅಪಾರ ಪ್ರಮಾಣದಲ್ಲಿ ನೀರು ಬೇಕಾಗುತ್ತೆ. ಕಾವೇರಿ ನೀರು ಇಡಿ ಬೆಂಗಳೂರಿಗೆ ವರದಾನವಾಗಿದೆ. ಆದರೆ ಹಣದ ಆಸೆಗೆ ಈ ನೀರಿನಲ್ಲಿವೂ ಮಾಫಿಯಾ ನಡೆಯುತ್ತಿದ್ದು ಇಡಿ ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ್ದು ಇದರ ಹಿಂದೆ ದೊಡ್ಡ ಜಾಲವೇ ಇರುವ ಅನುಮಾನ ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ.


Also read: ಕಾಮಾಲೆ ರೋಗದಿಂದ ಸಾಯುವ ಸ್ಥಿತಿಯಲ್ಲಿದ ಬಾಲಕನನ್ನು 8 ಕಿಮೀ ಹೊತ್ತೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ CRPF ಯೋಧರು..

ಏನಿದು ಕಾವೇರಿ ನೀರು ಮಾಫಿಯಾ?

ಕಾವೇರಿ ನೀರು ಕುಡಿಯೋಕೂ ಬೇಕು. ಅಷ್ಟೇ ಏಕೆ ಮಾರಲು ಬೇಕು ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಬೇರೆ ರಾಜ್ಯದ ವ್ಯಕ್ತಿಯೊಬ್ಬ ಗುಂಡಾಗಿರಿ ಮಾಡುತ್ತಿದ್ದಾನೆ. ಕಾವೇರಿ ನೀರನ್ನೇ ಹೇಗೆ ಕಂಡು ಮಾರುತ್ತಿದ್ದಾನೆ ಎನ್ನುವುದಕ್ಕೆ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಮಾಧ್ಯಮಯೊಂದು ಕಾರ್ಯಾಚರಣೆಗೆ ಇಳಿದಿತ್ತು, ಈ ವೇಳೆ ಲಭ್ಯವಾದ ಸತ್ಯದ ಪ್ರಕಾರ ಪಾಲಿಕೆಯ ಬೋರ್‍ವೆಲ್‍ನಿಂದ ರಾತ್ರೋ ರಾತ್ರಿ ಅಕ್ರಮವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪಾಲಿಕೆ ಹಾಗೂ ಜಲ ಮಂಡಳಿಯ ಅಧಿಕಾರಿಗಳ ಕೈವಾಡ ಇರುವುದು ಬೆಳೆಕಿಗೆ ಬಂದಿದೆ.


Also read: ಮೈಸೂರು- ಬೆಂಗಳೂರು ಪ್ರಯಾಣಿಕರಿಗೆ ಸಿಹಿಸುದ್ದಿ; ಇಂದಿನಿಂದ ವಾರಕ್ಕೆ 5 ಬಾರಿ ಮೈಸೂರು-ಬೆಂಗಳೂರು ನಡುವೆ ಕಡಿಮೆ ದರದಲ್ಲಿ ವಿಮಾನ ಸೇವೆ ಆರಂಭ..!

ಸಿಲಿಕಾನ್ ಸಿಟಿಯಲ್ಲಿ ಕಾವೇರಿ ನೀರು ಕಳ್ಳತನ?

ಮಾಹಿತಿಯಂತೆ ನಗರದ ಲಗ್ಗೆರೆಯ ರಾಜೇಶ್ವರಿ ನಗರದ ಫ್ರೆಂಡ್ಸ್ ಸರ್ಕಲ್ ಬಳಿ ಶುದ್ಧ ಕುಡಿಯುವ ನೀರಿನ ಘಟಕವಿದ್ದು. ಇದನ್ನ ರಾಜಸ್ಥಾನ ಮೂಲದ ಅನೂಪ್ ಕುಮಾರ್ ನಡೆಸುತ್ತಿದ್ದಾರೆ. ಪಾಲಿಕೆಯಿಂದ ಅನುಮತಿ ಪಡೆದು ತನ್ನ ಸ್ವಂತ ಬೋರ್‍ವೆಲ್‍ನಿಂದನೇ ನೀರು ಮಾರಾಟ ಮಾಡುತ್ತಿದ್ದಾರೆ. ಈ ಆಸಾಮಿ ಇಷ್ಟೇ ಮಾಡದೆ ಇರುವ ಕೆಲಸವನ್ನು ಮಾಡಿಕೊಂಡು ಹೋದರೆ ನಡೆಯುತ್ತಿತು ಆದರೆ ಅತಿಯಾದ ಹಣದ ಆಸೆಗೆ ಬಿದ್ದು, ಮನೆಯ ಮುಂದೆಯೇ ಇರುವ ಬಿಬಿಎಂಪಿಯ ಬೋರ್‍ವೆಲ್-ನಲ್ಲಿ ರಾತ್ರೋ ರಾತ್ರಿ ನೀರು ಕಳ್ಳತನ ಮಾಡುತ್ತಿದ್ದಾರೆ. ಜನರು ಇಲ್ಲದ ಸಂಯದಲ್ಲಿ ಅಂದರೆ ರಾತ್ರಿವೇಳೆ ಬಿಬಿಎಂಪಿಯ ಬೋರ್‍ವೆಲ್‍ನಿಂದ ಅಕ್ರಮವಾಗಿ ನೀರನ್ನ, ತನ್ನ ಮನೆಯ ಸಂಪ್‍ನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ.


Also read: ಇನ್ಮುಂದೆ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಪಡೆಯಲು ನಾಣ್ಯ ಬೇಕಿಲ್ಲ? ನಾಣ್ಯಗಳ ಬೂತ್‌ಗಳ ಬದಲಾಗಿ ಬರಲಿವೆ ಸ್ಮಾರ್ಟ್‌ಕಾರ್ಡ್‌ ಬೂತ್‌ಗಳು..

ಇದರ ಬಗ್ಗೆ ಮಾಹಿತಿ ಬಂದಾಗ ಕಾರ್ಯಾಚರಣೆ ತೆರಳಿದ ಸಮಯದಲ್ಲಿ ಅನೂಪ್ ಕುಮಾರ್ ಹೆಂಡತಿ ಅವಾಜ್ ಹಾಕಿದ್ದಾರೆ. ಯಾರ ಅನುಮತಿ ತೆಗೆದುಕೊಂಡು ಬಂದಿದ್ದೀರಿ? ಯಾರು ನಿಮಗೆ ಮಾಹಿತಿ ಕೊಟ್ಟವರು? ಆ ಮಗನ ನಂಬರ್ ಕೊಡಿ ಎಂದು ರೌಡಿಗಳ ರೀತಿಯಲ್ಲಿ ಮಾತನಾಡಿ ಜಗಳಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ತಂಡ ಚರಂಡಿಯೊಳಗೆ ಇಳಿದಾಗ ಎಕ್ಸ್ಟ್ರಾ ವಾಟರ್ ಪೈಪ್ ಇರೋದು ಬೆಳಕಿಗೆ ಬಂದಿದೆ. ಇದರಂತೆ ಹಲವು ದಿನಗಳಿಂದ ಅಕ್ರಮವಾಗಿ ಕಾವೇರಿ ನೀರನ್ನ ಸಂಗ್ರಹಿಸಿ, ಮನೆಗಳಿಗೆ, ಮದ್ವೆ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಅನೂಪ್ ನೀರು ಮಾರಾಟ ಮಾಡುತ್ತಿದ್ದಾರೆ. ಪಾಲಿಕೆಯಿಂದಲೂ ಇದಕ್ಕೆ ಅನುಮತಿ ಸಿಕ್ಕಿದ್ದು, ತಿಂಗಳಿಗೆ 20ರಿಂದ 30 ಸಾವಿರ ವಾಟರ್ ಬಿಲ್ ಕಟ್ಟುತ್ತಾರಂತೆ.
ಯಾರಿಗೂ ಅನುಮಾನ ಬಾರದಂತೆ ಪಾಲಿಕೆಯ ಬೋರ್‍ವೆಲ್‍ಗೆ ಎಕ್ಸ್ಟ್ರಾ ಪೈಪ್ ಚರಂಡಿಯೊಳಗೆ ಬಿಟ್ಟಿದ್ದಾರೆ. ಇದು ಬೆಳಕಿರುವ ತನಕ ಪಾಲಿಕೆಯ ಬೋರ್‍ವೆಲ್‍ಗೆ ಕನೆಕ್ಷನೇ ಇರಲ್ಲ. ಆದರೆ ರಾತ್ರಿ ಆಗುತ್ತಿದ್ದಂತೆ ಪೈಪ್ ಕನೆಕ್ಷನ್ ಕೊಟ್ಟು ನೀರನ್ನ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಸಾವಿರಾರು ಲೀಟರ್ ಕಾವೇರಿ ನೀರನ್ನ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಬಿಬಿಎಂಪಿ, ಜಲಮಂಡಳಿಯನ್ನ ಯಾಮಾರಿಸ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ. ಆದರೆ ಈ ಬಗ್ಗೆ ತಿಳಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದು ಬಿಬಿಎಂಪಿ ಮೇಲೆ ಅನುಮಾನಗಳು ಮೂಡುತ್ತಿವೆ ಎಂದು ಸ್ಥಳಿಯರು ಹಳಿದ್ದಾರೆ.