ಈ ಸಲಹೆಗಳನ್ನು ಪಾಲಿಸದಿದ್ದರೆ, ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ನೀರು ಸಿಗುವುದಿಲ್ಲವಂತೆ…!!

0
513

Kannada News | Karnataka News

ಇತ್ತೀಚಿಗೆ ಅಂತರಾಷ್ತ್ರೀಯ ಸುದ್ದಿ ಮಾಧ್ಯಮವೊಂದು, ಭವಿಷ್ಯದಲ್ಲಿ ಬಹು ಬೇಗ ನೀರು ಖಾಲಿಯಾಗುವಂತಹ ವಿಶ್ವದ ಮಹಾನಗರಗಳ ಬಗ್ಗೆ ಒಂದು ವರದಿ ಮಾಡಿತ್ತು. ಇದರಲ್ಲಿ ವಿಷಾದಕರ ಸಂಗತಿ ಏನೆಂದರೆ ಈ ಪಟ್ಟಿಯಲ್ಲಿ ನಮ್ಮ ಉದ್ಯಾನನಗರಿ ಬೆಂಗಳೂರು ಸೇರಿದೆ. ಹೌದು ಬೆಂಗಳೂರಿನಲ್ಲಿ ಬಹುಬೇಗ ನೀರು ಖಾಲಿಯಾಗಲಿದೆಯಂತೆ.

ದಕ್ಷಿಣ ಆಫ್ರಿಕಾದ ಕೇಪ್-ಟೌನ್ ನಲ್ಲಿ ಈಗಾಗಲೇ ಆ ಪರಿಸ್ಥಿತಿ ಎದುರಾಗಿದೆ ಅದಕ್ಕೆ ಅಲ್ಲಿನ ಸರ್ಕಾರ ಪ್ರತಿ ವ್ಯಕ್ತಿಗೆ ಇಂತಿಷ್ಟೇ ನೀರು ಎಂದು ನೀಡುತ್ತಿದ್ದಾರೆ, ಹೆಚ್ಚಿನ ನೀರು ಯಾವುದೇ ಕಾರಣಕ್ಕೂ ಒದಗಿಸಲಾಗುವುದಿಲ್ಲ. ನೀರನ್ನು ಪೋಲು ಮಾಡುವುದಲ್ಲ ಹೆಚ್ಚು ಬಳಸಿದರು ಇಲ್ಲಿ ಶಿಕ್ಷೆ ವಿಧಿಸಲಾಗುತ್ತಿದೆ.

ಬೆಂಗಳೂರಿನ ಕುಡಿಯುವ ನೀರಿನ ಭವಿಷ್ಯವು ಖಂಡಿತ ಅಪಾಯದಲ್ಲಿದೆ. ಸಾಕಷ್ಟು ನೀರಿನ ಪೂರೈಕೆಯಿಂದ ಈಗ ಬಳಲುತ್ತಿರುವ ಬಡವರು ಮುಂದೆ ಸಹ ಇದೆ ಸ್ಥಿತಿಯಂತೆ. ಸರೋವರಗಳು ನೇರವಾಗಿ ಅಂತರ್ಜಲದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದೇ ಸ್ಥಿತಿಯು ಮುಂದುವರಿದರೆ, ನೀರಿನ ಕೊರತೆಯು ಹೆಚ್ಚಾಗುತ್ತದೆ.

ಸಿಲಿಕೋನ್ ಸಿಟಿಯಲ್ಲಿ ಕಾಂಕ್ರೀಟೀಕರಣದ ಕಾರಣ, ಭೂಮಿಯ ಮೇಲೆ ಅಥವಾ ನೆಲದ ಮೇಲೆ ಹರಿಯುವ ನೀರು ಮತ್ತು ಮಳೆನೀರು ಮಣ್ಣಿನೊಳಗೆ ಹೋಗುತ್ತಿಲ್ಲ, ಇದೇ ಕಾರಣಕ್ಕೆ ಅಂತರ್ಜಲ ಕುಸಿಯುತ್ತಿದೆ ಮತ್ತು ಭೂಮಿಯ ತಾಪಮಾನ ಹೆಚ್ಚುತ್ತಿದೆ. ಇದು ಸಾಲದೇ ನಗರದ ಜನರ ನಿತ್ಯದ ಬೇಡಿಕೆ ಪೂರೈಸಲು ಹೆಚ್ಚು-ಹೆಚ್ಚು ಬೋರಿಂಗ್-ಗಳನ್ನು ಕೊರೆಸಲಾಗುತಿದೆ.

ನಮ್ಮ ರೈತರಿಗೆ ನೀರಾವರಿಗಾಗಿ ಕಾವೇರಿ ನೀರು ಬೇಕಾಗುತ್ತದೆ ಅವರಿಗೆ ಇದು ಅತ್ಯವಶ್ಯಕ ಕೂಡ ಹೌದು. ಅದಕ್ಕೆ ನಾವು ಕಾವೇರಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಗಾಗಿ ಮಾತ್ರ ಅತಿಯಾಗಿ ಬಳಸಬಾರದು. ಹೀಗೆ ಮುಂದುವರಿದರೆ ರೈತರಿಗೆ ಬೆಳೆ ಬೆಳೆಯಲು ಮತ್ತು ಕುಡಿಯಲು ಸಹ ನೀರು ಇರುವುದಿಲ್ಲ.

ಈ ವರ್ಷ ಮಳೆ ಬಹಳ ಮುಖ್ಯ. ಕಳೆದ ವರ್ಷ ಬೆಂಗಳೂರಿಗೆ ಸೂಕ್ತವಾದ ಮಳೆಯಾಗಿತ್ತು. ರಾಜ್ಯದಲ್ಲಿ ಆಗಸ್ಟ್ ಮಧ್ಯದ ತನಕ ಭಾರೀ ಮಳೆಯಾಗುತ್ತದೆ, ಇದು ಎಲ್ಲ ನೀರಿನ ಸಂಗ್ರಹಣೆ ಮಾಡುವ ನದಿ, ಹಳ್ಳ, ಕೆರೆಗಳು, ಮತ್ತು ಅಂತರ್ಜಲ ತುಂಬಲು ಬಹಳ ಮುಖ್ಯ. ಒಂದು ವೇಳೆ ಮಳೆ ಕೈಕೊಟ್ಟರೆ ದೇವರೇ ಗತಿ.

ಇದು ಕೇವಲ ಸರ್ಕಾರದ ಸಮಸ್ಯೆಯಲ್ಲ ಇದು ಎಲ್ಲ ಜನರ ಸಮಸ್ಯೆ ಕೂಡ. ಇದನ್ನು ಕಡಿಮೆ ಮಾಡಲು ಎಲ್ಲರೂ ಕಡ್ಡಾಯ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ಮನೆಯ ಅಂಗಳದಲ್ಲಿ ಅಂತರ್ಜಲ ಹೆಚ್ಚಿಸಲು ಸಿಮೆಂಟ್ ಹಾಕಿಸದೆ ಹಾಗೆ ಬಿಡಿ ಮತ್ತು ಮಳೆ ನೀರು ಸಂಗ್ರಹಣೆಗಾಗಿ ತೊಟ್ಟಿ ನಿರ್ಮಿಸಿ ಹೀಗೆ ಮಾಡುವುದರಿಂದ ಅಂತರಜಾಲ ರಿಚಾರ್ಜ್ ಆಗುತ್ತದೆ. ಇದನ್ನು “ಗ್ರೌಂಡ್ ವಾಟರ್ ರಿಚಾರ್ಜ್” ಕೂಡ ಎನ್ನುತ್ತಾರೆ.

Also read: ಕರ್ನಾಟಕದ ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ, ಇಲ್ಲಿದೆ ನೋಡಿ ಕಾವೇರಿ ತೀರ್ಪಿನ ಸಂಪೂರ್ಣ ಮಾಹಿತಿ…!!