ಜನರಿಗೆ ಕುಡಿಯೋ ನೀರಿನ ಸಮಸ್ಯೆ ತೀವ್ರ ಕೊರತೆ, ರಾಜ್ಯದ ಡ್ಯಾಂಗಳ ನೀರಿನ ಮಟ್ಟ ಕುಸಿತ

0
509

ರಾಜ್ಯದಲ್ಲಿ ಭೀಕರ ಈಗ ಬರ. ಜನರಿಗೆ ಕುಡಿಯೋ ನೀರಿನ ಸಮಸ್ಯೆ ತೀವ್ರ ಕೊರತೆ ಉಂಟಾಗಲಿದೆ. ಬಹುತೇಕ ಜಲಾಶಯಗಳಲ್ಲಿರುವ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಲಲಾಗಿದೆ. ರಾಜ್ಯದ ಪ್ರಮುಖ 13 ಜಲಾಶಯಗಳ ನೀರಿನ ಮಟ್ಟ ಕುಸಿದಿದೆ.

ಬಿಸಿಲಿನ ತಾಪಕ್ಕೆ ಆವಿಯಾಗುವುದು ಹಾಗೂ ಪ್ರಸರಣ ನಷ್ಟ ಕೂಡು ಆಗುತ್ತಿರುವುದು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬರಿದಾಗುತ್ತಿದೆ, ಅನಧಿಗಿಂತ ಮಳೆ ಬಾರದಿದ್ದರೇ ಮಾರ್ಚ್ ವೇಳೆಗೆ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ.

ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಭಾಗಗಳಲ್ಲಿ ಈ ಬಾರಿಯ ಬೇಸಿಗೆಯಲ್ಲಿ ತೀವ್ರ ನೀರಿನ ಬಿಕ್ಕಟ್ಟು ಎದುರಾಗಲಿದೆ. ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಜಲಾಶಯಗಳಾದ ಕೃಷ್ಣರಾಜಸಾಗರ, ಮತ್ತು ಕಬಿನಿಗಳಲ್ಲಿ ನೀರಿನ ಸಂಗ್ರಹ ಮಟ್ಟ ಪಾತಾಳಕ್ಕಿಳಿದಿದೆ, ಹೀಗಾಗಿ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಲಿದೆ. ಬೆಂಗಳೂರು ನಗರ ನೀರು ಸರಬರಾಜು ಮಂಡಳಿಗೆ ಬೇರೆ ದಾರಿಯಿಲ್ಲದೇ ಮತ್ತಷ್ಟು ಬೋರ್ ವೆಲ್ ಕೊರೆಸುವ ಅನಿವಾರ್ಯತೆ ಎದುರಾಗಿದೆ.

ಎಲ್ಲ ಜಲಾಶಯಗಳಲ್ಲಿನ ನೀರಿನಮಟ್ಟ ಪಾತಾಳ ತಲುಪಿದೆ. ಹಾಗಾಗಿ ಕುಡಿಯುವ ನೀರಿನ ಅಭಾವ ಕಳೆದ ವರ್ಷಕ್ಕಿಂತಲೂ ಈ ವರ್ಷ ಮತ್ತಷ್ಟು ತೀವ್ರವಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ನಿರ್ವಣವಾಗಿದೆ. ಬೇಸಿಗೆ ಬೆಳೆ ಬೆಳೆಯದಂತೆ ರೈತರಿಗೆ ಸೂಚಿಸಲಾಗಿದೆ. ರಾಜ್ಯದ ಪ್ರಮುಖ 10 ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಸಂಗ್ರಹವಿದ್ದ ನೀರಿಗಿಂತಲೂ ಈ ಬಾರಿ ಕಡಿಮೆಯಾಗಿರುವುದು ಮತ್ತಷ್ಟು ಆತಂಕಕ್ಕೀಡುಮಾಡಿದೆ.

ರಾಜ್ಯದ ಪ್ರಮುಖ  ಜಲಾಶಯಗಳ ನೀರಿನ ಮಟ್ಟ ಕುಸಿದಿದೆ.

ಜಲಾಶಯ

ಅಣೆಕಟ್ಟು                                 ಕಬಿನಿ

ಸಂಗ್ರಹ ಸಾಮರ್ಥ್ಯ       – 15.67 ಟಿಎಂಸಿ

ಪ್ರಸ್ತುತ ನೀರಿನ ಮಟ್ಟ     -2.447 ಟಿಎಂಸಿ

ಬಳಕೆಗೆ ಸಿಗುವ ನೀರು    -1.07 ಟಿಎಂಸಿ

ಒಳ ಹರಿವು                – 59 ಕ್ಯುಸೆಕ್ಸ್

ಹೊರ ಹರಿವು              -700 ಕ್ಯುಸೆಕ್ಸ್

tunga badra

ಅಣೆಕಟ್ಟು                          ತುಂಗಾಭದ್ರಾ

ಸಂಗ್ರಹಣಾ ಸಾಮರ್ಥ್ಯ   -100.86 ಟಿಎಂಸಿ

ಪ್ರಸ್ತುತ ನೀರಿನ ಮಟ್ಟ    -5.28 ಟಿಎಂಸಿ

ಬಲಕೆಗೆ ಸಿಗುವ ನೀರು   -2.98 ಟಿಎಂಸಿ

ಒಳ ಹರಿವು               -00 ಕ್ಯುಸೆಕ್ಸ್

ಹೊರ ಹರಿವು             -243 ಕ್ಯುಸೆಕ್ಸ್

.
.

ಅಣೆಕಟ್ಟು                           ಆಲಮಟ್ಟಿ

ಸಂಗ್ರಹಣಾ ಸಾಮರ್ಥ್ಯ   -119.26 ಟಿಎಂಸಿ

ಪ್ರಸ್ತುತ ನೀರಿನ ಮಟ್ಟ    -32.53 ಟಿಎಂಸಿ

ಬಲಕೆಗೆ ಸಿಗುವ ನೀರು   -25.35 ಟಿಎಂಸಿ

ಒಳ ಹರಿವು               -00 ಕ್ಯುಸೆಕ್ಸ್

ಹೊರ ಹರಿವು             -130 ಕ್ಯುಸೆಕ್ಸ್