ಆಧುನಿಕ ತಂತ್ರಜ್ಞಾನದ ಅಚ್ಚರಿ ನೀರಿನೊಳಗೆ ಸೇತುವೆ!!!

0
1551

ನೀರಿನೊಳಗೊಂದು ಸೇತುವೆ!!!

ಪ್ರತಿನಿತ್ಯ 30 ಸಾವಿರ ವಾಹನ ಸಂಚಾರ

ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ದಿನೇ ದಿನೇ ಹೆಚ್ಚಾಗಿ ಅಭಿವೃದ್ಧಿಗೊಳ್ಳುತ್ತಲೇ ಇದೆ. ದಿನಕ್ಕೊಂದು ಅಚ್ಚರಿಯ ಆವಿಷ್ಕಾರಗಳು, ತಂತ್ರಜ್ಞಾನಗಳು, ಅಭಿವೃದ್ಧಿ ಹೊಂದುತ್ತಲೇ ಇರುತ್ತವೆ. ಜಗತ್ತಿನ ಒಂದೊಂದು ಕಡೆಯೂ ಒಂದೊಂದು ಅದ್ಭುತ ಸೃಷ್ಠಿಗಳನ್ನು ಜಗತ್ತು ಒಳಗೊಂಡಿದೆ. ಒಂದಕ್ಕಿಂತ ಒಂದು ವ್ಹಾ ಎನ್ನುವಷ್ಟರ ಮಟ್ಟಿಗೆ ಇಂಜಿನಿಯರ್‍ಗಳು ಕೈ ಚಳಕ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಇಂತಹುದೇ ಒಂದು ಚಮತ್ಕಾರ ಹಾಗೂ ಅದ್ಭುತವಾದ ನೀರಿನೊಳಗಿನ ಸೇತುವೆ ಇದೆ..! ಈ ಸೇತುವೆಯ ಮೂಲಕ ಪ್ರತಿದಿನ 30 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ.

ringvaart-of-the-haarlemmermeer-polder

ನೀರಿನೊಳಗೆ ಸೇತುವೆ..!

ನೆದರ್‍ಲ್ಯಾಂಡ್‍ನ ಹಾರ್ಡ್‍ವಿಕ್ ಎಂಬಲ್ಲಿ ಈ ಸೇತುವೆ ಇದೆ. 2002ರಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ. 25 ಮೀಟರ್ ಉದ್ದ 19 ಮೀಟರ್ ಅಗಲವಿರುವ ಈ ಸೇತುವೆ, ಜಗತ್ತಿನ ವಿವಿಧೆಡೆ ನೀರಿನ ಮೇಲೆ ಇಲ್ಲವೆ ನೀರಿನ ಕೆಳಗಿರುವ ಸೇತುವೆಗಳಲ್ಲಿ ಅತ್ಯುತ್ತಮವಾದ ವಾಸ್ತು ಶಿಲ್ಪವನ್ನು ಒಳಗೊಂಡಿದೆ.

ನೀರಿನಿಂದ ಮೂರು ಮೀಟರ್ ಆಳದ ಕೆಳಗೆ ಸೇತುವೆ ಇರುವುದರಿಂದ ಅದರಡಿ ವಾಹನಗಳು ಸುಗಮವಾಗಿ ಸಂಚಾರ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ. ಅದರ ಮೇಲಿರುವ ನೀರಿನಲ್ಲಿ ಸಣ್ಣ ಸಣ್ಣ ದೋಣಿಗಳು ಸೇರಿದಂತೆ ಇತರೆ ದೋಣಿಗಳು ಸಂಚಾರಕ್ಕೆ ಯೋಗ್ಯವಾಗಿವೆ.
ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ

ಅಲ್ಲದೆ, ದೋಣಿಗಳು ಸುಗಮವಾಗಿ ಸಂಚಾರ ಮಾಡುವಂತ ಅವಕಾಶವೂ ಇದೆ. ಜೊತೆಗೆ ಪಾದಚಾರಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆಯೂ ಇದೆ. ಇದರಿಂದಾಗಿ ಎದುರಾಗುವ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ.

ರಸ್ತೆಯ ಮೇಲೆ ಸೇತುವೆ ನಿರ್ಮಾಣ ಮಾಡುವುದು ಯಾವುದೇ ಇಂಜಿನಿಯರ್‍ಗಳಿಗೆ ಸುಲಭದ ಕೆಲಸ. ಆದರೆ ನೀರಿನ ಆಳದಲ್ಲಿ ಸೇತುವೆ ನಿರ್ಮಿಸಿ, ಅದರಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡುವುದು ಸವಾಲಿನ ಕೆಲಸ. ಅಂತಹ ಕೆಲಸವನ್ನು ನೆದರ್‍ಲ್ಯಾಂಡ್‍ನ ಇಂಜಿನಿಯರ್‍ಗಳು ಯಶಸ್ವಿಯಾಗಿ ಮಾಡಿದ್ದಾರೆ.

05-aquaduct_veluwemeer

ವಾಟರ್ ವೇ ಟೆಕ್ನಿಕ್

ಈ ಸೇತುವೆಯಿಂದಾಗಿ ನೀರಿನ ಒಳಗೆ ವಾಹನ ಸಂಚಾರ ಮಾಡಲು ಹಾಗೂ ನೀರಿನ ಮೇಲೆ ದೋಣಿಗಳು ಸಾಗಲು ಸಹಕಾರಿಯಾಗಿದೆ. ಅಂತಹ ಅದ್ಭುತವಾದ ಆರ್ಕಿಟೆಕ್ಟ್ ನಿರ್ಮಾಣ ಮಾಡಲಾಗಿದೆ. ಹಣ ಉಳಿತಾಯ ಮಾಡುವ ನಿಟ್ಟಿನಲ್ಲಿ ಇಂಜಿನಿಯರ್‍ಗಳು ಉತ್ತಮವಾದ ಐಡಿಯಾ ಹುಡುಕಿದ್ದಾರೆ. ವಾಟರ್ ವೇ ಟೆಕ್ನಿಕ್ ಬಳಸಿದ್ದಾರೆ. ಸುರಂಗ ಮಾರ್ಗವನ್ನು ಜಾಣತನ ಮತ್ತು ಅಷ್ಟೇ ನೈಪುಣ್ಯದಿಂದ ಕಟ್ಟಲಾಗಿದೆ. ಇದಕ್ಕಾಗಿ ಅತಿ ಹೆಚ್ಚು ಬಂಡವಾಳ ವಿನಿಯೋಗ ಮಾಡಲಾಗಿದೆ. ಇದು ದೀರ್ಘಕಾಲ ಬರುವ ಯೋಜನೆಯಾಗಿದೆ ಎನ್ನುವ ಮಾತುಗಳೂ ಕೇಳಿ ಬಂದಿವೆ.

aqueduct-veluwemeer-water-bridge-built-by-the-dutch-that-breaks-the-laws-of-physics-1

ಮೆಚ್ಚುಗೆಯ ಮಹಾಪೂರ

ನೀರಿನ ಮೇಲೆ ನಿರ್ಮಾಣ ಮಾಡಿರುವ ಸೇತುವೆಯ ಇಂಜಿನಿಯರ್ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಅದರಲ್ಲಿಯೂ ನೀರಿನ ಒಳಗೆ ರೀತಿಯ ಸೇತುವೆ ಮಾಡುವುದು ಸುಲಭದ ಸಾಧ್ಯವಲ್ಲ. ಅಂತಹ ಸವಾಲಿನ ಕೆಲಸವನ್ನು ಮಾಡುವಲ್ಲಿ ಇಂಜಿನಿಯರ್‍ಗಳ ತಂಡ ಯಶಸ್ವೀಯಾಗಿದೆ.

bridge-travel-aqueduct-veluwemeer-hottraveldastination-com-02-1

ಈ ರೀತಿಯ ಸೇತುವೆ ನಿರ್ಮಾಣದಿಂದಾಗಿ ನೆದರ್‍ಲ್ಯಾಂಡ್‍ನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗಿದೆ. ಜೊತೆಗೆ ಮಾನವ ನಿರ್ಮಿತ ದ್ವೀಪಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಂತಹ ಕಡೆ ಇಂತಹ ಸೇತುವೆಗಳು ಹೆಚ್ಚಾಗಿ ಕಂಡು ಬರುತ್ತದೆ. ಇದು ಪ್ರವಾಸಿಗರನ್ನು ಸೆಳೆಯುವ ಸಹಕಾರಿಯಾಗಿದೆ. ನೆದರ್‍ಲ್ಯಾಂಡ್ ಹಾರ್ಡ್‍ವಿಕ್ ಪ್ರಾಂತ್ಯದಲ್ಲಿ 970 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈ ಸೇತುವೆ ಇದೆ. ಈ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲೂ ಬಂದರೂ ಆಶ್ಚರ್ಯವಿಲ್ಲ.