ಬತ್ತುತ್ತಿರುವ ಜಲಸಂಪನ್ಮೂಲ.. ಪರಿತಪಿಸಬೇಕಾಗಿದೆ ಮಾನವ!!!

0
610

ಭೂಮಿಯಲ್ಲಿರುವ ನೀರಿನ ಒಟ್ಟು ಮೊತ್ತ 366 ಮಿಲಿಯನ್ ಟ್ರಿಲಿಯನ್ ಗ್ಯಾಲನ್. ಇದರಲ್ಲಿ ಶೇ. 97.5 ಭಾಗ ಉಪ್ಪು ನೀರು. ಸಿಹಿ ನೀರಿನ ಅಂಶವು ಶೇ. 2.5 ಭಾಗ. ಅಂದರೆ 9.25 ಮಿಲಿಯನ್ ಟ್ರಿಲಿಯನ್ ಗ್ಯಾಲನ್. ಇದರಲ್ಲಿ ಶೇ. 69.6 ಭಾಗ ಅಂದರೆ 6.44 ಮಿಲಿಯನ್ ಟ್ರಿಲಿಯನ್ ಗ್ಯಾಲನ್. ಹಿಮರಾಶಿಯಲ್ಲಿ ಬೆಟ್ಟಗಳ ಮೇಲಿರುವ ಗ್ಲೇಷಿಯರ್ಸ್‍ನಲ್ಲಿದೆ. ಉಳಿದ 0.3 ಭಾಗ ಅಂದರೆ 31,141 ಟ್ರಿಲಿಯನ್ ಗ್ಯಾಲನ್ ನೀರು, ನದಿ, ಕೆರೆ ಹಾಗೂ ಕೊಳ್ಳಗಳಲ್ಲಿವೆ. ಇದರಲ್ಲಿ ಶೇ. 30.1 ಭಾಗ ಅಂದರೆ 2.78 ಮಿಲಿಯನ್ ಟ್ರಿಲಿಯನ್ ಗ್ಯಾಲನ್ ನೀರು ಭೂಮಿಯ ಮಣ್ಣಿನ ಒಳಗೆ ಇರುವ ಅಂತರ್ಜಲದಲ್ಲಿದೆ.

ಈ ಭೂಮಿಯಲ್ಲಿ 11 ಕೋಟಿ 70 ಲಕ್ಷ ಕೆರೆಗಳಿವೆ. ಇದರ ಒಟ್ಟು ವಿಸ್ತೀರ್ಣ 50 ಲಕ್ಷ ಚದರ ಕಿ.ಮೀ. ಇದರ ಹೆಚ್ಚಿನ ಭಾಗ ಉತ್ತರ ಗೋಳದಲ್ಲಿದೆ. ಪ್ರಪಂಚದಲ್ಲಿ ವಾಸಿಸುವ ಎಲ್ಲಾ ಜೀವಿಗಳಿಗೆ ಬಹುಮುಖ್ಯವಾಗಿ ಬೇಕಾಗಿರುವುದು ಗಾಳಿ ಬಿಟ್ಟರೆ ನೀರು.

ಇವತ್ತು ನೀರಿನ ಕೊರತೆ ಹಾಗೂ ಮಾಲಿನ್ಯ ಉಲ್ಬಣಗೊಂಡಿದೆ. ಪ್ರತಿಯೊಂದು ನದಿ, ಕೆರೆಗಳು ತ್ಯಾಜ್ಯ ವಸ್ತುಗಳಿಂದಾಗಿ ಕಲುಷಿತಗೊಂಡಿದೆ. ಈ ಕಲುಷಿತ ನೀರಿನ ಸೇವನೆಯಿಂದಾಗಿ ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಹಾಗೂ ಸಾಯುತ್ತಿದ್ದಾರೆ. ಗಂಗಾ ನದಿಯ ಮಲಿನತೆಯನ್ನು ಶುದ್ಧಿಗೊಳಿಸಬೇಕೆಂದು ಕಳೆದ 30 ವರ್ಷಗಳಿಂದ ಪ್ರಯತ್ನಪಟ್ಟರೂ ಶುದ್ಧಿಯಾಗಿಲ್ಲ. ಅಮೆರಿಕದಲ್ಲಿರುವ ಗ್ರೇಟ್‍ಲೇಕ್ಸ್ ಎಷ್ಟು ಕಲುಷಿತಗೊಂಡಿದೆ ಎಂದರೆ ಅಲ್ಲಿರುವ ಮೀನುಗಳು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿವೆ.

Image result for water scarcity

ನೀರಿನ ಸಮಸ್ಯೆಯನ್ನು ಎದುರಿಸಲು ಮುಂದಾಲೋಚನೆ ಇಲ್ಲದೆ ಕೊಳವೆ ಬಾವಿಗಳನ್ನು ಲೆಕ್ಕವಿಲ್ಲದಷ್ಟು ಕೊರೆಯುತ್ತಿದ್ದೇವೆ. ಅನೇಕ ಕಡೆ 1000 ಅಡಿಗಿಂತ ಆಳ ಹೋದರೂ ನೀರು ಸಿಕ್ಕುತ್ತಿಲ್ಲ. ಕಾರಣ ಅಂತರ್ಜಲವನ್ನು ತುಂಬಿಸಲು ಬೇಕಾದ ಕೆರೆಗಳನ್ನು ಮುಚ್ಚಿ ವಸತಿಗಳನ್ನು ನಿರ್ಮಿಸುತ್ತಿದ್ದೇವೆ. `ಮಳೆ ನೀರು ಕೊಯ್ಲು’ ಎಂಬ ನಾಟಕವಾಡಿ ಅಲ್ಲಲ್ಲಿ ಒಂದು ಹತ್ತು ಅಡಿ ಗುಂಡಿ ತೋಡಿ ಸುಮ್ಮನಾಗುತ್ತಿದ್ದೇವೆ. ಅದರಿಂದ ಯಾವ ಪ್ರಯೋಜನವಿಲ್ಲದೆ ಹಣ ಪೋಲು ಆಗುತ್ತಿದೆ. ಇತ್ತೀಚೆಗೆ ಆಮ್ಲ ಮಳೆಯಿಂದಾಗಿ ಮಳೆ ನೀರೂ ವಿಷವಾಗುತ್ತಿದೆ.

Image result for water scarcity

ಭಾರತ ದೇಶದಲ್ಲಿನ ಅಂತರ್ಜಲದ ಮಟ್ಟವು 1983-95ರ ಅವಧಿಯಲ್ಲಿ ಭಾರೀ ಕುಸಿತಗೊಂಡಿದೆ. ನಾಸಾದವರು ಹಾರಿ ಬಿಟ್ಟಿರುವ ಗ್ರಾವಿಟಿ ರಿಕವರಿ ಹಾಗೂ ಕ್ಲೈಮೆಟ್ ಎಕ್ಸ್‍ಪೆರಿ ಮೆಂಟ್ ಎಂಬ ಎರಡು ಉಪಗ್ರಹಗಳಿಂದ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ ಪಂಜಾಬ್, ರಾಜಸ್ತಾನ್, ಹರಿಯಾಣ ಮತ್ತು ದೆಹಲಿಯಲ್ಲಿ ಪ್ರತಿ ವರ್ಷವೂ ಅಂತರ್ಜಲದ ಮಟ್ಟವು ಒಂದು ಅಡಿಯಷ್ಟು ಕುಸಿದಿದ್ದು 2002-08ರ 6 ವರ್ಷದ ಅವಧಿಯಲ್ಲಿ 109 ಕ್ಯೂಬಿಕ್ ಕಿ.ಮಿ.ನಷ್ಟು ನೀರು ಕಣ್ಮರೆಯಾಗಿದೆ ಎಂದು ತಿಳಿದುಬಂದಿದೆ.

Image result for water scarcity

ವಲ್ರ್ಡ್ ಬ್ಯಾಂಕ್ ನಡೆಸಿದ ಒಂದು ಅಧ್ಯಯನದಲ್ಲಿ ಚೀನಾದ 300 ನಗರಗಳಲ್ಲಿ ನೀರಿನ ಕೊರತೆ ವಿಪರೀತವಾಗಿದೆ. ಮಿತಿಮೀರಿದ ನೀರಿನ ಬಳಕೆಯಿಂದಾಗಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನದಲ್ಲಿ ಅಂತರ್ಜಲ ಸಂಪೂರ್ಣವಾಗಿ ಬತ್ತಿ ಹೋಗಲಿದೆ. ಮುಂದಿನ 50 ವರ್ಷಗಳಲ್ಲಿ ತೈಲದ ಬದಲು ನೀರಿಗಾಗಿ ದೇಶಗಳ ಮಧ್ಯೆ ಹಾಗೂ ಜನರ ಮಧ್ಯೆ ಕಲಹಗಳಾಗಲಿವೆ.